ಭಾವನೆಗಳ ತೀರದಲ್ಲಿ

ಮನಸೆಂಬ ಶರಧಿಯಲ್ಲಿ,
ಭಾವನೆಗಳ ತರಂಗ.
ಕನಸಿನ ಲೋಕದಲ್ಲಿ,
ಕಲ್ಪನೆಗಳ ಮೃದಂಗ.

ಓ ಮನವೇ ನೀನೆ ಹೇಳು,
ಏನು ಮಾಡಲಿ, ಎತ್ತ ಹೋಗಲಿ…

ಗೊಂದಲಗಳ ಗೂಡಾಯ್ತು,
ಉತ್ತರಿಸಲಾಗದ ಪ್ರಶ್ನೆಗಳ ಮನೆಯಾಯ್ತು ,
ಈ ನನ್ನ ಪ್ರಶಾಂತ ಮನ.
ಬಿಡಿಸಲಾಗದ ಕಗ್ಗಂಟಾಯ್ತು,
ಕತ್ತಲೆಯಲ್ಲಿ ಕಳೆದ ಮುತ್ತಂತಾಯ್ತು,
ಈ ನನ್ನ ಪುಟ್ಟ ಮನ.

ಹೊರಬರುವದೆಂತು ಈ ಗೂಡ ಬಿಟ್ಟು,
ಹೇಗೆ ಬಿಡಿಸಲಿ ಈ ಭಾವಗಳ ಕಗ್ಗಂಟು,
ಯಾರ ಕೇಳಲಿ ಕಾಡುವ ಪ್ರಶ್ನೆಗೆ ಉತ್ತರವ ಈ ಹೊತ್ತು,
ಎಲ್ಲಿ ನಾ ಹುಡುಕಲಿ ಶಾಂತಿ ನೆಮ್ಮದಿಯೆಂಬ ಕಳೆದ ಮುತ್ತು.

ಓ ಮನವೇ ನೀನೆ ಹೇಳು,
ಏನು ಮಾಡಲಿ, ಎತ್ತ ಹೋಗಲಿ …
Nagaratna Patagar 

Advertisements

ನಿಮ್ಮ ಅನಿಸಿಕೆ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: