ರೆಡ್‌ ರಿಬ್ಬನ್‌ ಎಕ್ಸ್‌ಪ್ರೆಸ್‌

ರೆಡ್‌ ರಿಬ್ಬನ್‌ ಎಕ್ಸ್‌ಪ್ರೆಸ್‌ ಒಟ್ಟು 23 ರಾಜ್ಯಗಳ ಮೂಲಕ 162 ರೈಲ್ವೆ ನಿಲ್ದಾಣಗಳಲ್ಲಿ ತಂಗಲಿದೆ. ಈ ರೈಲಿನಲ್ಲಿ ಒಟ್ಟು 8 ಬೋಗಿಗಳಿದ್ದು, ಮೂರು ಬೋಗಿಗಳಲ್ಲಿ ಎಚ್‌ಐ-ಏಡ್ಸ್‌ ಕುರಿತ ಮಾಹಿತಿಯಿದೆ. 4ನೇ ಬೋಗಿಯು ”ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಮಿಶನ್‌ ಸಂಬಂಧಿಸಿದ್ದು, ಕ್ಷಯ, ಮಲೇರಿಯ, ಮಕ್ಕಳ ಆರೋಗ್ಯ, ನೈರ್ಮಲ್ಯ ಮತ್ತಿತರ ಅಂಶಗಳ ಬಗ್ಗೆ ಮಾಹಿತಿ ಒಳಗೊಂಡಿದೆ.

ಒಂದು ಬೋಗಿಯಲ್ಲಿ ಆಪ್ತ ಸಮಾಲೋಚನೆಗೆ ಅವಕಾಶ ಕಲ್ಪಿಸಿದ್ದು, ಇನ್ನೊಂದು ಬೋಗಿಯಲ್ಲಿ ಸ್ಥಳಿಯ ಪಾಲುದಾರರಾದ ಪಂಚಾಯತ್‌ ಸದಸ್ಯರು, ಸ್ವಸಹಾಯ ಸಂಸ್ಥೆಗಳು, ಆರೋಗ್ಯ ಕಾರ್ಯಕರ್ತರು, ಯುವಕ ಸಂಸ್ಥೆಗಳು, ಅಧ್ಯಾಪಕರು, ಪೋಲಿಸ್‌ ಸಿಬ್ಬಂದಿಗಳಿಗೆ ತರಬೇತಿ ನೀಡಲು ಪ್ರತ್ಯೇಕ ಸಭಾಂಗಣದ ವ್ಯವಸ್ಥೆ ಕೂಡ ಮಾಡಲಾಗಿದೆ.ಕುಟುಂಬ ಯೋಜನೆ ಮತ್ತು ಎಚ್‌ಐವಿಗೆ ಅವಿನಾಭಾವ ಸಂಬಂಧವಿದೆ. ಹೀಗಾಗಿ ಎಚ್‌ಐವಿ ಬಗ್ಗೆ ಹರಿದುಬರುವ ಮಾಹಿತಿಯ ಮಹಾಪೂರವನ್ನು ಕಂಡಾಗ ಕುಟುಂಬ ಯೋಜನೆ ಬಗ್ಗೆ ಗಂಭೀರವಾಗಿ ಆಲೋಚಿಸಬೇಕಾದ ಅಗತ್ಯ ಈಗ ಎದುರಾಗಿದೆ. ಎಚ್‌ಐವಿಯ ಮೂಲಭೂತ ವಿಷಯಗಳು ಸಾಮಾನ್ಯವಾಗಿ ಪ್ರಚಲಿತದಲ್ಲಿವೆ. ನಾವೀಗ ಕುಟುಂಬ ಯೋಜನೆಯ ಬಗ್ಗೆ ಚರ್ಚಿಸುತ್ತಿರುವುದರಿಂದ ಹತ್ತು ಹಲವು ಪ್ರಶ್ನೆಗಳು ಏಳುತ್ತವೆ. ಗರ್ಭಿಣಿಗೆ ಎಚ್‌ಐವಿ ಸೋಂಕು ತಗುಲುವ ಅಥವಾ ತಗುಲಿರುವ ಸಾಧ್ಯತೆ ಉಂಟೆ? ಇದಕ್ಕೆ ಖಚಿತವಾಗಿ ಹೀಗೇ ಎಂದು ಹೇಳುವಂತಿಲ್ಲ. ತಜ್ಞರು ಮಾಡಿರುವ ಅಧ್ಯಯನಗಳ ಪ್ರಕಾರ ಗರ್ಭಿಣಿಯರು, ಗರ್ಭಿಣಿ ಆಗದವರಿಗಿಂತ ಎರಡರಷ್ಟು ಅವಕಾಶ ಹೊಂದಿರುತ್ತಾರೆ. ಇದು ಉಗಾಂಡಾದಲ್ಲಿ ನಡೆದ ಅಧ್ಯಯನದಿಂದ ತಿಳಿದುಬಂದಿದೆ. ಇಂಥದೇ ಅಧ್ಯಯನ ಜಿಂಬಾಬ್ವೆಯಲ್ಲಿ ನಡೆಯಿತು. ಆ ಅಧ್ಯಯನದಲ್ಲಿ ಗರ್ಭಿಣಿಯರು ಮತ್ತು ಗರ್ಭಿಣಿ ಆದವರು ಇಬ್ಬರಿಗೂ ಸೋಂಕು ತಗುಲುವ ರೀತಿ ಒಂದೇ ತೆರನಾಗಿತ್ತು. ಏನೇ ಆಗಲಿ, ಎಚ್‌ಐವಿ ಸೋಂಕಿನ ಅಪಾಯದಲ್ಲಿರುವವರು ತಮ್ಮನ್ನು ತಾವು ರಕ್ಷಿಸಿಕೊಳ್ಳಬೇಕು. ಹಾಗೆಯೇ, ಈಗಾಗಲೇ ಎಚ್‌ಐವಿ ಸೋಂಕಿಗೆ ಒಳಗಾಗಿರುವ ಮಹಿಳೆ ಗರ್ಭಿಣಿಯಾಗಲು ಸಾಧ್ಯವೇ ಎನ್ನುವ ಪ್ರಶ್ನೆಯೂ ಇದೆ.

ಎಚ್‌ಐವಿ ಸೋಂಕಿತರೂ ಗರ್ಭ ಧರಿಸಬಹುದು. ಆದರೆ, ಆಕೆ ತನ್ನ ಗರ್ಭವನ್ನು ಒಂಭತ್ತು ತಿಂಗಳ ತನಕ ಯಶಸ್ವಿಯಾಗಿ ಉಳಿಸಿಕೊಳ್ಳಲು ಅಸಾಧ್ಯವಾಗಬಹುದು. ಸೋಂಕು ತುಂಬಾ ಮುಂದುವರಿದಿದ್ದರೆ ಹೀಗಾಗುವ ಸಾಧ್ಯತೆ ಇರುತ್ತದೆ. ಇನ್ನು ಕೆಲವು ಬಗೆಯ ಸಾಂದರ್ಭಿಕ ಸೋಂಕುಗಳು ಉಂಟಾದಾಗಲೂ ಹೀಗೆ ಆಗಬಹುದು. ಆದ್ದರಿಂದ ಎಚ್‌ಐವಿ ಸೋಂಕಿಗೆ ಒಳಗಾದವರು ಗರ್ಭಿಣಿ ಆಗದೆ ಇರಬೇಕೆಂದು ಬಯಸಿದರೆ ಸಂರಕ್ಷತಾ ವಿಧಾನಗಳನ್ನು ಅನುಸರಿಸಲೇಬೇಕು.

ಪ್ರಸ್ತುತ ನಮ್ಮ ಗುರಿ ಎಂದರೆ, ಜನಸಂಖ್ಯೆಯನ್ನು ಕುರಿತು ಚಿಂತನೆ. ಅಲ್ಲದೆ ಹುಟ್ಟುವ ಮಕ್ಕಳಿಗೆ ಎಚ್‌ಐವಿ ಸೋಂಕು ಹರಡದಂತೆ ಎಚ್ಚರ ವಹಿಸಬೇಕು. ೨೦೦೬ ರಲ್ಲಿ ಕುಟುಂಬ ಯೋಜನೆಯ ಅಳವಡಿಕೆಯ ಪರಿಣಾಮ ಹಾಗೂ ಕುಟುಂಬ ಯೋಜನೆಯನ್ನು ಪಾಲಿಸದೇ ಇದ್ದುದರಿಂದ ವಿಶ್ವದಲ್ಲಿ ಉಂಟಾದ ಪರಿಣಾಮ ಹೀಗಿತ್ತು. ಎಚ್‌ಐವಿ ಸೋಂಕಿತರಲ್ಲಿ ಕುಟುಂಬ ಯೋಜನೆ ಸಾಧನ ಬಳಸದೆ ಹುಟ್ಟಿದ ಮಕ್ಕಳು ೧೬,೦೩,೦೦೦, ಕುಟುಂಬ ಯೋಜನೆಯನ್ನು ಅಳವಡಿಸಿದುದರಿಂದ ಹುಟ್ಟಿದ ಮಕ್ಲೂ – ೫,೩೦,೦೦೦.

ಯೋಜನೆಯನ್ನು ಅನುಸರಿಸಿದ್ದರಿಂದ ೧೦,೭೩,೦೦೦ ಶಿಶುಗಳು ಎಚ್‌ಐವಿ ಸೋಂಕು ಪಡೆದು ಈ ಜಗತ್ತಿಗೆ ಬರುವುದನ್ನು ತಡೆಯಲಾಯಿತು. ಅನಗತ್ಯ ಗರ್ಭಧಾರಣೆ ತಡೆಯಿಂದ ಇರುವ ಉಪಯೋಗ ಎಂದರೆ ಸೋಂಕು ಹೊತ್ತುಕೊಂಡು ಮಕ್ಕಳು ಹುಟ್ಟುವ ಪ್ರಮೇಯ ಇರುವುದಿಲ್ಲ. ೨೦೦೬ನೇ ಇಸವಿಯಲ್ಲಿ ಜನನ ನಿಯಂತ್ರಣ ಸಾಧನ ಬಳಕೆ ಆಗದೆಯೇ ಇದ್ದ ಪಕ್ಷದಲ್ಲಿ ಪ್ರತಿದಿನ ೨,೯೪೦ ಸೋಂಕುಪೀಡಿತ ಶಿಶುಗಳು ಧರೆಗಿಳಿಯುತ್ತಿದ್ದವು ಎಂಬುದಾಗಿ ಸಂಖ್ಯಾಶಾಸ್ತ್ರಜ್ಞರು ಲೆಕ್ಕ ಹಾಕಿ ಹೇಳುತ್ತಾರೆ. ಗರ್ಭಧಾರಣೆಯನ್ನು ತಡೆಯುವುದರಿಂದ ಅದರಲ್ಲೂ ಎಚ್‌ಐವಿ ಸೋಂಕಿತರಲ್ಲಿ ತಡೆಯುವುದರಿಂದ ಮಹಿಳೆಗೆ ಆಗಬಹುದಾದ ಗರ್ಭಸ್ರಾವವನ್ನು ತಡೆದಂತಾಗುತ್ತದೆ. ಅಲ್ಲದೆ ಏಡ್ಸ್‌ನಿಂದ ಸಮಾಜಕ್ಕೆ ಹೊರೆಯಾಗುವ ಮಕ್ಕಳು ಹುಟ್ಟಿದಂತಾಗುತ್ತದೆ.

ಎಚ್‌ಐವಿ ಸೋಂಕಿತ ಮಹಿಳೆಯರನೇಕರಿಗೆ ತಮಗೆ ಸೋಂಕು ಇದೆ ಎಂಬುದೇ ತಿಳಿಯದಿರುವಂಥ ವಿಪರ‍್ಯಾಸವೂ ಇದೆ.

ಮಹಿಳೆಯರೇ ಹೆಚ್ಚು: ಎಚ್‌ಐವಿ ಸೋಂಕಿನ ದುಷ್ಪರಿಣಾಮಕ್ಕೆ ಒಳಗಾದವರು ಹೆಚ್ಚಾಗಿ ಮಹಿಳೆಯರು ಭಾರತದಲ್ಲಿ ಶೇ.೩೬ ರಷ್ಟಿದ್ದಾರೆ. ಸೋಂಕಿತರಲ್ಲಿ ಪುರುಷರ ಸಂಖ್ಯೆಯೇ ಹೆಚ್ಚು. ಭಯ ಮತ್ತು ತಾರತಮ್ಯದಿಂದಾಗಿ ಬಹಳ ಜನ ಮಹಿಳೆಯರು ತಮಗೆ ಸೋಂಕು ಇರುವುದನ್ನು ಬಹಿರಂಗ ಪಡಿಸುವುದೇ ಇಲ್ಲ.

ಸೋಂಕಿತರನ್ನು ಮನೆಯಿಂದ ಹೊರಗಟ್ಟಿದ ದೈಹಿಕ ಮತ್ತು ಮಾನಸಿಕ ಹಿಂಸೆಗೆ ಗುರಿ ಮಾಡಿದ, ಸಾಮಾಜಿಕ ಬಹಿಷ್ಕಾರ ಹಾಕಿದ ಕೆಲವೊಮ್ಮೆ ಹೊಡೆದು ಸಾಯಿಸಿದ ಘಟನೆಗಳೂ ನಡೆದಿವೆ. ಲಿಂಗ ತಾರತಮ್ಯ ಮತ್ತು ಜೈವಿಕ ಕಾರಣಗಳಿಂದಾಗಿ ಮಹಿಳೆಯರೇ ಹೆಚ್ಚಾಗಿ ಎಚ್‌ಐವಿಗೆ ಬಲಿಯಾಗುತ್ತಾರೆ. ೨೦೦೪ರ ಯುಎನ್‌ ಏಡ್ಸ್ ವರದಿ ಹೇಳುವ ಪ್ರಕಾರ, ಪುರುಷರಿಂದ ಮಹಿಳೆಯರಿಗೆ ಎಚ್‌ಐವಿ ಸೋಂಕು ತಗಲುವ ಸಂದರ್ಭಗಳೇ ಹೆಚ್ಚು. ಬಹಳಷ್ಟು ಮಹಿಳೆಯರು ತಮ್ಮ ಸಂಗಾತಿಗಳೊಂದಿಗೆ ಸುರಕ್ಷಿತ ಲೈಂಗಿಕತೆಯ ಬಗ್ಗೆ ಚರ್ಚೆ ಮಾಡಲೂ ಅವಕಾಶವಿರುವುದಿಲ್ಲ.

ಎಚ್‌ಐವಿ ಸೋಂಕಿತ ಮಹಿಳೆಯರೂ ಕೂಡ ಎಲ್ಲರಂತೆ ಆರೋಗ್ಯಕರ ಜೀವನ ನಡೆಸಬಹುದು. ಕೆಲಸ ಮಾಡಬಹುದು, ಪ್ರಯಾಣಿಸಬಹುದು, ಮದುವೆ ಆಗಬಹುದು, ಮಕ್ಕಳನ್ನು ಹೆರಬಹುದು – ಹೀಗೆ ಸಾಮಾನ್ಯ ಮಹಿಳೆಯರು ಮಾಡುವ ಎಲ್ಲ ಕೆಸಲಗಳನ್ನು ಮಾಡಬಹುದು. ಆದರೆ ಸಾಮಾನ್ಯರಂತೆ ಜೀವಿಸಲು ಸಮಾಜ ಅವರನ್ನು ಬಿಡಬೇಕು, ಅಷ್ಟೆ. ವಾಸ್ತವದ ನಿಜವಾದ ಚಿತ್ರಣ ಅವರಿಗೆ ದೊರೆಯಬೇಕು ಎನ್ನುತ್ತಾರೆ ಆಕ್ಸ್‌ಫಾಮ್‌ (ಇಂಡಿಯಾ) ದಕ್ಷಿಣ ಏಷ್ಯಾ ಕಚೇರಿಯ ಪ್ರಾದೇಶಿಕ ಸಮನ್ವಯಾಧಿಕಾರಿ ಅದಿತಿ ಕಪೂರ್.

ಇನ್ನು ಸೋಂಕು ತಗುಲಿರುವ ಮಹಿಳೆ ಎಷ್ಟರಮಟ್ಟಿಗೆ ಕುಟುಂಬ ಯೋಜನೆ ಸಾಧನಗಳ ಅಳವಡಿಕೆ ಮಾಡಲು ಸಾಧ್ಯ? ಇದಕ್ಕೆ ತಜ್ಞರ ಉತ್ತರ. ಎಚ್‌ಐವಿ/ ಏಡ್ಸ್ ಹೊಂದಿರುವ ಮಹಿಳೆಯರು ಸಾಮಾನ್ಯವಾಗಿ ಎಲ್ಲ ರೀತಿಯ ಕುಟುಂಬ ಯೋಜನಾ ವಿಧಾನಗಳನ್ನೂ ಅಳವಡಿಸಿಕೊಳ್ಳಬಹುದು. ಚಿಕಿತ್ಸೆಗಾಗಿ ಆಂಟಿ ರಿಟ್ರೋವೈರಲ್ ಔಷಧಗಳ ಸೇವನೆ ಮಾಡುತ್ತಿರುವವರು ಸಹ ಕುಟುಂಬ ಯೋಜನಾ ವಿಧಾನಗಳ ಮೊರೆ ಹೋಗುವುದು ಒಳಿತು. ಏಕೆಂದರೆ, ಈ ಔಷಧ ಸೇವಿಸುತ್ತಿದ್ದಾಗ್ಯೂ ಅವರು ಸೋಂಕು ತಗುಲಿಸಬಲ್ಲರು.

ಪುರುಷರಿಗೆ ಕಾಂಡೋಮ್ ಬಳಕೆಯ ಆವಿಷ್ಕಾರ ಒಂದು ವರದಾನವೇ ಸರಿ. ಕುಟುಂಬ ಯೋಜನೆಯ ಅಂಕಿ-ಅಂಶಗಳ ಪ್ರಕಾರ, ೧೦೦ ಜನರಲ್ಲಿ ೮೫ ಜನರು ಕಾಂಡೋಮ್ ಬಳಸಿದ ಪರಿಣಾಮ ಅವರ ಸಂಗಾತಿಗಳು ಗರ್ಭ ಧರಿಸಲಿಲ್ಲ. ಇನ್ನು ಎಚ್‌ಐವಿ ಸೋಂಕು ಪೀಡಿತ ದಂಪತಿಗಳು ತಮಗೆ ಮಕ್ಕಳಾಗುವುದು ಬೇಡ ಎಂಬ ದೃಢ ನಿರ್ಧಾರವನ್ನೇನಾದರೂ ತೆಗೆದುಕೊಳ್ಳುವುದಾದರೆ, ಸಂತಾನಹರಣ ಚಿಕಿತ್ಸೆ ವ್ಯಾಸೆಕ್ಟಮಿ ಇವುಗಳನ್ನು ಮಾಡಿಸಿಕೊಳ್ಳಬಹುದು. ಆದರೆ, ಏಡ್ಸ್ ಸಂಬಂಧಿತ ಕಾಯಿಲೆಗಳಿದ್ದವರಲ್ಲಿ ಇದು ಸ್ವಲ್ಪ ಸಂಕೀರ್ಣವಾದುದು. ಇಂಟ್ರಾಯುಟೆರಿನ್ ಡಿವೈಸ್ (MD) ಎಂಬ ಸಾಧನವನ್ನು ಮಹಿಳೆಯರಿಗೆ ಅಳವಡಿಸುವುದುಂಟು.

ಎಬಿಸಿಡಿ ಆಯ್ಕೆಗಳು : ಕುಟುಂಬ ಯೋಜನೆಯ ಜತೆಗೆ ಎಚ್‌ಐವಿ ಏಡ್ಸ್, ತಡೆಯುವಲ್ಲಿ ಸರಕಾರ ಸೂಚಿಸಿದ ನಾಲ್ಕು ಪರಿಹಾರೋಪಾಯಗಳಿವೆ ಎ=ಆಬ್‌ಸ್ಟಿನೆನ್ಸ್= ಲೈಂಗಿಕ ಕ್ರಿಯೆಯ ವರ್ಜನೆ, ಬಿ=ಬೀ ಫೈಥ್‌ಪುಲ್ (ಅವರವರ ಲೈಂಗಿಕ ಸಂಗಾತಿಗೆ ನಂಬಿಕಸ್ಥರಾಗಿರುವುದು); ಸಿ= ಕನ್‌ಸಿಸ್ಟೆಂಟ್ ಕಾಂಡೋಮ್ ಯೂಸ್ ಮತ್ತು ಡಿ= ಡಿಲೇಯಿಂಗ್ ಸೆಕ್ಷುಯಲ್ ಡಿಬಟ್ (ಲೈಂಗಿಕ ಕ್ರಿಯೆ ಆರಂಭವನ್ನು ವಿಳಂಬ ಮಾಡುವುದು). ಇದರ ಬಗ್ಗೆ ಅನೇಕ ಭಿನ್ನಾಭಿಪ್ರಾಯಗಳಿವೆ. ಎ (ಲೈಂಗಿಕ ವರ್ಜನೆ) ಸಾಧ್ಯವೇ ಇಲ್ಲ. ಇದು ಪರಿಹಾರೋಪಾಯ ಅಲ್ಲ. ಕಾಂಡೋಮ್ ಬಳಕೆಯಲ್ಲಿ ಹೆಚ್ಚು ಪ್ರಯೋಜನಕಾರಿ ಎಂಬ ಅಭಿಪ್ರಾಯವಿದೆ. ಬಿ (ನಂಬಿಕಸ್ಥರಾಗಿರುವುದು) ವಯಸ್ಕರಿಗೆ ಅನ್ವಯಿಸುತ್ತದೆ ಎಂಬುದು ಕೆಲವರ ವಾದ. ಎಲ್ಲ ವಯಸ್ಕರೂ ಇದನ್ನು ಪಾಲನೆ ಮಾಡುವರೇ ಎಂಬ ಪ್ರಶ್ನೆ ಏಳುವುದು ಸಹಜ. ಸಿ (ಕಾಂಡೋಮ್ ಬಳಕೆ)ಯನ್ನು ಪ್ರೋತ್ಸಾಹಿಸುವುದರಿಂದ ಯುವಪೀಳಿಗೆಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಲು ಪ್ರೋತ್ಸಾಹಿಸಿದಂತಾಗುತ್ತದೆ ಎನ್ನುವ ಆರೋಪವೂ ಇದೆ. ಸಾಂಪ್ರದಾಯಿಕ, ಧಾರ್ಮಿಕ ಗುಂಪುಗಳ ಪ್ರಕಾರ ಎ ಮತ್ತು ಬಿ ಸರಿಯಾದ ಮಾರ್ಗಗಳು. ಇನ್ನು ತುಂಬಾ ಆದರ್ಶಪ್ರಾಯವಾದ (ವಿಳಂಬ ಮಾರ್ಗ) ಇದರಿಂದಲೂ ಯುವಜನತೆಗೆ ಅಪಾಯವಂತೆ.

ತಾಯಿಯಿಂದ ಮಗುವಿಗೆ ಹರಡುವ ಎಚ್‌ಐವಿಯನ್ನು ತಡೆಗಟ್ಟಲು ಚಿಕಿತ್ಸೆ ಪಡೆಯದಿದ್ದರೆ, ಸೋಂಕಿತ ಮಹಿಳೆಯಿಂದ ಆಕೆಯ ಶಿಶುವಿಗೆ ಶೇ. ೧೫ ರಿಂದ ೩೦ ರಷ್ಟು ಸೋಂಕು ಹರಡುವ ಸಾಧ್ಯತೆ ಇದೆ. ಮಗುವಿಗೆ ಎದೆಹಾಲು ಕುಡಿಸುವುದರಿಂದ ಇನ್ನೂ ಶೇ.

೧೦ ರಿಂದ ೨೦ ಮಕ್ಕಳಲ್ಲಿ ೩ ರಿಂದ ೬ ಮಕ್ಕಳಿಗೆ ಸೋಂಕು ರವಾನೆಯಾಗುತ್ತದೆ. ಎದೆ ಹಾಲು ಕುಡಿಸಿದರೆ ಪ್ರತಿ ೨೦ ಮಕ್ಕಳಲ್ಲಿ ೩ ರಿಂದ ೧೦ ಮಕ್ಕಳು ಸೋಂಕಿಗೆ ಒಳಗಾಗುತ್ತಾರೆ. ಗರ್ಭಧಾರಣೆಯೇ ಬೇಡ ಎಂದು ಎಚ್ಚರಿಕೆ ವಹಿಸುವುದಾದರೆ, ಸೋಂಕಿನ ಮಗು, ಮುಂದೆ ಅದನ್ನು ಬೆಳೆಸಿ, ಅದಕ್ಕೆ ಚಿಕಿತ್ಸೆ ಮುಂತಾದ ರಗಳೆ ಇಲ್ಲ. ಜನಸಂಖ್ಯೆ ಇಳಿಮುಖಗೊಳ್ಳಲು ನಿಮ್ಮ ಸಹಕಾರ ಕೊಟ್ಟಂತೆಯೂ ಆಯಿತು. ಈ ಬಾರಿಯ ರೆಡ್‌ ರಿಬ್ಬನ್‌ ಎಕ್ಸ್‌ಪ್ರೆಸ್‌ ರೈಲು ಯಾತ್ರೆ ಯಶಸ್ವಿಗೊಳಿಸಲು ಕರ್ನಾಟಕ ಏಡ್ಸ್‌ ನಿಯಂತ್ರಣ ಸಂಸ್ಥೆ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಎಲ್ಲ ರೀತಿಯ ಸಿದ್ದತೆ ಕೈಗೊಂಡಿದೆ. ರೆಡ್‌ ರಿಬ್ಬನ್‌ ರೈಲು ಸಂಚರಿಸುವ ಒಟ್ಟು 8 ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗಿದೆ.

ಎಚ್‌ಐವಿ ಅಥವಾ ಏಡ್ಸ್‌ನಿಂದ ಜೀವನ ನಡೆಸುತ್ತಿರುವ ಜನರ ಬಗೆಗಿನ ತಾರತಮ್ಯ ಕಡಿಮೆಗೊಳಿಸಲು ಮತ್ತು ಸೋಂಕು ತಡೆಗಟ್ಟುವ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ರೆಡ್‌ ರಿಬ್ಬನ್‌ ಎಕ್ಸ್‌ಪ್ರೆಸ್‌ ಸಂಚಾರದ ಉದ್ದೇಶ.

Ravi Kolar

Advertisements

ನಿಮ್ಮ ಅನಿಸಿಕೆ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: