ಊಳಿಗಮಾನ್ಯ ಪದ್ಧತಿ

ಕಾರ್ಲ್ ಮಾರ್ಕ್ಸ್ ಸಹ ಈ ಪದವನ್ನು ರಾಜಕೀಯ ವಿಶ್ಲೇಷಣೆಗೆ ಬಳಸಿದ್ದಾರೆ. 19ನೇ ಶತಮಾನದಲ್ಲಿ ಕಾರ್ಲ್ ಮಾರ್ಕ್ಸ್, ಊಳಿಗಮಾನ ಪದ್ದತಿಯನ್ನು ಬಂಡವಾಳ ಶಾಹಿಯ ಅನಿವಾರ್ಯ ಉದಯದ ಮುಂಚೆ ಉಂಟಾದ ಆರ್ಥಿಕ ಸ್ಥಿತಿಗತಿ ಎಂದು ವಿವರಿಸಿದ್ದಾರೆ. ಮಾರ್ಕ್ಸ್‌ನ ಪ್ರಕಾರ, ಊಳಿಗಮಾನ ಪದ್ದತಿಯು ತಮ್ಮ ವ್ಯವಸಾಯ ಯೋಗ್ಯ ಜಮೀನಿನ ನಿಯಂತ್ರದ ಮೇಲಿರುವ ಆಡಳಿತ ವರ್ಗದ ( ಶ್ರೀಮಂತಿಕೆ) ಸಾಮರ್ಥ್ಯವಾಗಿದ್ದು, ಈ ಜಮೀನುಗಳಿಗಾಗಿ ದುಡಿದ ರೈತರನ್ನು ಜೀತ ಪದ್ದತಿಯ ಮೂಲಕ ಶೋಷಣೆಯ ಆಧಾರದ ಮೇಲೆ ಒಂದು ಸಮಾಜದ ವರ್ಗ ವನ್ನಾಗಿ ಮಾಡಲಾಯಿತು.

ಊಳಿಗಮಾನ ಪದ್ಧತಿ ಅನ್ನುವುದು ಊಳಿಗಮಾನದ ಶ್ರೀಮಂತರ(ಒಡೆಯ ಅಥವಾ ಧಣಿ), ಮತ್ತು ಹಿಡುವಳಿದಾರರ (ರೈತ) ನಡುವಿನ ಆಳ್ವಿಕೆಯ ಮತ್ತು ಮಿಲಿಟರಿ ಪದ್ಧತಿ. ಊಳಿಗಮಾನ ಪದ್ಧತಿಯು ಒಂಬತ್ತನೆಯ ಶತಮಾನದಿಂದ ಹದಿನೈದನೆಯ ಶತಮಾನದವರೆಗೂ ಪ್ರವರ್ಧಮಾನದಲ್ಲಿತ್ತು. ಇದರ ಅತ್ಯಂತ ಉನ್ನತ ಅರ್ಥದಲ್ಲಿ, ಊಳಿಗಮಾನ ಪದ್ಧತಿಯನ್ನು ಮಧ್ಯಯುಗದ ಯುರೋಪಿನ ಆಳ್ವಿಕೆಯ ಪದ್ದತಿಗೆ ಸೂಚಿಸಲಾಗಿದ್ದು ಪರಸ್ಪರ ಕಾನೂನು ಬದ್ದ ಮತ್ತು ಸೈನಿಕ ಉದಾತ್ತಗುಣದ ನಡುವಿನ ಮಿಲಿಟರಿ ಜವಾಬ್ದಾರಿಗಳಿಂದ ರಚಿಸಲ್ಪಟ್ಟು, ಮೂರು ಪ್ರಮುಖ ಪರಿಕಲ್ಪನೆಗಳಾದ ಒಡೆಯರ, ಹಿಡುವಳಿದಾರರ, ಮತ್ತು ಉಂಬಳಿಗಳ ಸುತ್ತ ಸುತ್ತುತ್ತದೆ. ಲ್ಯಾಟಿನ್ ಪದ ಪ್ಯುಡಮ್‌ (ಫೀಪ್) ನಿಂದ ಪಡೆಯಲಾಗಿದ್ದರೂ, ನಂತರ ಉಪಯೋಗದಲ್ಲಿದ್ದ ಶಬ್ದ ಪ್ಯುಡಲಿಸಂ ಮತ್ತು ಪದ್ಧತಿಗಳನ್ನು ಮಧ್ಯಯುಗದ ಅವಧಿಯಲ್ಲಿ ಜೀವಿಸುತ್ತಿದ್ದ ಜನರಿಂದ ಇದನ್ನು ಔಪಚಾರಿಕ ರಾಜಕೀಯ ಪದ್ಧತಿ ಎಂದು ಭಾವಿಸಲಾಗಿಲ್ಲ.

ಊಳಿಗಮಾನ ಪದ್ದತಿಯನ್ನು ವಿವರಿಸುವ ಮೂರು ಮೂಲಭೂತ ಅಂಶಗಳೆದರೆ: ಮಾಲಿಕರು, ಹಿಡುವಳಿದಾರರು ಮತ್ತು ಉಂಬಳಗಳು; ಊಳಿಗಮಾನದ ಗುಂಪು ಈ ಮೂರು ಅಂಶಗಳು ಹೇಗೆ ಒಂದಕ್ಕೊಂದು ಹೊಂದಿಕೊಳ್ಳುತ್ತವೆ ಎಂಬುದನ್ನು ವಿವರಿಸುತ್ತವೆ. ಒಬ್ಬ ಮಾಲಿಕನು ಭೂಮಿಯನ್ನು (ಒಂದು ಉಂಬಳ) ತನ್ನ ಹಿಡುವಳಿದಾರನಿಗೆ ಕೊಡುತ್ತಿದ್ದನು. ಉಂಬಳಕ್ಕೆ ಬದಲಾಗಿ ಹಿಡುವಳಿದಾರನು ಮಾಲಿಕನಿಗೆ ಸೈನಿಕ ಸೇವೆಯನ್ನು ಒದಗಿಸುತ್ತಿದ್ದನು. ಮಾಲಿಕ, ಹಿಡುವಳಿದಾರ ಮತ್ತು ಉಂಬಳಗಳ ನಡುವಿನ ಸಂಬಂಧವು ಊಳಿಗಮಾನ ಪದ್ದತಿಯ ಪ್ರಮುಖ ಆಧಾರವಾಗಿದೆ. ಮಾಲಿಕನು ಒಬ್ಬನಿಗೆ ಭೂಮಿ (ಉಂಬಳ) ವನ್ನು ಕೊಡುವ ಮೊದಲು, ಅವನು ಆ ವ್ಯಕ್ತಿಯನ್ನು ಹಿಡುವಳಿದಾರನನ್ನಾಗಿ ಮಾಡಬೇಕಾಗುತ್ತಿತ್ತು. ಇದನ್ನು ಊಳಿಗದವನ ಪ್ರಮಾಣ ಮತ್ತು ಸತ್ಕಾರಗಳನ್ನೊಳಗೊಂಡ ಎರಡು ಕ್ರಿಯೆಗಳಿರುವ ಪ್ರಶಂಸಾ ಆಚಾರ ಎಂಬ ಔಪಚಾರಿಕ ಮತ್ತು ಸಾಂಕೇತಿಕ ಆಚಾರವಿಧಿಯ ಮೂಲಕ ನಡೆಸಲಾಗುತ್ತದೆ. ಸನ್ಮಾನದ ಸಂದರ್ಭದಲ್ಲಿ, ಮಾಲಿಕ ಮತ್ತು ಹಿಡುವಳಿದಾರ ಒಂದು ಒಪ್ಪಂದಕ್ಕೆ ಬಂದು, ಮಾಲಿಕನ ಆದೇಶದ ಮೇರೆಗೆ ಹಿಡುವಳಿದಾರನು ತಾನು ಹೊರಾಡಲು ಸಿದ್ದ ಎಂಬ ಮಾತು ಕೊಡುತ್ತಾನೆ.

ಪಿಯಲ್ಟಿ ( ಊಳಿಗದವ) ಎಂಬ ಪದವುಪಿಡೆಲಿಟಸ್ (ಸ್ವಾಮಿನಿಷ್ಟೆ) ಎಂಬ ಲ್ಯಾಟಿನ್ ಪದದಿಂದ ಬಂದಿದ್ದು, ಹಿಡುವಳಿದಾರನು ತನ್ನ ಮಾಲಿಕನಿಗೆ ತೋರಿಸಬೇಕಾದ ಸ್ವಾಮಿನಿಷ್ಟೆ ಎಂಬ ಅರ್ಥವನ್ನು ಸೂಚಿಸುತ್ತದೆ. “ಊಳಿಗದವ” ಎಂಬ ಪದವು ಹಿಡುವಳಿದಾರನೊಬ್ಬನು ತನ್ನ ಸನ್ಮಾನದ ಸಮಯದಲ್ಲಿ ಸ್ಪಷ್ಟವಾಗಿ ಮಾಡಿದ ವಚನ ಬದ್ದತೆಗಳ ಒಂದು ಪ್ರಮಾಣವನ್ನೂ ಸಹ ಸೂಚಿಸುತ್ತದೆ. ಅಂತಹ ಒಂದು ಪ್ರಮಾಣದ ನಂತರ ಸನ್ಮಾನ ನಡೆಯುತ್ತದೆ. ಅಂತಹ ಒಂದು ಪ್ರಶಂಸನಾ ಸಮಾರಂಭ ಮುಗಿದ ನಂತರ, ಮಾಲಿಕ ಮತ್ತು ಹಿಡುವಳಿದಾರರು ಪರಸ್ಪರ ಕರಾರಿನಂತೆ ಒಂದು ಊಳಿಗ ಸಂಬಂಧಕ್ಕೆ ಸಮ್ಮತಿ ಸೂಚಿಸುತ್ತಾರೆ. ಹಿಡುವಳಿದಾರನ ಪ್ರಮುಖ ಕರಾರು ಎಂದರೆ ತನ್ನ ಮಾಲಿಕನಿಗೆ ಸಹಾಯ ಮಾಡುವುದು ಅಥವಾ ಸೈನಿಕ ಸೇವೆ ಒದಗಿಸುವುದು. ಉಂಬಳದ ಕಂದಾಯದಿಂದ ಏನೆಲ್ಲಾ ಸಲಕರಣೆಗಳನ್ನು ಹಿಡುವಳಿದಾರನು ಪಡೆಯುತ್ತಾನೋ, ಮಾಲಿಕನ ಪರವಾಗಿ ಸೈನಿಕ ಸೇವೆಯ ಕರೆಗಳ ಸಮಯದಲ್ಲಿ ಅವುಗಳಿಗೆ ಹಿಡುವಳಿದಾರನೇ ಜವಾಬ್ದಾರನಾಗಿರುತ್ತಾನೆ.

ಈ ಸೈನಿಕ ಸೇವೆಯ ಸಹಾಯದ ಕಾರಣಕ್ಕಾಗಿಯೇ ಮಾಲಿಕನು ಊಳಿಗ ಸಂಬಂಧಕ್ಕೆ ಒಪ್ಪಿರುತ್ತಾನೆ. ಇದರಜೊತೆಗೆ, ಹಿಡುವಳಿದಾರನು ಕೆಲವು ಸಮಯದಲ್ಲಿ ಇತರ ಕರಾರುಗಳನ್ನೂ ನಡೆಸಿಕೊಡಬೇಕಾಗುತ್ತದೆ. ಅಂತಹ ಕರಾರುಗಳಲ್ಲಿ ಒಂದು ಎಂದರೆ ಮಾಲಿಕನು ಯುದ್ಧಕ್ಕೆ ಹೋಗಬೇಕೆ ಅಥವಾ ಬೇಡವೆ ಎಂಬ ನಿರ್ಧಾರವನ್ನು ತೆಗೆದುಕೊಳ್ಳುವಾಗ, ತನ್ನ ಎಲ್ಲಾ ಹಿಡುವಳಿದಾರರನ್ನು ಒಂದು ಸಭೆ ಸೇರುವಂತೆ ಆಜ್ಞಾಪಿಸಿ ಸೂಕ್ತ ಸಲಹೆ ಪಡೆಯುತ್ತಾನೆ. ಹಿಡುವಳಿದಾರನು ತನ್ನ ಬೆಳೆಯ ಸ್ವಲ್ಪ ಭಾಗವನ್ನು ಮಾಲಿಕನಿಗೆ ಕೊಡಬೇಕಾಗಿರುತ್ತದೆ. ಕೆಲವು ಸಂದರ್ಭಗಳಲ್ಲಿ ಹಿಡುವಳಿದಾರನು ತನ್ನ ಗೋಧಿಯನ್ನು ತಾನೇ ಗಿರಣಿಗಳಲ್ಲಿ ಹಿಟ್ಟು ಮಾಡಿಸಿ ಕೊಳ್ಳಬೇಕಾಗುತ್ತಿತ್ತು. ಆತನ ಮಾಲಿಕನು ಒಲೆಗಳ ಒಡೆತನವನ್ನು ಹೊಂದಿದ್ದು ಅದಕ್ಕೆ ಕಂದಾಯ ನೀಡಬೇಕಿತ್ತು.ಭೂ-ಸ್ವಾಧೀನ ಸಂಬಂಧಗಳು ಉಂಬಳದ ಸುತ್ತ ಸುತ್ತುತ್ತಿದ್ದವು.

ಕೊಡುವವನ ಸಾಮರ್ಥ್ಯಕ್ಕೆ ಅನುಗುಣವಾಗಿ, ಕೊಡುವಿಕೆಗಳು ಒಂದು ಚಿಕ್ಕ ಒಕ್ಕಲ ಜಮೀನಿನಿಂದ ಹಿಡಿದು ಬಹುದೊಡ್ಡ ಭೂಮಿಯವರೆಗೂ ಇರುತ್ತಿತ್ತು. ಉಂಬಳದ ಗಾತ್ರಗಳನ್ನು ಈಗಿನ ಆಧುನಿಕ ಭೂ ವಾಯಿದೆಗಳಿಗಿಂತ ಭಿನ್ನವಾದ ಅನಿಯಮಿತ ವಾಯಿದೆಗಳ ಮೂಲಕ ನಿರ್ಧರಿಸಲಾಗುತ್ತಿತ್ತು (ನೋಡಿರಿಮಧ್ಯಕಾಲೀನ ಭೂ ವಾಯಿದೆಗಳು). ಒಡೆಯ-ಹಿಡುವಳಿದಾರ ಸಂಬಂಧವು ಶ್ರೀಸಾಮಾನ್ಯತೆಯ ಸದಸ್ಯರಿಗೆ ಮಾತ್ರ ಸೀಮಿತವಾಗಿಲ್ಲ; ಉದಾಹರಣೆಗೆ, ಬಿಷಪರು ಮತ್ತು ಅಬೋಟರು, ಸಹ ಒಡೆಯರಾಗಿ ವರ್ತಿಸುವ ಸಾಮರ್ಥ್ಯವನ್ನು ಹೊಂದಿದ್ದರು. ಆದ್ದರಿಂದ ಮಾಲಿಕತ್ವ ಹಾಗೂ ಹಿಡುವಳಿಕೆಯಲ್ಲಿ ವಿವಿಧ ಹಂತಗಳು ಇದ್ದವು. ಅರಸನು ಮಾಲಿಕನಾಗಿದ್ದು ಉಂಬಳಗಳನ್ನು ಶ್ರೀಮಂತರಿಗೆ ಎರವಲಾಗಿ ಕೊಡುತ್ತಿದ್ದನು, ಅವರೇ ಹಿಡುವಳಿದಾರರಾಗಿದ್ದರು. ಶ್ರೀಮಂತರು ಉಪಊಳಿಗಮಾನದ ಮೂಲಕ ತಮ್ಮ ಸ್ವಂತ ಹಿಡುವಳಿಗಳಿಗೆ ಮಾಲಿಕರಾಗಿರುತ್ತಿದ್ದರು.

ಸಾಹುಕಾರರು ಹೊಲದಲ್ಲಿ ಕೆಲಸಮಾಡುವ ಒಕ್ಕಲಿಗರಿಗೆ ಮಾಲಿಕರಾಗಿದ್ದರು. ಅಂತಿಮವಾಗಿ ಚಕ್ರವರ್ತಿಯು ಒಬ್ಬ ಮಾಲಿಕನಾಗಿದ್ದು ಹಿಡುವಳಿದಾರರಾದ ಅರಸರಿಗೆ ಭೂಮಿಯನ್ನು ಎರವಲಾಗಿ ಕೊಡುತ್ತಿದ್ದನು. ಸಾಂಪ್ರದಾಯಿಕವಾಗಿ ಇದು ಒಂದು ಸಾರ್ವಭೌಮಿಕ ಒಗ್ಗೂಡಿವಿಕೆಯ ‘ಸಾರ್ವತ್ರಿಕ ಚಕ್ರಾಧಿಪತ್ಯ’ಕ್ಕೆ ಆಧಾರವಾಯಿತು ಮತ್ತು ಜಗತ್ತಿನ ಒಂದು ಕ್ರಮವಾಗಿ ಪರಿಣಮಿಸಿತು. ಹಿಡುವಳಿಗೆದಾರರಿಗೆ ಬರೀ ಜಮೀನನ್ನು ಕೊಡುವುದಷ್ಟೇ ಅಲ್ಲದೆ ಕೆಲವು ಸುಂಕ ಅಥವಾ ತೆರಿಗೆಗಳನ್ನು ಸಂಗ್ರಹಿಸುವ ಮತ್ತು ತಮ್ಮ ಜಮೀನುಗಳ ಮೇಲೆ ಖಾಸಗಿ ಕಾನೂನು ವ್ಯಾಪ್ತಿ ಅಧಿಕಾರ ಗಳನ್ನು ಪಡೆಯುವ ಹಕ್ಕುಗಳನ್ನು ನೀಡಲಾಗುತ್ತಿತ್ತು.19ನೇ ಶತಮಾನದ ಕೊನೆಯ ಹಾಗೂ 20ನೇ ಶತಮಾನದ ಆರಂಭಗಳಲ್ಲಿ , ಜಾನ್ ಹೊರೇಸ್ ರೌಂಡ್ ಮತ್ತು ಫ್ರೆಡ್ರಿಕ್ ವಿಲಿಯಂ ಮೈಟ್ ಲ್ಯಾಂಡ್, ಎಂಬ ಇಬ್ಬರು ಬ್ರಿಟನ್ನಿನ ಮಧ್ಯಕಾಲಿಕ ಇತಿಹಾಸಕರು, 1066 ರಲ್ಲಿ ನಾರ್ಮನ್ ದಾಳಿಯ ಮುನ್ನ ಇದ್ದ ಬ್ರಿಟೀಷ್ ಸಮಾಜದ ಬಗ್ಗೆ ವಿಭಿನ್ನ ತೀರ್ಮಾನಗಳನ್ನು ಕೊಟ್ಟರು. ರೌಂಡ್ ಪ್ರಕಾರ ನಾರ್ಮನ್‌ಗಳು ಊಳಿಗಮಾನ ಪದ್ದತಿಯನ್ನು ತಂದರು ಎಂದು ವಾದಿಸಿದರೆ, ಮೈಟ್ ಲ್ಯಾಂಡ್ ಇದರ ಮೂಲಭೂತಗಳು ಆಗಲೇ ಬ್ರಿಟನ್‌ನಲ್ಲಿ ಇದ್ದವು ಎಂದು ಅಭಿಪ್ರಾಯಪಟ್ಟಿದ್ದರು. ಈ ಚರ್ಚೆ ಇಂದಿಗೂ ಮುಂದುವರೆದಿದೆ. 20ನೇ ಶತಮಾನದಲ್ಲಿ, ಚರಿತ್ರಕಾರರಾದ ಫ್ರಾಂಕೋಯಿಸ್-ಲೂಯಿಸ್ ಗ್ಯಾನ್ಸ್‌ಹೋಫ್ ರವರು ಊಳಿಗಮಾನ ಪದ್ದತಿಯ ವಿಷಯದ ಬಗ್ಗೆ ತುಂಬಾ ಪ್ರಭಾವಿತರಾದರು. ಗ್ಯಾನ್ಸ್‌ಹೋಫ್ ಊಳಿಗಮಾನ ಪದ್ದತಿಯನ್ನು ಸಂಕುಚಿತವಾದ ಕಾನೂನು ಮತ್ತು ಸೈನಿಕ ದೃಷ್ಟಿಕೋನದಿಂದ ವ್ಯಾಖ್ಯಾನಿಸುವುದರೊಂದಿಗೆ ಊಳಿಗಮಾನ ಸಂಬಂಧಗಳು ಕೇವಲ ಮಧ್ಯಕಾಲೀನ ಕುಲೀನತೆಯಲ್ಲಿ ಮಾತ್ರ ಅಸ್ತಿತ್ವದಲ್ಲಿದ್ದವು. ಗ್ಯಾನ್ಸ್‌ಹೋಫ್ ಈ ಪರಿಕಲ್ಪನೆಯನ್ನು ಊಳಿಗಮಾನ (1944) ಸ್ಪಷ್ಟೀಕರಿಸಿದರು.

Ravi Kolar

Advertisements

ನಿಮ್ಮ ಅನಿಸಿಕೆ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: