ಚಂದ್ರಕಾಂತ ಪೋಕಳೆ

ಕನ್ನಡಕ್ಕೆ ಅನುವಾದಿಸಿರುವ ಚಂದ್ರಕಾಂತ ಪೋಕಳೆ ಅವರು ಅನುವಾದಕರ ಮಾತಿನಲ್ಲಿ, ‘ಈ ಕಾದಂಬರಿಯು ಮರಾಠಿಯಷ್ಟೇ ಕನ್ನಡದ ರಂಗಭೂಮಿಯ ದೃಷ್ಟಿಯಿಂದಲೂ ಮಹತ್ವದ್ದು’ ಅಂದಿದ್ದಾರೆ. ಇದು ಸಹಜವೂ ಹೌದು. ಯಾಕೆಂದರೆ ದೃಶ್ಯ ಮಾಧ್ಯಮ ಮತ್ತು ಸಾಹಿತ್ಯ ದೃಷ್ಟಿಯಿಂದ ಶ್ರೇಷ್ಠ ಕೃತಿಗಳಿಗೆ ಭಾಷೆಯ ಹಂಗಿಲ್ಲ. ಇವತ್ತಿಗೂ ಅನುವಾದಿತ ಕೃತಿಗಳನ್ನು ಸಾರಸ್ವತ ಲೋಕ ಸ್ವೀಕರಿಸುತ್ತಾ ನಮ್ಮ ಭಾಷೆಯ ಸಂಸ್ಕೃತಿ ಮತ್ತು ಸದಾಚಾರಗಳನ್ನು ಕೊಂಡುಕೊಳ್ಳುವಿಕೆಗೆ ಒಳಪಡಿಸಿದೆ. ಇದು ಓದುಗನೊಬ್ಬನಿಗೆ ಅಪಾರ ಜ್ಞಾನ ಭಂಡಾರವನ್ನು ಒದಗಿಸಬಲ್ಲ ಕಾರ್ಯವೂ ಆಗಿರುವುದರಿಂದ ಇವಕ್ಕೆ ತಡೆ ಇಲ್ಲವೆನ್ನುವುದು ನನ್ನ ನಂಬಿಕೆ.

ಈ ಕಾದಂಬರಿಯು ಮರಾಠಿ ರಂಗಭೂಮಿಯ ಲೋಕೊತ್ತರದ ರಂಗಚೇತನ ಬಾಲಗಂಧರ್ವ ಅವರ ಬದುಕಿನ ಕೃತಿಯಾಗಿರುವುದರಿಂದ, ಇದನ್ನು ಚಾರಿತ್ರಿಕ ಕಾದಂಬರಿಯೆಂದು ಗುರುತಿಸಿರುವುದು ಗಮನಾರ್ಹ. ಕೇವಲ ಬಾಲಗಂಧರ್ವರ ವ್ಯಕ್ತಿ ಚಿತ್ರಣ ಮಾತ್ರವಲ್ಲ ಅದರ ಜೊತೆಗೆನೆ ರಂಗಭೂಮಿಯ ಏಳುಬೀಳುಗಳನ್ನು ಅಧ್ಯಯನ ಮಾಡಿ ಬರೆದಿರುವುದರಿಂದ ಇದೊಂದು ಅಪರೂಪದ ಕೃತಿಯೆಂದರೆ ತಪ್ಪಾಗಲಾರದು. ಕೃತಿಯನ್ನು ಓದುತ್ತಿರುವಂತೆ ಜೀವನ ಚರಿತ್ರೆಯಾಗಿಯೂ ಮತ್ತು ನಾನ್ ಫಿಕ್ಷನ್ ಕೃತಿಯಂತೆಯೂ ಗುರುತಿಸಿಕೊಳ್ಳುವ ‘ಗಂಧರ್ವಯುಗ’ ಕನ್ನಡ ಮಟ್ಟಿಗಂತೂ ಹೊಸತೆನ್ನಬಹುದು.

ಈ ಕೃತಿಯನ್ನು ಚಾರಿತ್ರಿಕ ಹಿನ್ನಲೆಯಲ್ಲಿ ರಚಿಸಿರುವುದರಿಂದ ಆಗಿನ ರಂಗಭೂಮಿಯ ಕಲಾವಿದರ ಬದುಕು, ಸಾಧನೆ, ಹೋರಾಟಗಳನ್ನು ಬಹಳ ಕೂಲಂಕಷವಾಗಿ ಚಿತ್ರಿಸಲಾಗಿದೆ. ಮರಾಠಿ ರಂಗಭೂಮಿ ಇಂದಿಗೂ ತನ್ನ ಹಿಂದಿನ ಛಾಪನ್ನು ಉಳಿಸಿಕೊಂಡಿರುವುದರಿಂದ ನಾಟಕಗಳ ಶ್ರೀಮಂತಿಕೆ ಇನ್ನೂ ಅದೇ ರೀತಿಯಲ್ಲಿ ಮುಂದುವರೆದಿದೆಯೆನ್ನಬಹುದು.

ಇದೊಂದು ಅನುವಾದಿತ ಕೃತಿಯಾದರೂ ಸಾಹಿತ್ಯದಲ್ಲಿ ಅನುವಾದವೆನ್ನುವುದು ಒಂದು ಪ್ರತ್ಯಭಿಜ್ಞಾನವಿದ್ದಂತೆ. ಇದರಿಂದ ಸಾಂಸ್ಕೃತಿಕ ವಿನಿಮಯದ ಸಾಧ್ಯತೆಗಳಿಗೆ. ಹಾಗಾಗಿ ಈ ಕೃತಿಯಲ್ಲಿಯೂ ಅದು ಒಂದು ಪ್ರದೇಶದ ಸಂಸ್ಕೃತಿ, ಪರಿಸರಗಳನ್ನು ಒಳಗೊಂಡಿದ್ದರೂ ಅದರ ಒಳನೋಟವಿರುವುದು ಎಲ್ಲಾ ಕಲಾವಿದರ ಬದುಕನ್ನ ಬಿಂಬಿಸುವಂತೆಯೆ. ಪೋಕಳೆಯವರ ಪರಿಣಾಮಕಾರಿಯಾದ ಅನುವಾದವೂ ಇದಕ್ಕೆ ಪೂರಕವಾಗಿದೆ.

ಬಾಲಗಂಧರ್ವ ಮರಾಠಿ ರಂಗಭೂಮಿಯ ಶ್ರೇಷ್ಠ ಕಲಾವಿದ. ಇವರ ರಂಗಭೂಮಿಯ ಬದುಕನ್ನು ಸಮಗ್ರವಾಗಿ ಈ ಕಾದಂಬರಿಯಲ್ಲಿ ಚಿತ್ರಿಸಿರುವುದಲ್ಲದೆ, ಚಾರಿತ್ರಿಕ ಒಳನೋಟವನ್ನು ವ್ಯಕ್ತಪಡಿಸುವ ಕೃತಿಯಾಗಿ, ವ್ಯಕ್ತಿಗತವಾದ ಸಂಕಟ, ಅಸಹಾಯಕತೆ, ತೊಳಲಾಟಗಳ ಮೂಲಕ ರಂಗಭೂಮಿಯ ನೇಪಥ್ಯವನ್ನ ಎತ್ತುವ ಪ್ರಯತ್ನವೂ ಇಲ್ಲಿ ನಡೆದಿದೆ. ಇದರ ಜೊತೆಗೆ ಬಾಲಗಂಧರ್ವರ ಸಮಕಾಲೀನರಾದ ಕೃಷ್ಣರಾವ, ಗಣಪತರಾವ ಬೋಡಸ, ಕೇಶವರಾವ ಭೋಸಲೆ ಮುಂತಾದ ರಂಗಕರ್ಮಿಗಳ ಜೊತೆಗೆ ಕೋಲ್ಹಟಕರ, ಗಡಕರಿಯವರಂತಹ ನಾಟಕಕಾರರ ಬದುಕನ್ನು ಕೂಡ ಸೂಕ್ಷಮವಾಗಿ ತೆರೆದಿಡುವ ಪ್ರಯತ್ನ ಇಲ್ಲಿದೆ.
Ravi Kolar

Advertisements

ನಿಮ್ಮ ಅನಿಸಿಕೆ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: