ಅಂಜದ ಗಂಡು (1988) – ಏನ್ ಹುಡ್ಗೀರೊ ಇದ್ ಯಾಕಿಂಗಾಡ್ತೀರೊ

ಮಂಜುನಾಥ್: ಏನ್ ಹುಡ್ಗೀರೊ ಇದ್ ಯಾಕಿಂಗಾಡ್ತೀರೊ
ಲವ್ವು ಲವ್ವು ಲವ್ವು ಅಂತ ಕಣ್ಣೀರಿಡ್ತೀರೊ …೨

ವಾಣಿ: ಕಣ್ಣೀರಲ್ಲಾ..ಆ ಕಣ್ಣೀರಲ್ಲಾ
ಪನ್ನೀರ ಮಳೆಯೊ ನನ್ನ ಪ್ರಿಯನಿಗೆ ನೆನಪಿನಾಭಿಷೇಕ

ಎಸ್.ಪಿ.ಬಿ: ಕೇಳೆ ಗೆಳತಿ ಈ ನಿನ್ನ ನೆನಪೇ
ನನ್ನ ಬದುಕಿಗೆ ಆಸರೆ ಕೊನೆ ತನಕ

ಮನ್ಜುನಾಥ್: ಏನ್ ಹುಡ್ಗೀರೊ ಇದ್ ಯಾಕಿಂಗಾಡ್ತೀರೊ
ಲವ್ವು ಲವ್ವು ಲವ್ವು ಅಂತ ಕಣ್ಣೀರ್ ಇಡ್ತೀರೊ

ಲವ್ವು ಅಂದ್ರೆ ನವ್ವು
ಕಷ್ಟ ನಷ್ಟ ಇದ್ದರೇ
ಯಾಕೆ ಬೇಕಿ ವನವಾಸಾ

ವಾಣಿ: ತಿಳಿದೊ ತಿಳಿಯದೇನೊ
ಇದರ ಬಲೆಗೆ ಬಿದ್ದರೆ
ತಪ್ಪದು ವಿರಹದ ಸೆರೆವಾಸ
ಸಾವಿಗಾಗಿ ನಾನು ಅಂಜಲಾರೆ
ಅಳುಕಲಾರೆ ಈ ಜೀವ ಹಿಂಡೊ
ವಿರಹವನ್ನು ಸಹಿಸಲಾರೆ
ತಾಳಲಾರೆ ನಾನು ತಾಳಲಾರೆ

ಎಸ್.ಪಿ.ಬಿ: ನಿನ್ನ ಕಣ್ಣಿನಾಳದಲ್ಲಿ ಬಿಂಬವಾಗಿ ನಾನು ನಿಲ್ಲುವೆ
ಕಣ್ಣ ರೆಪ್ಪೆ ಮುಚ್ಚಿ ನನ್ನ ಪ್ರೀತಿ ಮಾಡು ವಿರಹ ಗೆಲ್ಲುವೆ

ಮಂಜುನಾಥ್: ಏನ್ ಹುಡ್ಗೀರೊ ಇದ್ ಯಾಕಿಂಗಾಡ್ತೀರೊ
ಲವ್ವು ಲವ್ವು ಲವ್ವು ಅಂತ ಊಟಾ ಬಿಡ್ತೀರೊ …೨

ವಾಣಿ: ಹಸಿವಿನ ಚಿಂತೇ..ಯೇ
ಹಸಿವಿನ ಚಿಂತೇ ಪ್ರೀತಿಗೆ ಬರದೊ
ನನ್ನ ದೊರೆಗಿದು ಪೂಜೆಯ ನೈವೇದ್ಯ

ಎಸ್.ಪಿ.ಬಿ: ಕೇಳೆ ಗೆಳತಿ ಬಾಯಾರಲಿಲ್ಲ
ನಿನ್ನ ನೆನಪಲಿ ಹಸಿವಿನ ಅರಿವಿಲ್ಲಾ

ಮಂಜುನಾಥ್: ತಿಂಡಿ ತೀರ್ಥ ಬಿಟ್ಟು
ಲವ್ವು ಮಾಡೊ ಕೆಲಸಕೆ
ಏನು ಲಾಭವಿದೆ ಮಹಾ ತಾಯಿ

ವಾಣಿ: ಒಂದೆ ನೀತಿ ಒಂದೆ ಜಾತಿ ಅನ್ನೊ ಮಂತ್ರಕೆ
ಪ್ರೀತಿ ಒಂದೆ ವಿಜಯದ ಸ್ಥಾಯಿ
ಭೂಮಿ ಮೇಲೆ ಇನ್ನು ಗಾಳಿ ಇದೆ ನೀರು ಇದೆ
ಆ ಬೆಂಕಿ ಕೂಡ ಪ್ರೀತಿಯಿಂದ ಸುಮ್ಮನಿದೆ
ಕೆರಳದಿದೆ ಪ್ರಳಯವಾಗದಿದೆ

ಎಸ್.ಪಿ.ಬಿ: ನನ್ನ ತೋಳಿನಲ್ಲಿ ನೀನು ಇದ್ದ ಮೇಲೆ ಭೂಮಿ ಬಿರಿಯಲಿ
ಒಂದು ಹೊತ್ತು ನಿನ್ನ ಮುತ್ತು ಸಿಕ್ಕ ಮೇಲೆ ಪ್ರಳಯವಾಗಲಿ

ಮಂಜುನಾಥ್: ಏನ್ ಹುಡ್ಗೀರೊ ಇದ್ ಯಾಕಿಂಗಾಡ್ತೀರೊ
ಲವ್ವು ಲವ್ವು ಲವ್ವು ಅಂತ ಕಣ್ಣೀರ್ ಇಡ್ತೀರೊ …೨

ವಾಣಿ: ಕಣ್ಣೀರಲ್ಲಾ…ಆ ಕಣ್ಣೀರಲ್ಲಾ
ಪನ್ನೀರ ಮಳೆಯೊ ನನ್ನ ಪ್ರಿಯನಿಗೆ ನೆನಪಿನಾಭಿಷೇಕ

ಎಸ್.ಪಿ.ಬಿ: ಕೇಳೆ ಗೆಳತಿ ಈ ನಿನ್ನ ನೆನಪೆ
ನನ್ನ ಬದುಕಿಗೆ ಆಸರೆ ಕೊನೆ ತನಕ

Advertisements

3 responses

  1. hello frined this song is from RANADHEERA not from ANAJADAGANDU

    1. ಕ್ಷಮಿಸಿ, ತಪ್ಪಾಗಿದೆ, ಈಗ ಸರಿಪಡಿಸಲಾಗಿದೆ, ಧನ್ಯವಾದಗಳು ಗಮನಕ್ಕೆ ತಂದಿದ್ದಕ್ಕೆ

ನಿಮ್ಮ ಅನಿಸಿಕೆ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: