ಕೇಳ ಬಾರದಿತ್ತೆ ಈ ಪ್ರಶ್ನೆ…??

ಹದಿನಾಲ್ಕು ವರುಷ
ಅಯೋಧ್ಯೆಯ ಸೊಸೆಯಾಗಿ…
ಲಕ್ಷ್ಮಣನ ಸತಿಯಾಗಿ..
ಕಟಾಂಜನದ ಮೇಲೆ ಕೈ ಇಟ್ಟು..
ತವರುಮನೆಯ ಸುಖವ ನೆನೆದುಕೊಂಡೇ..
ಮದುವೆಯ ಮುದದ ನೆನಪಲ್ಲಿ ಮನವ ತಣಿದುಕೊಂಡೆ
ಗಿಳಿ ಗೊರವಂಕಗಳೊಡನೆ ಕನಸ ಹಂಚಿಕೊಂಡೆ…
ಆಗೊಮ್ಮೆ ಈಗೊಮ್ಮೆ ಈ ಮದುವೆಯ ವಜ್ರದುಂಗುರವ ತಿಂದು
ಇಹವ ತೊರೆಯಬೇಕೆಂದುಕೊಂಡೆ..
ಆದರೀ ಉಂಗುರದ ಒಡೆಯನ ಬಿಸುಪು, ನೆನಪೇ ನನ್ನ ಹಿಡಿದಿಟ್ಟಿತ್ತು…
ಹದಿನಾಲ್ಕು ವರ್ಷಗಳ ನಂತರ
ಕಟಾಂಜನದ ಮೇಲೆ ಕೈ ಇಟ್ಟು ಒರಗಿ
ನೋಡುತ್ತಿದ್ದೇನೆ ಲಕ್ಷ್ಮಣನನ್ನು
ಕೊಂಚ ಕೃಶ ಶರೀರ ,ಒಂದಿನಿತೂ ಕುಂದದ ಕಣ್ಣ ಹೊಳಪು
ಇವರೇ ಅಲ್ಲವೇ ನನ್ನ ಕೈ ಹಿಡಿದು ಆಯೋಧ್ಯೆಗೆ ಕರೆತಂದವರು….
ಮೈಯಲ್ಲಿ ಏನೋ ಬಿಗಿತ..
ಕೈಯಲ್ಲಿ ಕಂಪನ..
ಮನದಲ್ಲಿ ತವಕ…
ಗಂಡನನ್ನು ಕಾಯುತ್ತಿರುವ
ಈಗಷ್ಟೇ ಮದುವೆಯಾದ ಹೆಣ್ಣು ನಾನು
ಹದಿನಾಲ್ಕು ವರ್ಷ ಕಳೆದದ್ದು ದೇಹಕ್ಕೆ ಮಾತ್ರ…
ಆದರೆ….
ಲಕ್ಷ್ಮಣನಿಗೆ ರಾಮನ, ಮಹಾಸತಿ ಸೀತೆಯ
ಪ್ರೇಮ, ವಿರಹ, ಮಿಲನಗಳ
ಕಾಡಿನ ಕಥೆ, ವ್ಯಥೆಯದೆ ವಿಷಯ…
ವನವಾಸ ರಕ್ಕಸಯುದ್ಧ ಅವನನ್ನು ಪ್ರೌಡನನ್ನಗಿಸಿದೆ ..
ಅಣ್ಣ ಅತ್ತಿಗೆಯರ ಸೇವೆ, ದೇವರ ಧಾನ್ಯ, ವನವಾಸ ಅವನನ್ನು ನಿರ್ಲಿಪ್ತನನ್ನಾಗಿಸಿದೆ
ಇಂದಿಗಿಂತ ಆ ಕಾಯುತ್ತಿದ್ದ ಹದಿನಾಲ್ಕು ವರ್ಷವೇ ಹಿತ ಎನಿಸುತ್ತಿದೆ..
ಹಿಡಿದಿಡಲಾರದೆ ಕೇಳಿ ಬಿಟ್ಟೆ
“ಈ ಹದಿನಾಲ್ಕು ವರ್ಷ ನನ್ನ ನೆನಪೇ ಆಗಲಿಲ್ಲವೇ ಲಕ್ಷ್ಮಣ “
ಸ್ತಂಭಿಬುತನಾದ ಲಕ್ಷ್ಮಣ …..
ಕಣ್ಣoಚಲ್ಲಿ ನೀರತುಂಬಿ ನಾ ಕೇಳಿದ ಪರಿಗೆ…
ಅವನ ಕಣ್ಣಲ್ಲಿ ಚದಪದಿಕೆಯೇ …ಇಲ್ಲ ತಪ್ಪಿತಸ್ಥ ಭಾವವೇ…
ಅಯೋಧ್ಯೆಯ ಸೊಸೆಯಾಗಿ…
ಲಕ್ಷ್ಮಣನ ಮಡದಿಯಾಗಿ…
ಸೀತೆಯ ತಂಗಿಯಾಗಿ…
ನಾ ಕೇಳಿದ್ದು ತಪ್ಪೇನೋ ..
ಆದರೆ…ಊರ್ಮಿಳೆಯಾಗಿ, ಹೆಣ್ಣಾಗಿ,ವಿರಹಿಯಾಗಿ
ನಾ ಕೇಳಿದ್ದು ತಪ್ಪೇ……?????
– Sunitha Manjunath

Advertisements

ನಿಮ್ಮ ಅನಿಸಿಕೆ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: