ಎಂಥವರನ್ನೂ ತನ್ನತ್ತ ಸೆಳೆಯಬಲ್ಲ ಮಾನವೀಯ ರೆಬಲ್ ಸ್ಟಾರ್ ಅಂಬರೀಶ್

ಹುಟ್ಟುಹಬ್ಬಕ್ಕೆ ಬರೆದ ಲೇಖನ
ಎಂಥವರನ್ನೂ ತನ್ನತ್ತ ಸೆಳೆಯಬಲ್ಲ ಮಾನವೀಯ …….. ರೆಬಲ್ ಸ್ಟಾರ್ ಅಂಬರೀಶ್. –
ಕೆ.ರವಿಕುಮಾರ್ ಕೋಲಾರ್.

ಕನ್ನಡ ಜನತೆಯ ಪಾಲಿಗೆ ‘ಅಂಬರೀಶ್ ಎಂಬ ಹೆಸರು ಯಾವತ್ತಿಗೂ ಅಚ್ಛರಿಯೇ… ನಟ ಅಂಬರೀಷ್ರದು ವರ್ಣರಂಜಿತ ವ್ಯಕ್ತಿತ್ವ. ನಟನಾಗಿ, ಕಲಾವಿದನಾಗಿ, ತಾರೆಯಾಗಿ, ಚಿತ್ರೋದ್ಯಮದ ನಾಯಕನಾಗಿ, ರಾಜಕಾರಣಿಯಾಗಿ, ಪುಟ್ಟಣ್ಣ ಕಣಗಾಲರ ಕಾಣಿಕೆಯಾಗಿ, ರಾಜ್-ವಿಷ್ಣು ನಡುವಿನ ಸಂಪರ್ಕ ಕೊಂಡಿಯಾಗಿ, ಕೈ ಎತ್ತಿ ಕೊಡುವ ಕರ್ಣನಾಗಿ, ಸಂಭಾವನೆ ಕೇಳದ ಸ್ನೇಹಜೀವಿಯಾಗಿ ಚಿತ್ರೋದ್ಯಮದವರಿಗಷ್ಟೇ ಅಲ್ಲ, ನಾಡಿನ ಕಲಾರಸಿಕರಿಗೂ ಚಿರಪರಿಚಿತರಾದವರು. ಇಂತಹ ನಟನೊಬ್ಬ ನಟಿಸಿದ ಚಿತ್ರಗಳು, ನಿರ್ವಹಿಸಿದ ಪಾತ್ರಗಳು, ಒಡನಾಡಿದ ನಟಿಯರು, ನಿರ್ದೇಶಕರು, ನಿರ್ಮಾಪಕರ ಬಗ್ಗೆ ಸುಮ್ಮನೆ ನೆನದರೂ ಸಾಕು, ಅದೇ ನಾಲ್ಕು ದಿನ ಕೂತು ಹೇಳುವಷ್ಟಿರುತ್ತದೆ. ಕಲಾವಿದನಾಗಬೇಕು ಅಂತ ನಾನು ಬಂದವ್ನಲ್ಲ, ನಾಟಕಗಳಲ್ಲಿ ನಟಿಸಿದ್ದೂ ಇಲ್ಲ. ನನ್ನ ಫ್ರೆಂಡ್ ಸಂಗ್ರಾಮ್ ಸಿಂಗ್ ಒಂದ್ಸಲ, ಏ ಪುಟ್ಟಣ್ಣ ಕಣಗಾಲ್ರು ಅವರ ಹೊಸ ಚಿತ್ರಕ್ಕೆ ಆರ್ಟಿಸ್ಟ್ಗಳನ್ನು ಹುಡುಕ್ತಿದಾರೆ, ಮೇಕಪ್ ಟೆಸ್ಟ್ ನಡೀತಿದೆ, ನಾನು ಅವರಿಗೆ ಹೇಳಿದೀನಿ, ನಾಳೆ ಬೆಳಗ್ಗೆ ರೆಡಿಯಾಗಿರು ಹೋಗಣ ಅಂದ್ರು. ನಂದು ಗೊತ್ತಲ್ಲ, ಏ ಯಾರ್ ಹೋಯ್ತರೆ ಅಂತ, ಅವರ ಕೈಗೆ ಸಿಗದೆ ತಪ್ಪಿಸಿಕೊಂಡೆ. ಆದ್ರೂ ಮಧ್ಯಾಹ್ನದೊತ್ತಿಗೆ ನನ್ನ ಹುಡ್ಕಿ, ಕರಕ್ಕೊಂಡ್ ಹೋಗಿ ಪುಟ್ಟಣ್ಣೋರ ಮುಂದೆ ನಿಲ್ಲಿಸಿದ್ರು. ನಾನು ‘ಸಾರ್ ನನ್ಗೆ ಆಕ್ಟಿಂಗ್ ಗೊತ್ತಿಲ್ಲ’ ಅಂದೆ. ಅವರಿಗೇನನ್ನಿಸಿತೋ, ಮೇಕಪ್ ಹಾಕ್ಕೋಹೋಗು ಅಂದ್ರು. ಹಾಕ್ಕೊಂಡ್ ಬಂದ್ ನಿಂತ್ರೆ, ಅಲ್ಲಿಂದ ಇಲ್ಲಿಗೆ ನಡೆದಾಡು ಅಂದ್ರು. ಅದಕ್ಕೆ ಸರಿಯಾಗಿ ಸಂಗ್ರಾಮ್ ಸಿಂಗ್, ಸಿಗರೇಟ್ ಸ್ಟೈಲು ಅಂದ್ರು. ಆಗ ಹಿಂದಿಯ ಸ್ಟಾರ್ ಶತ್ರುಘ್ನ ಸಿನ್ಹರ ಕೈಯಲ್ಲಿರುವ ಸಿಗರೇಟನ್ನು ಬಾಯಿಗೆ ಎಸೆಯುವ ಸ್ಟೈಲ್ ಚಾಲ್ತಿಯಲ್ಲಿತ್ತು. ನಾನು ಅದನ್ನು ಅದ್ಹೇಗೋ ಕಲ್ತಿದ್ದೆ. ಕಾಲೇಜಲ್ಲಿ ಮಾಡಕ್ಕೇನು ಕೆಲ್ಸ ಇರ್ಲಿಲ್ವಲ್ಲ, ಅದ್ನ ಪ್ರಾಕ್ಟೀಸ್ ಮಾಡಿದ್ದೆ, ಇಲ್ಲೂ ಮಾಡಿ ತೋರಿಸಿದೆ. ಪುಟ್ಟಣ್ಣರಿಗೆ ಇಷ್ಟವಾಯ್ತು, ನಾಳೆಯಿಂದ ಶೂಟಿಂಗ್ಗೆ ಬಂದ್ಬುಡು ಅಂದ್ರು.. 1970ರ ದಶಕದಲ್ಲಿ ಅಂಬರೀಶ್ ಮೊಟ್ಟ ಮೊದಲು ತರಾಸುರವರ ಮನೋಜ್ಞ ಕಾದಂಬರಿ ಆಧಾರಿತ ಕನ್ನಡ ಚಲನಚಿತ್ರ ‘ನಾಗರಹಾವು’ ಎಂಬ ಚಿತ್ರದಲ್ಲಿ ಜಲೀಲ್ ಎಂಬ ಹುಡುಗಿ ಯರನ್ನು ಚುಡಾಯಿಸುವ ಪಡ್ಡೆ ಹುಡುಗನ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೊದಲು ಅವರು ಅದೇ ಪಾತ್ರವನ್ನು ನಿಜ ಜೀವನದಲ್ಲೂ ಜೀವಿಸು ತ್ತಿದ್ದರು ಎಂಬುದು ವಾಸ್ತವದ ಸತ್ಯ! ಏಕೆಂದರೆ ಅಂಬರೀಶ್ ರಂಗಭೂಮಿಯ ಗರಡಿಯಲ್ಲಿ ಪಳಗಿ ಚಿತ್ರರಂಗಕ್ಕೆ ಕಾಲಿಟ್ಟ ನಟರಲ್ಲ ಎಂಬುದೇ ಅವರ ಪ್ರತಿಭೆಯ ಹಿರಿಮೆ. ಅವರ ಅಜ್ಜ ನನ್ನೂರು ತಿರುಮಕೂಡಲು ನರಸೀಪುರದ ನಿವಾಸಿಯಾಗಿದ್ದ ಕರ್ನಾಟಕ ಮರೆಯಲಾಗದ ಸಂಗೀತ ಕಲಾವಿದರಾಗಿದ್ದ ಪಿಟೀಲು ಚೌಡಯ್ಯ ನವರು. ಅಂಬರೀಷ್ ಈ ಸಂಗೀತ ಕಲೆಯ ಪರಂಪರೆಯ ಹಾದಿಯಲ್ಲಿ ಮುಂದುವರಿಯಲು ಹೋಗದೆ ಒಬ್ಬ ಪಡ್ಡೆ ಹುಡುಗನಂತೆ ತಿರುಗಿ ಕೊಂಡಿದ್ದಾಗ ಪುಟ್ಟಣ ಕಣಗಾಲ್ ಎಂಬ ಕನ್ನಡದ ದಿಗ್ದರ್ಶಕನಿಗೆ ಮಾತ್ರ ಇವರ ನಿಜ ಜೀವನದ ಪಾತ್ರವನ್ನು ‘ನಾಗರಹಾವು’ ಸಿನಿ ಮಾಕ್ಕೆ ಎಳೆದು ತಂದು ಕೂರಿಸಿ ಇವರೊಳಗಿನ ಕಲಾವಿದರನ್ನು ಹೊರಗೆಳೆಯಲು ಸಾಧ್ಯವಾ ಯಿತು. ಆನಂತರ ಅಂಬರೀಷ್ರು ತನ್ನ ಅಜ್ಜ ಚೌಡಯ್ಯನವರು ಪಿಟೀಲಿನಲ್ಲಿ ನುಡಿಸುತ್ತಿದ್ದ ಅಪೂರ್ವವಾದ ಅವರಿಗೆ ಮಾತ್ರ ಒಲಿದಿದ್ದ ಏಳು ತಂತಿಯ ನಾದಸ್ವರವನ್ನು ತನ್ನ ಕಲಾವಿದನ ಸಿನಿಮಾ ಜೀವನದ ಮೂಲಕ ಅನೇಕ ಸಿನಿಮಾ ಗಳಲ್ಲಿ ಬಿಂಬಿಸುತ್ತಲೇ ಮುನ್ನಡೆದರು ಎಂಬುದು ಅವರ ಸಿನಿಮಾ ಜೀವನದ ಹೆಮ್ಮೆ. ಸಿನಿಮಾ ಜೀವನದ ಪೂರ್ವಾಶ್ರಮದಲ್ಲಿ ಅಂಬರೀಶ್ರ ಹೆಸರು ಅಮರನಾಥ್!

ಅಬ್ಸರ್ವೇಷನ್ ಇದೆ
ಹಳ್ಳಿಯಿಂದ ಬಂದವ, ಅಬ್ಸರ್ವೇಷನ್ ಇದೆ. ಅದು ಅನುಕೂಲಕ್ಕೆ ಬಂದಿದೆ. ನಾನು ಕಲಾವಿದನಲ್ಲ, ಬಯಸಿ ಬಂದಿದ್ದಲ್ಲ, ಎಲ್ಲ ಅದಾಗಿಯೇ ಬಂದದ್ದು. ಹಾಗಾಗಿ ಡೈರಕ್ಟ್ರು ಹೇಳಿದಂಗೆ ಆಕ್ಟ್ ಮಾಡ್ತಿದ್ದೆ. ಅವರಿವರು ಮಾಡ್ತಿದ್ದನ್ನು ನೋಡಿ ಕಲ್ತಿದ್ದಿದೆ. ಎಲ್ಲಾ ಪಾತ್ರಗಳು ನನ್ಗೆ ಖುಷಿ ಕೊಟ್ಟಿವೆ ಅಂತ ಹೇಳಲ್ಲ. ಆದ್ರೂ ರಂಗನಾಯಕಿ ಚಿತ್ರದ ಪಾತ್ರ ನನಗಿಷ್ಟ. ಅದಕ್ಕೆ ಕಾರಣ ಪುಟ್ಟಣ್ಣೋರು. ಪುಟ್ಟಣ್ಣೋರು ಅಂದಾಗ ಜ್ಞಾಪಕಕ್ಕೆ ಬಂತು… ಅವರದ್ದೊಂದು ಚಿತ್ರದಲ್ಲಿ ನಟಿಸ್ತಿದ್ದೆ. ಅವರು ಶೂಟಿಂಗ್ ಸ್ಪಾಟ್ನಲ್ಲಿ, ‘ಅಪ್ಪಾ ನೀನು ಬಾಯಿ ಮಾತ್ರ ತಗೀಬ್ಯಾಡ, ಬರೀ ಆಕ್ಟ್ ಮಾಡು ಸಾಕು’ ಅಂದಿದ್ರು… ಬಾಯ್ಬಿಟ್ರೆ ಬಣ್ಣಗೇಡು ಅಂತ ಇರ್ಬೇಕು!

Advertisements

ನಿಮ್ಮ ಅನಿಸಿಕೆ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: