ಅಷ್ಟಮಂಗಲ – ನಾನು ನೋಡಿದ ಹಾಗೆ

ಅಬ್ಬಾ ನಿನ್ನೆ ಮಾಮುಲಿನಂತೆ ಈಶ್ವರ ದೇವಸ್ಥಾನಕ್ಕೆ ಹೋದಾಗ ಅಲ್ಲಿ ಅಷ್ಟ ಮಂಗಲ ಪ್ರಶ್ನೆ ಆಗುತ್ತಿತ್ತು… ದೇವಸ್ಥಾನದ ಲೆಕ್ಕದಲ್ಲಿ ಹಾಗೆ ಕುಳಿತು ಕೇಳತೊಡಗಿದವನಿಗೆ ಆಶ್ಚರ್ಯದ ಮೇಲೆ ಆಶ್ಚರ್ಯ… ಅಬ್ಬಾ ನಮ್ಮ ಸನಾತನ ಧರ್ಮದ ನಂಬಿಕೆಗಳು ದುಪ್ಪಟ್ಟು ಆಗುತ್ತಿದೆ…. ಯಾವುದೋ ಕಾಲದಲ್ಲಿ ಆಗಿ ಹೋದ ಘಟನೆಗಳನ್ನು ಅದು ಎಷ್ಟು ನಿಖರವಾಗಿ ಹೇಳುತ್ತಾರೆ….

ಈ ಅಷ್ಟಮಂಗಲ ಪ್ರಶ್ನೆ ಇಡಲು ವೀಳ್ಯ ಕೊಡಲು ಹೋಗುವಾಗಿನಿಂದ ದೈವಜ್ನರು ಕೇಳಲು ಹೋದವರ ಎಲ್ಲಾ ನಡೆಯನ್ನು ಬರೆದಿಟ್ಟುಕೊಂಡು ಅದರ ಆಧಾರದ ಮೇಲೂ ವಿಷಯವನ್ನು ಹೇಳುತ್ತಾರೆ… ಅದು ಹೇಗೆ ಹೇಳಬೇಕು ಅಂತಾನೇ ಗೊತ್ತಾಗುತ್ತಿಲ್ಲ ದೇವಳದ ಅರ್ಚಕರು ವೀಳ್ಯ ಕೊಡಲು ಹೋದಾಗ ಅವರಿಗೆ ಅಶೌಚವಾಗಿತ್ತಂತೆ ಅದು ಕಂಡು ಬಂದಿದೆ… (ಅಶೌಚ= ಅಮೆ… ಕುಟುಂಬದಲ್ಲಿ ಯಾರೋ ಹೆತ್ತದ್ದರಿಂದಾಗಿ ಬರುವಂತಾದ್ದು) ಅದೂ ಅಲ್ಲದೆ ವೀಳ್ಯ ಕೊಟ್ಟದ್ದು ಸಗ್ರಿ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಅಲ್ಲಿಯೂ ಅಶುದ್ಧ ಮಾಡಿಬಿಟ್ತಿದ್ದಾರೆ… ಇದು ಏನನ್ನು ಸೂಚಿಸುತ್ತದೆ ಅಂದರೆ ಇಲ್ಲಿ ಅಂದರೆ ಉಚ್ಚಿಲದಲ್ಲಿ ಅರ್ಚಕರಿಗೆ ಅಶೌಚದ ಬಗ್ಗೆ ಅಷ್ಟು ಕಾಳಜಿ ಇಲ್ಲವಂತೆ… ದೇವರಿಗೆ ನೈವೇದ್ಯದಲ್ಲಿ ಸಂತೃಪ್ತಿ ಇಲ್ಲ….ಅಂದರೆ ಮೊದಲು ಇದ್ದಷ್ಟು ಸಮರ್ಪಣೆ ಆಗುತ್ತಿಲ್ಲ… ಒಳಗೆ ಇದ್ದ ಬಾವಿಯೊಂದು ಮುಚ್ಚಿಬಿಟ್ಟಿದ್ದೀರಾ ಅಂದರು … ಅದಕ್ಕೂ ಉತ್ತರ ಹೌದು  ದಾಗಿತ್ತು…ನಾನೇ ಎಷ್ಟೋ ವರ್ಷದಿಂದ ದೇವಳಕ್ಕೆ ಹೋಗುತ್ತಿದ್ದೇನೆ ಆದರೆ ಅಲ್ಲಿ ಬಾವಿ ಇದ್ದ ವಿಷಯ ನನಗೆ ಗೊತ್ತಿರಲಿಲ್ಲ…ಎಷ್ಟೊಂದು ವಿಚಿತ್ರ ಅಲ್ವಾ ಯಾವುದೋ ಒಂದು ಕ್ಷೇತ್ರದಲ್ಲಿ ಬಾವಿಯೊಂದು ಮುಚ್ಚಿ ಹೋಗಿದೆ ಅನ್ನುವ ಬಗ್ಗೆ ರಾಶಿ ಫಲಗಳು… ಶಾಸ್ತ್ರದಲ್ಲಿರುವ ಶ್ಲೋಕಗಳು ಸೂಚಿಸುವುದು… ಈಗಿನ ಅರ್ಚಕರ ಬಗ್ಗೆ ಹೇಳುತ್ತಾ… ಸ್ವಲ್ಪ ಕೋಪ ಮಾಡಿಕೊಳ್ಳುವುದು…ಪೂಜಾ ವಿಧಾನಗಳನ್ನು ಬೇಗ ಬೇಗ ಮಾಡಿ ಮುಗಿಸುತ್ತಾರೆ ಅಂತ ಹೇಳಿದರು… ಮತ್ತು ಸಹಾಯಕ ಅರ್ಚಕರಿಗೆ ಬೈಯುವುದು ಇತ್ಯಾದಿಗಳನ್ನು ಮಾಡುತ್ತಾರೆ ಅಂದರು… ಇದನ್ನು ಕೇಳುತ್ತಿದ್ದಂತೆ ನನಗೆ ಆಶ್ಚರ್ಯವೋ ಆಶ್ಚರ್ಯ ಯಾಕೆಂದರೆ ಇವೆಲ್ಲವನ್ನೂ ನಾನು ಸೋಮವಾರ ದೇವಳಕ್ಕೆ ಹೋಗುವಾಗ ಕಾಣುತ್ತೇನೆ….
ಗಣಪತಿ ದೇವರ ಬಿನ್ನತೆ ಇದೆ ಅನ್ನುವುದು… ಅದೂ ಯಾವ ಭಾಗದಲ್ಲಿ ಅನ್ನುವುದನ್ನೂ ಕೂಡ ಹೇಳಬೇಕಾದರೆ ಈ ವಿದ್ಯೆಯ ಮಹತ್ವ ಶ್ರೇಷ್ಟತೆ ಎಷ್ಟಿರಬೇಡ……..

ಪ್ರಶ್ನೆ ಇಡುಲು ಆಹ್ವಾನಿಸಲು ಹೋದ ವ್ಯಕ್ತಿ ತೊಟ್ಟ ಬಟ್ಟೆ, ಬಟ್ತೆಯ ಬಣ್ಣ, ಮಾತಾಡಿದ ವಾಕ್ಯ, ಆ ವಾಕ್ಯದಲ್ಲಿನ ಒಟ್ಟು ಅಕ್ಷರಗಳು, ಮೊದಲ ಅಕ್ಷರ ಈರೀತಿ ಇವುಗಳನ್ನೆಲ್ಲಾ ನಮ್ಮಲ್ಲಿ ಹೇಳಿ ಅದರ ಅರ್ಥ ಬಿಡಿಸಿ ಹೇಳಿ ಅದು ಸೂಚಿಸುವ ರಾಶಿ ಮತ್ತು ಅದರ ಮೇಲೆ ಪ್ರಭಾವ ಬೀರುವ ರಾಶಿಗಳನ್ನು ಗಣನೆಗೆ ತೆಗೆದುಕೊಂಡು ನಮಗೆ ಅಚ್ಚರಿಯ ಮೇಲೆ ಅಚ್ಚರಿ ಕೊಟ್ಟರು…

ನನಗಾಗುತ್ತಿದ್ದ ಆಶ್ಚರ್ಯಗಳಿಗೆ ಕೊನೆಯನ್ನು ಹುಡುಕುತ್ತಾ ಇದ್ದೆ… ಆದರೆ ಅದುವೋ ನನ್ನನ್ನು ಬಿಡುವ ಲಕ್ಷಣವೇ ಕಾಣಿಸಲಿಲ್ಲ… ಇಲ್ಲವಾದಲ್ಲಿ ನೀವೇ ಹೇಳಿ… ಅದೆಷ್ಟೋ ಮೈಲಿ ದೂರದಿಂದ ಬಂದ ವ್ಯಕ್ತಿಗೆ ಈ ದೇವಳದ ಆಸುಪಾಸಿನಲ್ಲಿರುವ ದೈವಸ್ಥಾನಗಳ (ದೈವಗಳು ಅಂದರೆ ಶಿವನ ಗಣಗಳು ಈ ಪರಶುರಾಮ ಕ್ಶೇತ್ರದಲ್ಲಿ ಮಾತಾಡುವ ದೇವತೆಗಳು) ಬಗ್ಗೆ ಗೊತ್ತಾಗೋದು ಹೇಗೆ…? ಆದರೂ ಅದಕ್ಕೆ ಸಂಭಂದ ಪಟ್ಟ ಎಲ್ಲಾ ದೈವಸ್ಥಾನಗಳ ಪಟ್ಟಿಯನ್ನೇ ಹೊರಹಾಕಿದರಲ್ಲಾ ಇದಕ್ಕೇ ಏನು ಹೇಳೋಣ…. ಅದರಲ್ಲೂ ದೇವಳದ ಉತ್ತರದ ಭಾಗದಲ್ಲೊಂದು “ಜಾರಂದಾಯ” ದೈವದ ಸನ್ನಿಧಾನ… ಅಲ್ಲಿ ಕಳೆದ ಹದಿನಾಲ್ಕು ವರ್ಷಗಳಿಂದ ವಾರ್ಷಿಕ ನೇಮೋತ್ಸವದಂದು ದೈವ ಹೇಳಿತ್ತಿದೆಯಂತೆ… ನನ್ನನ್ನು … ನನ್ನ ಡೆವರ ಬಳಿ ಕರೆದುಕೊಂಡು ಹೋಗಿ ಭೇಟಿ ಮಾಡಿಸಿ….ಅಂತ ಅದೇ ವಿಚಾರ ಇಲ್ಲೂ ಕಂಡು ಬಂದಿದೆ ಎಂಥಾ ಆಶ್ಚರ್ಯ ಅಲ್ವಾ… ದೇವಳದ ಪಶ್ಚಿಮ ದಿಕ್ಕಿನಲ್ಲೊಂದು ಪ್ರಧಾನ ದೈವ ಪೂಜಿಸದ ರೀತಿಯಲ್ಲಿದೆ ಅಂದರು ಅದು ನೋಡಿದರೆ ಬಬ್ಬರ್ಯ ಕೊಂಬು ಅನ್ನುವ ದೈವವೊಂದು ಉದ್ಭವ ರೂಪದಲ್ಲಿ ಇದೆ ಅನ್ನುವುದು ಅಲ್ಲಿನ ಆಸುಪಾಸಿನ ಜನರಿಂದ ಗೊತ್ತಾಯಿತು…ಅದೂ ಅಲ್ಲದೆ ಅದು ಸಮುದ್ರ ತಟದಲ್ಲೇ ಇದ್ದು ಆ ಭಾಗದ ರಕ್ಷಕ ಅಂದರು ಅದರ ಉಪಾಸನೆ ಕಡಿಮೆ ಆದದ್ದರಿಂದ ಕಳೆದ ಹತ್ತು ತಿಂಗಳಿನಿಂದ ಮೊಗವೀರರಿಗೆ ಮೀನು ಕಡಿಮೆ ಸಿಗುತ್ತಿದೆಯಾ ಅಂದರು ಆಗ ಅಲ್ಲಿ ನೆರೆದಿದ್ದ ಮೊಗವೀರ ಬಂಧುಗಳು ಒಪ್ಪಿಕೊಂಡಾಗ ನನಗೆ ಆಶ್ಚರ್ಯ… ಮೀನು ಸಿಗುತ್ತಿಲ್ಲ ಅನ್ನುವುದೂ ಗೊತ್ತಾಗುತ್ತಾ….???

ಯಾರೋ ತಂದಿಟ್ಟ ನಾಗನ ಮುರ್ತಿ ಇಲ್ಲಿ ಇದೆಯಾ ಎಂದರು ಆದೂ ದೇವಳದ ಮುಂಭಾಗದಲ್ಲಿ ಕಂಡು ಬಂತು. ದೇವಳದ ಆಯದಲ್ಲಿನ ದೋಷ, ಮತ್ತು ಇಲ್ಲಿನ ಉಪ ದೈವಗಳ ಕೋಪ ಅಂದರೆ ಅದನ್ನು ಸರಿಯಾಗಿ ಆರಾಧನೆ ಮಾಡದೇ ಇದ್ದುದರಿಂದ.. ಕೋಪಗೊಂಡ ದೈವಗಳು ಇವುಗಳು ದೇವರ ಚೈತನ್ಯವನ್ನು ಕಡಿಮೆಗೊಳಿಸಿದೆ ಅಂದರು. ಅಷ್ಟೇ ಯಾಕೆ ಮಳೆಯ ನೀರು ದೇವರ ಮೇಲ್ಛಾವಣಿಯಿಂದ ಎಲ್ಲೋ ಸೋರುತ್ತಿದೆಯೇ ಅಂದರು….ಇದನ್ನಂತು ಮೊದಲೇ ಪರೀಕ್ಷಿಸಲು ಸಾಧ್ಯಾನೇ ಇಲ್ಲ ಅಲ್ವ ಯಾಕಂದ್ರೆ ಈಗ ಬಿಸಿಲಿದೆ ಸೋರುತ್ತಿರುವುದು ಖಂಡಿತಾ ಕಾಣುವುದಿಲ್ಲ… ಹಾಗೇ ನೋಡುತ್ತಾ ನೋಡುತ್ತಾ ರಥ ಮತ್ತು ದ್ವಜಸ್ತಂಭಕ್ಕೆ ಉಪಯೋಗಿಸುವ ಹಗ್ಗ ಯಾವುದು ಅಂದರು ಎಲ್ಲರಿಗೂ ಗೊತ್ತು ಕಳೆದ ಕೆಲವು ವರ್ಷಗಳಿಂದ ನೈಲಾನ್ ಹಗ್ಗ ಉಪಯೋಗಿಸುತ್ತಿದ್ದರು… ಇದು ಅಷುದ್ಧ ಅಂದರು… ದೇವರಿಗೆ ನೂಲಿನಿಂದ ಕಟ್ಟಿದ ಮಾಲೆ ಹಾಕುವುದು ಅಷುದ್ಧವಂತೆ… ಅದೇ ಅಲ್ಲದೆ ದೇವಳದ ಹೊರಗೆ ರಕ್ತೇಶ್ವರಿ ಕಂಬ ಇದೆ ಇದರ ಸ್ತಂಭದಲ್ಲೇ ನವೀಕರಿಸಿದವರ ಹೆಸರು ಕೆತ್ತಿಸಿದ್ದಾರೆ ಅದೂ ಅಶುದ್ಧ…ಒಬ್ಬ ವ್ಯಕ್ತಿ ದೇವಳಕ್ಕೆ ಕೊಡುವಾಗ ತನ್ನ ಹೆಸರಿಗಾಗಿ ಕೊಡುವುದು ತಪ್ಪು ಅಲ್ವಾ… ಹೀಗೆ ನಾಲ್ಕು ದಿನದ ವಿಷಯ ಪಟ್ಟಿ ಮಾಡುತ್ತಾ ಹೋದರೆ ಮುಗಿಯಲಿಕ್ಕಿಲ್ಲ … ಅದೆಲ್ಲ ಆಗಿ ಇವತ್ತು ಮಧ್ಯಾಹ್ನ ನಿವೃತ್ತಿಯ ವಿಷಯ ಚರ್ಚೆ ಮಾಡತೊಡಗಿತು…. ಕೆಲವೆಲ್ಲಾ ಆಚರಣೆಗಳು… ಬದಲಾಗಬೇಕು ಅಂದರು ಯಾಕೆಂದರೆ ದೈವಜ್ನರಿಗೆ ಕಂಡು ಬಂದಂತೆ ಇದು ಸಾಮಾನ್ಯ ಕ್ಷೇತ್ರ ಅಲ್ಲ ಇದು ಮಹಾನ್ ಕ್ಷೇತ್ರ ಯಾಕೆಂದರೆ ಶಿವಾಲಯ … ಬಿಲ್ವ ಪತ್ರದ ಮರ … ಸರೋವರ ಇವು ಮುರು ಇರುವ ಕ್ಷೇತ್ರ ಬಹಳ ಅಪರೂಪವಂತೆ ಇಲ್ಲಿ ಮುರು ಇದೆ… ಮತ್ತು ಇಲ್ಲಿನ ದೇವರು ಮೃತ್ಯುಂಜಯ ಸ್ವರೂಪ ಅಂದರೆ ಮೃತ್ಯು ಭಯ ಇದ್ದವರು ಇಲ್ಲಿ ಮೃತ್ಯುಂಜಯ ಹೋಮಾದಿ ಮಾಡಿದರೆ ಅದು ಪರಿಹಾರವಾಗುತ್ತದೆ…. ಸಮುದ್ರದ ಕಡೆ ಮುಖ ಮಾಡಿ ನಿಂತಿರುವ ಶಿವನಾದ್ದರಿಂದ ಎಳ್ಳಮವಾಸ್ಯೆಯದಿನ ಸಮುದ್ರ ಸ್ನಾನ ಮಾಡಿ ಬಂದು ದೇವರನ್ನು ಪ್ರಾರ್ಥಿಸಿದರೆ ಎಲ್ಲಾ ರೋಗಗಳಿಂದ ಮುಕ್ತಿ ಸಿಗುತ್ತದಂತೆ( ಅಂದರೆ ಇದು ವೈದ್ಯನಾಥ ಸ್ವರೂಪವೂ ಹೌದಂತೆ). ಮತ್ತು ಖುಷಿ ಕೊಟ್ಟ ವಿಚಾರ ಇಲ್ಲಿನ ಜನ ಸಂಕಲ್ಪಿಸಿದ ಎಲ್ಲಾ ಕೆಲಸಗಳು ಜೀರ್ಣೋದ್ದಾರದ ಕೆಲಸಗಳು ನೇರವೇರುವ ಸಾಧ್ಯತೆ ಇದೆ ಮತ್ತು ಈ ಕ್ಷೇತ್ರ ಮತ್ತೆ ಪ್ರಖ್ಯಾತಿಯನ್ನು ಪಡೆಯುತ್ತದಂತೆ… ಅದರ ಫಲಸ್ವರೂಪವೋ ಎಂಬಂತೆ ಮುರು ಆಚರಣೆಗಳನ್ನು ನಿನ್ನೆಯಿಂದಲೇ ಬದಲಾಯಿಸಿದ್ದು

ಒಂದು…. ಗಣಪತಿಗೆ ಅಪ್ಪ ಸೇವೆ
ಎರಡು … ಕಟ್ಟೆಯಲ್ಲಿ ಮೊದಲಿನಂತೆ ದೀಪ ಇಟ್ಟದ್ದು
ಮೂರು … ನಗಾರಿ ಬಡಿಯುವ ಪರಿಚಾರಕರು ತಮ್ಮ ವಸ್ತ್ರ ಸಂಹಿತೆಯನ್ನು ಪಾಲಿಸತೊಡಗಿದ್ದು…

ಇವೆಲ್ಲವೂ ಶುಭಲಕ್ಷಣ ಅಂದರು ಆಗಲಿ ಇನ್ನಾದರೂ ಈ ಕ್ಶೇತ್ರದಲ್ಲಿನ ಎಲ್ಲರಿಗೂ ಒಳ್ಳೆಯದಾಗಲಿ….

ಇದೆಲ್ಲವನ್ನೂ ನೋಡಲು ಸಿಕ್ಕಿದ್ದು ನನ್ನ ಭಾಗ್ಯವೇ ಸರಿ ಆದ್ರೂ ಅದರಲ್ಲಿ ಮೊದಲಾರ್ದದ ಕಾರ್ಯಕ್ರಮ ತಪ್ಪಿದಂತೆ ಕೊನೆಯ ಹಂತದ್ದು ತಪ್ಪಿ ಹೋಯಿತೆನುವ ಅಸಮಾಧಾನ ಇನ್ನೂ ಹಾಗೇ ಇದೆ……


Guruprasad Acharya

Advertisements

ನಿಮ್ಮ ಅನಿಸಿಕೆ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: