Tag Archives: ಮಾಲಿನಿ ಭಟ್

ಚಿತ್ರ ನೋಡಿ ಕವನ ಬರೆಯಿರಿ – 19


ಇದು ಬಾಲ್ಯದ ನೆಚ್ಚಿನ ಆಟ
ಸುಂದರ ಸೂರ್ಯಾಸ್ತದ ನೋಟ
ಬಾಲಕನ ಹುಡುಗಾಟ
ಛಾಯಾಗ್ರಾಹಕನ ಕೈಚಳಕ

ಕತ್ತಲು ಬೆಳಕಿನ
ಕಣ್ಣಾಮುಚ್ಚಾಲೆ
ಕವನ ಬರೆಯಲು
ಸ್ಪೂರ್ತಿಯ ಸೆಲೆ
-ಶಿಶಿರ್ ಹೆಗಡೆ

*****************
ದಿನವು ಹುಟ್ಟಿ ಬಂದು
ಬದುಕಿನೊಂದು
ಕದಿವ
ಕಳ್ಳ ಸೂರ್ಯ
ಇಂದು ಸಿಕ್ಕಿ ಬಿಟ್ಟ
ಬಿಟ್ಟರವನ ಮತ್ತೆ ಸಿಕ್ಕ
ಎಂದು
ಅವನ
ಪುಟ್ಟ ಕಟ್ಟಿಬಿಟ್ಟ
-ಸುನಿತಾ ಮಂಜುನಾಥ್

*******************
ಬಾಲ್ಯವು ಸವಿದ ಸುಂದರ ನೆನಪು
ಮುಗ್ಧತೆ ಮನಸು ಹೆಣೆದ ಕನಸು
ಬಾನಾಡಿಗಳು ಮಲಗೋ ಸಮಯ
ರವಿಯು ಕಾನನದ ತಪ್ಪಲಲಿ ಬೆರೆತಿಹನು
ಮುದ್ದು ಮಗುವು ಸೆರೆಹಿಡಿದಿರಲು ದಿನಕರನ
ಕಸಿಯ ಬಯಸಿತು ಮಗದೊಂದು ಕಂದ
ಮರವು ತಟಸ್ಥಗೊಂಡಿತು
ಮುದ್ದು ಜೀವದ , ಹಟದ ಮಾತು ಕೇಳಿ
ಓಡುತಿದೆ ಜೀವನ ಆ ಚಕ್ರದಂತೆ
-ಮಾಲಿನಿ ಭಟ್

**********************
ಸ೦ಜೆಯ ಸೂರ್ಯ ಮುಳುಗುವ ಹೊತ್ತು,
ಕತ್ತಲು ಕವಿಯುತಿದೆ ಎಲ್ಲೆಲ್ಲು,
ಹೆಜ್ಜೆ ಹಾಕುತ್ತಿರುವೆ ನಿಮ್ಮೆಡೆಗೆ ಗೆಳೆಯರೆ,
ಸಾಗುತಿರಲಿ ಈ ಹಾದಿ ಹೀಗೆ, ನಿಮ್ಮ ಪ್ರೀತಿಯ ಸ್ನೆಹವ ಹೊತ್ತು!!!!!
-ಅನ್ನಪೂರ್ಣ ನಾಯ್ಡು

**********************
ನಾ ಹೇಳಿಲ್ಲವೇ ನಾನೆಷ್ಟು ಬಲಶಾಲಿ ಎಂಬುದನ್ನ
ಹಿಡಿದಿರುವೆ ಚಕ್ರದಲಿ ಸೂರ್ಯನನ್ನ
ತಪ್ಪಿಸಿಕೊಳ್ಳುವಾಗ ಗಾಯದ ರಕ್ತ ತುಂಬಿತಾಕಾಶವನ್ನ
ನಾವಿನ್ನು ಹೋಗೋಣ, ಅಣ್ಣಾ ಬಿಟ್ಟುಬಿಡು ಪಾಪ ಅವನನ್ನ
ತಡವಾದರೆ ಬಂದಾಳು ಕತ್ತಲೆಯ ಗುಮ್ಮ
ಜೊತೆಯಲ್ಲೇ ಕೋಲು ಹಿಡಿದು ಬಂದಾಳು ನಮ್ಮಮ್ಮ
-ಮಮತಾ ಕೀಲಾರ್

***********************
ಹಗಲೆಲ್ಲಾ ಉರಿದು
ತ೦ಪಾದ ಮೇಲೆ ಬಿದ್ದಿಯಾ ನನ್ನ ಬುಟ್ಟಿಗೆ,
ನಾಳೆ ಬೆಳಗ್ಗೆ ಹ್ಯಾಗಪ್ಪ ನಿನ್ನ ತ೦ಗೊ೦ಡೊಗಿ
ಪೂರ್ವಕ್ಕೆ ನೇತು ಹಾಕೊದು
– ಕೃಷ್ಣಮೂರ್ತಿ

*********************
ಬಾಲ್ಯವೇ ನೀನೆಷ್ಟು ಬೇಗ ಸೂರ್ಯಾಸ್ತದಂತೆ ಸರಿದು ಹೋದೆ
ನಿನ್ನ ನಾನರಿಯುವ ಮುನ್ನ
ಆಡುವಿಕೆಯ ಹುಡುಗಾಟ ಮುಗಿಯುವ ಮುನ್ನ
ಟೈರಿನಾಟದ ಸಂಗಾತಿಯೊಂದಿಗೆ
ಮರಗಿಡಗಳಲಿ ಕೋತಿಯಾಟದಲಿ
ಜೂಟಾಟಗಳ ಒಡಾಟಗಳ ರಸ್ತೆಯಲಿ
ಸೂರ್ಯೋದಯದಿಂದ ಶುರುವಾಗುತ್ತಿದ್ದ ಆಟೋಟಗಳ ಸಂಭ್ರಮದಲ್ಲಿ
ಸೂರ್ಯಾಸ್ತವಾದುದೇ ತಿಳಿಯದೇ ಕಳಿಯಿತೇ ಭಾಲ್ಯ!
ಮತ್ತೆಂದೂ ಸಿಗದಂತೆ ದೂರವಾದೆಯಾ ಓ ಬಾಲ್ಯವೇ
ಭಾಗ್ಯವಂತರಿಗೆ ಮಾತ್ರ ಬಂಗಾರದ ಭಾಲ್ಯವಂತೆ
ಹಾಗಾದರೆ ನಾನು ಯಾರು ? ನಿರ್ಭಾಗ್ಯನೇ ?
-ಹಿಪ್ಪರಗಿ ಸಿದ್ದರಾಮ್

*******************
http://www.facebook.com/photo.php?fbid=1975766690222&set=o.195906690495079&type=3&theater

ಅಪ್ಪಾ ನಿನ್ನ ಬರುವಿಕೆಯಲ್ಲಿ

ಅರಿತವರು ಹೇಳಿದರು 
ಅರಿಯದವರು ಸುಮ್ಮನಾದರು 
ಭವಿಷ್ಯಕ್ಕೆ ತಂದೆಯೇ ಶಿಲ್ಪಿ 
ನೂರು ಕನಸಿಗೆ ನೀ ಆಧಾರ 
ಪುಟ್ಟ ಪುಟ್ಟ ಕನಸ ಬೆಳಕಿಗೆ 
ನೀ ಮೌನದೀವಿಗೆ

ನಿನ್ನ ನೆನಪಾಗುತಿದೆ ಅಪ್ಪಾ 
ಹೃದಯ ಮಿಡಿಯುತಿದೆ 
ಅಪ್ಪಾ – ಅಮ್ಮ ನಿಮ್ಮಿಬ್ಬರ ಹೊರತು
ಮತ್ತೇನು ಬೇಡವಾಗಿದೆ 
ತಟದಲ್ಲಿ ಕಾದು ಕುಳಿತಿರುವೆ 
ಒಮ್ಮೆಯಾದರು ಬರುವೆಯೆಂದು 

ನಿನ್ನಲ್ಲಿ ಮಾತನಾಡಬೇಕು ಅಪ್ಪಾ 
ನಡೆಯುದನ್ನು ಕಲಿತ ಗಳಿಗೆ ನೀ ಅಗಲಿದ್ದು 
ದೇವ ನಿನ್ನನ್ನು ತನ್ನೆಡೆಗೆ ಸೆಳೆದುಬಿಟ್ಟ 
ಅಪ್ಪಾ ಒಮ್ಮೆ ಬಂದುಬಿಡು 
ನನ್ನ ಅಮ್ಮನಿಗಾಗಿ ಅವಳ ಮಾಸಿದ 
ಕಣ್ಣಿನಲ್ಲಿ ಅಡಗಿರುವ ನೋವಿಗೆ 
ನೀನು ಮಾತ್ರ ಸಮಾಧಾನ ಮಾಡಬಲ್ಲೆ 

ನಿನಗಾಗಿ ಅವಳು ಕಾಯದ ದಿನವಿಲ್ಲ 
ಪ್ರಪಂಚವರಿಯದ ನನ್ನ ಅಮ್ಮ 
ಸುತ್ತುವರಿದ ಸುಳಿಯಿಂದ ನೀನೇ 
ಬಿಡಿಸಬೇಕು , ಅಪ್ಪಾ ನನಗಿಂತಲೂ 
ನನ್ನ ಅಮ್ಮನ ನಗುವಿಗಾಗಿ ನೀ ಬರಬೇಕು 

ಎಲ್ಲಿ ಅಡಗಿರುವೆ 
ನೀಲನಭದ ಗಾಳಿಯಲಿ 
ಲೀನಗೊಂದೆಯಾ
ಅಪ್ಪಾ ಕರ್ತವ್ಯ ಮರೆತು ಹೋಗದಿರು,
ನಿನಗಾಗಿ ಕಾಯುತಿರುವೆ 
ಕಣ್ಣೀರು ತಡೆದು , ನಿನ್ನ ನೆನಪಿನೊಂದಿಗೆ …

…ಮಾಲಿನಿ ಭಟ್ .

ನನ್ನ ಬಾಳು

ನನ್ನ ಬಾಳು ನನ್ನದು 
ನನ್ನ ಕನಸು ನನ್ನದು 
ಉರಿವ ಬೆಳಕ ತಪ್ಪಲಲ್ಲಿ 
ಮೌನಗೆರೆಯೇ ಉತ್ತರ 
ಜೀವ ಕಳೆದ ಸಾಲಿನಲ್ಲಿ 
ಸವೆದ ಮಣ್ಣ ಅಣುವಿನಲ್ಲಿ
ನನ್ನ ನೆರಳ ಆಕೃತಿ 
ತಂಪ ನೀಡೋ ಮಾತೇ ಇಲ್ಲ 
ಬರಿಯ ನಡಿಗೆ ಜೊತೆಯಲಿ 
ಋಣವು ಇರುವ ಕ್ಷಣದವರೆಗೆ 
ನಾನು ನನ್ನದು ಪಲ್ಲವಿ 
ಎಲ್ಲ ಮುಗಿದ ಕೊನೆಯ ಹಂತಕೆ 
ಕದವ ತೆರೆದು ನಡೆಯಲು

-ಮಾಲಿನಿ ಭಟ್ 

ಪ್ರೀತಿ

ಜಗದ ವಿನೂತ ಸೃಷ್ಟಿಯ ,
ಅತಿಶಯ ದವನ ಈ ಪ್ರೀತಿ ,
ಪ್ರೀತಿ ಎಂದರೆ ಹೀಗೆ ,
ಭಾವನೆಗಳು ಅಕ್ಷಯ ಬಿಂದಿಗೆಯಂತೆ ,
ಮನಸುಗಳು ನಳಿಕೆಯ ಕೇಂದ್ರವಾಗಿ, 
ಹೃದಯವು ಸ್ವಚ್ಛ ನಗು ಚೆಲ್ಲಿತು ,
ಆತ್ಮಕೆ ಪ್ರೀತಿಯ ಜರಿ ಸ್ಪರ್ಶಿಸಿತು, 
ಎಂಥಾ ಮಧುರವೀ ಬಂಧನ, 
ಪ್ರೀತಿ ತಪ್ಪು ಕಲ್ಪನೆಯಲ್ಲ ,
ಉಸಿರಾಡುವ ಆ ಶುದ್ಧ ಗಾಳಿ ,
ಅಮೃತದ ಸಿಂಚನ , ಕಸ್ತೂರಿಯ ಕಂಪು ,
ಪ್ರೀತಿ ಎಂದೂ ಬರಡಲ್ಲ
ಅದು ಚಿಮ್ಮುವ ಕಾರಂಜಿಯಂತೆ, 
ಬೆಳೆಯುವ ಪೈರಿನಂತೆ ,
ಮನಸುಗಳ ಅರ್ಪಣೆ ಎಂಥಹ ತಪ್ಪು, 
ಪ್ರೀತಿ ಯಾರನ್ನು ಸಾಯಿಸದು ,
ಅದು ಕಲ್ಪವೃಕ್ಷ , ನಮ್ಮ ಸಲಹುವುದು .. 

..ಮಾಲಿನಿ ಭಟ್..

ಸ್ನೇಹದಲ್ಲಿ ಒಂದು ಬಿರುಕು

ಮನದ ನಡುವೆ ಸೊಗಸಾ ಚೆಲ್ಲಿ
ಹೃದಯ ತುಂಬಾ ನಗುವ ಹರಡಿ
ಕಂಡ ಕನಸ ಕರದಿ ಹಿಡಿದು
ಸ್ನೇಹದಿಂದ ಜೊತೆಯೂ ನಿಂತ ಹೂವು ನೀನು

ಭಾವನೆಯ ಗೂಡವೊಳಗೆ
ಕೂಗಿ ಕರೆವ ನಿನ್ನ ದನಿಗೆ
ಅದೃಷ್ಟವು ನನದು ಎಂದು
ಬಿಗಿಕೊಂಡೇನು

ಸಮಯ ಕಳೆದು ನಿಶೆಯು ಹರಿದು
ಅಂದು ಬಂತು ನಿನ್ನ ಮನದಿ ಹೊಸದು ರೂಪವೂ
ಅರಿತ ಮನವ ಚಿವುಟಿ ಹೊರಟೆ
ನನ್ನ ಯಾವ ತಪ್ಪಿಗೆ

ಸ್ನೇಹಕ್ಕೆ – ಸ್ನೇಹವೆಂದು
ಭರವಸೆಯಲಿ ನಿನ್ನ ಕಲಶವಿಡಲು
ಹುದುಗಿ ನೋವ ನೀಡಿದೆ
ಭಗ್ನವಾಯಿತಿಂದು ಎನ್ನ ಹೃದಯ ದೇಗುಲ

ಅವಿತ ಮನವು ಬಿಗಿದುಕೊಂಡಿದೆ
ಎದೆಯ ನೋವು ತುಂಬಿ ನಡುಗಿದೆ
ಹೃದಯ ಕೂಗಿ ಕೂಗಿ ಕೇಳಿದೆ
ಯಾವ ತಪ್ಪಿಗೆ ಶಿಕ್ಷೆ ನೀಡಿದೆ

ನನ್ನ ಮನವ ಗೃಹಿಸದಾದೆ
ಕಣ್ಣ ನೀರ ಕಾಣದಾದೆ
ಸ್ನೇಹದಲ್ಲಿ ಯಾವ ಲೋಪ ನೋಡಿದೆ
ಜೊತೆಯೇ ಇರುವೆ ಎಂಬ ಮಾತು ಇಷ್ಟು ಕ್ಷಣಿಕವೇ

ನೋವು ನನಗೆ ಉಳಿಯಲಿ
ನೀನು ಸದಾ ನಗುತಿರು
ನನ್ನ ಹೃದಯ ಮಿಥ್ಯ ನುಡಿಯದು
ಗ್ರಹಣ ಕಳೆದು ಬೆಳಕು ಹರಿಯಲಿ …

MALINI BHAT

ಮುಂಜಾನ ಸೊಬಗು

ಮುಂಜಾನೆ ರವಿ ಮೂಡೋ ಮುನ್ನ
ಪ್ರೀತಿಯ ಸೆರಗೊಡ್ಡಿ ,
ಕರೆದ ಸ್ವಚಂದ ಎಲೆ
ಎಲೆಯ ತಬ್ಬಿದ ಇಬ್ಬನಿಯ ಮುತ್ತು
ನವಿರಾದ ಸ್ಪರ್ಶಕೆ ..
ನಾಚಿದ ನಿನ್ನ …
ಪ್ರೇಮದ ತಂಪಿಗೆ
ದಿನಕರ ಹೊನ್ನಿನ ಬೆಳಕ ನಿಡುತಿರುವನು..

ಮಾಲಿನಿ ಭಟ್….

ಗೆದ್ದಲು ಹುಳ

ಒಂದು ದಿನ ಮರದ ತೊಗಟೆ 
ಕಳಚಿ ಬೀಳಲು
ನೋವಿನಿಂದ ಚೀರಿಕೊಂಡಿತು 
ಮೌನವಾಗಿಯೇ 

ಅಂದು ಮಣ್ಣಕಣದಿ ಹೆಮ್ಮೆಯಿಂದ 
ಬೆಳೆದು ನಿಂತಿತು 
ಜಗಕೆ ಸಾರಿ ಹೇಳುತಿತ್ತು 
ತನ್ನ ಕಥೆಯನು 

ಸ್ನೇಹ ಬಯಸಿ ಬಂತು ಒಂದು ಪುಟ್ಟ ಹುಳವು 
ಮುದ್ದಿನಿಂದ ಮಮತೆ ನೀಡಿ 
ತನ್ನ ಒಡಲ ಕೊಟ್ಟಿತು 
ಪ್ರೀತಿಯಿಂದ ಬೆಳೆಯಲೆಂದು ಸಲಹೆ ನೀಡಿತು 

ಎಲ್ಲ ಕಾಲದಲ್ಲೂ ತೊಗಟೆಯಡಿಯಲಿ
ಮನೆಯ ಮಾಡಿತು 
ಪುಟ್ಟ ಪುಟ್ಟ ಮರಿಯು ಬೆಳೆದು 
ವಂಶ ಬೆಳೆಯಿತು 

ಕೊಟ್ಟ ಮಾತ ಮರೆತು 
ಮರವು ತನ್ನದೆಂದು ಹೇಳಿತು 
ಮುಗ್ಧ ಮನವು ಮೌನವಾಗಿ 
ಕಣ್ಣ ನೀರು ಹರಿಸಿತು 

ದಿನವೂ ತೊಗಟೆ ಕಳಚಿ 
ಬೀಳಲು, ಮಣ್ಣಗೂಡು 
ಬೆಳೆದು ನಿಂತಿತು 

ಪುಟ್ಟ – ಪುಟ್ಟ ಭಾಗವಾಗಿ 
ತಿನ್ನತೊಡಗಿತು ,ನೋವಿನಿಂದ 
ಮರವು ಬಳಲಿ ಹೋಯಿತು 
ತನ್ನ ತನಕೆ ತಾನು ವ್ಯಥೆಯ 
ಪಟ್ಟುಕೊಂಡಿತು…….

………ಮಾಲಿನಿ ಭಟ್………..

ಬೇಸರಿಸದೆ ನಡೆ

ಮನದೊಳಗೆ ಮುಗಿಬಿದ್ದಿರುವ ನೋವ ಸರಪಳಿಗೆ
ಬಂಧನವ ಕಳಚಲಾಗದೆ , ಸುತ್ತುವರಿದಿರುವ ಬೇಲಿಗೆ
ತುಟಿಯ ಅಂಚಿನಲ್ಲಿ ಮೂಡಿದ ನಗುವ ಹೊನಲಿಗೆ
ಉತ್ತರ ಸಿಗಲಾರದೆ , ಬಾನ ನೋಡುತಿರುವ ಮರುಳ ಮನಸಿಗೆ
ಬೇಸರಿಸದೆ ನಡೆ ಮುಂದೆ ಎಲ್ಲ ಕಷ್ಟವ ಮೆಟ್ಟಿ ನಿಲ್ಲುತ ..

Malini Bhat

ಮುನಿಯದಿರು ಇಳೆಯೇ

ಮುನಿಯದಿರು ಇಳೆಯೇ, ನಿಮ್ಮ ಕಂದಗಾಗಿ 
ನಿನ್ನ ನೀ ಕಂಪಿಸದಿರು , ಸಾಗರದಿ ಅಲೆಯ ಏಳಿಸದಿರು
ನಮ್ಮೆಲರ ತಾಯಿ ನೀ , ನಮ್ಮ ತಪ್ಪ ಮನ್ನಿಸಲಾರೆಯ 
ನಿನ್ನ ಒಡಲ ವೇದನೆಯ ಅರಿತು ಮೂರ್ಖರಾಗಿರಲು 
ನಮ್ಮ ಮನಸು ನೀನು ತಿಳಿಯಲಾರೆಯ
ನೋಡಲ್ಲಿ ಬಾನ, ಸೂರ್ಯನು ಪ್ರತಿದಿನ ಬೇಸರಿಸದೆ 
ಜೀವ ಬೆಳಕ ನೀಡುತಿರುವನು
ಆ ಗಾಳಿ ನೋಡು ಸದಾ ತಂಪ ಸ್ಪರ್ಶ ಮಾಡುತಿರುವುದು 
ಈ ದಿನವು ಶುಭವನ್ನೇ ಕೋರು ತಾಯಿ ನಿನ್ನ ಮಕ್ಕಳಿಗಾಗಿ …

………ಮಾಲಿನಿ ಭಟ್ ………….

ತಪ್ಪು ಕಲ್ಪನೆ

ಬದುಕಿನ ಹುಡುಕಾಟದಲ್ಲಿ , ಜಾರಿದ ಕಣ್ಣಿರಲ್ಲಿ
ನೋವಿನ ಸರಪಳಿ ಅಪ್ಪಿ ಮಿಸುಕಾಡಲು ಬಿಡದೆ 
ದಿನ- ದಿನ ಅಧಿಕ , ಸಹಿಸಲಾರದ ಬಾಧೆಯಲ್ಲಿ 
ಸಂಬಂಧಗಳ ಕೊಂಡಿ ಕಳಚದೆ 

ಭಾವನೆಗೆ ಸ್ಪಂದಿಸಲು , ಹೊಸ ಮಾರ್ಗದಲ್ಲಿ 
ಕಮರಿದ ಕನಸಿಗೆ , ಜೀವಸೆಲೆ ನೀಡಲಾಗದೆ 
ಸ್ವಚ್ಛ ಮನಸಿನ ಕನ್ನಡಿಯು ಅನುಮಾನದಲ್ಲಿ 
ಸಾಗರದಾಚೆ ಸೇರಲು ಆಗದೆ 

ಮನಸಿನ ಬಿಗುಮಾನ , ದರ್ಪದಲ್ಲಿ 
ಸೋಲದ ಹಟದ ಜಾಣತನದಲ್ಲಿ
ಹೃದಯದ ಮೌನ ವೇದನೆಯಲ್ಲಿ 
ಚಿವುಟಿದ ಕರಾಳ ಮುಖದಿ 

ಯಾರ ಅನುಮಾನವೋ , ಯಾರ ಅರಿಕೆಯೋ 
ತಪ್ಪು ನಡೆದಿದೆ , ವಿಧಿಯ ಇಚ್ಚೆಯಂತೆ 
ಮನಸುಗಳು ದೂರ ದೂರ 
ಸನಿಹದ ಮಾತು , ಬಡವಾಗಿದೆ 

ನೋವ ಹೇಳಲು ಬಂದ ಜೀವಕೆ 
ಕಾರಣವೇ ತಿಳಿಯದೆ , ಸುಸ್ತಾಗಿದೆ 
ಸ್ನೇಹದ ಸೌಧ ಕುಸಿದಿದೆ 
ಚಿಕ್ಕ ತಪ್ಪು ಗೃಹಿಕೆಯಿಂದ..

ದೇವರ ಸಂಕಲ್ಪ ಹೇಗಿದೆಯೋ 
ವಿಶಾಲ ಜೀವನದಲ್ಲಿ 
ಹೆಜ್ಜೆಗುರುತುಗಳು ಅಮೂಲ್ಯ 
ಎಲ್ಲ ಜ್ಞಾನದ ಸಂಕೇತ ….

….ಮನಸಿನ ಚಿತ್ರಪಟದಲ್ಲಿ ನಾವು ಎಣಿಸಿರುವುದೇ ಒಂದು ,ವಿಧಿಯ ಕೈವಾಡವೇ ಇನ್ನೊಂದು ,.. ಅರಿತೋ ಅರಿಯದೆಯೋ ಜೀವನದಲ್ಲಿ ಅಲ್ಲಲ್ಲಿ ಅನುಮಾನಗಳು , ತಪ್ಪು ಕಲ್ಪನೆ ಹುಟ್ಟುವುದು ಸಹಜ .. ಇವುಗಳನ್ನು ಮೆಟ್ಟಿ ನಿಲ್ಲುವುದೇ ನಿಜವಾದ ಸ್ನೇಹ

….. ಮಾಲಿನಿ ಭಟ್ …………………..

ಸಕಲ ವಿಶ್ವದ ಒಳಿತಿಗೆ

ಮುಖದ ಮೇಲೆ ತುಂಬಿ ನಲಿದ ಹನಿ- ಹನಿ ನೀರ ಗುಚ್ಚದಲ್ಲಿ
ಉಳಿದು ಹೋದ ಸಾವಿರ ಮನಸಾ ವೇದನೆಯಲ್ಲಿ 
ಬಾನು ನೋಡಲು ಉತ್ತುಂಗದಲ್ಲಿ ಸರಿದಾಡಿದ ಮೋಡ 
ದಿನಕರನು ಮುನಿದು ತನ್ನ ಗೃಹವ ಸೇರುತಿರಲು 
ಹೊಸ ತಂಗಾಳಿ ಬಿಸಿ ಬರಲಿ .. ಸಕಲ ವಿಶ್ವದ ಒಳಿತಿಗೆ ..
………ಮಾಲಿನಿ ಭಟ್…
 

ಕಾಡಿದನು ಗೆಳಯ

ಕನಸುಗಳ ಕಟ್ಟೆಯಲ್ಲಿ ಮಡುಚಿದ ಮೌನ ಗೆರೆಯಲ್ಲಿ 
ನಿನ್ನೊಂದು ಮೆಲುನುಡಿಗಾಗಿ ತವಕದಲ್ಲಿ 

ನದಿಯಲೆ ತೆವಳುವ ಸಪ್ಪಲದಲ್ಲಿ 
ಮರಳ ಕಣಗಳು ಹನಿಗೂಡೋ ಚಿತ್ರಣದಲ್ಲಿ 

ನಡೆವ ಹಾದಿಯಲಿ , ಹೂವ ಕನಸಲ್ಲಿ 
ಬದುಕು ಸಾಗಿದ ಮಧುರ ಪಟದಲ್ಲಿ 

ಸುಪ್ತವಾಗಿ ಹುದುಗಿದ ಒಲವ ಮಂಟಪದಲ್ಲಿ 
ಹೊಳೆವ ನಯನದಲ್ಲಿ ನೆನಪಾದ ಮುಗ್ಧತೆಯಲ್ಲಿ 

ಕಾಡಿದನು ಗೆಳಯ ಹೃದಯ ಪರ್ವತದಲ್ಲಿ 
ಕಾಡಿದನು ಗೆಳಯ ಉಸಿರ ಗಂಧದಲ್ಲಿ ..

………ಮಾಲಿನಿ ಭಟ್…

ಖಿನ್ನ ಮನಸು

ಖಿನ್ನವಾದೆ ಏಕೆ ಮನಸೇ
ಕಣ್ಣಲಿಂದು ಕಂಬನಿ

ಹೃದಯ ಮಿಡಿದು ಮೌನವಾಗಿ
ತನುವು ಮೆರೆತಿದೆ ಅಂಬಲಿ

ಮುಸುಕ ಮಬ್ಬು ಪೊರೆಯಲಿ
ಬಿಂಬ ಅಡಗಿ ಸೋಲಲು

ನಿನ್ನ ಕರೆದು – ಕರೆದು ನಾ
ನನ್ನ ನಾನು ಮರೆತೆನು

ಅರಿಯದಾದೆ ನಿನ್ನ ಚಿತ್ತ
ಬಿರಿದ ಗಾಯದಳನು

ನಕ್ಕು- ನಗಿಸಿ ನೋವ ನುಂಗಿ
ಖಿನ್ನವಾಗಿ ಉಳಿಯಲು

ನನ್ನದೊಂದು ಪ್ರಾರ್ಥನೆ
ಹೂವಿನಂತ ಮನಸಲೇಕೆ

ದುಃಖ – ದುಗುಡ ಬೆಳೆಸಿದೆ
ಅತ್ತುಬಿಡು ಖಿನ್ನ ಮನಸೇ
ಗೆದ್ದುಬಿಡು ನೀ …
– ಮಾಲಿನಿ ಭಟ್

ಪ್ರಕೃತಿಯ ಕೋಪವು

ಮರಳ ತಡಿಯಲಿ ಕನಸ ಹೆಣೆಯಲು ಅಲೆಗೂ ನನ್ನಲಿ ಕೋಪವು
ರಭಸವಾಗಿ ಬಿಸಿತೊಮ್ಮೆ , ಕಣ್ಣ ಕುಕ್ಕಿಸೋ ಕಿರಣವು
ಮಬ್ಬು ಕವಿದು ಕಣ್ಣು ಕ್ಷೀಣ ನೋಟವ ಬೀರಲು
ಅಸ್ಪಷ್ಟ ಚಿತ್ರದಿ ಬದುಕು ನೀರಲಿ ಮುಳುಗಲು

ಹುಡುಕಿದೆ ಬಿಡದ ಪ್ರಯತ್ನ ನೀರ ತಡಿಯಲಿ
ಮತ್ಸ್ಯಗಳು ಜೊತೆ ವಿಭಿನ್ನ ಪರಿಶ್ರಮದಲಿ
ಆಳವಿಳಿದಂತೆ ಹೃದಯ ಬಡಿತ ನಾಗಾಲೋಟದಲಿ
ಬದುಕು ಅರಸಿ , ವಿಚಿತ್ರ ಕೂಪದಲಿ

ಸಿಗುವುದೇ ನನ್ನ ಕನಸಿನ ಚಿತ್ರಪಟ
ಬರಿಗೈ ಯಲ್ಲಿ ಬಂದು ಬಿಟ್ಟಿದ್ದೇನೆ
ಸಾವಿರ ಕನಸಿನ ಬದುಕಿನ ತೋಟ
ದೇವರೇ ನಿನ್ನನ್ನು ನಂಬಿದ್ದೇನೆ …

………..ಮಾಲಿನಿ ಭಟ್ ……….

ಹೊಸ ಸಂಬಂಧ

ಜೀವ ತುಡಿದು ಸೆಳೆಯಿತು ಹೊಸದು ಬಂಧಕೆ
ಹೃದಯ ಬಯಸಿ ಬೆಳೆಯಿತು,ಭಾವ ವೀಣೆ ಮಿಡಿತಕೆ
ದೀಪ ಬೆಳಕು ಪ್ರಜ್ವಲಿಸಿತು , ಉರಿದು ಹೋಗೋ ಕೊನೆಯ ಹಂತಕೆ
ಮೂರ್ಖ ತನದಿ ಕನಸ ನೆಟ್ಟಿತು , ನವ್ಯತೆಯ ಭಾವಕೆ

ಬೇಡವೆಂದರೂ ಬೆಳೆಯ ಹತ್ತಿತು ಮನದ ಮಲ್ಲಿಗೆ ಗೂಡಲಿ
ಸೆಳೆಯಿತು ಭವಿಷ್ಯದ ಕನಸ ನಿರ್ಮಾಣದಲಿ
ಮೌನದಲ್ಲೇ ಅರಳಿತು , ಕಂಡ ಕನಸ ಬೆಳಕಲಿ
ಹೊತ್ತಿತು ಹೊಸ ಕ್ರಾಂತಿ ಮನಸಿನ ತೊಯ್ದಾಟದಲಿ

ಭರವಸೆಯು ಚಿಲುಮೆಯಾಗಿ ಸೇರಿತು , ಮುಗ್ಧ ಮನದಲ್ಲಿ
ನೇಯ್ದ ಗೂಡು , ಬಣ್ಣದ ಲೇಪನದಲ್ಲಿ
ಮುಗಿಲ ಮಲ್ಲಿಗೆ ಸುಂದರ ಮಾಲೆಯಲ್ಲಿ
ಸುಂದರ ಸಂಬಂಧಕೆ ಅಲೆಯಾಗಿ ಹಾಡ ಗುನುಗುತಿತ್ತು …

………..ಮಾಲಿನಿ ಭಟ್……………

: ಹೊಸ ಸಂಬಂಧ :

ಜೀವ ತುಡಿದು ಸೆಳೆಯಿತು ಹೊಸದು ಬಂಧಕೆ
ಹೃದಯ ಬಯಸಿ ಬೆಳೆಯಿತು,ಭಾವ ವೀಣೆ ಮಿಡಿತಕೆ
ದೀಪ ಬೆಳಕು ಪ್ರಜ್ವಲಿಸಿತು , ಉರಿದು ಹೋಗೋ ಕೊನೆಯ ಹಂತಕೆ
ಮೂರ್ಖ ತನದಿ ಕನಸ ನೆಟ್ಟಿತು , ನವ್ಯತೆಯ ಭಾವಕೆ

ಬೇಡವೆಂದರೂ ಬೆಳೆಯ ಹತ್ತಿತು ಮನದ ಮಲ್ಲಿಗೆ ಗೂಡಲಿ
ಸೆಳೆಯಿತು ಭವಿಷ್ಯದ ಕನಸ ನಿರ್ಮಾಣದಲಿ
ಮೌನದಲ್ಲೇ ಅರಳಿತು , ಕಂಡ ಕನಸ ಬೆಳಕಲಿ
ಹೊತ್ತಿತು ಹೊಸ ಕ್ರಾಂತಿ ಮನಸಿನ ತೊಯ್ದಾಟದಲಿ

ಭರವಸೆಯು ಚಿಲುಮೆಯಾಗಿ ಸೇರಿತು , ಮುಗ್ಧ ಮನದಲ್ಲಿ
ನೇಯ್ದ ಗೂಡು , ಬಣ್ಣದ ಲೇಪನದಲ್ಲಿ
ಮುಗಿಲ ಮಲ್ಲಿಗೆ ಸುಂದರ ಮಾಲೆಯಲ್ಲಿ
ಸುಂದರ ಸಂಬಂಧಕೆ ಅಲೆಯಾಗಿ ಹಾಡ ಗುನುಗುತಿತ್ತು …

………..ಮಾಲಿನಿ ಭಟ್……………

ತನ್ಮಯವಾದ ಗಳಿಗೆ

ಆ ತೀರದಲಿ , ಅ ಮರಳಿನಲಿ
ಅಲೆಯಾಗಿ ಮೂಡಿ ಬರಲು
ಹೊಸಕನಸ ಕಂಪು ಎಲ್ಲೆಡೆಯೂ
ಪಸರಿಸಲು , ಭಾವಾಂತರಂಗ ಚೆಲ್ಲಲು
ಆ ಗಾಳಿ ಸೋಕಲು , ಆ ನೀರು ಸೇರಲು
ಹೃದಯವು ತನ್ಮಯದಿ ತುಳುಕಾಡಲು
ಜಗವೆಲ್ಲ ತುಂಬಿರಲು ಸುಧೆಯೋಳು
ಕಣ್ಣ ನೋಟದಲೂ , ಮಾತ ಆಂತರ್ಯದಲೂ
ತೇಲಾಡುತಿರಲೂ ಭವ್ಯತೆಯು,
ಮಂಗಳವೂ ಆ ದಿನವೂ
ಮರೆಯದ ಸಂಚಲನ
ಏಳೇಳು ಜನ್ಮದಲೂ ಚಲಿಸುವ ಕಿರಣ
ದೀಪದ ಬೆಳಕು ಪ್ರಜ್ವಲಿಸುವಂತೆ
ಜೊತೆಯಲ್ಲೇ ಮೆಲುವಾಗಿ ನೀ ನಡೆಯಲು
……….ಮಾಲಿನಿ ಭಟ್ ……….

ಜೇನುಹುಳ

ಬಿಸಿಲ ಮಳೆಯ ಕಾಲಪರ್ವಕೆ ಅಂಜದೆ
ಒಂದೇ ಸಮನೆ ಬೆವರ ಸುರಿಸಿ
ಸೂರ್ತಿಯಾದೆ ಜಗಕೆ
ಬೆಳಕ ಒಡೆಯ ಮೂಡೋ ಮೊದಲು
ಹೊರಟೆ ನೀ ಕಾಡಿಗೆ
ದಿಕ್ಕು – ದಿಕ್ಕು ಅಲೆದು ಬಳಲಿ
ದೇವಗೊಮ್ಮೆ ನಮಿಸುವೆ
ಹಾರಿ ಹಾರಿ ರೆಕ್ಕೆ ಬಸಿದು
ಹೂವ ಅರಸುವೆ ಪ್ರತಿಕ್ಷಣ
ಕಣ್ಣು ಕ್ಷಣದಿ ತೆರೆದು
ಹೂವಗಂಧವ ನೋಡಲು
ಅಣುವಿನಸ್ಟು ಗಂಧ ಹಿಡಿದು
ಗೂಡ ದಾರಿಯ ಕ್ರಮಿಸಲು
ಸುತ್ತಿ ಸುತ್ತಿ ಕದದ ಬಳಿ ನಿಲ್ಲಲು
ಧನ್ಯವಾಯಿತು ಜನ್ಮವು
………ಮಾಲಿನಿ ಭಟ್ ………

ಒಲವ ಕಂಪನ

ನೂಲು ಚರಕದಿ ಹೊಮ್ಮಿ ಬರಲು
ಭಾವ ಹೃದಯದಿ ಹೊರಟಿತು
ಜೀವ ಬಯಸದೆ ಸಿಲುಕಿತು
ಹೊಸದು ಕಾಣದ ಬಂಧಕೆ

ಮೌನವಾಗಿಯೇ ಕರಗಿತು
ಮುನಿಸು ಒಳಗೆ ಅರಳಿತು
ಎದೆಯ ಬಿಸಿಯು ಏರಿತು
ಅರಿಯದಂತ ಬಂಧಕೆ

ಉಸಿರ ವೀಣೆ ಸ್ವರವ ಚೆಲ್ಲಲು
ದೇಹ ತನ್ನಲೆ ಕಂಪಲು
ಲೋಕ ಕಾಣದೆ ,ಮನಸು ತಾನೆ ನಗುವ ಸೂಸಲು
ಬೆರೆಯಿತೊಂದು ಹೊಸದು ಬಂಧ …

ಬಾನ ಸೂರ್ಯ ಬೆಳಕ ಬೀರಲು
ಮನದ ರವಿಯು ಕದವ ತೆರೆಯಲು
ಸ್ಪಷ್ಟವಾಗಿ ಜಗವ ಕಾಣಲು
ಮೂಡಿತೊಂದು ಹೊಸದು ಬಂಧ …

……….ಮಾಲಿನಿ ಭಟ್ ……………

ಹೊಲದ ಮಡಿಲಲಿ

ಹೊಲದ ಮಡಿಲಲಿ
ಮಣ್ಣ ಕಣದಲಿ
ಜೀವವೊಂದು ಅರಳಿದೆ
ತನುವ ಮರೆತು
ಸ್ನೇಹ ಚಾಚಿದೆ
ಜಗಕೆ ಬೆಳಕ ನೀಡಿದೆ …
ಉಸಿರ ನೀಡಿದೆ
ಫಲವ ನೀಡಿದೆ
ನಿನ್ನ ಮಾತ್ರ ಯಾರು ಅರಿಯದಾದರು ..
Malini Bhat