ಯಾವುದು ಚರಿತ್ರೆ – 2

ಮುಂದುವರಿದ ಭಾಗ – ಹಿಂದಿನ ಭಾಗವನ್ನು ಓದಲು ಇಲ್ಲಿ ಕ್ಲಿಕ್ಕಿಸಿ

ಮ್ಯಾಕ್ಸ್ ಮುಲ್ಲರ್ ನ ಇನ್ನಷ್ಟು ವಿಷಯಗಳು….. ಮ್ಯಾಕ್ಸ್ ಮುಲ್ಲರ್ ನ ವೇದಗಳ ಪ್ರಾಜೆಕ್ಟ್ ನ ಒಳಗುಟ್ಟು 1866ರಲ್ಲಿ ತನ್ನ ಹೆಂಡತಿಗೆ ಬರೆದ ಪತ್ರದಲ್ಲಿದೆ. ಆತನ ಮಾತುಗಳಲ್ಲೇ ಓದಿ: ” ನೋಡಲು ನಾನು ಬದುಕಿರದಿದ್ದರೂ ನಾನು ಮಾಡುತ್ತಿರುವ ವೇದಗಳ ಅನುವಾದ ಇನ್ನು ಮುಂದೆ ಇಂಡಿಯಾದ ಹಣೆಬರಹದ ಮೇಲೆ ಬಹಳ ಪ್ರಭಾವ ಬೀರುತ್ತದೆ. ಅವರ ಮತಕ್ಕೆ ಇದೇ ತಾಯಿ ಬೇರು. ಮುರು ಸಾವಿರ ವರ್ಷಗಳಿಂದ ಆ ತಾಯಿ ಬೇರಿನ ಮುಲಕ ಜನಿಸಿರುವ ಎಲ್ಲವನ್ನು ಸಂಪೂರ್ಣ ಮುಲೋತ್ಪಾಟನೆ ಮಾಡಲು… ಆ ಬೇರನ್ನೇ ಕಿತ್ತು ಅವರಿಗೆ ತೋರಿಸುವುದೊಂದೇ ಮಾರ್ಗವೆಂದು ನನ್ನ ಬಲವಾದ ನಂಬಿಕೆ” (ಅನುವಾದಿತ ಸಾಲುಗಳು: The Life and Letters of Max Muller Vol.1 p.328) ಭಾರತ ದೇಶದಲ್ಲಿ ಬೇರೂರಿದ ವೇದ ಸಂಸ್ಕೃತಿಯನ್ನು ಬೇರು ಸಹಿತ ಕಿತ್ತು ಹಾಕುವುದೇ ಆತನ ವೇದಗಳ ಕೆಲಸದ ನಿಜವಾದ ಆಂತರ್ಯವೆಂದು ತನ್ನ ಹೆಂಡತಿಗೆ ಮುಚ್ಚುಮರೆಯಿಲ್ಲದೇ ಬರೆದಿರುವ ಪತ್ರದಿಂದ ನಿಚ್ಚಳವಾಗುತ್ತದೆ ಯಲ್ಲವೇ..ಈ ಬೇರು ಕಿತ್ತ ನಂತರ ಅಲ್ಲಿ ನೆಡುವುದು ಏನನ್ನು ಅದಕ್ಕೂ ಉತ್ತರ ಅವನ ಇನ್ನೊಂದು ಪತ್ರದಲ್ಲಿ ಸಿಗುತ್ತದೆ.ಇದನ್ನು ಬರೆದುದು.. ಪ್ರತಿಷ್ಠೆಯ ವೇದಗಳ ಪ್ರಾಜೆಕ್ಟ್ ತನಗೆ ಸಿಗುವಂತೆ ಮಾಡಿದ ಕಾರ್ಲ್ ಜೋಸಿಯಾಸ್ ವಾನ್ ಬುನ್ಸೆನ್ ಗೆ… ” ಸೈಂಟ್ ಪಾಲ್ ಕಾಲದಲ್ಲಿನ ರೋಮ್ ಗಿಂತ, ಗ್ರೀಸ್ ಗಿಂತ ಈಗ ಇಂಡಿಯಾ ಕ್ರೈಸ್ತ ಮತಕ್ಕೆ ಪರಿಪಕ್ವ ಸ್ಥಿತಿಯಲ್ಲಿದೆ… ಅಲ್ಲಿ ಕೊಳೆತು ಹೋಗಿರುವ ವೃಕ್ಷ ಸ್ವಲ್ಪ ಸಮಯದಿಂದ ಕೃತ್ರಿಮ ಉಸಿರಾಟದಿಂದ ನಿಂತಿದೆ…ಈಗಲೋ ಆಗಲೋ ಆ ವೃಕ್ಷ ಬೀಳ ಬೇಕಾದ್ದೇ ಎಂದು ಇಂಗ್ಲೀಷರು ಗ್ರಹಿಸಿದರೆ ಆ ಕೆಲಸ ಆದ ಹಾಗೆಯೇ… ಈ ಹೋರಾಟಕ್ಕಾಗಿ ನಾನು ನನ್ನ ಪ್ರಾಣವನ್ನಾದರೂ ಧಾರೆ ಎರೆಯುತ್ತೇನೆ. ಕನಿಷ್ಟ ಈ ಸೆಣಸಾಟವನ್ನು ಯಶಸ್ವಿಗೊಳಿಸುದಕ್ಕೋಸ್ಕರ ನನ್ನ ಸಹಾಯ ಹಸ್ತ ನೀಡುತ್ತೇನೆ…

ಇಂಡಿಯಾದಲ್ಲಿ ಬೇರೂರಿದ್ದು ಯಾವುದಾದರೂ ಶೀಘ್ರವಾಗಿ ಇಡೀ ಏಷಿಯಾವನ್ನು ಆವರಿಸಿ ಬಿಡುತ್ತದೆ, ಅಲ್ಲಿ ಕ್ರೈಸ್ತಮತ ಉತ್ಕರ್ಷಗೊಳ್ಲುವುದನ್ನು ಪ್ರಪಂಚ ನೋಡಲು ಶಕ್ಯವಾದರೆ ಸಾಕು. ಕ್ರೈಸ್ತ ಮತಕ್ಕಿರುವ ಅದ್ಭುತ ಜೀವ ಶಕ್ತಿಯನ್ನು ನಿರೂಪಿಸಲು ೈದಕ್ಕಿಂತಲೂ ಉತ್ತಮ ಉಜ್ವಲ ಅವಕಾಶ ಇನ್ನೊಂದಿರದು.” (ಅನುವಾದಿತ: The Life and Letters of Max Muller Vol.1 pp.190-91) ಮ್ಯಾಕ್ಸ್ ಮುಲ್ಲರ್ ರವ ಕ್ರೈಸ್ತ ಮತಾವೇಶ ಇನ್ನು ಸ್ಪಷ್ಟವಾಗುವುದು ಅವರೆ ಬರೆದ ಮತ್ತೊಂದು ಪತ್ರದಿಂದ ಬರೆದಿದ್ದು ಇಂಡಿಯಾಗೆ ಬಂದಿದ್ದ ವಿದೇಶಾಂಗ ಮಂತ್ರಿ ಆಗಿದ್ದ ಆರ್ಗಿಲ್ ಡ್ಯೂಕ್ ಅವರಿಗೆ.. ” ಇಂಡಿಯಾ ದಲ್ಲಿನ ಪುರಾತನ ವೃಕ್ಷ ವಿನಾಶಕ್ಕಾಗಿ ಸಿದ್ಧವಾಗಿ ನಿಂತಿದೆ. ಕ್ರೈಸ್ತ ಮತ ಅಲ್ಲಿ ಹೆಜ್ಜೆ ಇರಿಸದಿದ್ದರೆ ತಪ್ಪು ಯಾರದು?” (ಅನುವಾದಿತ: The Life and Letters of Max Muller Vol.1 p.358) ಭಾರತದ ಪ್ರಾಚೀನ ಮತಕ್ಕೆ ತಾಯಿ ಬೇರಿನಂತಹ ವೇದಗಳನ್ನು ತಾನು ಅನುವಾದಿಸುತ್ತಿರುವುದರ ಹಿಂದಿದ್ದ ಒಂದು ಮುಖ್ಯವಾದ ಅಂತರಾರ್ಥವನ್ನು – ಅನುವಾದಗಳ ಕೆಲಸವನ್ನೊಪ್ಪಿಕೊಂಡ ನಲುವತ್ತು ವರ್ಷಗಳ ನಂತರ ಇಂಗ್ಲೆಂಡಿನ ಸೈಂಟ್ ಜಾನ್ಸ್ ಕಾಲೇಜಿನಲ್ಲಿ ಮಾಡಿದ ಉಪನ್ಯಾಸದಲ್ಲಿ ಮುಚ್ಚುಮರೆಯಿಲ್ಲದೆ ಹೊರಹಾಕಿದ್ದಾನೆ. ” ಯುನಿವರ್ಸಿಟಿ ಪ್ರೆಸ್ ಗಾಗಿ ಈ ಪವಿತ್ರಗ್ರಂಥಗಳ ಪೈಕಿ ಅತಿ ಮುಖ್ಯವಾದ ಗ್ರಂಥಗಳ ಅನುವಾದ ಸರಣಿಯನ್ನು ಪ್ರಕಟಿಸಲು ನಾನು ಒಪ್ಪಿಕೊಂಡಾಗ, ಮಿಷನರಿಗಳಿಗೆ ಸಹಾಯ ಮಾಡುವುದು ನನ್ನ ಧ್ಯೇಯಗಳಲ್ಲಿ ಒಂದಾಗಿತ್ತು.. (ಅನುವಾದಿತ: The Life and Letters of Max Muller Vol.1 p.238) ಇಲ್ಲಿಯವರೆಗೂ ಉದಾಹರಿಸಲಾದ ಮ್ಯಾಕ್ಸ್ ಮುಲ್ಲರ್ ಮಾತುಗಳೆಲ್ಲವೂ ಒಂದೇ ಗ್ರಂಥದಿಂದ ಆಯ್ಕೆ ಮಾಡಿದಂಥವು. ಇದೇನು ಮ್ಯಾಕ್ಸ್ ಮುಲ್ಲರ್ ನ ವಿರೋಧಿಗಳು ಬರೆದಂತಾದ್ದು ಎಂದೆನಿಸಬೇಡಿ. ಇದನ್ನು ಪ್ರಕಟಿಸಿದ್ದು ಜಾರ್ಜಿನಾ ಈಕೆ ಮತ್ತಾರು ಅಲ್ಲ ಮ್ಯಾಕ್ಸ್ ಮುಲ್ಲರ್ ನ ಧರ್ಮಪತ್ನಿ..ಹಾಗಾಗಿ ಈಪುಸ್ತಕದ ಮಾತುಗಳಲ್ಲಿನ ಸತ್ಯಾಸತ್ಯತೆಯ ಕುರಿತು ಯಾರಿಗೂ ಸಂದೇಹ ಬರಲಿಕ್ಕಿಲ್ಲ ಅಲ್ಲವೇ…
ಭಾಗ-3 ಓದಲು ಇಲ್ಲಿ ಕ್ಲಿಕ್ಕಿಸಿ
ಗ್ರಂಥ ಕೃಪೆ: ಯಾವುದು ಚರಿತ್ರೆ..

 ಗುರುಪ್ರಸಾದ್ ಆಚಾರ್ಯ

Advertisements

3 responses

  1. […] ಭಾಗ-2 ನ್ನು ಓದಲು ಇಲ್ಲಿ ಕ್ಲಿಕ್ಕಿಸಿ ಮ್ಯಾಕ್ಸ್ ಮುಲ್ಲರ್ ನೂರಕ್ಕೆ ನೂರು ಭಾಗ ಕ್ರೈಸ್ತರು. ಕ್ರೈಸ್ತಮತ ಗ್ರಂಥಗಳಲ್ಲಿ ಬರೆದಿರುವುದೇ ಪರಮಸತ್ಯ ಎಂದು ನಂಬುತ್ತಿದ್ದವನು. ಬೈಬಲ್ ಪ್ರಕಾರ ಪ್ರಪಂಚದ ಸೃಷ್ಟಿ ಕ್ರಿ.ಪೂ.4004ನೇ ಸಂವತ್ಸರದ ಅಕ್ಟೋಬರ್ 23 ರಂದು ಬೆಳಿಗ್ಗೆ 9.00 ಗಂಟೆಗೆ ಆಯಿತು. ಅಲ್ಲಿಂದ ಲೆಕ್ಕ ಹಾಕಿದರೆ ಜಲಪ್ರಳಯ ಕ್ರಿ.ಪೂ ೨೪೪೮ರಲ್ಲಿ ನಡೆದಿರಬೇಕು. ಜಲಪ್ರಳಯ ಅಂತ್ಯಗೊಂಡು ಭೂಮಿ ಒಣಗಿ ಗಟ್ಟಿಯಾಗಿ ಆರ್ಯರು ದಂಡಯಾತ್ರೆಗೆ ಉದ್ಯುಕ್ತರಾಗಲು ಸುಮಾರು ಒಂದು ಸಾವಿರ ಹಿಡಿಯಿತೆಂದುಕೊಂಡರೆ ಕ್ರಿ.ಪೂ.೧೪೦೦ (1400)ರ ಸುಮಾರಿಗೆ ಬಂದು ಮುಟ್ಟುತ್ತೇವೆ, ದಂಡಯಾತ್ರೆ ಮಾಡಿ ಬಳಲಿ ಬೆಂಡಾದ ಆರ್ಯರು ದೇಶದಲ್ಲಿ ಸೆಟ್ಲ್ ಆಗಿ ವೇದ ರಚನೆಗೆ ತಾಳೆಗರಿ ಹಾಗು ಅದರ ಮೇಲೆ ಕೊರೆಯಲು ಉಕ್ಕಿನ ಲೇಖನಿಯನ್ನು ಕಲೆಹಾಕಲು ಎರಡು ಶತಮಾನಗಳನ್ನು ಬಿಟ್ಟುಬಿಟ್ಟರೆ ಕ್ರಿ.ಪೂ. ೧೨೦೦(1200)ಕ್ಕೆ ತಲುಪುತ್ತೇವೆ. ಇಂತಹಾ ಹುಚ್ಚು ಲೆಕ್ಕಗಳ ಮುಖಾಂತರವೇ ಮುಲ್ಲರ್ ಮಹಾಶಯರು ಕ್ರಿ.ಪೂ 15ಶತಾಬ್ದಿಯಲ್ಲಿ ಆರ್ಯನ್ನರು ಭಾರತಕ್ಕೆ ಬಂದರೆಂದೂ,ಕ್ರಿ.ಪೂ 1200 ಸುಮಾರಿನಲ್ಲಿ ಋಗ್ವೇದವನ್ನು ಬರೆದರೆಂದು ಅಪ್ಪಣೆ ಕೊಡಿಸಿದರು. ಇದು ಬರಿಯ ಕಲ್ಪನೆ ಅಥವಾ ಲೇಖಕರು ಬರೆದ ಸುಳ್ಳುಕಥೆ ಅಂದುಕೊಳ್ಳಬೇಡಿ…ಮ್ಯಾಕ್ಸ್ ಮುಲ್ಲರನ ಆಪ್ತಮಿತ್ರನೂ, ಮುಲ್ಲರನ ಆಲೋಚನಾ ವಿಧಾನವನ್ನು ಚೆನ್ನಾಗಿ ಅರಿತಿದ್ದವನೂ ಆದ ” ಥಿಯೋಡರ್ ಗೋಲ್ಡ್ ಸ್ಟಕರ್” ಬಹಿರಂಗವಾಗಿ ಹೇಳಿರುವ ಸತ್ಯ ಮಾತು. […]

  2. […] ಭಾಗ-2 ನ್ನು ಓದಲು ಇಲ್ಲಿ ಕ್ಲಿಕ್ಕಿಸಿ ಮ್ಯಾಕ್ಸ್ ಮುಲ್ಲರ್ ನೂರಕ್ಕೆ ನೂರು ಭಾಗ ಕ್ರೈಸ್ತರು. ಕ್ರೈಸ್ತಮತ ಗ್ರಂಥಗಳಲ್ಲಿ ಬರೆದಿರುವುದೇ ಪರಮಸತ್ಯ ಎಂದು ನಂಬುತ್ತಿದ್ದವನು. ಬೈಬಲ್ ಪ್ರಕಾರ ಪ್ರಪಂಚದ ಸೃಷ್ಟಿ ಕ್ರಿ.ಪೂ.4004ನೇ ಸಂವತ್ಸರದ ಅಕ್ಟೋಬರ್ 23 ರಂದು ಬೆಳಿಗ್ಗೆ 9.00 ಗಂಟೆಗೆ ಆಯಿತು. ಅಲ್ಲಿಂದ ಲೆಕ್ಕ ಹಾಕಿದರೆ ಜಲಪ್ರಳಯ ಕ್ರಿ.ಪೂ ೨೪೪೮ರಲ್ಲಿ ನಡೆದಿರಬೇಕು. ಜಲಪ್ರಳಯ ಅಂತ್ಯಗೊಂಡು ಭೂಮಿ ಒಣಗಿ ಗಟ್ಟಿಯಾಗಿ ಆರ್ಯರು ದಂಡಯಾತ್ರೆಗೆ ಉದ್ಯುಕ್ತರಾಗಲು ಸುಮಾರು ಒಂದು ಸಾವಿರ ಹಿಡಿಯಿತೆಂದುಕೊಂಡರೆ ಕ್ರಿ.ಪೂ.೧೪೦೦ (1400)ರ ಸುಮಾರಿಗೆ ಬಂದು ಮುಟ್ಟುತ್ತೇವೆ, ದಂಡಯಾತ್ರೆ ಮಾಡಿ ಬಳಲಿ ಬೆಂಡಾದ ಆರ್ಯರು ದೇಶದಲ್ಲಿ ಸೆಟ್ಲ್ ಆಗಿ ವೇದ ರಚನೆಗೆ ತಾಳೆಗರಿ ಹಾಗು ಅದರ ಮೇಲೆ ಕೊರೆಯಲು ಉಕ್ಕಿನ ಲೇಖನಿಯನ್ನು ಕಲೆಹಾಕಲು ಎರಡು ಶತಮಾನಗಳನ್ನು ಬಿಟ್ಟುಬಿಟ್ಟರೆ ಕ್ರಿ.ಪೂ. ೧೨೦೦(1200)ಕ್ಕೆ ತಲುಪುತ್ತೇವೆ. ಇಂತಹಾ ಹುಚ್ಚು ಲೆಕ್ಕಗಳ ಮುಖಾಂತರವೇ ಮುಲ್ಲರ್ ಮಹಾಶಯರು ಕ್ರಿ.ಪೂ 15ಶತಾಬ್ದಿಯಲ್ಲಿ ಆರ್ಯನ್ನರು ಭಾರತಕ್ಕೆ ಬಂದರೆಂದೂ,ಕ್ರಿ.ಪೂ 1200 ಸುಮಾರಿನಲ್ಲಿ ಋಗ್ವೇದವನ್ನು ಬರೆದರೆಂದು ಅಪ್ಪಣೆ ಕೊಡಿಸಿದರು. ಇದು ಬರಿಯ ಕಲ್ಪನೆ ಅಥವಾ ಲೇಖಕರು ಬರೆದ ಸುಳ್ಳುಕಥೆ ಅಂದುಕೊಳ್ಳಬೇಡಿ…ಮ್ಯಾಕ್ಸ್ ಮುಲ್ಲರನ ಆಪ್ತಮಿತ್ರನೂ, ಮುಲ್ಲರನ ಆಲೋಚನಾ ವಿಧಾನವನ್ನು ಚೆನ್ನಾಗಿ ಅರಿತಿದ್ದವನೂ ಆದ ” ಥಿಯೋಡರ್ ಗೋಲ್ಡ್ ಸ್ಟಕರ್” ಬಹಿರಂಗವಾಗಿ ಹೇಳಿರುವ ಸತ್ಯ ಮಾತು. […]

  3. […] ಮುಂದಿನ ಭಾಗದಲ್ಲಿ.. […]

ನಿಮ್ಮ ಅನಿಸಿಕೆ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: