ನಾನು ಮೆಚ್ಚಿದ ಕಾದಂಬರಿ – ಕವಲು

ಎಸ್.ಎಲ್. ಬೈರಪ್ಪನವರ ಎಲ್ಲ ಅತ್ಯತ್ತಮ ಕಾದಂಬರಿಗಳಲ್ಲಿ ಕವಲು ಕೂಡ ಒಂದು. ಈಗಿನ ವಿದ್ಯಮಾನಗಳನ್ನು ಕಾದಂಬರಿಯಲ್ಲಿ ಬಹಳ ಸೊಗಸಾಗಿ ಚಿತ್ರಿಸಲಾಗಿದೆ. ಪ್ರಕಟವಾದ ಎರಡು ತಿಂಗಳುಗಳಲ್ಲೇ ಐದು ಮರುಮುದ್ರಣಗಳನ್ನು ಕಂಡಿರುವ ಎಸ್.ಎಲ್.ಭೈರಪ್ಪನರ ಕವಲು ಒಂದು ಅತ್ಯುತ್ತಮ ಕಾದಂಬರಿ. ಇದು ಸಮಕಾಲೀನ ವಿಷಯಗಳಾದ ಸ್ತ್ರೀ ಸ್ವಾತಂತ್ರ್ಯ, ವಿವಾಹ ವಿಚ್ಚೇದನ, ಮಹಿಳಾ ಸಬಲೀಕರಣ, ಲೈಂಗಿಕ ಸ್ವಚ್ಛಂದತೆ, ಅಂತರ್ಲಿಂಗೀಯ ಶೋಷಣೆ, ಕಾನೂನು ವಿಶ್ಲೇಷಿಸುವ ವಿಶಿಷ್ಟ ಕೃತಿ. ಕುತೂಹಲಕಾರಿಯಾಗಿ ಓದಿಸಿಕೊಂಡು ಹೋಗುವ ಕಥನ ತಂತ್ರದಲ್ಲಿಯೇ ನೇರಜೀವನದ ಅನಂತ ವೈವಿದ್ಯಮಯ ಅನುಭವಗಳ ಸೂಕ್ಷ್ಮಾತಿ ಸೂಕ್ಷಮ ವಿವರಗಳನ್ನು ಹೃದಯಸ್ವರ್ಶಿಯಾಗಿ ವ್ಯಕ್ತಪಡಿಸುವ ಭೈರಪ್ಪನವರ ಕಲೆಗಾರಿಕೆ ಈ ಕೃತಿಯಲ್ಲೂ ವಿಜೃಂಭಿಸಿದೆ. ಆಧುನಿಕ ಭಾರತದ ಆರ್ಥಿಕವಾಗಿ ಮೇಲೇರುತ್ತಿರುವ ಮಧ್ಯಮ ವರ್ಗದ ಗಂಡು-ಹೆಣ್ಣುಗಳ ಸಂಬಂಧಗಳಲ್ಲಿ ಹಾಗೂ ಜೀವನ ಮೌಲ್ಯಗಳಲ್ಲಿ ಸಂಭವಿಸುತ್ತಿರುವ ಬದಲಾವಣೆಗಳು, ಸಂಘರ್ಷಗಳು, ಸಮಸ್ಯೆಗಳು, ಸಂಕಟಗಳು ಇಲ್ಲಿ ಕಣ್ಣಿಗೆ ಕಟ್ಟುವಂತೆ ಚಿತ್ರಿತವಾಗಿದೆ.

ಜಯಕುಮಾರನ ಹೆಂಡತಿ ಆಕಸ್ಮಿಕ ಅಪಘಾತದಲ್ಲಿ ಮೃತಳಾಗುತ್ತಾಳೆ, ಅವಳಲ್ಲಿ ಅವನು ಪಡೆದ ಮಗಳು ವಿಕಲಚೇತನಳಾಗುತ್ತಾಳೆ. ಏಕಾಂಗಿಯಾದ ಜಯಕುಮಾರ ಕ್ರಮೇಣ ತನ್ನ ಆಪ್ತ ಕಾರ್ಯದರ್ಶಿ ಮಂಗಳೆಯೊಡನೆ ಆಕರ್ಷಿತನಾಗುತ್ತಾನೆ, ಆಕೆ ಪದವೀಧರೆ, ಚಾಣಾಕ್ಷೆ, ಕಾನೂನು ಬಲದಿಂದ ಅವನ ಮೇಲೆ ಒತ್ತಡ ತಂದು ಮದುವೆಯಾಗುತ್ತಾಳೆ. ನಂತರ ಅವನ ಆಸ್ತಿಯನ್ನು ಕಿತ್ತುಕೊಳ್ಳುತ್ತಾಳೆ.

ವಿನಯಚಂದ್ರ ಒಬ್ಬ ದೊಡ್ಡ ಉದ್ಯಮಿ, ಆತನ ಪತ್ನಿ ಇಳಾ ಆಕ್ಸ್ ಫೋರ್ಡ್ ನಲ್ಲಿ ಓದಿದ ಸ್ಥಳೀಯ ವಿಶ್ವವಿದ್ಯಾಲಯದಲ್ಲಿ ರೀಡರ್, ಈಕೆ ಸ್ತ್ರೀವಾದದ ಪ್ರಬಲ ಸಮರ್ಥಕಿಯಾದ ದಿಟ್ಟ ಹೆಣ್ಣು, ಗಂಡ ಹೆಂಡಿರ ಸಂಬಂಧ ವಿವಾಹೇತರ ಸಂಬಂಧವನ್ನು ಹೊಂದಿರುತ್ತಾಳೆ, ಇದರಿಂದ ಬೇಸರಗೊಂಡ ಮಗಳು ಹಾಸ್ಟೆಲ್ ಸೇರುತ್ತಾಳೆ.

ಜಯಕುಮಾರನ ಅಳಿಯ ನಚಿಕೇತ, ಅಮೇರಿಕಾದಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದು, ಲಿಂಡ್ಸಿ ಎಂಬ ಯುವತಿಯೊಂದಿಗೆ ಸ್ವಲ್ಪ ಕಾಲ ಲಿವಿಂಗ್-ಟುಗೆದರ್ ಸಂಬಂಧ ಬೆಳೆಸಿಕೊಂಡಿರುತ್ತಾನೆ. ನಂತರ ಈತ ಟ್ರೀಸಿ ಎಂಬ ಎಂಬ ಆಗಲೇ 2 ಮಕ್ಕಳಿರುವ ಹೆಣ್ಣನ್ನು ಮದುವೆಯಾಗುತ್ತಾನೆ. ಟ್ರೇಸಿ ಚಾಣಾಕ್ಷೆ, ಕಾಮಕಲಾ ನಿಪುಣೆ. ಆ ದೇಶದ ಕಾನೂನುಗಳನ್ನು ಬಳಸಿಕೊಂಡು ಟ್ರೇಸಿ ನಚಿಕೇತನ ಆಸ್ತಿ, ಆದಾಯಗಳನ್ನು ದೋಚಿಕೊಳ್ಳುತ್ತಾಳೆ. ಆರ್ಥಿಕವಾಗಿ ದಿವಾಳಿಯಾಗಿ, ಭಗ್ನ ಹೃದಯಿಯಾಗಿ ವಿಕಲಚೇತನಳಾದ ಮಾವನ ಮಗಳನ್ನು ಮದುವೆಯಾಗುತ್ತಾನೆ.

ಜಯಕುಮಾರ ಮತ್ತು ನಚಿಕೇತನ ಪ್ರಸಂಗದಲ್ಲಿ ಹೆಣ್ಣೇ ಕಾನೂನಿನ ಬಲದಿಂದ ಗಂಡನ್ನು ಶೋಷಣೆಗೆ ಗುರಿಪಡಿಸುತ್ತಾಳೆ. ವಿನಯಚಂದ್ರನ ಪ್ರಸಂಗದಲ್ಲಿ ಕಾನೂನಿನ ಸಹಾಯ ಅವನಿಗೆ ಸಿಗುತ್ತದೆ. ಎಲ್ಲ ಸಂದರ್ಭಗಳನ್ನೂ ಕಾನೂನಿನಿಂದ ನ್ಯಾಯಗಳ ಸರಿಯಾದ ನಿರ್ಧಾರವಾಗುತ್ತದೆಂಬ ಖಾತರಿಯಿಲ್ಲ, ನ್ಯಾಯಕ್ಕಾಗಿ ರಚಿತವಾದ ಕಾನೂನುಗಳಿಂದಲೇ ಅನ್ಯಾಯವೂ ಆಗುವ ಸಾಧ್ಯತೆಯಿದೆ.

ಶೋಷಣೆಯನ್ನು ಹೆಣ್ಣೂ ಮಾಡಬಹುದು, ಗಂಡೂ ಮಾಡಬಹುದು. ಅದು ಅವರವರ ಸ್ವಭಾವ ಮತ್ತು ಸಾಮರ್ಥ್ಯಗಳನ್ನು ಹೊಂದಿಕೊಂಡಿದೆ. ಹೀಗೆ ವಿವಾಹಪೂರ್ವ, ಸಲಿಂಗಕಾಮ, ಸ್ತ್ರೀವಾದ ಮುಂತಾದವುಗಳನ್ನು ಹೃದಯಸ್ಪರ್ಶಿಯಾಗಿ ಚಿತ್ರಿಸಿದ್ದಾರೆ ಯಾವ ಅತಿರೇಕವು ಇಲ್ಲದೆ, ಬುದ್ದಿ ಭಾವಗಳನ್ನು ಕಲಕುವ ಕೃತಿ – ಕವಲು.
-ದಿವ್ಯಾಶ್ರೀ 
ಮೌಂಟ್ ಕಾರ್ಮೆಲ್ ಕಾಲೇಜು 

Advertisements

One response

  1. ಸಮಕಾಲೀನ ಸಂಬಂಧಗಳನ್ನ ಅರ್ಥ ಮಾಡಿಕೊಳ್ಳುವಲ್ಲಿ ಪ್ರಯತ್ನಿಸಿದ ಹಿರಿಯ ಸಾಹಿತಿಗಳಲ್ಲಿ ಭೈರಪ್ಪನವರು ಒಬ್ಬರು.

    ಆದರೆ, ಈ ಕೃತಿ ಸ್ವಲ್ಪ ಪೂರ್ವಾಗ್ರಹಪೀಡಿತವಾಗಿದೆ ಅನ್ನೋದನ್ನ ಬಿಟ್ಟರೆ, ಸ್ತ್ರೀವಾದದ ಸೋಗಿನಲ್ಲಿ ನಡೆಯುವ ಎಲ್ಲ ಅಕ್ರಮಗಳನ್ನ, ಮೋಸಗಳನ್ನ ವಿವರವಾಗಿ ಬಿಚ್ಚಿಟ್ಟಿದ್ದಾರೆ. ಆದರೆ, ಯಾವುದೇ ಹೆಣ್ಣುಮಗಳ ವರ್ಣನೆ ಬಂದಾಗ ಆಕೆ ಕುಂಕುಮ ಧರಿಸಿದ್ದಾಳೆಯೇ ಇಲ್ಲವೇ ಏನು ಬಟ್ಟೆ ಹಾಕಿದ್ದಾಳೆ ಅನ್ನೋದನ್ನೇ ವರ್ಣಿಸುತ್ತಾ ಕೆಲವೊಮ್ಮೆ ಭೈರಪ್ಪನವರು ವ್ಯಕ್ತಿತ್ವ ವರ್ಣನೆಗಿಂತ ಬಾಹ್ಯ ವರ್ಣನೆಗೆ, ಧಾರ್ಮಿಕತೆಗೆ ಒತ್ತು ಕೊಟ್ಟು ಪೂರ್ವಾಗ್ರಹಪೀಡಿತರು ಅನ್ನೋದನ್ನ ಸಾಬೀತುಪಡಿಸುತ್ತಾರೆ.

    ಇದನ್ನ ಹೊರತುಪಡಿಸಿ ನೋಡಿದರೆ, ಕವಲು ಒಂದು ಉತ್ತಮ ಕೃತಿ. ಆದರೆ, ಆವರಣದಂತೆಯೇ ಭಯ ಹುಟ್ಟಿಸುವ ಕೃತಿ. ಅದು ಧಾರ್ಮಿಕ ಭಯ. ಇದು ಸಂಬಂಧ ಭಯ. ಈ ಕೃತಿಯನ್ನ ಓದಿದ್ದಾದಮೇಲೆ ಗಂಡಸರು ಮದುವೆ ಆಗಲೇ ಬೇಕಾ ಅನ್ನೋ ಪ್ರಶ್ನೆ ಕೇಳೋದು ಮಾತ್ರ ಉಳಿದಿರುತ್ತೆ.

    ಗಣೇಶ್ ಕೆ.

ನಿಮ್ಮ ಅನಿಸಿಕೆ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: