ಅಳಿಯುವುದೇ?..ಹುಟ್ಟುವುದೇ?..

ಈ ಜಗವೇ ಅಳಿಯುವುದೇ?..
ಹೊಸತಾಗಿ ಹುಟ್ಟುವುದೇ?…
ಹುಟ್ಟುವುದೇ ಹೊಸಭಾಷೆ,
ರೀತಿ..ನೀತಿ..?

ಎತ್ತುವನೇ ಆದೇವ,
ಅವತಾರಗಳ ಹೊಸತು,
ಹುಟ್ಟುವುದೇ ಹೊಸತಾಗಿ,
ನಾಕ..ನರಕ…?

ಹುಟ್ಟುವವೇ ಹೊಸದಾಗಿ,
ಯುಗ ಯುಗಗಳೂ ಹೊಸತು..
ಆಗುವುದೇ ಆ ಜಗವು..
ಮತ್ತೆ ಹಸನು?

ಈ ಜಗವೇ ಅಳಿಯುವುದೇ?..
ಹೊಸತಾಗಿ ಹುಟ್ಟುವುದೇ?
ಹುಟ್ಟುವುದೇ ನಿಸ್ವಾರ್ಥ-
ಲೋಕ ಹೊಸತು?..!
ಬರುವುದೇ ತಾನಾಗಿ,
ಹಳತೇ ಹೊಸತು?..!

-ಬಾಲಚಂದ್ರ.ಹೆಗಡೆ.

Advertisements

ನಿಮ್ಮ ಅನಿಸಿಕೆ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: