ಔಷಧೀಯ ಸಸ್ಯಗಳು

ಔಷಧೀಯ ಸಸ್ಯಗಳು. . . . ಕೆ ರವಿಕುಮಾರ್ ಕೋಲಾರ್.
ವನಸ್ಪತಿ ಯು ಸಾಂಪ್ರದಾಯಿಕ ಅಥವಾ ಜಾನಪದ ಔಷಧ ಪ್ರಕಾರವಾಗಿದ್ದು, ಇದು ಸಸ್ಯ ಮತ್ತು ಸಸ್ಯಜನ್ಯ ಸಾರ, ಸತ್ವಗಳ ಬಳಕೆಯನ್ನವಲಂಭಿಸಿದೆ. ಈ ವನಸ್ಪತಿಯು ಸಸ್ಯಗಳ ಔಷಧಿ , ಔಷಧೀಯ ವನಸ್ಪತಿ , ಗಿಡಮೂಲಿಕೆಗಳ ಔಷಧಿ , ಮೂಲಿಕಾಶಾಸ್ತ್ರ ಮತ್ತು ಮೂಲಿಕಾ ಚಿಕಿತ್ಸೆ ಎಂಬ ಹೆಸರುಗಳಿಂದಲೂ ಕರೆಯಲ್ಪಡುತ್ತದೆ.
ಗಿಡಮೂಲಿಕೆಗಳ ಔಷಧಿಯ ವ್ಯಾಪ್ತಿಯು ಕೆಲವೊಮ್ಮೆ ಶಿಲೀಂಧ್ರಗಳು ಮತ್ತು ಜೇನುಹುಳುಗಳ ಉತ್ಪನ್ನಗಳಿಗೂ ಹರಡಿದ್ದು, ಖನಿಜಾಂಶಗಳು, ಚಿಪ್ಪುಗಳು ಹಾಗೂ ಕೆಲವು ಪ್ರಾಣಿಗಳ ದೇಹದ ಭಾಗಗಳನ್ನೂ ಒಳಗೊಂಡಿರುತ್ತವೆ.
ಔಷಧ ವಿಜ್ಞಾನಶಾಸ್ತ್ರವು ನೈಸರ್ಗಿಕ ಮೂಲಗಳಿಂದ ದೊರೆಯುವ ಔಷಧಗಳ ಬಗೆಗಿನ ಅಧ್ಯಯನವಾಗಿದೆ.

ಔಷಧಗಳ ಸಾಂಪ್ರದಾಯಿಕ ಬಳಕೆಯು ಭವಿಷ್ಯದ ಔಷಧಗಳ ಸಾಮರ್ಥ್ಯವನ್ನು ತಿಳಿದುಕೊಳ್ಳುವ ಒಂದು ದಾರಿಯೆಂದು ಗುರುತಿಸಲ್ಪಟ್ಟಿದೆ. 2001ರಲ್ಲಿ ಸಂಶೋಧಕರು ಸುಮಾರು 122 ಸಂಯುಕ್ತಗಳನ್ನು ಪ್ರಚಲಿತ ಔಷಧಗಳ ಮುಖ್ಯವಾಹಿನಿಯಲ್ಲಿ ಬಳಸಿದ್ದು, ಇವೆಲ್ಲವೂ ಔಷಧ “ಜನಾಂಗೀಸಸ್ಯಗಳ” ಮೂಲಗಳಿಂದ ಪಡೆದವುಗಳಾಗಿವೆ. ಇವುಗಳಲ್ಲಿ ಶೇಕಡಾ 80 ಸಂಯುಕ್ತಗಳು ಇದೇ ರೀತಿಯ ಬಳಕೆಗೆ ಅಥವಾ ಇದಕ್ಕೆ ಸಂಬಂಧಿಸಿದ ಸಾಂಪ್ರದಾಯಿಕ ಔಷಧ ಜನಾಂಗೀಯ ಬಳಕೆಯಲ್ಲಿ ಉಪಯೋಗಿಸಲ್ಪಡುತ್ತವೆ.

ಹಲವು ಸಸ್ಯಗಳು ಮಾನವರಲ್ಲಿ ಮತ್ತು ಇತರ ಪ್ರಾಣಿಗಳಲ್ಲಿ ಆರೋಗ್ಯವನ್ನು ಸುಸ್ಥಿತಿಯಲ್ಲಿಡಲು ಬಳಸಬಹುದಾದಂತಹ ದ್ರವ್ಯಗಳನ್ನು ಉತ್ಪಾದಿಸುತ್ತವೆ. ಇವು ಸುವಾಸನಾಯುಕ್ತ ದ್ರವ್ಯಗಳಾಗಿದ್ದು ಇವುಗಳಲ್ಲಿ ಹೆಚ್ಚಿನವುಗಳು ಫೀನಾಲ್‌ಗಳು ಮತ್ತು ಇವುಗಳ ಆಕ್ಸಿಜನ್ ಪರಮಾಣುಗಳ ಆದೇಶವನ್ನು ಹೊಂದಿದ ಉತ್ಪನ್ನಗಳಾದ ಟ್ಯಾನಿನ್‌ಗಳು. ಹೆಚ್ಚಿನವುಗಳು ಚಯಾಪಚಯ ಕ್ರಿಯೆಯಲ್ಲಿ ಪಾಲ್ಗೊಳ್ಳುವ ಎರಡನೇ ದರ್ಜೆಯ ವಸ್ತುಗಳಾಗಿದ್ದು ಕೇವಲ 12,000 ದ್ರವ್ಯಗಳನ್ನು ಈವರೆಗೆ ಪತ್ತೆಹಚ್ಚಲಾಗಿದ್ದು, ಇವುಗಳನ್ನು ಒಟ್ಟು ಪರಿಮಾಣದ ಶೇಕಡಾ 10ರಷ್ಟು ಮಾತ್ರ ಎಂದು ಅಂದಾಜುಗೊಳಿಸಲಾಗಿದೆ. ಹೆಚ್ಚಿನ ಸಂದರ್ಭಗಳಲ್ಲಿ, ಅಲ್ಕಲೋಯ್ಡ್‌ಗಳಂತಹ ದ್ರವ್ಯಗಳು ಸಸ್ಯಗಳಲ್ಲಿ ಪರಭಕ್ಷಕ ಸೂಕ್ಷಾಣುಜೀವಿಗಳಿಂದ, ಕೀಟಗಳಿಂದ ಮತ್ತು ಸಸ್ಯಾಹಾರಿ ಪ್ರಾಣಿಗಳಿಂದ ರಕ್ಷಣೆಯನ್ನೊದಗಿಸುವ ಪ್ರಕ್ರಿಯೆಗಳಾಗಿ ಬಳಸಲ್ಪಡುತ್ತವೆ. ಗಿಡಮೂಲಿಕೆಗಳಲ್ಲಿ ಹೆಚ್ಚಿನ ಸಸ್ಯಗಳು ಮತ್ತು ಸಸ್ಯವರ್ಗಗಳು ತಮ್ಮ ಸಮೃದ್ಧಿಕಾಲದಲ್ಲಿ ಔಷಧೀಯ ಸಂಯುಕ್ತಗಳನ್ನೊದಗಿಸುವ ಆಹಾರವಾಗಿ ಮನುಷ್ಯರಿಂದ ಬಳಸಲ್ಪಡುತ್ತವೆ

ವನಸ್ಪತಿಯೊಂದಿಗೆ ಮಾನವ ಸಂಬಂಧಗಳು

ಎಲ್ಲಾ ಖಂಡದ ಸಾವಿರಾರು ಜನರು ಇತಿಹಾಸ ಪೂರ್ವಕಾಲದಿಂದಲೂ ಸ್ಥಳೀಯ ಸಸ್ಯವರ್ಗಗಳನ್ನು ತಮ್ಮ ಖಾಯಿಲೆಯ ಚಿಕಿತ್ಸೆಗಾಗಿ ಬಳಸುತ್ತಾ ಬಂದಿದ್ದಾರೆ. ಓಝ್‌ಟಲ್ ಆಲ್ಪ್ಸ್‌ನಲ್ಲಿ ಸುಮಾರು 5,300ವರ್ಷಗಳಿಗೂ ಹಿಂದೆ ಘನೀಕರಿಸಲ್ಪಟ್ಟ ಶರೀರ ಹೊಂದಿದ್ದ “ಓಟ್ಝಿ ದ ಐಸ್‌ಮ್ಯಾ ನ್” ನ ವೈಯಕ್ತಿಕ ಪರಿಣಾಮದಲ್ಲಿ ಹಲವಾರು ಔಷಧೀಯ ಮೂಲಿಕೆಗಳು ಕಂಡುಬಂದಿವೆ. ಅವನ ಕರುಳಿನಲ್ಲಿ ಸೇರಿಕೊಂಡ ಪರಾವಲಂಬಿ ಜೀವಿಗಳ ಚಿಕಿತ್ಸೆಗಾಗಿ ಈ ಗಿಡ ಮೂಲಿಕೆಗಳು ಬಳಸಲ್ಪಟ್ಟವು ಎಂಬುದಾಗಿ ತಿಳಿದಿಬಂದಿದೆ. ಪ್ರಾಣಿಗಳು ತಮ್ಮ ದೈಹಿಕ ಅಸ್ವಸ್ಥತೆಯ ಚಿಕಿತ್ಸೆಗಾಗಿ ಕಹಿಸತ್ವವುಳ್ಳ ಸಸ್ಯಗಳ ಭಾಗಗಳನ್ನು ಬಯಸುತ್ತವೆ ಎಂಬ ಸಿದ್ಧಾಂತವನ್ನು ಮಾನವಶಾಸ್ತ್ರಜ್ಞರು ಮಂಡಿಸಿದ್ದಾರೆ.

ಸ್ವಾಭಾವಿಕವಾಗಿ ತಾವು ತಿನ್ನದೇ ಇದ್ದಂತಹ ಕಹಿ ಸತ್ವವುಳ್ಳ ಮೂಲಿಕೆಗಳನ್ನು ಕೊಂಚ ಕೊಂಚವಾಗಿ ಕಚ್ಚಿ ತಿನ್ನುವಲ್ಲಿಯವರೆಗೆ ಅಸ್ವಸ್ಥ ಪ್ರಾಣಿಗಳು ತಮ್ಮ ಆಹಾರಾಭ್ಯಾಸವನ್ನು ಬದಲಾಯಿಸಿ ಕೊಳ್ಳುತ್ತವೆ ಎಂಬುದಾಗಿ ಸ್ಥಳೀಯ ವೈದ್ಯರು ಪದೇ ಪದೇ ತಿಳಿಸಿಕೊಟ್ಟಿದ್ದಾರೆ. ಕ್ಷೇತ್ರ ಜೀವಶಾಸ್ತ್ರಜ್ಞರು ಚಿಂಪಾಂಜಿಗಳು, ಕೋಳಿಗಳು, ಕುರಿಗಳು ಮತ್ತು ಚಿಟ್ಟೆಗಳಂತಹ ವಿಭಿನ್ನ ಪ್ರಭೇಧದ ಪ್ರಾಣಿವರ್ಗಗಳಲ್ಲಿ ನಡೆಸಿದ ಪರಿವೀಕ್ಷಣೆಯ ಮೂಲಕ ದೃಢವಾದ ಸಾಕ್ಷಿಗಳನ್ನು ಇದಕ್ಕೆ ಒದಗಿಸಿಕೊಟ್ಟಿದ್ದಾರೆ. ತಗ್ಗು ಪ್ರದೇಶದ ಗೋರಿಲ್ಲಾಗಳು ತಮ್ಮ ಆಹಾರದಲ್ಲಿನ ಸುಮಾರು 90% ಭಾಗದಷ್ಟು ಶುಂಠಿ ಸಸ್ಯದ ಜಾತಿಯದ್ದೇ ಆದ ಅಫ್ರಮೋಮಮ್ ಮೆಲೆಗ್ವೆಟಾ ಸಸ್ಯದ ಹಣ್ಣುಗಳನ್ನು ಸೇವಿಸುತ್ತವೆ. ಈ ಹಣ್ಣುಗಳು ಸೂಕ್ಷ್ಮಾಣುಜೀವಿ ವಿರೋಧಿ ಗುಣಗಳನ್ನು ಹೊಂದಿದ್ದು ಶಿಗೆಲ್ಲೋಸಿಸ್ ಮತ್ತು ಇಂತಹ ಹಲವಾರು ಸೋಂಕುಗಳನ್ನು ಸ್ಪಷ್ಟವಾಗಿ ತಡೆಯುವುದು ಗಮನಿಸಲ್ಪಟ್ಟಿವೆ. ಬಂಧನದಲ್ಲಿರಿಸಿದ ಪ್ರಾಣಿಗಳಲ್ಲಿ ಕಂಡುಬರುವ ಮಾರಕ ರೋಗಗಳಂತಹ ಕಾರ್ಡಿಯೋಮಯೋಪಥಿ ಊತಗಳಿಂದ ಗೊರಿಲ್ಲಾಗಳನ್ನು ಈ ಸಸ್ಯವರ್ಗಗಳು ರಕ್ಷಿಸುವ ಸಾಧ್ಯತೆಯ ಬಗ್ಗೆ ಈಗಿನ ಸಂಶೋಧನೆಗಳು ಕೇಂದ್ರಿಕೃತವಾಗಿವೆ.

ಕೆಲವೊಂದು ಪಕ್ಷಿಗಳು ಹಾನಿಕಾರಕ ಬ್ಯಾಕ್ಟೀರಿಯಾಗಳಿಂದ ತಮ್ಮ ಮರಿಗಳನ್ನು ಸಂರಕ್ಷಿಸುವ, ಸೂಕ್ಷ್ಮಾಣುಜೀವಿವಿರೋಧಿ ಜೀವಿಗಳನ್ನು ಯಥೇಚ್ಚವಾಗಿ ಹೊಂದಿರುವ ಪರಿಕರಗಳನ್ನೇ ಗೂಡುಕಟ್ಟಲು ಬಳಸುತ್ತವೆ ಎಂಬುದನ್ನು ಒಹಾಯೋ ವೆಸ್ಲೆಯನ್ ವಿಶ್ವವಿದ್ಯಾನಿಲಯದ ಸಂಶೋಧಕರು ಕಂಡುಹಿಡಿದಿದ್ದಾರೆ.

ಅನಾರೋಗ್ಯ ಹೊಂದಿರುವ ಪ್ರಾಣಿಗಳು ಟ್ಯಾನಿನ್ ಮತ್ತು ಅಲ್ಕಲಾಯಿಡ್‌ಗಳಂತಹ ಚಯಾಪಚಯಕ್ರಿಯೆಯಲ್ಲಿ ದ್ವಿತೀಯ ದರ್ಜೆಯಲ್ಲಿ ಜೀರ್ಣಗೊಳ್ಳುವ ಅಂಶಗಳು ಯಥೇಚ್ಛವಿರುವ ಸಸ್ಯವರ್ಗಗಳನ್ನು ಮೇಯಲಾರಂಭಿಸುತ್ತವೆ. ಈ ಸಸ್ಯರಾಸಾಯನಿಕಗಳು ವೈರಸ್ ವಿರೋಧಿ, ಬ್ಯಾಕ್ಟೀರಿಯಾ ವಿರೋಧಿ, ಫಂಗಸ್ ವಿರೋಧಿ ಮತ್ತು ಜಂತುರೋಗ ವಿರೋಧಿ ಗುಣಲಕ್ಷಣಗಳನ್ನು ಹೊಂದಿರುವುದರಿಂದ ಕಾಡಿನಲ್ಲಿನ ಪ್ರಾಣಿಗಳು ಅವುಗಳನ್ನು ತಿನ್ನುವ ಮೂಲಕ ಸ್ವಯಂ-ಔಷಧಿಗಳನ್ನು ಬಳಸುವಂತಹದ್ದು ಸಾಧ್ಯವಾಗುತ್ತಿರಬೇಕು.

ವಿಶೇಷವಾಗಿ ಕೆಲವು ಸಸ್ಯಜನ್ಯ ವಿಷವಸ್ತುಗಳನ್ನು(ಪ್ಲಾಂಟ್ ಟಾಕ್ಸಿನ್) ಜೀರ್ಣಿಸಬಲ್ಲಂತಹ ಮಾರ್ಪಾಟು ಹೊಂದಿರುವ ಜೀರ್ಣಾಂಗವ್ಯೂಹವನ್ನು ಕೆಲವು ಪ್ರಾಣಿಗಳು ಹೊಂದಿವೆ. ಉದಾಹರಣೆಗೆ, ಹೆಚ್ಚಿನ ಪ್ರಾಣಿಗಳಿಗೆ ಅಪಾಯವನ್ನೊದಗಿಸುವ ಯೂಕಲಿಪ್ಟಸ್ ಸಸ್ಯದ ಎಲೆಗಳನ್ನು ಮತ್ತು ಚಿಗುರುಗಳನ್ನೇ ತಿಂದು ಕೋಲಾ ಬದುಕುತ್ತದೆ. ನಿರ್ದಿಷ್ಟ ಪ್ರಾಣಿಯೊಂದಕ್ಕೆ ಅಪಾಯರಹಿತವಾದ ಸಸ್ಯವು ಮನುಷ್ಯರಿಗೆ ಸೇವಿಸಲು ಸುರಕ್ಷಿತ ಆಹಾರವಾಗಿರಲಾರದು. ಈ ಆವಿಷ್ಕಾರಗಳು ಸ್ಥಳೀಯ ಸಮುದಾಯಕ್ಕೆ ಸೇರಿದ ವೈದ್ಯಕೀಯ ವೃತ್ತಿನಿರತರಿಂದ ಸಾಂಪ್ರದಾಯಿಕವಾಗಿ ಸಂಗ್ರಹಿಸಲ್ಪಟ್ಟು ನಂತರದಲ್ಲಿ ರಕ್ಷಣಾತ್ಮಕ ಮಾಹಿತಿ ಮತ್ತು ಎಚ್ಚರಿಕೆಗಳನ್ನು ಇವರು ನೀಡಿದರು ಎಂಬ ತರ್ಕಬದ್ಧ ಕಲ್ಪನೆಯು ಪ್ರಚಲಿತದಲ್ಲಿದೆ.

ಗಿಡಮೂಲಿಕೆಗಳನ್ನು ಮತ್ತು ಅವುಗಳ ಪ್ರಬೇಧಗಳನ್ನು ಅಡಿಗೆಮನೆಯಲ್ಲಿ ಬಳಸುವುದು ಆಹಾರಜನ್ಯ ರೋಗಕಾರಕಗಳಿಂದ ಒದಗುವ ಅಪಾಯದ ವಿರುದ್ಧ ನೀಡಿದ ಜವಾಬ್ಧಾರಿಯುತ ಪ್ರತಿಕ್ರಿಯೆಯಾಗಿದೆ. ರೋಗಕಾರಕ ಜೀವಿಗಳು ಹೇರಳವಾಗಿ ಕಂಡುಬರುವಂತಹ ಉಷ್ಣವಾತಾವರಣದ ಪ್ರದೇಶಗಳ ಮೇಲಿನ ಅಧ್ಯಯನವು ಚಿಕಿತ್ಸಾಸಲಹೆಗಳು ಸಂಬಾರ ಪದಾರ್ಥಗಳನ್ನು ಅಧಿಕಪ್ರಮಾಣದಲ್ಲಿ ಒಳಗೊಂಡಿವೆ ಎಂಬುದನ್ನು ತೋರಿಸಿಕೊಟ್ಟಿವೆ. ಅಷ್ಟೇ ಅಲ್ಲದೇ, ಸಾಂಬಾರ ಪದಾರ್ಥಗಳಲ್ಲಿ ಹೆಚ್ಚು ಕ್ರಿಮಿನಾಶಕವಾದಂತಹ ಪದಾರ್ಥಗಳನ್ನೇ ಆಯ್ಕೆಮಾಡಿಕೊಳ್ಳಲಾಗುತ್ತದೆ. ಎಲ್ಲಾ ಸಂಸ್ಕೃತಿಗಳಲ್ಲೂ ತರಕಾರಿಗಳಿಗೆ ಮಾಂಸಕ್ಕಿಂತ ಕಡಿಮೆ ಮಸಾಲೆಯನ್ನು ಹಾಕಲಾಗುತ್ತದೆ, ಏಕೆಂದರೆ ಸಸ್ಯಗಳು ಸಹಜವಾಗಿಯೇ ಆಹಾರ ಹಳಸದಂತೆ ತಡೆಯುತ್ತವೆ,
ಇತಿಹಾಸ
ಚಿತ್ರ:Borage.png
ಪಾಕಯೋಗ್ಯ ಗಿಡಮೂಲಿಕೆಗಳ ಪ್ರಾಜೆಕ್ಟ್ ಘ್ಯುಟೆನ್‌ಬರ್ಗ್ ಈಬುಕ್‌ನಿಂದ ಬೊರಿಜ್: ಎಮ್. ಜಿ. ಕೈನ್ಸ್‌ರಿಂದ ಅವುಗಳ ಕೃಷಿ ಕಟಾವು ಮತ್ತು ಬಳಕೆಗಳು

ಔಷಧಿಗಳಾಗಿ ಸಸ್ಯಗಳ ಬಳಕೆಯನ್ನು ಮಾನವ ಇತಿಹಾಸಕ್ಕಿಂತಲೂ ಮುನ್ನವೇ ಬರೆದಿಡಲಾಗಿದೆ. 60,000 ವರ್ಷ ಪುರಾತನವಾದ ಉತ್ತರ ಇರಾಖ್‌ನ ನಿಯಾಂಡರ್ತಾಲ್ ಸಮಾಧಿ ಸ್ಥಳ, ಶಾನಿದರ್-4 ಸುಮಾರು ಎಂಟು ಸಸ್ಯ ಪ್ರಬೇಧಗಳಿಂದ ಸಂಗ್ರಹಿಸಿದ ಬೃಹತ್ ಪ್ರಮಾಣದ ಪರಾಗಗಳನ್ನು ನೀಡಿವೆ, ಇವುಗಳಲ್ಲಿ ಏಳು ಪ್ರಬೇಧಗಳು ಇಂದು ಗಿಡಮೂಲಿಕಾ ಔಷಧಿಗಳಾಗಿ ಬಳಕೆಯಾಗುತ್ತಿವೆ.[೨೩]

ಬರೆದಿಡಲಾದ ದಾಖಲೆಯ ಪ್ರಕಾರ, ಮೂಲಿಕಾ ಅಧ್ಯಯನವು ಲಾರೆಲ್, ಕಾರವೇ ಮತ್ತು ಥೈಮ್‌ಗಳಂತಹ ಸಸ್ಯಗಳ ಸುವ್ಯವಸ್ಥಿತವಾಗಿ ಬೇರೂರಿದ ಔಷಧೀಯ ಬಳಕೆಗಳನ್ನು ವಿವರಿಸಿದ ಸುಮೇರಿಯನ್ಸ್‌ರಿಗಿಂತಲೂ ಸುಮಾರು 5,000ವರ್ಷಗಳಷ್ಟು ಪುರಾತನವಾದುದು. ಕ್ರಿಸ್ತ ಪೂರ್ವ 1000ದ ಹಿಂದಿನ ಈಜಿಪ್ಟಿಯನ್ ಔಷಧಿಗಳು ಳ್ಳಿಬೆಳ್ಳು, ಅಫೀಮು, ಹರಳೆಣ್ಣೆ, ಕೊತ್ತಂಬರಿ, ಪುದೀನಾ, ಇಂಡಿಗೋಫೆರ ಮತ್ತು ಇತರ ಗಿಡಮೂಲಿಕೆಗಳ ಬಳಕೆಯನ್ನು ಸೂಚಿಸಿವೆ ಮತ್ತು, ಹಳೆಯ ಒಡಂಬಡಿಕೆಯು ಕೂಡಾ ಗಿಡಮೂಲಿಕೆಗಳ ಉಪಯೋಗವನ್ನು ಸೂಚಿಸಿದ್ದು ರಕ್ತಬಿಂದು ಗಿಡ, ವೆಚ್ ಗಿಡ, ಕ್ಯಾರವೆ ಗಿಡ, ಗೋಧಿ, ಬಾರ್ಲಿ, ಮತ್ತು ಚಿಕ್ಕಗೋಧಿ ಸಸ್ಯಗಳ ಕೃಷಿಯನ್ನು ಮತ್ತು ಮೂಲಿಕೆಗಳ ಬಳಕೆಯನ್ನು ಸೂಚಿಸಿವೆ.

ಭಾರತೀಯ ಆಯುರ್ವೇದ ಔಷಧಿಯು ಅರಶಿನದಂತಹ ಹಲವು ಗಿಡಮೂಲಿಕೆಗಳನ್ನು ಸುಮಾರು ಕ್ರಿಸ್ತಪೂರ್ವ 1900ಕ್ಕಿಂತಲೂ ಮೊದಲೇ ವೈದ್ಯಕೀಯ ಚಿಕಿತ್ಸೆಯಲ್ಲಿ ಬಳಸಿವೆ. ಇನ್ನಿತರ ಹಲವು ಗಿಡಮೂಲಿಕೆಗಳು ಮತ್ತು ಖನಿಜಾಂಶಗಳೂ ಕೂಡಾ ಆಯುರ್ವೇದದಲ್ಲಿ ಬಳಸಲ್ಪಟ್ಟಿದ್ದು, ನಂತರದಲ್ಲಿ, ಕ್ರಿಸ್ತಪೂರ್ವ ಮೊದಲನೇ ಸಹಸ್ರವರ್ಷದಲ್ಲಿ ಇವು ಪುರಾತನ ಭಾರತೀಯ ಗಿಡಮೂಲಿಕಾ ಶಾಸ್ತ್ರಜ್ಞರಾದ ಚರಕ ಮತ್ತು ಸುಶ್ರುತರಿಂದ ವಿವರಿಸಲ್ಪಟ್ಟಿದೆ. ಕ್ರಿಸ್ತಪೂರ್ವ 6ನೇ ಶತಮಾನದಲ್ಲಿ ಸುಶ್ರುತರಿಂದ ಬರೆಯಲ್ಪಟ್ಟುದು ಎನ್ನಲಾದ ಸುಶ್ರುತ ಸಂಹಿತ ವು ಸುಮಾರು 700 ಔಷಧೀಯ ಸಸ್ಯಗಳನ್ನು ವಿವರಿಸಿದ್ದು ಖನಿಜ ಮೂಲಗಳಿಂದ ಸುಮಾರು 64 ಪದಾರ್ಥಗಳು ಮತ್ತು ಪ್ರಾಣಿಗಳ ಮೂಲಗಳಿಂದ ತಯಾರಿಸಿದ ಸುಮಾರು 57 ಪದಾರ್ಥಗಳನ್ನು ವಿವರಿಸಿದೆ.

ಹಾನ್ ರಾಜವಂಶದ ಕಾಲದಲ್ಲಿ, ಅಂದರೆ, ಅದಕ್ಕೂ ಹಿಂದಿನ ಕಾಲದಲ್ಲಿ, ಕ್ರಿಸ್ತಪೂರ್ವ 2700 ವರ್ಷಗಳಿಗಿಂತಲೂ ಹಿಂದೆ ಸಂಕಲನಗೊಳ್ಳಲ್ಪಟ್ಟ ಮೊದಲ ಚೈನಾದ ಗಿಡಮೂಲಿಕಾ ಪುಸ್ತಕವಾದ ಶೆನ್ನಾಂಗ್ ಬೆಂಕಾವೊ ಜಿಂಗ್ ಆಧುನಿಕ ಔಷಧಕ್ಕೆ ಎಪಿಡ್ರಿನ್ ಎಂಬ ಔಷಧವನ್ನು ಪರಿಚಯಿಸಿದ ಮಾ-ಹುವಾಂಗ್ ಸಸ್ಯದ ಸಹಿತ ಸುಮಾರು 365 ಔಷಧೀಯ ಸಸ್ಯಗಳನ್ನು ಮತ್ತು ಅವುಗಳ ಉಪಯೋಗಗಳ ಪಟ್ಟಿಯನ್ನು ಮಾಡಿವೆ. ಮುಂದಿನ ಜನಾಂಗವು ಶೆನಾಂಗ್ ಬೆನ್ಕಾವೊ ಜಿಂಗ್ , 7ನೇಯ ಶತಮಾನದ ತಾಂಗ್ ಸಾಮ್ರಾಜ್ಯದ ಶಾಸ್ತ್ರಗ್ರಂಥ ಯಾವೊಕ್ಸಿಂಗ್ ಲನ್ (ಟ್ರೀಟೈಸ್ ಆನ್ ದ ನೇಚರ್ ಆಫ್ ಮೆಡಿಸಿನಲ್ ಹರ್ಬ್ಸ್ )ಗೆ ಇನ್ನೂ ಹೆಚ್ಚು ಸೇರಿಸಿದರು.

ಪುರಾತನ ಗ್ರೀಕರು ಮತ್ತು ರೋಮನ್ನರು ಸಸ್ಯಗಳ ಔಷಧೀಯ ಉಪಯೋಗಗಳನ್ನು ಪಡೆದುಕೊಂಡಿವೆ. ಹಿಪ್ಪೋಕ್ರಾಟಿಸ್‌ನ ಬರವಣಿಗೆ ಮತ್ತು ವಿಶೇಷವಾಗಿ ಗಾಲನ್‌ರ ಲೇಖನಗಳ ಪ್ರಕಾರ ಗ್ರೀಕ್ ಮತ್ತು ರೋಮನ್ ವೈದ್ಯಪದ್ಧತಿಯು ಪಾಶ್ಚಾತ್ಯ ಔಷಧಿಗಳಿಗೆ ಸೂಕ್ತವಾದ ಮಾದರಿಯನ್ನೂ ನೀಡಿವೆ. ಸ್ವಚ್ಚವಾದ ಗಾಳಿ, ವಿಶ್ರಾಂತಿ ಮತ್ತು ಕ್ರಮಬದ್ಧ ಆಹಾರಪದ್ಧತಿಯ ಜೊತೆಗೆ ಕೆಲವು ಸರಳವಾದ ಗಿಡಮೂಲಿಕಾ ಔಷಧಿಗಳ ಬಳಕೆಯನ್ನು ಹಿಪ್ಪೊಕ್ರಾಟಿಸ್ ಶಿಫಾರಸ್ಸು ಮಾಡಿದ್ದ. ಗ್ಯಾಲನ್ ಸಸ್ಯ, ಪ್ರಾಣಿ ಮತ್ತು ಖನಿಜಾಂಶಗಳನ್ನು ಒಳಗೊಂಡ ಔಷಧ ಮಿಶ್ರಣಗಳನ್ನು ದೊಡ್ಡ ಪ್ರಮಾಣದಲ್ಲಿ ನೀಡುವುದನ್ನು ಶಿಫಾರಸ್ಸು ಮಾಡಿದನು. ಗ್ರೀಕ್ ವೈದ್ಯರು ಔಷಧೀಯ ಸಸ್ಯಗಳ ಗುಣಲಕ್ಷಣಗಳನ್ನು ಮತ್ತು ಅವುಗಳ ಉಪಯೋಗಗಳ ಮೇಲೆ, ದ ಮೆಟೀರಿಯಾ ಮೆಡಿಕಾ ಎಂಬ ಮೊದಲ ಯುರೋಪಿನ ಗ್ರಂಥವನ್ನು ಸಂಕಲನಗೊಳಿಸಿತು. ಮೊದಲ ಶತಮಾನದಲ್ಲಿ ಎಡಿಯಲ್ಲಿ ಡಯೋಸ್ಕೊರೈಡ್ಸ್ 17ನೇ ಶತಮಾನಕ್ಕೆ ಅಧಿಕೃತವಾದ ಸಂಬಂಧ ಹೊಂದಿಕೊಂಡಿರುವ ಸುಮಾರು 500ಕ್ಕಿಂತಲೂ ಹೆಚ್ಚು ಸಸ್ಯಗಳ ಬಗ್ಗೆ ಸಂಕ್ಷಿಪ್ತ ನಿರೂಪಣೆ ನೀಡಿದನು. ಇದೇ ರೀತಿ, ನಂತರದ ಶತಮಾನಗಳಲ್ಲಿ ಗಿಡಮೂಲಿಕಾ ಶಾಸ್ತ್ರಜ್ಞರು ಮತ್ತು ಸಸ್ಯಶಾಸ್ತ್ರಜ್ಞರಿಗೆ ಕ್ರಿಸ್ತಪೂರ್ವ 4ನೇ ಶತಮಾನದಲ್ಲಿ ಸಸ್ಯಶಾಸ್ತ್ರ ವಿಜ್ಞಾನದಲ್ಲಿ ಬರೆಯಲ್ಪಟ್ಟ ಗ್ರೀಕ್ ಪುಸ್ತಕ ಥಿಯಾಫ್ರಾಸ್ಟಸ್ ಹಿಸ್ಟೋರಿಯ ಪ್ಲಾಂಟಾರಮ್ ಅಗತ್ಯವಾಗಿ ಪರಿಣಮಿಸಿತು.
ಕಾಮಾಲೆ ಕಮರಿಸೋ “ಅರಿಸಿನಸಾಸಿವೆ”!
ಸಾಸಿವೆ ಕೇಳಿದ್ದಿರಬಹುದು…ಅಗಾಗ ಅಡಿಗೆ ಮನೆಗೆ ಹೋಗಿದ್ದಿದ್ದರೆ ಗೊತ್ತಿರಲೇ ಬೇಕು. ಆದರೆ ಅರಿಶಿನ ಸಾಸಿವೆ ಬಗ್ಗೆ ಕೇಳಿರಲಿಕ್ಕಿಲ್ಲ. ಅದು ಅಡುಗೆ ಮನೆಯಲ್ಲಿ ಇರುವುದು ಭಾರಿ ಅಪರೂಪ. ಒಂದೊಮ್ಮೆ ಇದೆ ಎಂದಾದರೂ ಅದರ ಪರಿಚಯ ಎಲ್ಲರಿಗೂ ಗೊತ್ತಿರುವುದಿಲ್ಲ. ಇದು ಅಡುಗೆಗೆ ಬಳಸುವ ಸಂಭಾರವಸ್ತುವಂತು ಅಲ್ಲ. ಹಳ್ಳಿ ವೈದ್ಯ ತನ್ನಲ್ಲಿಗೆ ಬಂದವರಿಗೆ ನೀಡೊ ಔಷಧ. ಹಳ್ಳಿಮಂದಿ ಕಾಮಾಲೆ ಕಾಣಿಸಿತೆಂದರೆ ಮೊದಲು ಇದಕ್ಕಾಗಿಯೇ ಹುಡುಕಾಡುತ್ತಾರೆ. ಕಾರಣ ಮತ್ತೇನು ಇಲ್ಲ. ನಿಜಕ್ಕೂ ಇದು ಪವರ್ ಫುಲ್ ಔಷಧ. ಅದರಲ್ಲೂ ಆಗಾಗ ಸೇವಿಸುತ್ತಿದ್ದರೆ ಇಫೆಕ್ಟಿವ್. ಅರಿಶಿನ ಸಾಸಿವೆ ಅರ್ಥಾತ್, ‘ಪೌದೆಮುಳ್ಳು’. ಕೆಲವೊಮ್ಮೆ ಹೀಗೂ ಆಗುವುದುಂಟು. ಹಾವೂ ಅಥವಾ ಇನ್ನಾವುದೂ ವಿಷಜಂತು ಕಡಿದಾಗ ಈ ಗಿಡದ ಬಳಕೆ ಮಾಡಿರುತ್ತೇವೆ. ಆದರೆ ಇದೇ ಅರಿಶಿನ ಸಾಸಿವೆ ಎಂದು ಗೊತ್ತಿರುವುದಿಲ್ಲ. ಹೌದು. ಈ ಗಿಡದ ಎಲೆಗಳನ್ನು ವಿಷಜಂತು ಕಡಿದ ಜಾಗದ ಮೇಲೆ ಹಾಕಿಟ್ಟರೆ ವಿಷ ದೇಹಕ್ಕೆ ಪಸರಿಸದಂತೆ ನೋಡಿಕೊಳ್ಳುತ್ತದೆ. ಅದೇ ಇದರ ಸ್ಪೆಷಲ್. ಇಸ್ಟೇ ಅಲ್ಲ… ಈ ಅರಿಶಿನ ಸಾಸಿವೆಯ ಎಲೆಗಳನ್ನು ಅರೆದು ಚೂರ್ಣ ಮಾಡಿ ತಿನ್ನಿಸುತ್ತಾರೆ. ಗಯವದಲ್ಲಿ ಲೇಪಿಸಲಾಗುತ್ತದೆ. ಇಸ್ಟೆಲ್ಲಾ ಮಾಡಿದಾಗಲೂ ವಿಷದ ಅಂಶ ಹೆಚ್ಚಲು ಸಾದ್ಯವೇ ಇಲ್ಲ. ಅದರಲ್ಲೂ ಎಲೆಯ ಚೂರ್ಣ ಸೇವನೆ ಕಾಮಾಲೆರೋಗಕ್ಕೆ ಉತ್ತಮ ಔಷಧ. ಇನ್ನು ಇದರ ಹೂವಿನ ಮೊಗ್ಗು ಅರೆದು ಸೇವನೆ ಮಾಡಿದರೆ ವಾತ ಶಮನ ಗ್ಯಾರಂಟಿ. ಅಂದಾಜು ಹದಿನೈದರಿಂದ ಇಪ್ಪತ್ತು ಅಡಿ ಎತ್ತರಕ್ಕೆ ಬೆಳೆಯುವ ಅರಿಶಿನ ಸಾಸಿವೆ ಗಿಡವನ್ನು ನದಿತೀರ ಮತ್ತು ತೇವಭರಿತ ಪ್ರದೇಶಗಳಲ್ಲಿ ಕಾಣಲು ಸಾದ್ಯ. ಗಿಡದ ಎಲ್ಲ ಭಾಗಗಳ ಮೇಲೆ ರೋಮ ಇರುತ್ತದೆ. ಚಿಕ್ಕ ಚಿಕ್ಕ ಹೂವು, ಕಂದು ಕಾಯಿ ನೋಡಲು ಸಾದ್ಯ. ಅರಿಶಿನ ಸಾಸಿವೆ ಕಾಯಿ ಮತ್ತು ಹೂವಿನಲ್ಲು ಕಾಮೋದ್ರೇಕ ಗುಣವಿರುತ್ತದೆ. ಆದರೆ ಬಳಕೆಯಲ್ಲಿ ಜಾಗ್ರತೆ ಅಗತ್ಯ. ಮನಸೂ ಇಚ್ಚೆ ಬಳಕೆ ಮಾಡುವಂತಿಲ್ಲ ಹುಷಾರ್….

ನುಗ್ಗೆಸೊಪ್ಪು ಯಾರಿಗೂ ಗೊತ್ತಿಲ್ಲ ಎನ್ನುವಂತಿಲ್ಲ. ಆದರೆ ಬಹುತೇಕ ಮಂದಿಗೆ ಔಷಧಕ್ಕೆ ಬರುತ್ತೆ ಎಂದೇ ಗೊತ್ತಿಲ್ಲ.
ಹೌದು…ಇದೊಂದು ಅದ್ಭುತ ಔಷಧ ಸಸ್ಯ. ಮನೆಯಲ್ಲಿ ನುಗ್ಗೆಸೊಪ್ಪು ಇದೆ ಎಂದರೆ ಹಿರಿಯರು ಸಣ್ಣಪುಟ್ಟ ರೋಗಕ್ಕೆಲ್ಲ ಹೆದರುವುದಿಲ್ಲ. ಸಾಮನ್ಯವಾಗಿ ಹಳ್ಳಿಗಳಲ್ಲಿ ಪ್ರತಿಯೊಬ್ಬರ ಮನೆಗಳಲ್ಲೂ ಇದ್ದೇ ಇರುತ್ತದೆ. ನುಗ್ಗೆ ಮರವೊಂದಿದ್ದರೆ ಬೇರೆ ತರಕಾರಿಯು ಬೇಕಾಗಿಲ್ಲ. ನುಗ್ಗೆಕಾಯಿ ಸಾಂಬಾರ ಸಖತ್ ಫೇಮಸ್ಸು. ರುಚಿ ಕೂಡ ಹೌದು. ಹೆಚ್ಚುಕಡಿಮೆ ಇಪ್ಪತ್ತು ಅಡಿ ಎತ್ತರಕ್ಕೆ ಬೆಳೆಯುವ ನುಗ್ಗೆ ಮರ ಫೆಬ್ರವರಿ-ಏಪ್ರಿಲ್ ತಿಂಗಳಲ್ಲಿ ಹೂವು ಬಿಡುತ್ತವೆ. ಹೂವು ಬಿಟ್ಟಾಗ ಎಲೆಗಳೆಲ್ಲ ಉದುರುತ್ತವೆ. ಹಾಗೆ ಕಾಯಿಗಳು ಬಿಡುತ್ತವೆ. ನುಗ್ಗೆ ಕಾಯಿ ಅಂದಾಜು ಒಂದರಿಂದ ಎರಡು ಅಡಿ ಉದ್ದವಿರುತ್ತದೆ. ಡೊಳ್ಳು ಭಾರಿಸುವ ಕಡ್ಡಿಯಂತೆ ಇರುತ್ತದೆ. ಅದಕ್ಕಾಗಿಯೇ ಅಂಗ್ಲ ಭಾಷೆಯಲ್ಲಿ “ಡ್ರಂ ಸ್ಟಿಕ್ ಟ್ರಿ” ಎಂದು ಕರೆದಿದ್ದು. ನುಗ್ಗೆ ಹಲವಾರು ರೋಗಗಳಿಗೆ ಒಂದು ಉತ್ತಮ ಔಷಧ.
ಏನಪ್ಪಾ ಔಷಧ ಗುಣ…. ಎಂಬ ಪ್ರಶ್ನೆ ಸಹಜ. ಆದರೆ ಆ ಬಗ್ಗೆ ಕೇಳಿದರೆ ನಿಬ್ಬೆರಗಾಗುವಿರಿ. ಅದರ ಔಷಧೀಯ ಗುಣಗಳ ಬಗ್ಗೆ ಇಲ್ಲಿ ಪಟ್ಟಿಮಾಡಲಾಗಿದೆ.

* ನುಗ್ಗೆ ಹೂವನ್ನು ಕಾದಿರುವ ಹಾಲಿಗೆ ಹಾಕಿ ಆರಿದ ಬಳಿಕ ಹೂ ಸಮೇತ ಕುಡಿಯುವುದರಿಂದ ಪಿತ್ತ ಶಮನ ಆಗುತ್ತದೆ.
* ನುಗ್ಗೆ ಸೊಪ್ಪಿನ ರಸವನ್ನು ಜೇನು ತುಪ್ಪಕ್ಕೆ ಸೇರಿಸಿ ಬೆಳಿಗ್ಗೆ ಮತ್ತು ಸಂಜೆ ಅರ್ಧ ಚಮಚ ಕುಡಿಯುವುದರಿಂದ ಹೊಟ್ಟೆನೋವು ಕಡಿಮೆಯಾಗುತ್ತದೆ.
* ನುಗ್ಗೆ ಸೊಪ್ಪನ್ನು ಎದೆಹಾಲಿನಲ್ಲಿ ಅರೆದು ಹಣೆಗೆ ಲೇಪಿಸುವುದರಿಂದ ತಲೆನೋವು ಕಡಿಮೆಯಾಗುತ್ತದೆ.
* ನುಗ್ಗೆ ಮರದ ಗೋಂದು ಮತ್ತು ನುಗ್ಗೆ ಬೀಜಗಳನ್ನು ಒಣಗಿಸಿ ಪುಡಿಮಾಡಿ ಪ್ರತಿದಿನ ರಾತ್ರಿ ಹಾಲಿಗೆ ಬೆರೆಸಿ ಕುಡಿಯುವುದರಿಂದ ಧಾತು ಕಟ್ಟಿಕೊಳ್ಳುತ್ತದೆ. ಇದರಿಂದ ಸಂಬೋಗಕ್ಕೆ ಸಹಕಾರಿ.
* ನುಗ್ಗೆ ಚಕ್ಕೆಯನ್ನು ತೆನೆ ಇಲ್ಲದ ಹಾಲಿನಲ್ಲಿ ತೇಯ್ದು ಮೂರು ದಿನ ಕುಡಿದರೆ ಮಕ್ಕಳಲ್ಲಿ ಕಾಡುವ ಕೆಮ್ಮು ಶಮನಗೊಳ್ಳುವುದು.
ಇಂಥ ಔಷಧೀಯ ಗುಣ ಇರುವ ನುಗ್ಗೆ ಸೊಪ್ಪಿನ ವೈಜ್ಞಾನಿಕ ಹೆಸರು ಮೊರಿಂಗ್ ಒಲಿಫೆರ್ (Moringa oleifera lamk). ಇದು ಮೊರಿಂಗೆಸಿ ಕುಟುಂಬಕ್ಕೆ ಸೇರಿದ್ದು. ಇದಕ್ಕೆ ನುಗ್ಗೆಮರ, ಮೋಚಕ ಮರ ಎಂದೂ ಕರೆಯುತ್ತಾರೆ.

Advertisements

ನಿಮ್ಮ ಅನಿಸಿಕೆ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: