ಪರ್ತಕರ್ತರು ಯಾಕೆ ಹೀಗೆ ಅಂದ್ರೆ ಅವರು ಹೀಗೇನೆ

ಕನ್ನಡ ಪ್ರಭದಲ್ಲಿ ವಿಶ್ವೇಶ್ವರ ಭಟ್ ರವರು ಪರ್ತಕರ್ತರು ಯಾಕೆ ಹೀಗೆ ಅಂದ್ರೆ ಅವರು ಹೀಗೇನೆ ! ಎಂಬ ಬ್ರೇಕಿಂಗ್ ನ್ಯೂಸ್ ಅಂಕಣದೊಂದಿಗೆ ಲೇಖನ ಬರೆದಿದ್ದಾರೆ. ದೃಶ್ಯ ಮಾಧ್ಯಮಕ್ಕೆ ವಿಪರೀತ ಹೊಟ್ಟೆ ಹಸಿವು ಅವರಿಗೆ ತಾಜಾ, ಬಿಸಿ ಬಿಸಿ ಸುದ್ಧಿಗಳ ಹೂರಣ ಬೇಕೇ ಬೇಕು. ಅವುಗಳೇ “BREAKING NEWS” ಗಳಾಗುತ್ತಿವೆ. ಇದು ಯಾವುದೇ ವಾಹಿನಿಗಳಿಗೂ ಹೊರತಾಗಿಲ್ಲ. ಸುವರ್ಣ 24×7 ವಾಹಿನಿಯ ಮುಖ್ಯಸ್ಥರಾದ ಶ್ರೀ ವಿಶ್ವೇಶ್ವರಭಟ್ ರೂ ಸಹ ಹೌದು. ಅವರೇ ಬರೆದುಕೊಂಡಂತೆ ಅವರಿಗೆ ಬೇಕಾಗಿರುವುದು  ಬ್ರೇಕಿಂಗ್ ನ್ಯೂಸ್” ಅದರಲ್ಲಿ ಸತ್ವ ಇರಲೀ, ಬಿಡಲೀ ಅದರ ಬಗ್ಗೆ ಚಿಂತೆ ಇಲ್ಲ.

ಅವುಗಳಿಗೆ ಉದಾಹರಣೆಗಳೇ :

* ಶಿವಮೊಗ್ಗದ ಹೆಣ್ಣುಮಗಳ ಸೆಕ್ಸ್ ದೃಶ್ಯಗಳ ಅನಾವರಣ ಸುವರ್ಣ ವಾಹಿನಿಯಲ್ಲಿ ಪ್ರಸಾರವಾದದ್ದು.
* ಇಡೀ ದೇಶಕ್ಕೆ ಸೆಕ್ಸ್ ವಿಡಿಯೋಗಳ ಬಗ್ಗೆ ಅರಿವು ಮೂಡಿಸಿದ ಸದನದ ಸೆಕ್ಸ್ ಪ್ರಕರಣ ಗಳಂತ “BREAKING NEWS”ಗಳು

ಯಾರಿಗಿದೆ ಸ್ವಾಮಿ ಜವಾಬ್ದಾರಿ, ತಮ್ಮ ಕೆಲಸವನ್ನು ಮಾಡಿ ಮುಗಿಸಬೇಕಷ್ಟೇ ತಾಜಾ ಸುದ್ಧಿಗಳು ತಂಗಳಾಗುತ್ತವೆಯಂತೆ. ಪತ್ರಿಕೋಧ್ಯಮದಲ್ಲಿ ಹತ್ತಾರು ವರ್ಷ ಅನುಭವವಿರುವ ಸಂಪಾದಕರಿಗೆ “BREAKING NEWS” ಗೆ ಬರುವ ಸುದ್ಧಿಗಳ ಬಗ್ಗೆನೇ ಚಿಂತೆ ಯಾದರೆ ಬೇರೆ ಸುದ್ಧಿಗಳ ಬಗ್ಗೆ ಗಮನವನ್ನೇಕೇ ಹರಿಸುವುದಿಲ್ಲ. ತಮ್ಮ ವೈಯಕ್ತಿ ದ್ವೇಷವನ್ನು ತೀರಿಸಿಕೊಳ್ಳಲು ಬೇಕಿದ್ದ ಸಮಯ “ಭೀಮಾತೀರದ ” ಚಿತ್ರದ ಪ್ರಕರಣ. ಆ ಸುದ್ಧಿಯನ್ನು ದಿನಗಟ್ಟಲೇ ಗಂಟೆಗಟ್ಟಲೇ ಎಲ್ಲಲ್ಲಿದ್ದವರನ್ನೇಲ್ಲಾ ಎಳೆದುತಂದು ಗಂಭೀರ ವಿಷಯವನ್ನಾಗಿ ಮಾಡಿ ಸಂಚಲನ ಸೃಷ್ಠಿ ಮಾಡಲು ಹೊರಟಿದ್ದು. ಎಷ್ಟರ ಮಟ್ಟಿಗೆ ಪತ್ರಿಕೋಧ್ಯಮಕ್ಕೆ ಗಾಂಭಿರ್ಯ ತರುತ್ತದೆ. ಹೀಗೆಲ್ಲೋಯಿತು. ಆ ಭೀಮಾ ತೀರದ ವಿಚಾರ … ಇದರಿಂದ ಉಪಯೋಗವಾದದ್ದು ಯಾರಿಗೆ… ಸಿನಿಮಾದವರಿಗೆ ಅವರ ಚಿತ್ರದ ಬಗ್ಗೆ ಪುಕ್ಕಟ್ಟೆ ಪ್ರಚಾರ ಸಿಕ್ಕಿತು. ರವಿಬೆಳಗೆರೆಯಂತವರಿಗೆ ತಮ್ಮ ಎರಡನೇ ಸಂಬಂಧದ ಬಗ್ಗೆ ಜನರ ಮುಂದಿಡೋದು ಹೇಗೆ ಅಂತ ಯೋಚಿಸುತ್ತಿರುವಾಗ ಅದು ಜನರಿಗೆ ಗೊತ್ತಾಗುವಂತೆ ಸಕ್ರಮ ಮಾಡಿಕೊಳ್ಳಲು ದಾರಿ ಮಾಡಿಕೊಟ್ಟವರು ಸುವರ್ಣವಾಹಿನಿಯವರಲ್ಲವೇ? ಪ್ರತಾಪ ಸಿಂಹರಂತಹ ಉತ್ಸಾಹಿ ಪತ್ರಕರ್ತರಿಂದ ನಿರೀಕ್ಷಿಸಬಹುದಾಗಿದ್ದ ವರದಿಗಳಿಗಿಂತ ರವಿಬೆಳಗೆರೆಯ ಮೇಲೆ ಸೇಡನ್ನು ತೀರಿಸಿಕೊಳ್ಳಲು ಸಿಕ್ಕ ಅವಕಾಶವನ್ನು ಬಳಸಿಕೊಂಡು, “ಬಹಿರಂಗ ಚರ್ಚೆಗಳಿಗೇನು, ಸವಾಲುಗಳೇನು? ” ಎಲ್ಲಿ ಹೋದವು ಅವುಗಳೆಲ್ಲ. ಎಲ್ಲ ಸುದ್ಧಿಗಳು ವೈಯಕ್ತಿಕ ಸಾಧನೆಗೆ ಬಳಕೆಯಾದುವೇ ಹೊರತು ಇದರಿಂದ ಜನರಿಗಾದ ಅನುಕೂಲ ಎಳ್ಳಷ್ಟೂ ಇಲ್ಲ. ಸಿನಿಮಾನಟರ, ಕೆಲಸಕ್ಕೆ ಬಾರದ ಮದನಾರಿಯಂತಹ ಕಾರ್ಯಕ್ರಮಗಳನ್ನು ಬಗ್ಗೆ ಜನರ ಮೇಲೆ ಹೇರಿ ತಮ್ಮ ವಾಹಿನಿಯ trp ಹೆಚ್ಚಿಸಿಕೊಳ್ಳಲು ಹಪತಪಿಸುವ ಕೆಲಸ ಬಿಟ್ಟು

BREAKING NEWS ಗಳು ಅರ್ಥಪೂರ್ಣವಾಗಿ ಮೂಡಿ ಬರಲು ಜವಾಬ್ದಾರಿಯುತವಾಗಿ ಜನರಿಗೆ ಅನುಕೂಲವಾಗುವಂತಹ ಸುದ್ಧಿಗಳು ಮೂಡಿಬರಲಿ. ದಿಢೀರ್ ಜನಪ್ರಿಯತೆಯನ್ನು ಬದಿಗಿಟ್ಟು, ತನ್ನ ಪತ್ರಿಕೋದ್ಯಮವನ್ನು ಸಮರ್ಥವಾಗಿ ಬಳಸಿಕೊಂಡು ಮುನ್ನಡೆಸುವ ಕೆಲಸವಾಗಬೇಕಿದೆ. ದೆಹಲಿಯಲ್ಲಿ ಅಣ್ಣಾ ಹಜಾರೆಯವರು “ಅಂದೋಲನ” ಪ್ರಾರಂಭಿಸಿದಾಗ “ಪೈಪೋಟಿಗೆ ಬಿದ್ದ ” ಬೆಂಗಳೂರಿನ ಗಲ್ಲಿ ಗಲ್ಲಿಯೊಳಗೆ ನಡೆಸಿದ ಭ್ರಷ್ಟಾಚಾರ ವಿರೋಧಿ ಆಂದೋಲನ” ಎಲ್ಲಿ ಹೋಯಿತು. ಭ್ರಷ್ಟಾಚಾರ ವಿರೋಧಿ ಆಂದೋಲನವನ್ನು BREAKING NEWS ಪಟ್ಟಿಗೆ ಸೇರಿಸಿ ಕೊಂಡು ಒಂದಷ್ಟು ಹೆಸರನ್ನು ಮಾಡಿಕೊಂಡು ತಣ್ಣಾಗಾಗಿದ್ದು ಯಾಕೆ? ಇವುಗಳು ಸಾಮಾಜಿಕ ಕಳಕಳಿಯ ವಿಷಯಗಳಲ್ಲವೇ? ಇಂತಹ ವಿಷಯದ ಬಗ್ಗೆ ರಾಜ್ಯಕ್ಕೆ ಒಳಿತಾಗುವ ರೀತಿಯಲ್ಲಿ ಭ್ರಷ್ಟಾಚಾರ ಕಡಿಮೆ ಮಾಡುವ ವಿಚಾರಗಳ ಬಗ್ಗೆ ಗಮನಹರಿಸುತ್ತಿಲ್ಲವೇಕೆ ? ಇಂತಹ ಭ್ರಷ್ಟಾಚಾರ ನಿರ್ಮೂಲನೆ ಮಾಡುವ ವಿಷಯಗಳ ಬಗ್ಗೆ ಸುದ್ಧಿ ಮಾಡಿ ಭ್ರಷ್ಟರಷ್ಟು ಹಿಡಿದು ಬಹಿರಂಗಗೊಳಿಸಿ ಅಂತಹ ವಿಷಯಗಳನ್ನು BREAKING NEWS ಗೆ ಸುಧ್ಧಿ ಮಾಡಲು ಸಾಧ್ಯವಿಲ್ಲವೇ?

ಇವುಗಳ ಚಿಂತೆ ನಮಗೇಕೆ ಅಂದುಕೊಳ್ಳುತ್ತಾರೇನೋ? ಪ್ರತಿದಿನ ತಮ್ಮ ಕೆಲಸವನ್ನು ಮುಗಿಸಿಕೊಟ್ಟರೆ ಸಾಕು ಅನ್ನೋ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ತಮಗೆ ಸಿಕ್ಕಿರುವ ಅವಕಾಶವನ್ನು ಬಳಸಿಕೊಂಡು ಈ ರಾಜ್ಯಕ್ಕೆ ಒಳಿತು ಮಾಡುವ ಕೆಲಸ ಮಾಡಲು ನಿಂತರೆ ಈ ರಾಜ್ಯದ ಜನರ ಮನಸಿನಲ್ಲಿ ಹಸಿರಾಗಿ ನಿಲ್ಲುತ್ತೀರಿ. BREAKING NEWSಗಳಿಗೆ ತಾಜಾ ಸುದ್ಧಿಗಳ ಜೊತೆಗೆ ಭ್ರಷ್ಟಾಚಾರ ಮುಕ್ತವಾಗಿಸುವ ಕನಸು ನನಸಾಗುತ್ತದೆ. ಇಂತಹ ಪ್ರಯತ್ನ ಮಾಡಬಾರದೇಕೆ ?

**ಪರ್ತಕರ್ತರು ಯಾಕೆ ಹೀಗೆ ಅಂದ್ರೆ ಅವರು ಹೀಗೇನೆ ! ** ಅನ್ನೋ ಶೀರ್ಷಿಕೆಯನ್ನು ಬದಲಿಸಿ ಪತ್ರಕರ್ತರು ಎಂದರೆ ಇವರೇ ಹೀಗಿರಬೇಕು ಅನ್ನೋ ಮಟ್ಟದಲ್ಲಿ ಕೆಲಸ ಮಾಡಿ ತೋರಿಸಿ ಸೈ ಎನ್ನಿಕೊಳ್ಳಲು ಪ್ರಯತ್ನಿಸಿ ಯಶಸ್ವಿಯಾಗಿ. ನಿಮ್ಮಂತಹ ಜವಾಬ್ದಾರಿ ಸಂಪಾದಕರಿಂದ, ಪತ್ರಕರ್ತರ ಕಡೆ ಜನರ ಭರವಸೆಯ ನೋಟ ನೆಟ್ಟಿರುತ್ತದೆ ಅದನ್ನು ಹುಸಿ ಮಾಡಬೇಡಿ. ಪತ್ರಕರ್ತನೆಂದರೆ ಪತ್ರಕರ್ತನಲ್ಲ ಸಾಮಾಜಿಕ ಕ್ಷೇತ್ರದಲ್ಲಿ ಬದಲಾವಣೆಯ ಹರಿಕಾರನಾಬೇಕು

Raju Vinay Davanagere

Advertisements

ನಿಮ್ಮ ಅನಿಸಿಕೆ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: