ನನ್ನ ವೈದ್ಯಕೀಯ ವೃತ್ತಿಯ ಮೊದಲ ದಿನಗಳು

ನನ್ನ ವೈದ್ಯಕೀಯ ವೃತ್ತಿಯ ಮೊದಲ ದಿನಗಳು, ಒಂದು ಪುಟ್ಟ ಚೊಚ್ಚಲ ಗರ್ಭಿಣಿ ಹೆಣ್ಣು ಮಗಳು ತಪಾಸಣೆಗೆ ಬಂದಳು, ಸ್ವಲ್ಪ ಆಯಾಸ… ಸ್ವಲ್ಪ ಬೇಸರ., ಸ್ವಲ್ಪ ಆತಂಕ ಎದ್ದು ಕಾಣುತಿತ್ತು. ನಾನು ಅವಳಿಗೆ ಧೈರ್ಯ ತುಂಬಿ ತಪಾಸಣೆ ಮಾಡಿ ಮತ್ತೆ ಮುಂದಿನ ತಿಂಗಳು ಬರುವಂತೆ ಸೂಚಿಸಿ ಕಳುಹಿಸಿದೆ…

ತಿಂಗಳ ನಂತರ ಆ ಹುಡುಗಿ ಮತ್ತೆ ಬಂದಳು…. ದಿನ ತುಂಬಿತ್ತು… ಇನ್ನು ಹೆರಿಗೆಗೆ ಸಮಯವಿತ್ತು…ತಪಾಸಣೆ ಮಾಡಿದಾಗ… ಮಗು breach position ಅಲ್ಲಿ ಇತ್ತು…. (ಹೆರಿಗೆಗೆ ಸಮಯಕ್ಕೆ ಮೊದಲು ಮಗುವಿನ ತಲೆ ಕೆಳಮುಖವಾಗಿ ‘ಫಿಕ್ಸ್” ಆಗುತ್ತೆ ನೂರಕ್ಕೆ ಶೇಕಡಾ ೨ರಷ್ಟು ಮಾತ್ರ ಹೀಗೆ breach position ಅಲ್ಲಿ ಇರುತ್ತೆ. ಈ ರೀತಿ ಇದ್ದಾಗ ಹೆರಿಗೆ ಕಷ್ಟ ಆಗಿ ಮಗುವಿನ ಪ್ರಾಣಕ್ಕೆ ಅಪಾಯ ಆಗೋ ಸಾದ್ಯತೆಗಳಿರುತ್ತದೆ ಯಾಕೆ ಅಂದ್ರೆ ಮೊದಲು ಕಾಲು ಹೊರ ಬಂದ ನಂತರ ಮಗುವಿನ ಬುರುಡೆ ಹಾಗು ತಾಯಿಯ ಪೆಲ್ವಿಕ್ ಮೂಲೆಯ ನಡುವೆ ಹೊಕ್ಕಳ ಬಳ್ಳಿ ಸಿಕ್ಕಿಕೊಂಡಾಗ ಮಗುವಿಗೆ ಆಮ್ಲಜನಕದ ಕೊರತೆ ಆಗಿ ಮಗು ಹೊರಬರುವ ಮೊದಲೇ ಮರಣ ಹೊಂದುವ ಅಪಾಯ ಇರುತ್ತದೆ ಅದಕ್ಕೆ ಸಿಸೇರಿಯನ್ ಮಾಡಿ ಮಗು ತೆಗೆದು ಬಿಡುತ್ತಾರೆ ), ಆ ಹುಡುಗಿಯ ಮನೆಯವರಿಗೆ ಈ ವಿಷಯ ಹೇಳಿ O.T ಒಳಗೆ ಬಂದೆ. ಸಿಸ್ಟರ್ ಬಂದು ನೋವು ಹೆಚ್ಚಾಗಿದೆ ಎಂದು ಕರೆದರು, ಬರುವಷ್ಟರಲ್ಲೂ ಮಗುವಿನ ಕಾಲು ಹೊರ ಬರುತ್ತಾ ಇತ್ತು, ಮೆಲ್ಲನೆ ನಿಧಾನವಾಗಿ ಮಗುವಿನ ಕಾಲು ಹಿಡಿದೆ. ಪುಟ್ಟ ಕೆಂಪು ಕೆಂಪು ಪಾದ ತಾಯಿಗೆ ಸ್ವಲ್ಪವೇ ನೋವು ಕೊಡಲು ಹೇಳಿ ಮೆಲ್ಲ ಮೆಲ್ಲನೆ ಕಾಲ ಎಳೆಯತೊಡಗಿದೆ. ಒಂದೇ ಕಾಲು, ಇನ್ನೊಂದು ಕಾಲು ಮೊಣಕಾಲಿನವರೆಗೂ ಬೆಳೆದಿರಲಿಲ್ಲ, ಸೊಂಟದಿಂದ ಕೆಳಗೆ ಸಣ್ಣ ಒಂದು ಮೊಳಕೆ, ಪುಟ್ಟ ಹೆಣ್ಣು ಕಂದ, ಮನಸ್ಸು ಒಂದು ಕ್ಷಣ ವಿಚಲಿತವಾಯ್ತು, ಮುಂದಿನ ಮಗುವಿನ ಜೀವನದ ಅದರ ನೋವುಗಳು ಕ್ಷಣ ಮಾತ್ರದಲ್ಲಿ ಕಣ್ಣ ಮುಂದೆ ಬಂತು. ಮಳೆಯಲಿ ಉಳಿದ ಮಕ್ಕಳು ನಗುತ್ತ ಕುಣಿಯುವಾಗ, ಈ ಮಗು ಒಂದೇ ಕಾಲಿನಲ್ಲಿ ಪರಾವಲಂಬಿಯಾಗಿ ನೋವು, ಹಿಂಸೆ, ಮಗುವಿನ ಮನೂಕ್ಸ್ಲೇಶ ಎಲ್ಲ ಚಲನ ಚಿತ್ರದಂತೆ ಹಾದು ಹೋಯ್ತು. ಮನದ ಮೂಲೆಯಲ್ಲಿ ಒಂದು ಸಣ್ಣ ಯೋಚನೆ ಬಂತು..”ಹೆರಿಗೆ ಕೆಲವು ನಿಮಿಷ ತಡವಾದರೆ…ಮಗು ಸತ್ತು ಹೋಗುತ್ತದೆ…ಯಾರಿಗೂ ತಿಳಿಯುವುದೂ ಇಲ್ಲ.. ಜೀವನ ಪೂರ್ತಿ ನೋಯುವುದು ತಪ್ಪುತ್ತದೆ.

ತಾಯಿ ಕೂಡ ತನ್ನ ಅಂಗವಿಕಲ ಮಗು ಇಲ್ಲದೆ ಹೋದದ್ದೇ ಒಳ್ಳೆದಾಯ್ತು ಅನ್ಕೊಳ್ತಾಳೆ, ಕೆಲವೇ ಕ್ಷಣಗಳ ವಿಳಂಬ ಅಷ್ಟೇ…. OTಯಲ್ಲಿದ್ದ ಎಲ್ಲ ಕಾತುರದಿಂದ ಕಾಯ್ತಾ ಇದ್ದಾರೆ. ಏನ್ ಮಾಡಲಿ ದೇವರೇ…..!!!!!!ಇದ್ದಕಿದ್ದಂತೆ ಮಗುವಿಗೆ ನನ್ನ ಭಾವನೆ ಅರ್ಥವಾಯ್ತೇನೋ ಎಂಬಂತೆ ಚಲನೆ ಶುರು ಮಾಡಿ ಬಿಟ್ಟಿತು…ನನ್ನ ಹೊರಗೆ ಕರೆದುಕೋ ಎಂಬಂತೆ ಅಲುಗಾಡ ತೊಡಗಿತು…ಇನ್ನು ವಿಳಂಬಿಸಲು ಮನ ಒಪ್ಪಲಿಲ್ಲ…”ದೇವರೇ ನನ್ನ ಯೋಚನೆಗೆ ಕ್ಷಮಿಸು ಎಂಬಂತೆ ಮಗುವನ್ನ ಹೊರಗೆ ಎಳೆದುಕೊಂಡೆ..ಪುಟ್ಟ ಜೀವ ಹೊರಬಂದು ಕೃತಜ್ಞತೆಗೆ ಎಂಬಂತೆ ಅಳತೊಡಗಿತು…..

ತಾಯಿ ಮಗು ಆಸ್ಪತ್ರೆಯಲ್ಲಿ ಇರುವವರೆಗೆ ….ಮನದ ಮೂಲೆಯ guilt ಇತ್ತು..ಪುಟ್ಟ ಕಂದನ ಕಂಡಾಗ ಯಾಕೋ ಹೇಳಲಾಗದ ಭಾವ…ಆಮೇಲೆ ಅವ್ರ ದಾರಿ ಹಿಡಿದು ತಾಯಿ ಮಗು ಹೊರಟು ಹೋದರು…ಎಂದೋ ಒಮ್ಮೆಮ್ಮೋ ಆ ತಪ್ಪಿತಸ್ತ ಭಾವ ಆಗಾಗ ಕಾಡುತ್ತಿತ್ತು….ದಿನ, ತಿಂಗಳು, ವರುಷಗಳು ಉರುಳಿದವು……”ನಾನು ಈಗ senior surgeon… ಆಸ್ಪತ್ರೆಯಲ್ಲಿ ವರ್ಷ ವರ್ಷದಂತೆ ಆ ವರ್ಷವೂ “Hospital Day’ ನಡೆಯಿತು…ಪುಟ್ಟ ಮಕ್ಕಳ ಹಾಡು ನರ್ತನ ನಡೆದಿತ್ತು….ಮಕ್ಕಳ ನರ್ತನ ಕಣ್ಮನ ಸೆಳೆದಿತ್ತು…ಅದರಲ್ಲೂ ಒಂದು ಹುಡುಗಿಯಂತೂ ಎಲ್ಲರ ಮನ ಗೆದ್ದಳು….ಸುಂದರ ಪುಟ್ಟ ಬಾಲೆ …ಕಾರ್ಯಕ್ರಮ ಮುಗಿಯಿತು….ಎಲ್ಲ ಹೊರಡಲು ಎದ್ದೆವು….ಒಬ್ಬ ಹೆಣ್ಣು ಮಗಳು ಒಡ್ಡಿ ಬಂದು ನನ್ನ ಕೈ ಹಿಡಿದಳು…”ಓ ..ನೀವು ಇಲ್ಲಿದ್ದೀರ ..ನಾನು ಆಗಿನಿಂದ ನಿಮ್ಮನ್ನೇ ಹುಡುಕುತ್ತ ಇದ್ದೆ…’ಅವಳನ್ನ” ನೋಡಿದ್ರ “ಎಂದಳು…ನಾನು “ನೀನು ಯಾರು” ಎಂಬಂತೆ ನೋಡಿದೆ…” ಸುಮಾರು ೧೭ ವರ್ಷದ ಹಿಂದೆ ನೀವು ಒಂದು ಮಗುವಿನ ಡೆಲಿವರಿ ಮಾಡಿದ್ರಿ…ಒಂದೇ ಕಾಲು….ನೆನಪಿದೆಯೇ…???ಅವಳು ನಿಮ್ಮ ಮಗಳು..ಈಗ ಅವಳು ಓಡ್ತಾಳೆ, ನಡಿತಾಳೆ,…ನರ್ತಿಸುತ್ತಾಳೆ …ಮೊದಮೊದಲು ಸ್ವಲ್ಪ ಕಷ್ಟ ಪಟ್ರು ನಂತರ ಅವಳು ಯಾರಿಗೂ ಕಮ್ಮಿ ಇಲ್ಲದಂತೆ ಬೆಳೆದಳು…ನನ್ನ ಜೀವ ಅವಳು…ಅವಳೂ ಈಗ ಸಂತುಷ್ಟೇ..ನೃತ್ಯದಲ್ಲಿ ಇನ್ನು ಸಾದನೆ ಮಾಡೋ ಹುಚ್ಚು ಅವಳಿಗೆ..ಇದೆಲ್ಲ ಆಗಿದ್ದು ನಿಮ್ಮಿಂದ…ನೀವು ಆವತ್ತು ಅವಳ ಉಳಿಸಿದ್ರಿಂದ” ಒಂದೇ ಉಸಿರಲ್ಲಿ ಹೇಳಿ ಮುಗಿಸಿದಳು ಆ ತಾಯಿ…. ಕ್ಷಣ ಮಾತ್ರದಲ್ಲಿ ನನ್ನ ಅಂದಿನ ಭಾವ ನೆನಪಿಗೆ ಬಂದು ಮನಸ್ಸು “ಛಳ್ ‘ಎಂದಿತು…ಬಂದ ಪುಟ್ಟ ಬಾಲೆಯ ತಬ್ಬಿ ನೆತ್ತಿಗೆ ಮುತ್ತೊಂದು ಒತ್ತಿದೆ…”ದೇವರೇ ನನ್ನ ಕ್ಷಮಿಸು…” ಎಂದು ಕೊಂಡೆ…ಆ ಕ್ಷಣ ಬೇರೇನು ತೋಚಲಿಲ್ಲ…ನನ್ನ ಕಣ್ಣ ತುಂಬಿದ ಹನಿ …ಆ ತಾಯಿ ಮಗಳ ಕಣ್ಣ ಹೆಮ್ಮೆ…ದೇವರು ನನ್ನ ಕ್ಷಮಿಸಿದಾನೆ ಎಂಬಂತೆ ಅನಿಸಿತು….ವರುಷಗಳ ಎದೆ ಭಾರ ಇಳಿದು ಹೋಯ್ತು..(ಇದೊಂದು ಸತ್ಯ ಕತೆ..ಭಾವಾನುಸಂಗ್ರಹ..by: DR Loomis.)

ಅನುವಾದ : Sunitha Manjunath

Advertisements

ನಿಮ್ಮ ಅನಿಸಿಕೆ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: