: ಮಣ್ಣಿನ ಮಡಕೆ…ತೊಲಗಿಸಿ ನೀರಡಿಕೆ :

ಮಡಕೆಯು ಅನಾದಿಕಾಲದಿಂದಲೂ ಮಾನವ ಜೀವನದ ಜೊತೆ ಅನೂಚಾನವಾಗಿ ಬಂದಂತಹ ಪಾತ್ರೆಗಳಲ್ಲೊಂದು. ಲೋಹದ ಯುಗ ಆರಂಭದ ನಂತರ ತುಸು ಮಣ್ಣಿನ ಪಾತ್ರೆಗಳಿಗೆ ಹಿನ್ನಡೆಯಾದರೂ ಗ್ರಾಮೀಣರು ಮಣ್ಣಿನ ಮಡಕೆಗಳ ಜೊತೆ ಅವಿನಾಭಾವ ಸಂಬಂಧವಿಟ್ಟವರು. ಈಗಲೂ ಸಹ ಹಳ್ಳಿಗಳಲ್ಲಿ ಅಡುಗೆ ಮಾಡಲು ಮಣ್ಣಿನ ಮಡಕೆಗಳನ್ನು ಬಳಸುತ್ತಿರುವುದನ್ನು ಕಾಣಬಹುದು. ಮಡಕೆಯಲ್ಲಿ ಮಾಡಿದ ಮುದ್ದೆಯ ಸವಿಯನ್ನು ಸವಿದವನೇ ಬಲ್ಲ! ಅಲ್ಲದೆ ಮಡಕೆಯಲ್ಲಿ ಮಾಡಿದ ಸಾಂಬಾರಿನ ಘಮಲು..ನೆನೆದರೆ, ಅಬ್ಬಾ! ಬಾಯಲ್ಲಿ ನೀರುಕ್ಕಿಸುತ್ತದೆ. ಇಂಥಾ! ಮಣ್ಣಿನ ಮಡಕೆಗೆ ಬೇಸಿಗೆ ಬಂತೆಂದರೆ..ಸುಗ್ಗಿಯೋ ಸುಗ್ಗಿ. ಜೊತೆಗೆ ಕುಂಬಾರರಿಗೂ… ವ್ಯಾಪಾರಿಗಳಿಗೂ..ಮತ್ತು ಮಡಕೆಯನ್ನು ಕೊಂಡೊಯ್ದು ಅದರ ನೀರನ್ನು ಕುಡಿದು ತಮ್ಮ ಬಾಯಾರಿಕೆ ತಣಿಸಿಕೊಳ್ಳುವ ಜನರಿಗೂ ಸಹ!

ಈ ಬಾರಿಯ ಬೇಸಿಗೆ ಸ್ವಲ್ಪ ಜೋರಾಗಿಯೇ ಇದೆ. ಮಾರ್ಚ್ ಆರಂಭದಲ್ಲಿಯೇ ನೆತ್ತಿಸುಡುವ ರಣಬಿಸಿಲಿಗೆ ಜನ ಸುಸ್ತಾಗಿ ಛತ್ರಿ ಹಿಡಿದು ಓಡಾಡುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಜ್ಯೂಸ್, ಪಾನಕ, ಎಳನೀರು, ಕಲ್ಲಂಗಡಿ, ಮಜ್ಜಿಗೆ ಮಾರುವ ಮಾರಾಟಗಾರರು ಭರ್ಜರಿ ವ್ಯಾಪಾರದ ನಿರೀಕ್ಷೆಯಲ್ಲಿದ್ದಾರೆ.ಈಗಿರುವಾಗ ಬಿಸಿಲಿನ ಬೇಗೆಯಿಂದ ಕಂಗೆಟ್ಟ ಜನರು ತಣ್ಣನೆಯ ನೀರಿಗಾಗಿ ಮೊರೆಹೋಗುವುದಂತೂ ನಿಜ. ಅದರಲ್ಲೂ ಈಗ ೆಲ್ಲೆರ ಚಿತ್ತ ಮಡಕೆಕೊಳ್ಳುವುದರತ್ತ ನೆಟ್ಟಿದೆ. ಯಾಕೆಂದರೆ, ಮಡಕೆಯಲ್ಲಿಟ್ಟ ನೀರು ಎಂಥಾ ಫ್ರಿಜ್ ನೀರಿಗಿಂತಲೂ ಮೇಲಾದುದು ಇದಕ್ಕೆ ಕಾರಣವಾಗಿದೆ. ಈ ದಿಸೆಯಲ್ಲಿ ಮಡಕೆ ಮಾರುವ ವ್ಯಾಪಾರಿಗಳು ಮಳಿಗೆಗಳು, ಫುಟ್ ಪಾತ್ ಗಳು, ಹೆದ್ದಾರಿ- ರಸ್ತೆಗಳ ಆಸುಪಾಸಿನಲ್ಲಿ ಮಡಕೆಗಳನ್ನು ಪೇರಿಸಿಕೊಂಡು ಗ್ರಾಹಕರಿಗಾಗಿ ಕಾಯುತ್ತಿದ್ದಾರೆ. ಅಲ್ಲದೆ, ಜನರು ಮಣ್ಣಿನ ಮಡಕೆಯತ್ತ ಮನಸು ಮಾಡುವುದು ಬೇಸಿಗೆಯ ದಿನಗಳಲ್ಲಿ ಸಹಜವೂ ಆಗಿದೆ.

ಹೌದು, ಇದು ಮಡಕೆ ತಯಾರಿಸುವ ಕುಂಬಾರರಿಗೆ ಉತ್ತಮ ಆದಾಯ ಗಳಿಸಲು ಸದವಕಾಶವಾಗಿದೆ. ಆದ್ದರಿಂದಲೇ ಕುಂಬಾರರು ಹೆಚ್ಚಿನ ಬಂಡವಾಳ ಹೂಡಿ ಬಗೆಬಗೆಯ ಮಡಕೆಗಳ ಜೊತೆ ಈಗ ಮಾರುಕಟ್ಟೆಗೆ ಲಗ್ಗೆಯಿಟ್ಟಿದ್ದಾರೆ. ಈಗ ಜನರು ಸಾಮಾನ್ಯ ಬಗೆಯ ಮಡಕೆಗಳನ್ನು ಕೊಳ್ಳುವುದಕ್ಕಿಂತ ಸ್ವಲ್ಪ ನೋಡಲು ಆಕರ್ಷಕವಾಗಿರುವ, ನಳದ ಸೌಲಭ್ಯವಿರುವ ಮಡಕೆ ಕೊಳ್ಳಲು ನಾಮುಂದು ತಾಮುಂಡು ಎಂದು ನಿಂತಿದ್ದಾರೆ. ಇದರಿಂದ ಸಹಜವಾಗಿಯೇ ಕುಂಬಾರರು ಖುಷಿಯಲ್ಲಿದ್ದಾರೆ. ಆದರೂ ತಾವು ಹಾಕಿದ ಬಂಡವಾಳದ ಜೊತೆ ಸ್ವಲ್ಪ ಆದಾಯ ಸಿಕ್ಕರೆ ಸಾಕು..ಎನ್ನುತ್ತಾನೆ ಜ್ಞಾನಭಾರತಿ ಬಳಿ ಹೊರವರ್ತುಲ ರಸ್ತೆಯ ಪಿವಿಪಿ ಶಾಲೆ ಎದುರು ಟೆಂಟ್ ಹಾಕಿ ಮಡಕೆಗಳನ್ನು ಇಟ್ಟುಕೊಂಡು ಉತ್ತಮ ಲಾಭದ ನಿರೀಕ್ಷೆಯಲ್ಲಿರುವ ರಾಜಸ್ಥಾನ ಮೂಲದ ಮೋಡಾರಾಮ್ ಎಂಬ ವ್ಯಾಪಾರಿ..

ಇಲ್ಲಿ ಸುಮಾರು 3 ಲೀಟರುಗಳಿಂದ ಹಿಡಿದು 15 ಲೀಟರು ನೀರು ಹಿಡಿಸುವ ಸಾಮರ್ಥ್ಯದ ತರಹೇವಾರಿ ಮಡಕೆಗಳು ಸಿಗುತ್ತವೆ. ಅಲ್ಲದೆ, ನಳ(ನಲ್ಲಿ)ದ ಸೌಲಭ್ಯವಿರುವ ದೊಡ್ಡ ದೊಡ್ಡ ಮಡಕೆಗಳು ಕೊಳ್ಳುಗರ ಮನವನ್ನಾಕರ್ಷಿಸುತ್ತವೆ.
ಇವುಗಳ ಬೆಲೆ ತುಸು ದುಬಾರಿಯಾದರೂ ಕೊಳ್ಳಲು ಬರುವ ಗ್ರಾಹಕರಿಗೇನೂ ಕೊರತೆಯಿಲ್ಲ. ಬೇಸಿಗೆಯ ದಾಹ ತಣಿಸಲು ಮಡಕೆಯ ನೀರಿಗಾಗಿ ಮೊರೆಹೋಗದವರಿಲ್ಲ. ಸದಾ ಫ್ರಿಜ್ ನೀರು ಕುಡಿಯುವ ಅಭ್ಯಾಸವಿರುವ ಎಂಥಾ ಸ್ಥಿತಿವಂತರೂ ಸಹ ಈ ಮಡಕೆಗಳ ವ್ಯಾಪಾರಕ್ಕೆ ಇಳಿದಿರೋದು ಮಡಕೆಯ ಮಹತ್ವವನ್ನು ತಿಳಿಸುತ್ತದೆ.

‘ಮಡಕೆಗಳಬೆಲೆ ದುಬಾರಿ ಎನಿಸಿದರೂ ಬೇಸಿಗೆಯ ದಾಹ, ಸುಸ್ತನ್ನು ಹೋಗಲಾಡಿಸಲು ಮಡಕೆಯ ನೀರಿಗಿಂತ ಉತ್ತಮವಾದುದು ಮತ್ತೊಂದಿಲ್ಲ.ಮಡಕೆಯಲ್ಲಿನ ನೀರು ಎಂಥಾ ಫ್ರಿಜ್, ಐಸ್ ಹಾಕಿದ ನೀರಿಗಿಂತ ಕಡಿಮೆಯಲ್ಲ. ಅದಕ್ಕಾಗಿಯೇ ಬೇಸಿಗೆ ಬಂತೆಂದರೆ ನಮ್ಮ ಮನೆಯಲ್ಲಿ ಮಣ್ಣಿನ ಮಡಕೆಯ ಪ್ರತಿಷ್ಠಾಪನೆ ಆಗುತ್ತೆ. ಇದು ನಮ್ಮ
ಮನೆಯವರೆಲ್ಲರೂ ಪ್ರತಿವರ್ಷ ಬೇಸಿಗೆಯ ದಾಹವನ್ನೋಡಿಸಲು ಕಂಡುಕೊಂಡ ದಾರಿಯಿದು’ ಅಂತಾರೆ ಎಚ್ಎಎಲ್ ನ ನಿವೃತ್ತ ಅಧಿಕಾರಿ ಸಿದ್ದೇಗೌಡರು.

ಇದೇ ರೀತಿ ಕೆಂಗೇರಿ, ಕೆಂಗೇರಿ ಉಪನಗರದ ಶಿರ್ಕೆ, ನಾಗರಬಾವಿ ಬಿಡಿಎ ಕಾಂಪ್ಲೆಕ್ಸ್ ಬಳಿ ಈ ರೀತಿಯ ಮಡಕೆ ಮಾರಾಟದ ಮಳಿಗೆಗಳು ಗ್ರಾಹಕರಿಂದ ತುಂಬಿ ತುಳುಕಾಡುತ್ತಿವೆ. ನೀವೂ ಮಡಕೆಯ ನೀರನ್ನು ಕುಡಿದು ಬೇಸಿಗೆಯ ದಾಹದಿಂದ ಮುಕ್ತರಾಗಬೇಕೇ…. ಹಾಗಾದರೆ ಇನ್ನೇಕೆ ತಡ? ಬನ್ನಿ, ನಿಮ್ಮ ಜೇಬಿನ ಭಾರಕ್ಕೊಪ್ಪುವ ಮಣ್ಣಿನ ಮಡಕೆ ಒಯ್ದು…’ತಣ್ಣನೆ’ಯ ಬೇಸಿಗೆಕಾಲವನ್ನು ಅನುಭವಿಸಿರಿ.

–ಹನಿಯೂರು ಚಂದ್ರೇಗೌಡ, ಚನ್ನಪಟ್ಟಣ.

ನಿಮ್ಮ ಅನಿಸಿಕೆ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: