ಕೋಲ್ಮಿಂಚು

ಮೊನ್ನೆ ಓದಿ ಮುಗಿಸಿದ ಪುಸ್ತಕ “ಕೋಲ್ಮಿಂಚು” ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜೀವನ ಚರಿತ್ರೆ…ಒಬ್ಬ ವ್ಯಕ್ತಿ ತನ್ನ ತಾಯ್ನಾಡಿನ ಸ್ವಾತಂತ್ರ್ಯಕ್ಕಾಗಿ ಸೇನಾ ಪಡೆಯನ್ನೇ ನಿರ್ಮಿಸಿದ ಯಶೋತಾಥೆಯನ್ನು ಓದುವ ಕುತೂಹಲವಾಗಿತ್ತು… ಅದನ್ನು ತಣಿಸಲೆಂದೇ ಈ ಪುಸ್ತಕ ಕೈಗೆತ್ತಿಕೊಂಡೆ…

ಭಾರತಕ್ಕೆ ಸ್ವಾತಂತ್ರ್ಯ ಬರಲು ಪ್ರಮುಖ ಕಾರಣ ಗಾಂಧೀಜಿಯವರ ಹೋರಾಟ ಅನ್ನೋ ಭ್ರಮೆಯಲ್ಲೇ ನಾವಿನ್ನೂ ಇದ್ದೇವೆ.. ಅದು ಬರಿಯ ಅರ್ಧಸತ್ಯವಷ್ಟೇ… ಬ್ರಿಟಿಷರೇ ಹೇಳಿದಂತೆ ಅವರಿಗೆ ಭಾರತಕ್ಕೆ ಸ್ವಾತಂತ್ರ್ಯ ಕೊಡಬೇಕಾದೀತು ಅಂತ ಅನ್ನಿಸತೊಡಗಿದ್ದು ನೇತಾಜಿಯವರ ಸೇನೆಯ ಹೋರಾಟ ಮತ್ತು ತದನಂತರ ನಡೆಡ ನೌಕಾಸೇನೆಯ ಬಂಡಾಯ… ಇವುಗಳು ಎಂದರೆ ಹೆಚ್ಚಿನವರು ನಂಬಲಿಕ್ಕಿಲ್ಲ…

ತನ್ನ ಜೀವಿತಕಾಲದಲ್ಲಿ ಅವರಿಗಿದ್ದುದು ಬರಿಯ ಸ್ವಾತಂತ್ರ್ಯದ ಕನಸು ಅದಕ್ಕಾಗಿ ಅವರು ಪಟ್ಟ ಕಷ್ಟಗಳನ್ನು ಓದಿ ನಾನು ದಂಗಾಗಿ ಬಿಟ್ಟೆ… ಇಡಿಯ ಭಾರತವೇ ಮಹಾತ್ಮ ಎಂದು ಪೂಜಿಸುತ್ತಿದ್ದ ಗಾಂಧೀಜಿಯವರನ್ನೇ ಎದುರು ಹಾಕಿಕೊಳ್ಳುವಷ್ಟಿದ್ದ ಧೈರ್ಯವೇ ಹೇಳುತ್ತದೆ ಅವರು ಭಾರತದ ಸ್ವಾತಂತ್ರ್ಯಕ್ಕಾಗಿ ತಮ್ಮನ್ನು ತಾವು ಎಷ್ಟು ಅರ್ಪಿಸಿಕೊಂಡಿದ್ದರೆಂದು … ತಮ್ಮ ನೇರ ನಡೆನುಡಿಗಳಿಂದಾಗಿ ಗಾಂಧೀಜಿ ಅವರು ಹೇಳಿದ ಅಭ್ಯರ್ಥಿಯ ಎದುರಿಗೆ ಗೆದ್ದುದು ಇದರಿಂದಾಗಿ ತಾನೆ…ಇಷ್ಟಾಗಿಯು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟರೆಂದರೆ ಅವರ ವ್ಯಕ್ತಿತ್ವ ಎಂಥಾದ್ದಿರಬೇಡ ನೀವೇ ಯೋಚಿಸಿ…

ತನ್ನ ವಾಕ್ ಶಕ್ತಿಯಿಂದ ನೆರೆಯ ರಾಷ್ಟ್ರದ ನಾಯಕರೊಡನೆ ಮಾತನಾಡಿ ಸೈನ್ಯವನ್ನೇ ಕಟ್ತಿ ಬಿಡುವುದು ಸಾಮಾನ್ಯದ ಕೆಲಸವಲ್ಲ….ಆದರೆ ವಿಪರ್ಯಾಸವೆಂದರೆ ಹೊರ ದೇಶದ ನಾಯಕರು ಕೊಟ್ಟಷ್ಟು ಬೆಂಬಲ ಸಹಕಾರ ನಮ್ಮ ದೇಶದೊಳಗಿನ ನಾಯಕರು ಕೊಟ್ತಿದ್ದರೆ ಅದೆಷ್ಟು ಬೇಗ ನಾವು ಸ್ವಾತಂತ್ರ್ಯ ಪಡೆದಿರುತ್ತಿದ್ದೆವೋ ಏನೋ..ನಿಜಕ್ಕೂ ಅವರ ಜೀವನ ಚರಿತೆ ಓದಿ ಅವರ ವ್ಯಕ್ತಿತ್ವದ ಬಗ್ಗೆ ಇದ್ದ ಗೌರವ ಎಷ್ಟು ಹೆಚ್ಚಾಯಿತೋ ಅಷ್ಟೇ ಗಾಂಧೀಜಿಯ ಬಗೆಗೆ ಬೇಸರದ ಭಾವನೆ ಹೇಚ್ಚಾಗಿದೆ( ಬಹುಶ ಗಾಂಧೀಜಿಯವರನ್ನು ಅಸ್ಪಷ್ಟವಾಗಿ ದ್ವೇಷಿಸುತ್ತಿದ್ದ ನನಗೆ ದ್ವೇಷಿಸಲು ಸ್ಪಷ್ಟ ಕಾರಣ ಸಿಕ್ಕಿದೆ.)

ಅವರ ಹೇಳಿಕೆಯೇ ಅವರ ವ್ಯಕ್ತಿತ್ವಕ್ಕೆ ಕನ್ನಡಿ
“ಸ್ವಾತಂತ್ರ್ಯವೆಂಬುದು ಯಾರೂ ಕೊಡುವಂತಾದ್ದಲ್ಲ; ಅದು ನಾವು ಪಡೆದುಕೊಳ್ಳುವಂತಾದ್ದು”
“ನೀವು ನಿಮ್ಮ ರಕ್ತ ಕೊಡಿ, ನಾನು ನಿಮಗೆ ಸ್ವಾತಂತ್ರ್ಯ ತಂದು ಕೊಡುತ್ತೇನೆ”
“ಕದಂ ಕದಂ ಬಡಾಯೇ ಜಾ, ಖುಷೀ ಕಾ ಗೀತ್ ಗಾಯೇ ಜಾ
ಯಹ್ ಜಿಂದಗೀ ಹೈ ಕೌಮ್ ಕೀ, ತೂ ಕೌಮ್ ಪೇ ಲುಟಾಯೇ ಜಾ”

ಸ್ವಾತಂತ್ರಕ್ಕಾಗಿ ಹೋರಾಡಿದ ಇಂತಹಾ ಮಹಾನ್ ಚೇತನವನ್ನು ಮರೆಯುತ್ತಿದ್ದೇವೆ ಅನ್ನಿಸೋಲ್ವ…ನಿಜವಾದ ದೇಶಭಕ್ತರಿಗೆ ಎಂತಹಾ ದುರ್ಗತಿ ಅಲ್ವಾ… ಗಾಂಧೀಜಿಯವರ ತುಲನೆಯಲ್ಲಿ ಇವರನ್ನು ಮೇಲಕ್ಕಿಡಬೇಕಾದ ನಾವು ಇಅವರಿಗೆ ಸಿಗಬೇಕಾದಷ್ಟು ಗೌರವ ಕೊಡುತ್ತಿಲ್ಲ ಅನ್ನೋದೆ ಬೇಸರದ ಸಂಗಂತಿ… ಆ ಗೌರವ ಮುಡಬೇಕಾದರೆ ಅವರ ಜೀವನ ಚರಿತ್ರೆಯನ್ನೊಮ್ಮೆ ಓದಿ ನೋಡಿ….

ಅವರೇ ಹೇಳಿಕೊಟ್ಟ ಭಾರತೀಯ ರಣಮಂತ್ರದೊಂದಿಗೆ ಆ ಮಹಾನ್ ಚೇತನಕ್ಕೊಂದು ನಮನ…

ಜೈ ಹಿಂದ್….

Guruprasad Acharya

Advertisements

ನಿಮ್ಮ ಅನಿಸಿಕೆ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: