ಕಣ್ಣೀರ ಕುದುರೆ

ಕಣ್ಣೀರ ಕುದುರೆಗಳಿಗೆ
ಮುಗುದಾರವನು ಹಾಕಿ
ಹಿಡಿದು ಕೊಂಡಿರುವುದು 
ನನ್ನ ಕಲ್ಲು ಹೃದಯ,
ದಾಟಲು ಬಿಡಲಾರದು 
ನನ್ನ ಕಣ್ಣಿನ ಅಂಗಳವ;
ಮತ್ತೆ ಮತ್ತೆ ಬರುತಿದ್ದ 
ಅವಳ ನೆನಪುಗಳು
ತಿವಿಯುತಿತ್ತು ಈ ಕುದುರೆಗಳ;
ಕೊಡುತ ನಾಗಾಲೋಟಕೆ ಪ್ರೇರಣೆಯ,
ಹೊಡೆತ ತಿಂದು ಓಡುವ
ಕುದುರೆಯೋಟವ ಕಂಡು
ಸುಖಿಸುವ ಹುಚ್ಚು 
ಜನರಿರುವ ಜಗವಿದು;
ಅದಕಾಗಿ ಕೊಟ್ಟಿರುವೆ ನನ್ನ 
ಕಲ್ಲು ಹೃದಯಕದರ ಲಗಾಮು;
ಸ್ಪಷ್ಟ ನಿರ್ದೇಶನದೊಂದಿಗೆ
ತಿರುಗು ಕಣ್ಣೊಳಗೆ
ಕೆನ್ನೆಯ ಮೈದಾನದಿ
ಸ್ಪರ್ಧೆಗಿಳಿಯಬೇಡ
ಮನದ ದುಗುಡವ
ಮರೆಮಾಚುವಂತೆ 
ತುಟಿಯ ತುಂಬಾ 
ನಗೆಯ ಕೆತ್ತಿಸಿರುವೆ;
ಮನದಾಳದ ನೋವ ಕಂಡು
ಕಣ್ಣೀರ ಕುದುರೆಗಳ ಲಗಾಮು 
ಬಿಟ್ಟು ಬಿಡಬೇಡ
ನಗುವಿನ ಮುಖವಾಡವನು 
ಕಳಚಿ ಬಿಡಬೇಡ.

—ಕೆ.ಗುರುಪ್ರಸಾದ್

Advertisements

ನಿಮ್ಮ ಅನಿಸಿಕೆ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: