ತಂಬಾಕು ಸೇವನೆಯ ದುಷ್ಪರಿಣಾಮಗಳು

ತಂಬಾಕು ಸೇವನೆಯ ದುಷ್ಪರಿಣಾಮಗಳು…….ಕೆ ರವಿಕುಮಾರ್ ಕೋಲಾರ್

*ತಂಬಾಕು ದೇಹದ ವಿವಿಧ ಭಾಗಗಳಾದ ಬಾಯಿ, ಗಂಟಲು, ಶ್ವಾಸ ಕೋಶ,. ಜಠರ, ಮೂತ್ರ ಪಿಂಡ, ಬ್ಲಾಡರ್, ಕ್ಯಾನ್ಸರಿಗೆ ಕಾರಣವಾಗುವುದು

ಬೆಂಬಲಿಸುವ ಸತ್ಯಾಂಶಗಳು

ಭಾರತದಲ್ಲಿ ತಂಬಾಕಿನಿಂದಾದ ಬಾಯಿ ಕ್ಯಾನ್ಸರನ ಪ್ರಕರಣಗಳು ಜಗತ್ತಿನಲ್ಲಿಯೇ ಅತಿ ಹೆಚ್ಚು, ಭಾರತದಲ್ಲಿ ಪುರುಷರ ಮತ್ತು ಮಹಿಳೆಯರ ತಂಬಾಕಿನಿಂದ ಬರುವ ಕ್ಯಾನ್ಸರಿನ ಪ್ರಮಾಣ ಕ್ರಮವಾಗಿ 56.4% ಮತ್ತು 44.9% ಆಗಿದೆ, ಧೂಮಪಾನವು ಶ್ವಾಸಕೋಶದ ಕ್ಯಾನ್ಸರ್‌ ಮತ್ತು ಇತರ ರೋಗಗಳಿಗೆ 90% ನಷ್ಟು ಕಾರಣವಾಗಿದೆ

* ತಂಬಾಕು ಹೃದಯ ಮತ್ತು ರಕ್ತನಾಳಗಳ ರೋಗಕ್ಕೆ ದಾರಿ ಮಾಡುವುದು. ಹೃದಯಾಘಾತ, ಎದೆ ನೋವು ಹಠಾತ್ ಹೃದಯಘಾತದಿಂದ ಸಾವು, ಲಕ್ವ , ಹೊರ ರಕ್ತನಾಳಗಳ ವ್ಯಾಧಿ, ಕಾಲಿನ ಗ್ಯಾಂಗ್ರಿನ್ .

ಬೆಂಬಲಿಸುವ ಸತ್ಯಾಂಶಗಳು

 • ಭಾರತದಲ್ಲಿನ ದೀರ್ಘಕಾಲೀನ ಶ್ವಾಸಕೋಶ ಕಾಯಿಲೆಗಳಿಗೆ ಶೇ. ೮೨ರಷ್ಟು ತಂಬಾಕು, ಧೂಮಪಾನ ಕಾರಣವಾಗುತ್ತವೆ.
 • ಶ್ವಾಸಕೋಶದ ಕ್ಷಯ ಬರಲು ತಂಬಾಕು ಪರೋಕ್ಷವಾಗಿ ಕಾರಣವಾಗುತ್ತದೆ. ಧೂಮಪಾನ ಮಾಡದವರಿಗಿಂತ ಸತತವಾಗಿ ಧೂಮಪಾನ ಮಾಡುವವರಲ್ಲಿ ಕ್ಷಯ ಉಂಟಾಗುವ ಸಾಧ್ಯತೆ ಮೂರುಪಟ್ಟು ಹೆಚ್ಚಿರುತ್ತದೆ. ಸಿಗರೇಟು, ಬೀಡಿ. ಸೇದುವಿಕೆ ಹೆಚ್ಚಾದಷ್ಟೂ ಕ್ಷಯದ ಸಾಧ್ಯತೆ ಹೆಚ್ಚುತ್ತದೆ.
 • ಧೂಮಪಾನ/ ತಂಬಾಕು ಸೇವನೆಯಿಂದ ಹಠಾತ್ತಾಗಿ ರಕ್ತದೊತ್ತಡ ಹೆಚ್ಚುತ್ತದೆ ಮತ್ತು ಹೃದಯಕ್ಕೆ ರಕ್ತದ ಹರಿವನ್ನು ಕಡಿಮೆ ಮಾಡುತ್ತದೆ.
 • ಅಲ್ಲದೆ ಪಾದಗಳಿಗೆ ರಕ್ತದ ಹರಿವನ್ನು ಕಡಿಮೆ ಮಾಡುತ್ತದೆ ಮತ್ತು ಅದು ಕಾಲುಗಳಲ್ಲಿ ಗ್ಯಾಂಗ್ರೀನ್‌ಗೆ ಕಾರಣವಾಗಬಹುದು.
 • ದೇಹದ ಎಲ್ಲ ರಕ್ತನಾಳಗಳಲ್ಲಿರುವ ರಕ್ಷಣಾ ಪೊರೆಗೆ ಧಕ್ಕೆ ತರುತ್ತದೆ.
 • ಧೂಮಪಾನದಿಂದ ಮಕ್ಕಳು ಮತ್ತು ಕುಟುಂಬದ ಇತರ ಸದಸ್ಯರಿಗೆ ಆರೋಗ್ಯ ತೊಂದರೆಗಳು ಬರುತ್ತವೆ .(ನೀವು ಬಿಡುವ ಹೊಗೆಯನ್ನು ಉಸಿರಾಡಿದ್ದರಿಂದ). ಧೂಮಪಾನ (ಪ್ರತಿದಿನ ಎರಡು ಪ್ಯಾಕ್‌) ಮಾಡುವ ವ್ಯಕ್ತಿಯೊಂದಿಗೆ ಜೀವಿಸುವ ವ್ಯಕ್ತಿಯೂ ಪರೋಕ್ಷವಾಗಿ (ದಿನಕ್ಕೆ ಮೂರು ಸಿಗರೇಟ್‌) ಧೂಮಪಾನ ಮಾಡಿದಂತಾಗುತ್ತದೆ. ಪರೋಕ್ಷ ಧೂಮಪಾನ ಮಾಡಿದವರ ಮೂತ್ರ ಪರೀಕ್ಷೆ ನಡೆಸಿದಾಗ ಅವರ ಮೂತ್ರದಲ್ಲಿನ ನಿಕೊಟಿನ್‌ ಪ್ರಮಾಣವು ಮೂರು ಸಿಗರೇಟ್‌ ಸೇದಿದವರ ಪ್ರಮಾಣದಷ್ಟಿತ್ತು.
 • ಧೂಮಪಾನ/ ತಂಬಾಕು ಸೇವನೆಯು ಮಧುಮೇಹದ ಸಾಧ್ಯತೆಯನ್ನೂ ಹೆಚ್ಚಿಸುವುದು ಕಂಡುಬಂದಿದೆ.
 • ರಕ್ತದಲ್ಲಿರುವ ಒಳ್ಳೆಯ ಕೊಬ್ಬಿನಂಶವನ್ನು ತಂಬಾಕು ಕಡಿಮೆ ಮಾಡುತ್ತದೆ.
 • ಧೂಮಪಾನ/ ತಂಬಾಕು ಸೇವಿಸುವವರಲ್ಲಿ ಹೃದಯ ಸಂಬಂಧಿ ಕಾಯಿಲೆಗಳು ಮತ್ತು ಪಾರ್ಶ್ವವಾಯು ಹೆಚ್ಚು

* ಪ್ರತಿ 8 ಸೆಕೆಂಡಿಗೆ ತಂಬಾಕಿಗೆ ಸಂಬಂಧಿಸಿದ ‘ಒಂದು’ ಸಾವು ಆಗುವುದು

ಬೆಂಬಲಿಸುವ ಸತ್ಯಾಂಶಗಳು

ಭಾರತದಲ್ಲಿ ಪ್ರತಿವರ್ಷ ೮- ೯ ಲಕ್ಷ ಮಂದಿ ತಂಬಾಂಕಿನ ಬಳಕೆಯಿಂದ ಉಂಟಾದ ಕಾಯಿಲೆಗಳಿಂದ ಸಾವಿಗೀಡಾಗುತ್ತಾರೆ. ಒಬ್ಬ ಹದಿಹರೆಯದ ಹುಡುಗ ತಂಬಾಕನ್ನು ತ್ಯಜಿಸುವುದರಿಂದ ಆತನಿಗೆ ೨೦ ವರ್ಷ ಆಯಸ್ಸು ಹೆಚ್ಚುತ್ತದೆ. ತಂಬಾಕು ಸೇವನೆ ಮಾಡುವವರಲ್ಲಿ ಅರ್ಧದಷ್ಟು ಹದಿಹರೆಯದವರು ಅದರಿಂದ ಸಾವಿಗೀಡಾಗುತ್ತಾರೆ (ಅದರಲ್ಲೂ ಕಾಲು ಭಾಗದಷ್ಟು ಜನರು ಮಧ್ಯವಯಸ್ಸಿನಲ್ಲಿ, ಇನ್ನೊಂದು ಕಾಲು ಭಾಗದಷ್ಟು ಜನರು ಇಳಿವಯಸ್ಸಿನಲ್ಲಿ ಸಾವಿಗೀಡಾಗುತ್ತಾರೆ.) ಬೇರೆ ದೇಶಗಳಿಗೆ ಹೋಲಿಸಿದಾಗ ಪ್ರತಿವರ್ಷವೂ ತಂಬಾಕು ಸೇವನೆಯಿಂದ ಸಾವಿಗೆ ಈಡಾಗುವವರ ಸಂಖ್ಯೆ ಭಾರತದಲ್ಲಿ ತೀವ್ರ ಗತಿಯಲ್ಲಿ ಏರುತ್ತಿದೆ.

*ಧೂಮಪಾನ/ ತಂಬಾಕು ಪುರುಷರ ಮತ್ತು ಮಹಿಳೆಯರ ಮೇಲೆ ಪರಿಣಾಮ ಬೀರುವವು.

ಬೆಂಬಲಿಸುವ ಸತ್ಯಾಂಶಗಳು

ತಂಬಾಕು ಸೇವನೆ ಪುರುಷರಲ್ಲಿ ನಂಪುಸತ್ವಕ್ಕೆ ಕಾರಣವಾಗುತ್ತದೆ. ತಂಬಾಕು ಧೂಮಪಾನ ಸೇವನೆಯಿಂದ ಮಹಿಳೆಯರಲ್ಲಿ ಈಸ್ಟ್ರೊಜನ್‌ ಪ್ರಮಾಣ ಕಡಿಮೆಯಾಗುತ್ತದೆ. ಮೆನೊಪಾಸ್‌ (ಋತುಬಂಧ) ಬೇಗ ಬರುತ್ತದೆ ಧೂಮಪಾನ / ತಂಬಾಕು ಸೇವನೆಯು ದೈಹಿಕ ಚಟುವಟಿಕೆಯ ಸಾಮರ್ಥ್ಯವನ್ನು ಮತ್ತು ದೈಹಿಕ ಸಹನಾ ಶಕ್ತಿಯನ್ನು ಕಡಿಮೆ ಮಾಡುವುದು.

ಮಹಿಳೆಯರು ಧೂಮಪಾನ ಮಾಡಿ ಮತ್ತು ಸಂತಾನ ನಿಯಂತ್ರಣ ಮಾತ್ರೆ ತೆಗೆದುಕೊಂಡರೆ ಲಕ್ವ ಹೊಡೆಯುವ ಗಂಡಾಂತರ ಹೆಚ್ಚು. ಮಗುವನ್ನು ಕಳೆದುಕೊಳ್ಳುವ ಅಥವ ಕಡಿಮೆ ತೂಕದ ಮಗುವಿಗೆ ಜನ್ಮ ನೀಡುವ ಅಥವಾ ಬೆಳವಣಿಗೆಯ ಸಮಸ್ಯೆ ಇರುವ ಅಥವಾ ಹಠಾತ್ತನೆ ಮಗು ಸಾಯುವ ಸಂಭವ ಹೆಚ್ಚು.

ತಂಬಾಕು ತ್ಯಜಿಸುವುದರ ಲಾಭಗಳು

ತಂಬಾಕು ತ್ಯಜಿಸುವುದರ ದೈಹಿಕ ಲಾಭಗಳು:

 • ಕ್ಯಾನ್ಸರ್ ಮತ್ತು ಹೃದಯರೋಗದ ಗಂಡಾಂತರ ಕಡಿಮೆಯಾಗುವುದು.
 • ಹೃದಯದ ಮೆಲಿನ ಒತ್ತಡವು ಕಡಿಮೆಯಾಗುವುದು..
 • ನಿಮ್ಮ ಪ್ರೀತಿ ಪಾತ್ರರು ನಿನ್ನ ಧೂಮಪಾನದಿಂದ ಅಪಾಯಕ್ಕೆ ಒಳಗಾಗುವುದಿಲ್ಲ. 
 • ನಿಮ್ಮ ಧೂಮಪಾನಿಗಳ ಕೆಮ್ಮು ( ನಿಲ್ಲದ ಕೆಮ್ಮು ಮತ್ತು ಕಫ) ಮಾಯವಾಗಬಹುದು.
 • ನಿಮ್ಮ ಹಲ್ಲುಗಳು ಬಿಳಿಯಾಗಿ ಮತ್ತು ಶುಚಿಯಾಗಿ ಇರುವವು

ತಂಬಾಕು ತ್ಯಜಿಸುವುದರ ಸಾಮಾಜಿಕ ಲಾಭಗಳು:

 • ನೀವು ಸಿಗರೇಟನ್ನು ನಿಯಂತ್ರಿಸುವಿರಿ. ಸಿಗರೇಟು ನಿಮ್ಮ ಮೇಲಿನ ನಿಯಂತ್ರಣ ಕಳೆದು ಕೊಳ್ಳುವುದು
 • ನಿಮ್ಮ ಸ್ವಂತಿಕೆ ಮತ್ತು ಆತ್ಮ ವಿಶ್ವಾಸ ಹೆಚ್ಚುವುದು 
 • ನಿಮ್ಮ ಮಕ್ಕಳಿಗೆ ಈಗಲೂ ಮತ್ತು ಮುಂದೆಯೂ ಆರೋಗ್ಯವಂತ ತಂದೆಯಾಗುವಿರಿ
 • ನಿಮಗೆ ಬೇರೆ ವಿಷಯಗಳಿಗೆ ಖರ್ಚು ಮಾಡಲು ಹೆಚ್ಚು ಹಣ ಉಳಿಯುತ್ತದೆ

ಬಿಡುವುದು ಯಾವಾಗಲೂ ತಡವಲ್ಲ

ಮಧ್ಯವಯಸ್ಕನಾದಾಗ ಧೂಮಪಾನ/ತಂಬಾಕು ಕ್ಯಾನ್ಸರ್ ಮತ್ತು ಇತರೆ ಗಂಭೀರ ರೋಗ ಬರುವುದು ತರುವಾಯ ಅದರಿಂದ ಸಾವು ಬರುವುದು, ಚಿಕ್ಕವಯಸ್ಸಿನಲ್ಲಿಯೇ ಬಿಟ್ಟರೆ ಇನ್ನೂ ಅಧಿಕ ಲಾಭವಾಗುವುದು.

ಸಿಗರೇಟು, ಪಾನು ಮತ್ತು ಜರದಾ ಸುಲಭವಾಗಿ ದೊರೆಯುವಂತೆ ಇರಬಾರದು. Don’t let cigarettes, paan and jarda be easily available. ಸಿಗರೇಟು, ಪಾನು ಮತ್ತು ಜರದಾ ಗಳನ್ನು ಸುಲಭವಾಗಿ ಸಿಗದ ಜಾಗದಲ್ಲಿ ಇಡು. ಉದಾ. ನೀನು ಹೆಚ್ಚು ಹೋಗದ ಇನ್ನೊಂದು ಕೋಣೆಯಲ್ಲಿ, ಬೀಗ ಹಾಕಿದ ಅಲಮಾರಾದಲ್ಲಿ ಸಿಗರೇಟು, ಪಾನು ಮತ್ತು ಜರದಾಗಳನ್ನು ಸೇವಿಸಲು ಇರುವ ಪ್ರಚೋದನೆ ಗುರುತಿಸು. ಅದರ ಗೊಡವೆಬೇಡ. ಸಹವಾಸ ಬಿಡು. ಸಿಗರೇಟು, ಪಾನು ಮತ್ತು ಜರದಾ ಬಳಸುವಾಗ ಅಲ್ಲಿ ಇರಬೇಡ.

ಚುಯಿಂಗ ಗಮ್, ಸಿಹಿ, ಪೆಪ್ಪರ ಮೆಂಟ ಬಾಯಲ್ಲಿರಲಿ ಆಳವಾಗಿ ಉಸಿರು ಎಳೆದು ಕೊಳ್ಳುವುದನ್ನು ಅಭ್ಯಾಸ ಮಾಡಿಕೊ, ನಿನಗೆ ಅತಿಯಾಗಿ ಬೇಕು ಎನಿಸದಾಗ ಕುಳಿತೋ , ನಿಂತೋ ದೀರ್ಘವಾಗಿ ಉಸಿರು ಎಳೆದುಕೊ. ಒಂದು ಲೋಟ ನೀರು ಕುಡಿ. ವ್ಯಾಯಮವೂ ಸಹಾಯಕವಾಗುವುದು. ನಿನಗೆ ತಂಬಾಕು ಬೇಕೇ ಬೇಕು ಎನಿಸಿದಾಗ ನಿನ್ನ ಮಕ್ಕಳ ಬಗ್ಗೆ ಯೋಚಿಸು. ಇದರಿಂದ ನಿನಗೆ ಏನಾದರು ಆದರೆ ಅವರ ಗತಿ ಏನು ಎಂಬುದರ ಬಗ್ಗೆ ಚಿಂತಿಸು. ನಿಲ್ಲಿಸುವ ದಿನ ನಿರ್ಧರಿಸು. ಮಾನಸಿಕ ಬೆಂಬಲಕ್ಕೆ ಒಬ್ಬರಿರಲಿ, ಸಿಗರೇಟು/ ಪಾನು/ ಜರದಾ ಇಲ್ಲದ ಮೊದಲ ದಿನಕ್ಕೆ ಯೋಜನೆ ಹಾಕಿಕೊ. ಧೂಮಪಾನ/ತಂಬಾಕಿನ ಚಟ ತಡೆಯಲಾಗದೆ ಇದ್ದರೆ 4 D ಗಳನ್ನು ಉಪಯೋಗಿಸು
ಬೇರೆ ಏನಾದರೂ ಮಾಡು, ಧೂಂಪಾನ/ ತಂಬಾಕು ಸೇವನೆಗೆ ತಡಮಾಡು, ದೀರ್ಘ ಉಸಿರಾಟ, ನೀರು ಕುಡಿ ಇತ್ಯಾತ್ಮಕ ಸ್ವಗತ ಇರಲಿ. ನಿನಗೆ ನೀನೆ ಉಡುಗೊರೆ/ಬಹುಮಾನ ನೀಡಿಕೊ, ಪ್ರತಿದಿನ ವಿಶ್ರಾಂತಿಯ ತಂತ್ರಗಳ ಅಭ್ಯಾಸ ಮಾಡು (ಯೋಗ, ನಡೆಯುವುದು, ಧ್ಯಾನ ನೃತ್ಯ ಸಂಗೀತ ಇತ್ಯಾದಿ.). ಕೆಫಿನ್ ಮತ್ತು ಮದ್ಯಕ್ಕೆ ಮಿತಿ ಇರಲಿ..

ಚುರುಕಾಗಿರು ಆರೋಗ್ಯಪೂರ್ಣ ಆಹಾರ ಸೇವಿಸು.
ಪ್ರತಿ ಸೆಕಂಡಿಗೆ ಒಂದು ತಂಬಾಕಿಗೆಸಂಬಂಧಿಸಿದ ಮರಣ ವಾಗುವುದು.
ದೂಮಪಾನ / ತಂಬಾಕು ಪುರುಷ ಮತ್ತು ಮಹಿಳೆಯರ ಮೇಲೆ ದುಷ್ಪರಿಣಾಮ ಬೀರುವುದು.
Ravi Kolar

Advertisements

ನಿಮ್ಮ ಅನಿಸಿಕೆ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: