ಧಗ ಧಗನೇ ಹತ್ತಿ ಉರಿಯುತ್ತಿದೆ ಪೆಟ್ರೋಲ್

-ಕೆ ರವಿಕುಮಾರ್ ಕೋಲಾರ್
ಪೆಟ್ರೋಲ್ ದರ ಹೆಚ್ಚುವಲ್ಲಿ ರಾಜ್ಯಗಳು ವಿಧಿಸುವ ತೆರಿಗೆಗಳು ಕೂಡ ಪ್ರಮುಖ ಪಾತ್ರ ವಹಿಸುತ್ತಿವೆ. ಉದಾಹರಣೆಗೆ ಗೋವಾದಲ್ಲಿ ಪೆಟ್ರೋಲ್ ಮೇಲಿನ ಸುಂಕ ಕಡಿಮೆ. ಆದರೆ ಕರ್ನಾಟಕದಲ್ಲಿ ಪೆಟ್ರೋಲಿಗೆ ಶೇಕಡ 25ರಷ್ಟು ಮಾರಾಟ ತೆರಿಗೆ ಮತ್ತು ಶೇಕಡ 5ರಷ್ಟು ಪ್ರವೇಶ ತೆರಿಗೆ ವಿಧಿಸುತ್ತದೆ. ರಾಜ್ಯ ಸರಕಾರವು ತೆರಿಗೆ ಇಳಿಸುವ ಮೂಲಕ ಗ್ರಾಹಕರ ಕಿಸೆಭಾರ ಇಳಿಸಲು ಪ್ರಯತ್ನಿಸುತ್ತಿಲ್ಲವೆನ್ನುವುದು ಡ್ರೈವ್ಸ್ಪಾರ್ಕ್ ಓದುಗರ ಆರೋಪ.

ಪೆಟ್ರೋಲ್ ದರ ದುಬಾರಿಯಾಗುವುದು ಇಷ್ಟಕ್ಕೆ ನಿಲ್ಲುವ ಸೂಚನೆಗಳಿಲ್ಲ. ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ದಿನೇ ದಿನೇ ದುಬಾರಿಯಾಗುತ್ತಿದೆ. ಜೊತೆಗೆ ಹಣದುಬ್ಬರ, ರೂಪಾಯಿ ಮೌಲ್ಯ ಕುಸಿತ ಇತ್ಯಾದಿ ನೆಪಗಳಿಂದ ಮುಂಬರುವ ದಿನಗಳಲ್ಲಿ ಪೆಟ್ರೋಲ್ ದರಗಳು ನಾಗಲೋಟ ಮುಂದುವರೆಸಲಿವೆ. ಪೆಟ್ರೋಲ್ ದರ ಹೆಚ್ಚುವಲ್ಲಿ ರಾಜ್ಯಗಳು ವಿಧಿಸುವ ತೆರಿಗೆಗಳು ಕೂಡ ಪ್ರಮುಖ ಪಾತ್ರ ವಹಿಸುತ್ತಿವೆ. ಉದಾಹರಣೆಗೆ ಗೋವಾದಲ್ಲಿ ಪೆಟ್ರೋಲ್ ಮೇಲಿನ ಸುಂಕ ಕಡಿಮೆ. ಆದರೆ ಕರ್ನಾಟಕದಲ್ಲಿ ಪೆಟ್ರೋಲಿಗೆ ಶೇಕಡ 25ರಷ್ಟು ಮಾರಾಟ ತೆರಿಗೆ ಮತ್ತು ಶೇಕಡ 5ರಷ್ಟು ಪ್ರವೇಶ ತೆರಿಗೆ ವಿಧಿಸುತ್ತದೆ. ರಾಜ್ಯ ಸರಕಾರವು ತೆರಿಗೆ ಇಳಿಸುವ ಮೂಲಕ ಗ್ರಾಹಕರ ಕಿಸೆಭಾರ ಇಳಿಸಲು ಪ್ರಯತ್ನಿಸುತ್ತಿಲ್ಲವೆನ್ನುವುದು ಡ್ರೈವ್ಸ್ಪಾರ್ಕ್ ಓದುಗರ ಆರೋಪ.

ಪೆಟ್ರೋಲ್ ದರ ದುಬಾರಿಯಾಗುವುದು ಇಷ್ಟಕ್ಕೆ ನಿಲ್ಲುವ ಸೂಚನೆಗಳಿಲ್ಲ. ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ದಿನೇ ದಿನೇ ದುಬಾರಿಯಾಗುತ್ತಿದೆ. ಜೊತೆಗೆ ಹಣದುಬ್ಬರ, ರೂಪಾಯಿ ಮೌಲ್ಯ ಕುಸಿತ ಇತ್ಯಾದಿ ನೆಪಗಳಿಂದ ಮುಂಬರುವ ದಿನಗಳಲ್ಲಿ ಪೆಟ್ರೋಲ್ ದರಗಳು ನಾಗಲೋಟ ಮುಂದುವರೆಸಲಿವೆ.

ಪೆಟ್ರೋಲ್ ದರ ಹೆಚ್ಚಳ ಹಿನ್ನಲೆಯಲ್ಲಿ ಈಗಾಗಲೇ ಡೀಸೆಲ್ ಕಾರುಗಳಿಗೆ ಬೇಡಿಕೆ ಹೆಚ್ಚಿದೆ. ಇದು ಇನ್ಮುಂದೆ ಇನ್ನಷ್ಟು ಹೆಚ್ಚಾಗುವ ನಿರೀಕ್ಷೆಗಳಿವೆ. ಪರಿಣಾಮವಾಗಿ ಡೀಸೆಲ್ ಕಾರುಗಳ ವೇಟಿಂಗ್ ಪಿರೆಯಿಡ್ ಅಧಿಕವಾಗಲಿದೆ. ದೇಶದಲ್ಲಿ ಡೀಸೆಲ್ ಕಾರು ಉತ್ಪಾದನೆಗೆ ಹೂಡಿಕೆ ಮಾಡುವ ಕಂಪನಿಗಳಿಗೆ ದರ ಹೆಚ್ಚಳವೂ ಸಾಥ್ ನೀಡಲಿದೆ.

ಸದ್ಯ ಡೀಸೆಲ್ ದರ ಹೆಚ್ಚಳವಾಗಿಲ್ಲ. ಪ್ರತಿತಿಂಗಳು ನೀವು 450 ಕಿ.ಮೀ.ಗಿಂತ ಕಡಿಮೆ ಪ್ರಯಾಣ ಮಾಡುವಿರಾದರೆ ನಿಮಗೆ ಪೆಟ್ರೋಲ್ ಕಾರೇ ಸೂಕ್ತ. ದರ ಹೆಚ್ಚಾದರೂ ಮೈಲೇಜ್ ಹೆಚ್ಚಿಸುವ ಸಲಹೆ ಪಾಲಿಸುವ ಮೂಲಕ ದುಡ್ಡು ಉಳಿಸಿಕೊಳ್ಳಬಹುದು. ಆದರೆ ನಿವು ತಿಂಗಳಿಗೆ 500ಕ್ಕೂ ಹೆಚ್ಚು ಕಿ.ಮೀ. ಪ್ರಯಾಣಿಸುವಿರಾದರೆ ಡೀಸೆಲ್ ಕಾರು ಖರೀದಿಸಬಹುದು.

ಪೆಟ್ರೋಲ್ ದರ ಹೆಚ್ಚಳ ಹಿನ್ನಲೆಯಲ್ಲಿ ಈಗಾಗಲೇ ಡೀಸೆಲ್ ಕಾರುಗಳಿಗೆ ಬೇಡಿಕೆ ಹೆಚ್ಚಿದೆ. ಇದು ಇನ್ಮುಂದೆ ಇನ್ನಷ್ಟು ಹೆಚ್ಚಾಗುವ ನಿರೀಕ್ಷೆಗಳಿವೆ. ಪರಿಣಾಮವಾಗಿ ಡೀಸೆಲ್ ಕಾರುಗಳ ವೇಟಿಂಗ್ ಪಿರೆಯಿಡ್ ಅಧಿಕವಾಗಲಿದೆ. ದೇಶದಲ್ಲಿ ಡೀಸೆಲ್ ಕಾರು ಉತ್ಪಾದನೆಗೆ ಹೂಡಿಕೆ ಮಾಡುವ ಕಂಪನಿಗಳಿಗೆ ದರ ಹೆಚ್ಚಳವೂ ಸಾಥ್ ನೀಡಲಿದೆ. ಇಲ್ಲಿ ಪೆಟ್ರೋಲ್ಗಳ ಮೇಲೆ ವಿಧಿಸಲಾಗುವ ತೆರಿಗೆಗಳ ಹೆಚ್ಚಿನ ಆದಾಯವೂ ರಾಜ್ಯ ಸರಕಾರದ ಬೊಕ್ಕಸಕ್ಕೆ ಹೋಗುತ್ತದೆ.ಶೇ.4ರಷ್ಟಿರುವ ಆಮದು ಸುಂಕ ಕೇಂದ್ರಕ್ಕೆ ಹೋದರೆ,ಉಳಿದ ಹೆಚ್ಚಿನ ತೆರಿಗೆಗಳಿಂದ ಲಾಭ ಮಾಡಿಕೊಳ್ಳುವುದು ರಾಜ್ಯ ಸರಕಾರಗಳು.ಒಂದು ವೇಳೆ,ಕೇಂದ್ರ ಪೆಟ್ರೋಲ್ ದರವನ್ನು ಹೆಚ್ಚಿಸಿದರೂ, ಜನರ ಮೇಲೆ ಚೂರು ಅನುಕಂಪವಿದ್ದರೂ, ರಾಜ್ಯ ಸರಕಾರಗಳು ಪೆಟ್ರೋಲ್ ಬೆಲೆ ಏರದಂತೆ ನೋಡಿಕೊಳ್ಳಬಹುದು.ಈಗಿರುವ ತೆರಿಗೆಗಳಲ್ಲಿ ಶೇ. 50 ರಷ್ಟನ್ನು ತಗ್ಗಿಸಿದರೂ ಸಾಕು, ಜನರಿಗೆ ಲಾಭವಾಗುತ್ತದೆ. ಪೆಟ್ರೋಲ್ ದರ ಏರಿಕೆಯಾದಾಗಲೆಲ್ಲ, ಪಶ್ಚಿಮ ಬಂಗಾಳ ಮತ್ತು ಕೇರಳ ರಾಜ್ಯಗಳು ಜನರ ನೆರವಿಗೆ ಧಾವಿಸಿದ ಉದಾಹರಣೆಯಿದೆ. ಗೋವಾ ಸರಕಾರವೂ ಇದರಲ್ಲಿ ಒಂದು ಹೆಜ್ಜೆ ಮುಂದೆಯೇ ಇದೆ. ಆದರೆ ಕರ್ನಾಟಕ ಸರಕಾರ ಮಾತ್ರ, ಅತ್ಯಂತ ನಿಷ್ಟುರವಾಗಿ ನಡೆದುಕೊಂಡಿದೆ.ಆದುದರಿಂದಲೇ,ಇಂದು ದೇಶದಲ್ಲೇ ಪೆಟ್ರೋಲ್ಗೆ ಅತ್ಯಧಿಕ ಬೆಲೆಯಿರುವುದು ಕರ್ನಾಟಕದಲ್ಲಿ.ಇಂದು ಪೆಟ್ರೋಲ್ ಬೆಲೆಯೇರಿಕೆಯಾದಾಕ್ಷಣ ಪ್ರತಿಪಕ್ಷಗಳು ವಾಗ್ಬಾಣಗಳನ್ನು ಪ್ರಯೋಗಿಸುತ್ತಿವೆ. ನಿಜಕ್ಕೂ ಅದರಲ್ಲಿ ಒಂದಿಷ್ಟು ಪ್ರಾಮಾಣಿಕತೆಯಿದ್ದಿದ್ದರೆ, ತನ್ನ ಆಡಳಿತ ಪಕ್ಷವಿರುವ ರಾಜ್ಯಗಳಿಗೆ ತೆರಿಗೆಯನ್ನು ಕಡಿತಗೊಳಿಸಲು ಸೂಚನೆ ನೀಡಬಹುದಿತ್ತು.ಪೆಟ್ರೋಲ್ ಬೆಲೆಯೇರಿಕೆಯನ್ನು ವಿರೋಧ ಪಕ್ಷಗಳು ಕೇವಲ ರಾಜಕೀಯವಾಗಿ ಮಾತ್ರ ಬಳಸಲು ಮುಂದಾಗುತ್ತಿವೆ.ಯಾವ ಪಕ್ಷ ಆಡಳಿತಕ್ಕೆ ಬಂದರೂ,ಪೆಟ್ರೋಲ್ ಬೆಲೆಯೇರಿಕೆಯನ್ನು ನಿಯಂತ್ರಿಸಲು ಅವುಗಳಿಗೆ ಸಾಧ್ಯವಾಗದೇ ಇರುವುದು ನಿಜಕ್ಕೂ ವಿಪರ್ಯಾಸ.

ಎನ್ಡಿಎ ಸರಕಾರ ತನ್ನ ಅಧಿಕಾರಾವಧಿಯಲ್ಲಿ 30 ಬಾರಿ ಪೆಟ್ರೋಲ್ ದರವನ್ನು ಏರಿಸಿತ್ತು. ಅದರೊಂದಿಗೆ ಸ್ಪರ್ಧಿಸಲು ಹೊರಟಿದೆ ಯುಪಿಎ ಸರಕಾರ.ಎಲ್ಲಕ್ಕಿಂತ ವಿಪರ್ಯಾಸವೆಂದರೆ, ಒಂದೇ ಬಾರಿಗೆ ಜನರ ತಲೆಯ ಮೇಲೆ ಭಾರೀ ಹೊಡೆತವನ್ನು ಸರಕಾರ ನೀಡಿದೆ.ಇಂತಹ ಸಾಹಸಕ್ಕೆ ಈವರೆಗಿನ ಯಾವ ಸರಕಾರವೂ ಮುಂದಾಗಿರಲಿಲ್ಲ.ಇದೇ ಸಂದರ್ಭದಲ್ಲಿ ಪ್ರತಿಪಕ್ಷಗಳು ಮೇ 31ಕ್ಕೆ ಭಾರತ ಬಂದ್ ಘೋಷಿಸಿದೆ. ಅದರ ಬೆನ್ನಿಗೇ ಯುಪಿಎ ಸರಕಾರ ಮೃದುವಾಗಿದ್ದು, ಪೆಟ್ರೋಲ್ನ ಬೆಲೆಯನ್ನು ಇಳಿಕೆ ಮಾಡುವತ್ತ ಯೋಚಿಸುತ್ತಿದೆ. ಸರಕಾರ ಮೀನಾಮೇಷ ಎಣಿಸದೆ ತಕ್ಷಣ ಬೆಲೆಯನ್ನು ಇಳಿಸಬೇಕು ಮಾತ್ರವಲ್ಲ, ಡೀಸೆಲ್, ಎಲ್ಪಿಜಿಯ ಬೆಲೆಯೇರಿಕೆಯಾಗದಂತೆ ನೋಡಿಕೊಳ್ಳಬೇಕು.ರೂಪಾಯಿ ಬೆಲೆ ಇಳಿದಿರಬಹುದು. ಹಾಗೆಂದು ಮನುಷ್ಯನ ಬದುಕಿನ ಬೆಲೆ ಇಳಿದಿಲ್ಲ. ಅವನು ಕನಿಷ್ಠ ಒಂದು ಹೊತ್ತಿನ ಊಟವನ್ನು ನೆಮ್ಮದಿಯಿಂದ ಮಾಡುವ ವಾತಾವರಣವನ್ನು ಸರಕಾರ ನಿರ್ಮಾಣ ಮಾಡಬೇಕಾಗಿದೆ.
* ಕೇರಳ: 74.51ರು/ಪ್ರತಿ ಲೀಟರ್
* ಡೆಲ್ಲಿ: 73.18 ರು/ಪ್ರತಿ ಲೀಟರ್
* ಬೆಂಗಳೂರು: 82.21 ರು/ಪ್ರತಿ ಲೀಟರ್
* ಕೋಲ್ಕತ್ತಾ: 77.88 ರು/ಪ್ರತಿ ಲೀಟರ್
* ಮುಂಬೈ: 78.57 ರು/ಪ್ರತಿ ಲೀಟರ್
* ಚೆನ್ನೈ: 77.53 ರು/ಪ್ರತಿ ಲೀಟರ್

ಇತರ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ವ್ಯಾಟ್ ಹಾಗೂ ಸಾರಿಗೆ ವೆಚ್ಚ ಅಧಿಕವಾಗಿದೆ. ಹೀಗಾಗಿ ಬೇರೆಡೆಗಿಂತ ರಾಜ್ಯದಲ್ಲಿ ಇಂಧನ ಬೆಲೆ ಜಾಸ್ತಿ.ರಾಜ್ಯದಲ್ಲಿ ತೆರಿಗೆ ಎಷ್ಟಿದೆ?

* ಅಬಕಾರಿ ತೆರಿಗೆ ಶೇ. 12ರಷ್ಟು
* ಮಾರಾಟ ತೆರಿಗೆ ಶೇ 25 ರಷ್ಟು
* ಪ್ರವೇಶ ತೆರಿಗೆ ಶೇ 5 ರಷ್ಟು
* ಡೀಲರ್ ಕಮಿಷನ್ ಶೇ 2 ರಷ್ಟು
* ಸೆಸ್ ಶೇ 3 ರಷ್ಟು
* ಆಮದು ಸುಂಕ ಶೇ 4 ರಷ್ಟು
* ಸರ್ ಜಾರ್ಜರ್ಸ್ ಶೇ 10 ರಷ್ಟು

ಇದರಲ್ಲಿ ಮಾರಾಟ ತೆರಿಗೆ ರೂಪದಲ್ಲಿ ಶೇ 25 ರಷ್ಟು ವ್ಯಾಟ್ ಹಾಗೂ ಶೇ 5 ರಷ್ಟು ಪ್ರವೇಶ ತೆರಿಗೆ ಹೊರೆಯನ್ನು ಗ್ರಾಹಕರ ಮೇಲೆ ಹೇರುವುದನ್ನು ತಪ್ಪಿಸುವ ಎಲ್ಲಾ ಅಧಿಕಾರ ಸದಾನಂದ ಗೌಡರಿಗೆ ಇದೆ. ವ್ಯಾಟ್ ಹಿಂಪಡೆದರೆ ಬೆಲೆ ಪೆಟ್ರೋಲ್ ಬೆಲೆ ಅಂದಾಜು 58ರು/ಲೀ ಗೆ ಇಳಿದುಬಿಡುತ್ತದೆ ಎಂದು ಕರ್ನಾಟಕ ಫೆಡೆರೇಷನ್ ಆಫ್ ಪೆಟ್ರೋಲ್ ಡೀಲರ್ಸ್ ಅಸೋಸಿಯೇಷನ್ ನ ಅಧ್ಯಕ್ಷ ಭೂಷಣ್ ನಾರಂಗ್ ಹೇಳುತ್ತಾರೆ.

ಇತ್ತ ಬೆಲೆ ಏರಿಕೆ ಬಿಸಿಮುಟ್ಟಿಸಿರುವ ಯುಪಿಎ ಸರ್ಕಾರ ಕೂಡಾ ರಾಜ್ಯಗಳು ವ್ಯಾಟ್ ಹಿಂಪಡೆದು ಗ್ರಾಹಕರ ಮೇಲಿನ ಹೊರೆ ತಗ್ಗಿಸಬಹುದು ಎಂದು ವಿತ್ತ ಸಚಿವ ಪ್ರಣಬ್ ಮುಖರ್ಜಿ ಅವರ ಬಾಯಲ್ಲಿ ಹೇಳಿಸಿಬಿಟ್ಟಿದೆ.

ಸದಾನಂದ ಗೌಡರು ಜನತೆಯ ಕೂಗನ್ನು ಕೇಳಿ ಪಕ್ಕದ ಗೋವಾದ ಬಿಜೆಪಿ ಸರ್ಕಾರದಂತೆ ನಮ್ಮಲ್ಲೂ ಕೂಡಾ ತೆರಿಗೆ ಹಿಂಪಡೆದರೆ ಸಿಎಂರಂತೆ ಸಾರ್ವಜನಿಕರೂ ಕೂಡಾ ಸದಾ ಹಸನ್ಮುಖಿಗಳಾಗಬಹುದು. ಗೋವಾ ಸರ್ಕಾರ ಪ್ರತಿ ಲೀಟರ್ ಗೆ 11 ರು ಇಳಿಸಿ, ಹಣದುಬ್ಬರದ ಹೊಡೆತದಿಂದ ತನ್ನ ಪ್ರಜೆಗಳನ್ನು ರಕ್ಷಿಸಿತ್ತು. ಕರ್ನಾಟಕ ಕೂಡಾ ಗೋವಾ ಮಾದರಿಯಂತೆ 10-15 ರು ಕಡಿಮೆ ಮಾಡಲು ಆಗದಿದ್ದರೆ, ಕೇರಳ, ಡೆಲ್ಲಿಯಂತೆ ಕೆಲವು ತೆರಿಗೆಗಳನ್ನು ಹಿಂಪಡೆದು 5 ರಿಂದ 10 ರು ತನಕ ಬೆಲೆ ಇಳಿಸಬಹುದು. ಸದ್ಯ ಡೀಸೆಲ್ ದರ ಹೆಚ್ಚಳವಾಗಿಲ್ಲ. ಪ್ರತಿತಿಂಗಳು ನೀವು 450 ಕಿ.ಮೀ.ಗಿಂತ ಕಡಿಮೆ ಪ್ರಯಾಣ ಮಾಡುವಿರಾದರೆ ನಿಮಗೆ ಪೆಟ್ರೋಲ್ ಕಾರೇ ಸೂಕ್ತ. ದರ ಹೆಚ್ಚಾದರೂ ಮೈಲೇಜ್ ಹೆಚ್ಚಿಸುವ ಸಲಹೆ ಪಾಲಿಸುವ ಮೂಲಕ ದುಡ್ಡು ಉಳಿಸಿಕೊಳ್ಳಬಹುದು. ಆದರೆ ನಿವು ತಿಂಗಳಿಗೆ 500ಕ್ಕೂ ಹೆಚ್ಚು ಕಿ.ಮೀ. ಪ್ರಯಾಣಿಸುವಿರಾದರೆ ಡೀಸೆಲ್ ಕಾರು ಖರೀದಿಸಬಹುದು.

Advertisements

ನಿಮ್ಮ ಅನಿಸಿಕೆ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: