ಪಪ್ಪಾ ನನ್ನ ತಲೆ ಬೋಳು ಮಾಡಿಸ ಬೇಕು

‎”ಆ ಪೇಪರ್ ಬಿಟ್ಟು ಬರಬಾರದ “ಹೆಂಡತಿಯ ಮಾತಿಗೆ ಪೇಪರ್ ಮಡಚಿಟ್ಟು ಒಳ ಹೋದ. ಮುದ್ದಿನ ಮಗಳು ಕಣ್ಣಲಿ ನೀರು, ಎದುರಿಗೆ ಅವಳಿಗೆ ಇಷ್ಟವೇ ಅಲ್ಲದ ಮೊಸರನ್ನದ ಬಟ್ಟಲು. ಪಾಪ ಎನಿಸಿತು. “ತಿಂದು ಬಿಡು ಪುಟ್ಟಿ ಚಿನ್ನ ಅಲ್ವ. ನೀನು ತಿನ್ಲಿಲ್ಲ ಅಂದ್ರೆ ಅಮ್ಮ ನನ್ನ ಬೈತಾಳೆ” ಅಂದ. ಪುಟ್ಟಿ “ಸರಿ ಪಪ್ಪಾ ಆದ್ರೆ ನನಗೆ ನಾನು ಕೇಳಿದ್ದು ಕೊಡಿಸ್ತೀಯ ” ಅಂದ್ಲು..”ಸರಿ ಕಂದ” ಅಂದ. “ಪ್ರಾಮಿಸ್ ” ಅಂದ್ಲು “ನೋಡು ಪುಟ್ಟಿ ಸುಮ್ಸುಮ್ಮನೆ ಏನೇನೋ ಕೇಳಬಾರದು” ಅಂದ. “ಇಲ್ಲ ಪಪ್ಪಾ, ಅಂತದೆನು ಕೇಳೋದಿಲ್ಲ” ಅಂದ್ಲು ಪುಟ್ಟಿ…ಇವನು ಅವಳು ತಿಂದರೆ ಸಾಕು ಅಂತ ಒಪ್ಪಿದ. ಪುಟ್ಟಿ ಕಷ್ಟ ಪಟ್ಟು ಒಂದೊಂದೇ ತುತ್ತನೆಲ್ಲ ನುಂಗಿದಳು.

ಊಟ ಮುಗಿದ ನಂತರ ಅಪ್ಪನ ತೊಡೆ ಮೇಲೆ ಕುಳಿತ ಪುಟ್ಟಿ “ಪಪ್ಪಾ ನನ್ನ ತಲೆ ಬೋಳು ಮಾಡಿಸ ಬೇಕು” ಅಂದ್ಲು. ಅಮ್ಮ, ಅಜ್ಜಿ, ಅಪ್ಪ, ಹೌಹಾರಿದರು .. ಅಪ್ಪ ಹೇಳಿದ “ಪುಟ್ಟಿ ನಿನಗೇನೂ ಬೇಕು ಕೇಳು ಇನ್ದೆಂತ ಆಸೆ ..ನೋಡು ಎಷ್ಟು ಚೆಂದ ಇದೆಯಾ ನಿನ್ನ ಕೂದಲು ಎಷ್ಟು ಚೆಂದ ಇದೆ” ರಮಿಸಲು ನೋಡಿದ. ಅಜ್ಜಿ ಅಮ್ಮ ಅತ್ತೆ ಬಿಟ್ರು. ಆದರು ಪುಟ್ಟಿಯದು ಒಂದೇ ಹಠ. ಕಡೆಗೆ ಅಪ್ಪ ಒಪ್ಪಿದ . ಅಮ್ಮ ಅಜ್ಜಿ ಕೂಗಾಡಿದ್ರು.

ಅಪ್ಪ ಹೇಳಿದ, “ನೋಡು ನಾವೇ ಹೀಗೆ ಕೊಟ್ಟ ಮಾತಿಗೆ ತಪ್ಪಿದರೆ ಅವಳಿಗೆ ಪ್ರಾಮಿಸ್ ಬಗ್ಗೆ ನಂಬಿಕೆ ಹೊರಟು ಹೋಗುತ್ತೆ . We should honour or promises” ಅಂದ.
ಮರುದಿನ ಬೆಳಿಗ್ಗೆ ಪುಟ್ಟಿಯ ತಲೆಗೂದಲು ಸಲೋನಿನವನ ಪಾಲಾಯ್ತು . ಗುಂಡು ಮುಖ ಗುಂಡು ತಲೆ ಚೆಂದ ಕಂಡಳು ಪುಟ್ಟಿ. ಮಗಳನ್ನು ಬಿಡಲು ಶಾಲೆ ಹೋದ ಅಪ್ಪ. ಸ್ವಲ್ಪವು ಮುಜುಗರವಿಲ್ಲದೆ ಪುಟ್ಟಿ ಒಳ ಓಡಿದಳು . ಅವಳ ಕಡೆಯೇ ಒಬ್ಬ ಪುಟ್ಟ ಹುಡುಗ ಓಡಿ ಬಂದ. ಅವನ ತಲೆಯು ಬೋಳು. “ಒಹ್ ಇದು ವಿಷಯ “ಎಂದುಕೊಂಡ ಅಪ್ಪ.

“ಸರ್ your daughter is great ಸರ್” ಅನ್ನೋ ಮಾತು ಕೇಳಿ ಪಕ್ಕಕ್ಕೆ ತಿರುಗಿದ..ಸುಮಾರು ಅವನದೇ ವಯಸ್ಸಿನ ಹೆಣ್ಣು ಮಗಳು. ಕಣ್ಣಲಿ ನೀರು ತುಂಬಿ ನಿಂತಿದ್ಲು. ಕಣ್ಣಲ್ಲಿ ಕೃತಜ್ಞತೆ .

“ಸರ್ ಅಲ್ಲಿ ಓಡಿ ಬಂದನಲ್ಲ ಹುಡುಗ , ನನ್ನ ಮಗ, ಅವನಿಗೆ leukemia. Chemotherapy ಕೊಡಿಸಿದ್ವಿ ಕೂದಲೆಲ್ಲ ಉದುರಿ ಹೋಯ್ತು . ಸ್ಕೂಲ್ನಲ್ಲಿ ಎಲ್ಲ ಗೇಲಿ ಮಾಡುತ್ತಾರೆ ಅಂತ ಒಂದು ವಾರದಿಂದ ಶಾಲೆಗೆ ಬಂದಿರಲಿಲ್ಲ. ನೆನ್ನೆ ನಿಮ್ಮ ಮಗಳು ದಾರಿಯಲ್ಲಿ ಸಿಕ್ಕಿದಳು, ಇಬ್ರು ಬೆಸ್ಟ್ ಫ್ರೆಂಡ್ಸ್ ಅಂತೆ. ಇವನು ಸ್ಕೂಲ್ಗೆ ಯಾಕೆ ಬರೋದಿಲ್ಲ ಅಂತ ಹೇಳಿದ . ಅದಕ್ಕೆ ಅವಳು “ನೀನು ನಾಳೆ ಬಾ ನಿನ್ನ ಯಾರು ಗೇಲಿ ಮಾಡದ ಹಾಗೆ ನಾನು ninna jote ಇರ್ತೀನಿ ” ಅಂದ್ಲು. “ನೀವು ಅಧ್ರುಷ್ಟವಂತರು ಸರ್. ನಿಮ್ಮ ಮಗಳು ಒಳ್ಳೆಯವಳು “ಅಂದ್ಲು. ಇವನು ಗರಬಡಿದಂತೆ ನಿಂತು ಬಿಟ್ಟ.!!

ಓದಿದ ನಂತರ ಯಾಕೋ ಮನಸ್ಸು ದ್ರವಿಸಿ ಹೋಯ್ತು …ಮಕ್ಕಳು ನಮಗೆ ಎಷ್ಟು ದೊಡ್ಡ ಪಾಠ ಕಲಿಸುತ್ತಾರೆ ಅಲ್ವ…..:)

ಸುನಿತಾ ಮಂಜುನಾಥ್

Advertisements

ನಿಮ್ಮ ಅನಿಸಿಕೆ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: