ಹರೆಯದಲ್ಲಿ ವಸಂತಾಗಮನದ ಲಕ್ಷಣಗಳು ಮತ್ತು ಸಮಸ್ಯೆಗಳು

ಹದಿಹರೆಯವನ್ನು ಬಾಳಿನ ವಸಂತ ಎನ್ನುತ್ತಾರೆ. ದೇಹದಲ್ಲಿ ಕಣ್ತುಂಬುವ ಬದಲಾವಣೆಗಳಾಗುತ್ತವೆ. ಹುಡುಗನಿಗೆ ಚಿಗುರು ಮೀಸೆ / ಗಡ್ಡ, ವಿಸ್ತಾರಗೊಂಡ ಎದೆ, ಹುರಿಗೊಳ್ಳುವ ಸ್ನಾಯುಗಳು, ಗಂಭೀರವಾದ ಧ್ವನಿ, ಜನನಾಂಗಗಳು ವೃಷಣ ಶಿಶ್ನ ದೊಡ್ಡವಾಗುತ್ತವೆ. ವೀರ್ಯೋತ್ಪತ್ತಿಯಾಗಿ, ನಿದ್ದೆಯಲ್ಲಿ ಅಥವಾ ಭಾವೋದ್ವೇಗಗೊಂಡಾಗ ಹೊರಚೆಲ್ಲಲ್ಪಡುತ್ತದೆ. ಕಂಕುಳ ಮತ್ತು ಜನನಾಂಗದ ಸುತ್ತ ರೋಮಗಳು ಬೆಳೆಯುತ್ತವೆ. ಹುಡುಗಿಗೆ ಸ್ತನಗಳ ಬೆಳವಣಿಗೆ, ಪೃಷ್ಟ ಮತ್ತು ಜನನಾಂಗಗಳ ಬೆಳವಣಿಗೆ. ಅಂಡಕೋಶದಲ್ಲಿ ಅಂಡಾಣು ಪ್ರೌಢಾವಸ್ಥೆಗೆ ಬಂದು, ಋತು ಚಕ್ರ ಪ್ರಾರಂಭವಾಗುತ್ತದೆ. ಕಿಶೋರ ಕನ್ಯೆಯ ಕನ್ಯೆಯ ರೂಪ ಹಲವರನ್ನು ಆಕರ್ಷಿಸುತ್ತದೆ. ಜೊತೆಗೆ ಮನಸ್ಸಿನೊಳಗೆ ಪ್ರೀತಿ ಪ್ರಣಯದ ಕೋಗಿಲೆಗಳ ಕುಹೂ ಕುಹೂ ಕೇಳಲಾರಂಭಿಸುತ್ತದೆ. ಹುಡುಗ ಹುಡುಗಿಯರು ಪರಸ್ಪರ ಆಕರ್ಷಿತರಾಗುತ್ತಾರೆ. ಮಾತನಾಡಲು, ಸಾಮೀಪ್ಯ, ಸ್ಪರ್ಶದ ಆನಂದವನ್ನು ಅನುಭವಿಸಲು ಹಾತೊರೆಯುತ್ತಾರೆ. ನೋಡಿದ, ಕೇಳಿದ ಪ್ರೇಮ ಕಥೆಗಳು ಮನಸ್ಸಿನೊಳಗೆ ಪುನರಾರ್ವತನೆಗೊಂಡು, ತಾವೇ ಆ ನಾಯಕ ನಾಯಕಯರಾಗಲು ಸಂಭ್ರಮ ಪಡುತ್ತಾರೆ. ಜೀವನ ಸಂಗಾತಿಗಾಗಿ, ಸುತ್ತಮುತ್ತ ನೋಡುತ್ತಾರೆ. ನೇರವಾಗಿ ಕಾಣುವ ಒಬ್ಬರನ್ನು ಅಥವಾ ದೂರದಲ್ಲಿರುವ ತಮಗಿಷ್ಟವಾದ ವ್ಯಕ್ತಿಯನ್ನು ಆಯ್ಕೆಮಾಡಿಕೊಂಡು ಸ್ನೇಹ ಪ್ರೀತಿಯ ಸಂಬಂಧಕ್ಕಾಗಿ ಎದುರು ನೋಡುತ್ತಾರೆ. ಈ ಎಲ್ಲ ದೈಹಿಕ ಮತ್ತು ಮಾನಸಿಕ ಬದಲಾವಣೆಯನ್ನು ಲೈಂಗಿಕ ಹಾರ್ಮೋನುಗಳಾದ ಟೆಸ್ಟೋಸ್ಟೀರಾನ್‌, ಈಸ್ಟ್ರೋಜನ್, ಪ್ರೋಜೆಸ್ಟೆರಾನ್‌ಗಳು ನಿರ್ದೇಶಿಸುತ್ತವೆ. ಹಾಗೆಯೆ ಪುರುಷತನದ ಮನೋಸಾಮಾಜಿಕ ಲಕ್ಷಣಗಳನ್ನು ಹುಡುಗರೂ, ಸ್ತ್ರೀತನದ ಮನೋಸಾಮಾಜಿಕ ಲಕ್ಷಣಗಳನ್ನು ಹುಡುಗಿಯರೂ ಕಲಿಯತೊಡಗುತ್ತಾರೆ. ಆಯಾ ಸಮಾಜದ, ಪ್ರಸಕ್ತ ಕಾಲದ ಅಥವಾ ಪ್ರತಿಬಿಂಬಿತ ಹೀರೋ ಹೀರೋಯಿನ್‌ಗಳನ್ನು ಹರೆಯದವರು ಅನುಕರಿಸ ತೊಡಗುತ್ತಾರೆ. ಧೈರ್ಯ ಸಾಹಸ ಆಕ್ರಮಣಶೀಲತೆ, ಅಧಿಕಾರಯುಕ್ತ ನಡವಳಿಕೆ, ಧೂಮಪಾನ, ಮದ್ಯಪಾನ, ವೇಗವಾಗಿ ವಾಹನಗಳ ಚಾಲನೆ, ದೈಹಿಕ ಶಕ್ತಿ ಬೇಡುವ ಆಟಗಳನ್ನಾಡುವುದು, ಗಂಡಸ್ತನವೆನಿಸಿದರೆ, ಮೃದು ಮಾತು, ನಡೆವಳಿಕೆ, ಸಂಗೀತ, ನೃತ್ಯಗಳಲ್ಲಿ ಅಭಿರುಚಿ, ಕುಶಲತೆಯನ್ನು ಬೇಡುವ ಹವ್ಯಾಸ, ಆಟಗಳನ್ನಾಡುವುದು, ಅಲಂಕಾರಪ್ರಿಯತೆ, ಹೆಣ್ತನದ ಲಕ್ಷಣಗಳೆನಿಸಿಕೊಳ್ಳುತ್ತವೆ. ಪರಿಪೂರ್ಣ ಪುರುಷ, ಸ್ತ್ರೀ ಎನಿಸಿಕೊಳ್ಳಲು ಪ್ರತಿಯೊಬ್ಬ ಹುಡುಗ ಹುಡುಗಿ ಇಷ್ಟಪಡ ತೊಡಗುತ್ತಾರೆ. ಜೊತೆಗೆ ಬೌದ್ಧಿಕ ಕ್ಷೇತ್ರದಲ್ಲಿ ಮೇಲುಗೈ ಸಾಧಿಸಲು ಹಾತೊರೆಯುತ್ತಾರೆ. ಪರೀಕ್ಷೆಗಳಲ್ಲಿ ಹೆಚ್ಚು ಅಂಕಗಳನ್ನು ತೆಗೆಯಲು, ಯಾವುದೇ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಪುರಸ್ಕಾರಗಳನ್ನು ಪಡೆಯಲು ಪ್ರಯತ್ನಿಸುತ್ತಾರೆ.

ಲೈಂಗಿಕ ಅಭಿವ್ಯಕ್ತಿ :

ವಯಸ್ಸಿಗೆ ಸಹಜವಾಗಿ ಬರುವ ಲೈಂಗಿಕ ಆಸಕ್ತಿ ಮತ್ತು ಬಯಕೆಯನ್ನು ಪ್ರಕಟಿಸಲು, ಲೈಂಗಿಕ ವಿಚಾರಗಳು ಮತ್ತು ಚಟುವಟಿಕೆಗಳು ನೀಡುವ ಸುಖ ಸಂತೋಷವನ್ನು ಅನುಭವಿಸಲು ಹದಿಹರೆಯದ ಹುಡುಗ ಹುಡುಗಿಯರು ಹಾತೊರೆಯುತ್ತಾರೆ. ಅನೇಕ ರೀತಿಯಲ್ಲಿ ಲೈಂಗಿಕ ಅಭಿವ್ಯಕ್ತಿಯನ್ನು ಪ್ರಕಟ ಮಾಡಲು ಪ್ರಾರಂಭಿಸುತ್ತಾರೆ.

ಪ್ರೀತಿ ಪ್ರಣಯಭರಿತ ಕಾದಂಬರಿಗಳನ್ನು ಓದುವುದು, ಸಿನಿಮಾ, ಟೀವಿ ಕಾರ್ಯಕ್ರಮಗಳನ್ನು ನೋಡುವುದು, ಲೈಂಗಿಕ ಸಾಹಿತ್ಯ ಚಿತ್ರ ವೀಕ್ಷಿಸುವುದು. ಹುಡುಗ ಹುಡುಗಿಯರು ಜೊತೆಯಾಗಿ ಹೋಟೆಲ್, ಪಾರ್ಕ್, ಐಸ್‌ಕ್ರೀಂ ಪಾರ್ಲರ್, ನೃತ್ಯ ಕೇಂದ್ರಗಳಿಗೆ ಹೋಗುವುದು. ಶಾಲಾ ಕಾಲೇಜು ಆವರಣದಲ್ಲಿ ಅಥವಾ ಎಲ್ಲೆಲ್ಲಿ ಸಾಧ್ಯವೋ ಅಲ್ಲಿ ಹುಡುಗ ಹುಡುಗಿಯರು ಕುಳಿತು ಸರಸ ಸಂಭಾಷಣೆಯಲ್ಲಿ ತೊಡಗುವುದು. ಲೈಂಗಿಕ ಜೋಕುಗಳನ್ನು ಕೇಳುವುದು. ಹುಡುಗ ಹುಡುಗಿಯರು ಪರಸ್ಪರ ಚುಡಾಯಿಸುವುದು. ತಮಾಷೆ ಮಾಡುವುದು. ಒಬ್ಬವ್ಯಕ್ತಿಯನ್ನು ಆಯ್ಕೆಮಾಡಿಕೊಂಡು ಆತನನ್ನು/ಆಕೆಯನ್ನು ಜೀವನ ಸಂಗಾತಿಯಂತೆ ಕಲ್ಪಿಸಿಕೊಳ್ಳುವುದು, ಆರಾಧಿಸುವುದು. ಮದುವೆ ಮಾಡಿಕೊಳ್ಳುವುದೆಂದು ನಿರ್ಧರಿಸುವುದು. ಒಂದು ದಿನ ಆ ವ್ಯಕ್ತಿಯನ್ನು ನೋಡದಿದ್ದರೆ, ಮಾತನಾಡದಿದ್ದರೆ, ತಳಮಳಗೊಳ್ಳುವುದು, ಮಾನಸಿಕ ನೋವು ಹಿಂಸೆ ಪಡುವುದು. ಆ ವ್ಯಕ್ತಿ ಇನ್ನೊಬ್ಬರೊಂದಿಗೆ ಮಾತನಾಡಿದರೆ ಸ್ನೇಹದಿಂದ ಇದ್ದರೆ, ಮತ್ಸರಪಡುವುದು, ಕೋಪಿಸಿಕೊಳ್ಳುವುದು. ಇದನ್ನು Infatuation ಎಂದು ಕರೆಯಲಾಗುತ್ತದೆ.

ಏಕಾಂತದಲ್ಲಿದ್ದಾಗ, ತಮ್ಮ ಜನನಾಂಗವನ್ನು ಮುಟ್ಟಿ, ಉಜ್ಜಿ ಹಾಗೂ ಹಲವು ರೀತಿಯಿಂದ ಪ್ರಚೋದಿಸಿ, ಸಂತೋಷಪಡುವುದು, ಆ ಸಮಯದಲ್ಲಿ ತಮ್ಮ ಇಷ್ಟದ ವ್ಯಕ್ತಿಯೊಂದಿಗೆ ಲೈಂಗಿಕ ಚಟುವಟಿಕೆ ಸರಸ ಸಲ್ಲಾಪ ನಡೆಸಿದಂತೆ ಕಲ್ಪಿಸಿಕೊಳ್ಳುವುದು. ಹುಡುಗ ವೀರ್ಯಸ್ಖಲನವಾಗುವವರೆಗೆ ಈ ಪ್ರಚೋದನೆಯನ್ನು ಮುಂದುವರೆಸುತ್ತಾನೆ. ಇದನ್ನು ಹಸ್ತ ಮೈಥುನ ಎನ್ನುತ್ತಾರೆ. ಶೇಕಡ ೧೦೦ರಷ್ಟು ಹಾಗೂ ಶೇಕಡ ೩೦ರಷ್ಟು ಹುಡುಗಿಯರು ಹದಿಹರೆಯದಲ್ಲಿ ಹಸ್ತಮೈಥುನ ಮಾಡಿಕೊಳ್ಳುತ್ತಾರೆಂದು ಸರ್ವೇಕ್ಷಣಗಳು ತಿಳಿಸುತ್ತವೆ. ಕೆಲವರು ಅವಕಾಶಸಿಕ್ಕಾಗ ಅಥವಾ ತಾವೇ ಅವಕಾಶ ಕಲ್ಪಿಸಿಕೊಂಡು ಪರಿಚಿತ ಅಪರಿಚಿತ ವ್ಯಕ್ತಿಗಳೊಂದಿಗೆ ಲೈಂಗಿಕ ಚಟುವಟಿಕೆಗಳನ್ನು ನಡೆಸುತ್ತಾರೆ. ತತ್ಸಂಬಂಧೀ ಸಮಸ್ಯೆಗಳಿಗೆ ಒಳಗಾಗಿ ಸಂಕಟವನ್ನು ತಪ್ಪಿತಸ್ಥ ಭಾವನೆಯನ್ನು ಅನುಭವಿಸುತ್ತಾರೆ.

ಕೆಲವರು ನೇರವಾಗಿ / ಪರೋಕ್ಷವಾಗಿ ಇತರರನ್ನು ಲೈಂಕಿಕವಾಗಿ ಪ್ರಚೋದಿಸಿ ಲೈಂಗಿಕ ಅಪಚಾರ, ಅತ್ಯಾಚಾರಕ್ಕೆ ಒಳಗಾಗುತ್ತಾರೆ. ಸಲಿಂಗಕಾಮ ಕೈ ತುತ್ತಾಗುತ್ತಾರೆ. ಈ ಎಲ್ಲಾ ವಿಚಾರಗಳನ್ನು ಅನುಭವಗಳನ್ನು ತಂದೆ ತಾಯಿ, ಮನೆಯವರಿಂದ ಮುಚ್ಚಿಡುತ್ತಾರೆ. ಕೆಲವು ಸಲ, ತಮ್ಮ ಸಹವಯಸ್ಕರೊಂದಿಗೆ ಹೇಳಿಕೊಳ್ಳುತ್ತಾರೆ.

ತಪ್ಪು ನಂಬಿಕೆಗಳು, ಭಯಗಳು : ವೈಜ್ಞಾನಿಕವಾದ ಲೈಂಗಿಕ ತಿಳುವಳಿಕೆ ಮತ್ತು ಮಾಹಿತಿ ಇಲ್ಲದೆ, ಸಾಕಷ್ಟು ಹದಿಹರೆಯದವರು ನಮ್ಮ ಸಮಾಜದಲ್ಲಿ ಪ್ರಚಲಿತವಿರುವ ತಪ್ಪು ನಂಬಿಕೆಗಳು ಮತ್ತು ಉತ್ಪ್ರೇಕ್ಷಿತ ಅಸ್ವಸ್ಥತೆಗೆ ಒಳಗಾಗುತ್ತಾರೆ. ಇದನ್ನು ಲೈಂಗಿಕ ಚಿತ್ತಚಂಚಲತೆ (Sexual Neurosis) ಎಂದು ಕರೆಯಲಾಗುತ್ತದೆ. ಉದಾಹರಣೆಗೆ.

ಹಸ್ತಮೈಥುನ, ವೀರ್ಯಸ್ಖಲನದಿಂದ ದೈಹಿಕ ಮಾನಸಿಕ ಲೈಂಗಿಕ ದುರ್ಬಲತೆ ಬರುತ್ತದೆ ಎಂದು ಭಯಪಡುವುದು, ಕಂಗಾಲಾಗುವುದು. ಕೇವಲ ಶರೀರಸ್ಪರ್ಶ ತುಟಿ ಸ್ಪರ್ಶದಿಂದ ಗರ್ಭಧಾರಣೆ ಆಗುತ್ತದೆ ಎಂದು ನಂಬುವುದು, ಹೆದರುವುದು. ಜನನಾಂಗಗಳ ಗಾತ್ರ / ಉದ್ದ / ನಿಮರುವಿಕೆ ಬಗ್ಗೆ ಚಿಂತಿತರಾಗುವುದು, ತಾವು ಲೈಂಗಿಕವಾಗಿ ದುರ್ಬಲರು ಎಂದು ತಿಳಿಯುವುದು. ಸ್ತನಗಳ ಗಾತ್ರದ ಬಗ್ಗೆ ಚಿಂತೆ ಮಾಡುವುದು. ಹುಡುಗಿಯರು ಮುಖದ ಮೇಲಿನ ಹೆಚ್ಚು ಕೂದಲುಗಳ ಬಗ್ಗೆ ಚಿಂತೆ ಮಾಡುವುದು. ದೈಹಿಕ ಸ್ಪರ್ಶದಿಂದ, ಲೈಂಗಿಕವ್ಯಾಧಿ, ಏಡ್ಸ್‌ ಬರಲಿದೆ ಅಥವಾ ಬಂದು ಬಿಟ್ಟಿದೆ ಎಂದು ಆತಂಕ ಪಡುವುದು. ತಪ್ಪಿತಸ್ಥ ಭಾವನೆಯನ್ನು ಬೆಳೆಸಿಕೊಳ್ಳುವುದು. ತನಗೆ ಸರಿಯಾದ ರೀತಿಯಲ್ಲಿ ದಾಂಪತ್ಯ ಸುಖ ಕೊಡಲು / ಪಡೆಯಲು ಶಕ್ತಿಸಾಮರ್ಥ್ಯವಿದೆಯೇ ಎಂದು ಅನುಮಾನ ಪಡುವುದು. Sexual Neurosisನಿಂದ ಬಳಲುವ ವ್ಯಕ್ತಿ ಅನೇಕ ದೈಹಿಕ ಮಾನಸಿಕ ರೋಗಲಕ್ಷಣಗಳಿಂದ ಬಳುಲುತ್ತಾನೆ /ಳೆ.
ವಿನಾಕಾರಣ ದೈಹಿಕ ನೋವು / ಸುಸ್ತು / ಆಯಾಸ. ಆಹಾರ ಸೇವನೆ / ನಿದ್ರೆ / ಮಲಮೂತ್ರ ವಿರ್ಸಜನೆಯಲ್ಲಿ ಏರುಪೇರು. ಏಕಾಗ್ರತೆ ಇಲ್ಲ, ಮರೆವು, ಬೌದ್ಧಿಕ ಸಾಮರ್ಥ್ಯ ಕ್ಷೀಣಿಸುವುದು. ತಪ್ಪಿತಸ್ಥ ಭಾವನೆ, ಬೇಸರ ದುಃಖ, ಜೀವನದಲ್ಲಿ ನಿರಾಸಕ್ತಿ ಆತ್ಮಹತ್ಯೆ ಆಲೋಚನೆ ಮಾಡುವುದು. ವಿದ್ಯಾಭ್ಯಾಸ ಕೆಲಸ ಕರ್ತವ್ಯಗಳಲ್ಲಿ ಆಸಕ್ತಿ ಕಳೆದುಕೊಳ್ಳುವುದು. ತಮಗೆ ತೀವ್ರ ಕಾಯಿಲೆ ಇದೆ ಎಂದು ಭ್ರಮೆಗೊಳಗಾಗುವುದು. ಇತ್ಯಾದಿ. ಈ ಸಮಸ್ಯೆಗಳಿದ್ದರೆ, ತಡಮಾಡದೆ ವೈದ್ಯರನ್ನು ಕಾಣಬೇಕು.

ಲೈಂಗಿಕ ಅರಿವು :

ಈ ರೀತಿ ಜೀವನದ ವಸಂತ ಕಾಲದಲ್ಲಿ ಅನೇಕ ಹುಡುಗ ಹುಡುಗಿಯರು ಸಂತೋಷ ಸಂಭ್ರಮ ಪಡುವುದರ ಬದಲು. ಸಂಕಟ, ದುಃಖ, ಭಯಕ್ಕೆ ಒಳಗಾಗುತ್ತಾರೆ. ಅವರ ದೇಹ ಮನಸ್ಸಿನಲ್ಲಾಗುವ ಬೆಳವಣಿಗೆ ಬದಲಾವಣೆಗಳು ಎಷ್ಟು ಸಮರ್ಪಕ, ಎಷ್ಟು ಕೊರತೆ ಎಂಬುದು ಅವರಿಗೆ ತಿಳಿಯಬೇಕು. ಲೈಂಗಿಕ ಅಭಿವ್ಯಕ್ತಿಯನ್ನು ಹೇಗೆ ಮಾಡಬೇಕು, ಹೇಗೆ ಮಾಡಬಾರದು, ಯಾವುದು ಸಹಜ, ಯಾವುದು ಅಸಹಜ, ಯಾವುದು ಸರಿ ಯಾವುದು ತಪ್ಪು, ಯಾವುದು ಎಷ್ಟರಮಟ್ಟಿಗೆ ಅಪಾಯಕಾರಿ, ಲೈಂಗಿಕ ಆಸೆ ಭಾವನೆಗಳಿಗೆ ಎಷ್ಟು ಪ್ರಾಮುಖ್ಯತೆ ಕೊಡಬೇಕು, ಅವುಗಳನ್ನು ಹತೋಟಿಯಲ್ಲಿಡುವುದು ಹೇಗೆ, ಈ ಹಂತದಲ್ಲಿ ಲೈಂಗಿಕ ಸಂಪರ್ಕ, ಸಾಹಸಗಳ ದುಷ್ಪರಿಣಾಮಗಳೇನು, ಯಾವಾಗ ವೈದ್ಯರನ್ನು ತಜ್ಞರನ್ನು ಕಾಣಬೇಕು. ಲೈಂಗಿಕ ಶೋಷಣೆ ಅತ್ಯಾಚಾರಗಳಿಂದ ತಪ್ಪಿಸಿಕೊಳ್ಳುವುದು ಹೇಗೆ. ಶೋಷಣೆ / ಅಪಚಾರವಾದಾಗ ಬಾಳಿನ ವಸಂತದಲ್ಲಿರುವ ಹುಡುಗ ಹುಡುಗಿಯರಿಗೆ ತಂದೆ ತಾಯಿಗಳು, ಶಿಕ್ಷಕರು, ವೈದ್ಯರು ಆಪ್ತಸಲಹೆಗಾರರು ಹೇಳಿಕೊಡಬೇಕು. ಲೈಂಗಿಕತೆ ಬಗ್ಗೆ ಹರೆಯದವರು ಆರೋಗ್ಯಕರ ಹಾಗೂ ವೈಜ್ಞಾನಿಕವಾದ ನಿಲುವು ಧೋರಣೆ ಆಚಾರಣೆಗಳನ್ನು ಹೊಂದುವಂತೆ ಮಾಡುವುದು ಎಲ್ಲ ಹಿರಿಯರ ಕರ್ತವ್ಯ. ಇದು ಇವರ ಕಲೆಕೆ, ಬುದ್ಧಿವಂತಿಕೆ, ಮನೋಸಾಮರ್ಥ್ಯದ ಹೆಚ್ಚಳಕ್ಕೆ ಪೂರಕವಾಗಿರುತ್ತದೆ.

ಹೆಚ್ಚಿನ ಓದಿಗಾಗಿ ಪುಸ್ತಕ: ನಿಮ್ಮ ಬದುಕು, ಬುದ್ದವಂತಿಕೆ, ನೆನಪಿನ ಶಕ್ತಿ, ಪರೀಕ್ಷಾ ನಿರ್ವಹಣೆ ಉತ್ತಮವಾಗಲಿ
ಲೇಖಕರು: ಡಾ|| ಸಿ. ಆರ್. ಚಂದ್ರಶೇಖರ್

-ಕೆ ರವಿಕುಮಾರ್ ಕೋಲಾರ್ 

Advertisements

ನಿಮ್ಮ ಅನಿಸಿಕೆ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: