ಹಿಂದೂ ಧರ್ಮ ಸನಾತನ ಧರ್ಮ

ಹಿಂದೂ ಧರ್ಮ ಸನಾತನ ಧರ್ಮ, ಹಿಂದೂ ಧರ್ಮವೆಂದು ಹೇಳಲು ಇಂದಿನ ಯುವ ಜನತೆ ಸಂಕೋಚ ಪಡುತ್ತಾರೇನೋ ಆದರೆ 1877 ರಲ್ಲಿ ಥಾಮಸ್ ಎಡಿಸನ್ ಎಂಬ ಅಮೆರಿಕಾ ವಿಜ್ಞಾನಿ ಗ್ರಾಮಾಫೋನ್ ಕಂಡು ಹಿಡಿದು ಅದನ್ನು ಪ್ರಚಾರ ಪಡಿಸಲು ಇಂಗ್ಲೆಂಡ್ ನಲ್ಲಿ ಸಭೆ ಸೇರಿಸಿ ಗ್ರಾಮಾಫೋನ್ ನಲ್ಲಿ ಸಾವಿರಾರು ಕ್ರಿಸ್ಚಿಯನ್ ಮತ್ತು ಇತರ ಧರ್ಮದವರ ಎದುರು ಒಂದು ಶ್ಲೋಕವನ್ನು ಹೇಳಿ ಅದನ್ನು ರೆಕಾರ್ಡ್ ಮಾಡಿ ಸ್ವಲ್ಪ ಸಮಯದ ನಂತರ ಧ್ವನಿ ಸಂಸ್ಕರಿಸಿ ಹಾಕುತ್ತಾನೆ, ಆಗ ಅಲ್ಲಿ ಸೇರಿದವರೆಲ್ಲಾ ಈ ಭಾಷೆ ಯಾವುದು, ಈ ಶ್ಲೋಕ ಯಾವುದು ಎಂದು ಕೇಳಿದಾಗ ಥಾಮಸ್ ಎಡಿಸನ್ ಇದು ಪ್ರಪಂಚದ ತಾಯಿ ಧರ್ಮ, ಹಿಂದೂ ಧರ್ಮ ವೇದಗಳ ಶ್ಲೋಕ ಎಂದು ಹೇಳಿದಾಗ ಎಲ್ಲಾ ಧರ್ಮದವರಿಗೂ ಆಶ್ಚರ್ಯ ಮತ್ತು ರೋಮಾಂಚನವಾಗುತ್ತದೆ, ಇದರ ಬಗ್ಗೆ ಕನ್ನಡ ದಿನಪತ್ರಿಕೆಯಲ್ಲಿ ವರದಿ ಪ್ರಕಟವಾಗಿತ್ತು.

ಹೀಗೆ ಅಂತಹ ಮಹಾನ್ ವಿಜ್ಞಾನಿ ಸತ್ಯವಾದ, ನ್ಯಾಯವಾದ, ಆಧ್ಯಾತ್ಮದ ಆಧುನಿಕತೆಯ ಎಲ್ಲಾ ಸಂದೇಶವುಳ್ಳ ಧರ್ಮದ ಬಗ್ಗೆ ಭಯ, ಸಂಕೋಚ ಇಲ್ಲದೆ ನಿರ್ಭಯವಾಗಿ ಹೇಳುತ್ತಾನೆ ಎಂದರೆ ನಾವು ಭಾರತೀಯರಾಗಿ ಸ್ವಾಮಿ ವಿವೇಕಾನಂದರಂತಹ ವೀರ ಸನ್ಯಾಸಿಯನ್ನು ಪಡೆದ ನಾವು ನಮ್ಮ ಧರ್ಮದ ಬಗ್ಗೆ ಹೆಮ್ಮೆ ಪಡಬೇಕು, ಜೊತೆಗೆ ಅದರ ಬೆಳವಣಿಗೆಗೆ ನಾವು ದುಡಿಯಬೇಕು ಏಕೆಂದರೆ ಆಧುನಿಕ ಜಗತ್ತಿನಲ್ಲಿ ಸ್ಪರ್ಧೆ ಜಾಸ್ತಿ ಮತ್ತು ನಮ್ಮ ದೇಶದಲ್ಲಿ ಜಾತಿ ವ್ಯವಸ್ಥೆ ಬಹುವಾಗಿ ಬೇರು ಬಿಟ್ಟಿದೆ, ಇಲ್ಲಿ ಬಹುಸಂಖ್ಯಾತ ಸವರ್ಣೀಯರು, ಬಹುಸಂಖ್ಯಾತ ಹಿಂದುಳಿದ ದೀನ ದಲಿತರು ಇದ್ದು ಇಬ್ಬರ ಮಧ್ಯೆ ಸಾಂಸ್ಕೃತಿಕ, ಆರ್ಥಿಕ, ರಾಜಕೀಯ, ಭಿನ್ನತೆ ಹೆಚ್ಚಾಗಿ ಹೊಂದಾಣಿಕೆ ಅಭಾವ. ಅವರನ್ನು ಪ್ರೀತಿಸುವ ಸ್ವಭಾವ, ಅವರು ನಮ್ಮವರೆಂದು ಒಪ್ಪಿಕೊಳ್ಳುವ ಮನಸ್ಸಿನ ಅಭಾವವಾಗಿ ಇಂದು ಪರಧರ್ಮಗಳು ಅದನ್ನೇ ಬಲಹೀನತೆಯನ್ನಾಗಿ ಮಾಡಿಕೊಂಡು ಮತಾಂತರ ಮಾಡಿ ನಮ್ಮ ಬಂಧುಗಳನ್ನು ನಮ್ಮಿಂದ, ನಮ್ಮ ರಾಷ್ಟ್ರಾಭಿಮಾನದಿಂದ ದೂರ ಮಾಡುತ್ತಿದ್ದಾರೆ.

ಆದ್ದರಿಂದ ಇಂದಿನ ಯುವ ಜನತೆ, ಯುವನೇತಾರರು, ಯುವಸನ್ಯಾಸಿಗಳು ಅವರನ್ನು ಪ್ರೀತಿಸಿ, ಗುರುತಿಸಿ, ಸಹಕರಿಸಿ, ಅವರನ್ನು ಆರ್ಥಿಕವಾಗಿ, ರಾಜಕೀಯವಾಗಿ, ಸಾಂಸ್ಕೃತಿಕವಾಗಿ, ಶೈಕ್ಷಣಿಕವಾಗಿ ಮೇಲೆತ್ತಿದರೆ ಮತಾಂತರ ತಪ್ಪಿಸಬಹುದು. ಇದು ಲೇಖನದಲ್ಲಿ, ಭಾಷಣದಲ್ಲಿ ಮಾತ್ರ ಆಗದೆ ಪ್ರತಿಯೊಬ್ಬ ಸಧೃಡನಾದ ಹಿಂದೂ ತನ್ನ ಕೈಲಾದ ಸಹಾಯವನ್ನು ಯಾವುದೇ ಜಾತಿಯ ಬಡವರಿಗೆ, ದೀನ ದಲಿತರಿಗೆ ಸಹಾಯ ಮಾಡಿದರೆ ಅವರೇ ಒಂದು ಶಕ್ತಿಯಾಗಿ, ಮತಾಂತರವನ್ನು, ಮತಾಂತರ ಮಾಡುವವರನ್ನು ಹೊಡೆದು ಓಡಿಸಿ, ದೇಶಕ್ಕೆ ಶಕ್ತಿಯಾಗಿ, ಹಿಂದೂ ಭಕ್ತನಾಗಿ, ದೇಶರಕ್ಷಕನಾಗುತ್ತಾನೆ. ಆದ್ದರಿಂದಲೇ ಪ್ರಪಂಚದಲ್ಲಿ ನಮ್ಮ ಹಿಂದೂ ಧರ್ಮದ ಸನ್ಯಾಸಿಗಳು ಈ ರೀತಿ ಸಂದೇಶ ನೀಡಿದ್ದಾರೆ

“ಮಾನವ ಧರ್ಮಕ್ಕೆ ಜಯವಾಗಲಿ
ಧರ್ಮದಿಂದಲೇ ವಿಶ್ವಕ್ಕೆ ಶಾಂತಿ”

-ಶಿವರಾಜ ನಾಯಕ್ 

Advertisements

ನಿಮ್ಮ ಅನಿಸಿಕೆ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: