ಅರಳಬೇಕಾದ ಹೂಗಳು- ಕೆ ರವಿಕುಮಾರ್ ಕೋಲಾರ್

ಪಾಲಕರು ಹಠ ಮಾಡುವ ಮಕ್ಕಳ ಬಗ್ಗೆ ಹಾಗೂ ಚಿಕ್ಕ ವಯಸ್ಸಿನಲ್ಲಿ ಏನಾದರೂ ಹಠದಿಂದ ಕೇಳಿದಾಗ ಅವರ ಆ ಹಠದ ಸ್ವಭಾವಕ್ಕೆ ಕಾರಣ ತಿಳಿಯದೇ ಗದರುವ ಮೂಲಕವಾಗಲೀ ಅವರ ಮನಸ್ಸಿಗೆ ನೋವಾಗುವ ಹಾಗೆ ವರ್ತಿಸುವ ಮೂಲಕವಾಗಲೀ ಮಾಡುವುದರಿಂದ ಯಾವುದೇ ಪ್ರಯೋಜನವಿರದು.ಬದಲಿಗೆ ಸಮಾಧಾನದಿಂದ ಅವರ ಕೋಪ ಅಥವ ಹಠಕ್ಕೆ ಕಾರಣ ತಿಳಿದು ಅದನ್ನು ಪರಿಹರಿಸಿದರೆ ಮಕ್ಕಳ ಮನಸ್ಸಿನ ಮೇಲೆ ಯಾವ ಕೆಟ್ಟ ಪರಿಣಾಮವಿರದು,.ಎಳೆಯ ಮಕ್ಕಳ ಮನಸ್ಸು ತುಂಬಾ ಮೃದುವಾದುದು,ಅವರಲ್ಲಿ ಅಗಾಧ ಗೃಹಿಕೆಯ ಶಕ್ತಿ ಇರುತ್ತದೆ.ಅವುಗಳ ಜೊತೆಗೆ ಅನೇಕ ವಿಚಾರಗಳನ್ನು ಕಲಿಯುವ ಸಾದ್ಯತೆ ಇರುತ್ತದೆ,ಅದರಲ್ಲೂ ಅವರ ಆಟದ ಸಮಯದಲ್ಲಿ ಅವರಲ್ಲಿನ ಗೃಹಿಕೆಯ ಶಕ್ತಿಗೆ ವಿಶೇಷ ಮೆರಗು ಇರುತ್ತದೆ.ಇಂಥ ಸಂದರ್ಭಗಳಲ್ಲಿ ಮಕ್ಕಳ ಮನಸ್ಸು ಅರಳುವಂತೆ ಪಾಲಕರು ವರ್ತಿಸಬೇಕು ವಿನಹ ಅವರ ಮನಸಿನ ಮೇಲೆ ಕೆಟ್ಟ ಪರಿಣಾಮ ಉಂಟಾಗುವಂತೆ ನಡೆದುಕೊಳ್ಳಬಾರದು. ಆ ಕ್ಷಣದಲ್ಲಿ ಅವರ ಕೋಪಕ್ಕೆ ಹಠಮಾರಿತನಕ್ಕೆ ಸ್ಪಂದಿಸಿ ಸೂಕ್ತ ಸಲಹೆ ನೀಡಿ ಅವರ ಸೃಜನಶೀಲತೆಗೆ ಭಂಗ ಬಾರದಂತೆ ತಡೆದು ಸೂಕ್ತ ಪ್ರೌತ್ಸಾಹ ನೀಡುವ ಮೂಲಕ ಉತ್ತೇಜಿಸುವುದು ಒಳ್ಳೆಯದು, ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಬೆಳೆಯುವ ಮಕ್ಕಳ ಬುದ್ದಿಮಟ್ಟ ತೀಕ್ಷ-್ಣವಾಗಿರುತ್ತದೆ. ಇಂಥ ಸಂದರ್ಭಗಳಲ್ಲಿ ಪಾಲಕರು ತಮ್ಮ ಕೆಲಸದ ಒತ್ತಡದ ನಡುವೆಯೂ ಮಕ್ಕಳ ಸೃಜನಶೀಲತೆ ಬೆಳವಣಿಗೆಯಲ್ಲಿ ತಮ್ಮದೇ ಆದ ಮಹತ್ವದ ಪಾತ್ರ ವಹಿಸುವರು *ಮಕ್ಕಳಿಗೆ ಆಟ ಎಂದರೆ ತುಂಬಾ ಇಷ್ಟ.ಆಟವಾಡುವ ಮದ್ಯದಲ್ಲಿ ಅವರನ್ನು ಕೂಗಿ ಬೇರೆ ಏನಾದರೂ ಮಾಡು ಎಂದು ಹೇಳಬೇಡಿ.

*ಮಕ್ಕಳ ಮನಸ್ಸು ಅತೀ ಸೂಕ್ಷ್ಮ ಅವರೆದುರು ಪಾಲಕರು ಜಗಳವಾಡುವುದಾಗಲಿ.ಅಥವ ಒಬ್ಬರನೊಬ್ಬರು ನಿಂದಿಸುವುದಾಗಲಿ ನಿಮ್ಮ ನಿಮ್ಮ ವೈಯುಕ್ತಿಕ ಸಮಸ್ಯೆಗಳನ್ನು ಎತ್ತಿ ಮಾತನಾಡುವುದಾಗಲಿ ಮಾಡಬೇಡಿ ಹೀಗೆ ಮಾಡುವುದರಿಂದ ಅಂಥ ಘಟನೆಗಳು ಮಕ್ಕಳ ಮೇಲೆ ಕೆಟ್ಟ ಪರಿಣಾಮ ಉಂಟು ಮಾಡುವುದಲ್ಲದೇ ಅವರ ಮಾನಸಿಕ ಸ್ಥಿತಿ ಕೂಡ ಕೆಡುವುದರಲ್ಲಿ ಸಂದೇಹವಿಲ್ಲ.

*ಮಕ್ಕಳೊಂದಿಗೆ ಮನೆಯಲ್ಲಿರುವಾಗ ಸಂತಸದಿಂದ ಮಾತನಾಡಿ.ಅವರಿಗೆ ನಿಂದಿಸುವುದಾಗಲೀ ಗದರಿಸುವುದಾಗಲಿ ಭಯಗೊಳಿಸುವ ಸಂಗತಿ ಹೇಳುವ ಮೂಲಕ ಅವರನ್ನು ಭಯಗೊಳಿಸದಿರಿ.

*ಮಕ್ಕಳನ್ನು ನಿಮಗೆ ಬಿಡುವಿನ ವೇಳೆಯಲ್ಲಿ ನಿಮಗೆ ಹತ್ತಿರವೆನಿಸುವ ಪರಿಸರದ ನಿಸರ್ಗ ತಾಣಗಳಿ ಗೋ.ಮ್ಯುಜಿಯಂಗಳಿಗೋ ಅಥವ ಪ್ರಾಣಿ ಸಂಗ್ರಹಾಲಯಗಳಿಗೋ ಕರೆದೊಯ್ಯಿರಿ ಅಲ್ಲಿ ಅವರ ಸೃಜನಶೀಲತೆಗೆ ನೆರವಾಗುವ ಅಂಶಗಳಿಗೆ ಅವರು ಕೇಳುವ ಮಾಹಿತಿಗೆ ಸೂಕ್ತ ಉತ್ತರ ನೀಡಿ ಅದು ಅವರ ಓದಿನ ಮೇಲೆ ಪ್ರಭಾವ ಬೀರಬಲ್ಲದು.

*ನಮ್ಮ ದೇಶದ ಇತಿಹಾಸ ಬಿಂಬಿಸುವ ಕಥೆಗಳನ್ನು ಜೀವನ ಚರಿತ್ರೆಗಳನ್ನು ನಿಮ್ಮ ಬಿಡುವಿನ ವೇಳೆ ಮಕ್ಕಳಿಗೆ ಹೇಳಿ.ಸಾದ್ಯವೆಂದಾದಲ್ಲಿ ಅಂಥ ಪುಸ್ತಕಗಳನ್ನು ಖರೀದಿಸಿ ಮಕ್ಕಳಿಗೆ ಕೊಡಿ.ಇತ್ತೀಚೆಗೆ ಅನೃಕ ದಿನ ಪತ್ರಿಕೆಗಳು ಕೂಡ ವೈವಿದ್ಯಮಯ ಮಕ್ಕಳ ಪುರವಣಿಗಳನ್ನು ಪ್ರಕಟಿಸುತ್ತಿವೆ ಅಂಥ ಪುರವಣಿಗಳನ್ನು ತೆಗೆದಿರಿಸಿ ಮಕ್ಕಳಿಗೆ ಕೊಡಿ ಅವುಗಳಲ್ಲಿನ ಚಿತ್ರರಚನೆ,ದಾರಿತೋರುವ ಆಟ,ಇತ್ಯಾದಿಗಳನ್ನು ಮಗು ಬಿಡಿಸುವ ಮೂಲಕ ಅವರ ಬುದ್ದಿಶಕ್ತಿಗೆ ಹಾಗೂ ಮಾನವೀಯ ಮೌಲ್ಯಗಳನ್ನು ಅರಿಯಲು ಸಹಾಯಕ.

*ಮಕ್ಕಳು ಶಾಲೆಯಿಂದ ಬಂದ ನಂತರ ಕೂಡಲೇ ಆ ದಿನದ ಮನೆಗೆಲಸ ಮಾಡಲು ಪ್ರಾರಂಬಿಸು ಎಂದು ಹೇಳಬೇಡಿ,ಬದಲಾಗಿ ಆ ದಿನ ಶಾಲೆಯಲ್ಲಿನ ಮಗು ಹೇಳುವ ಸಂಗತಿಗಳ ಬಗ್ಗೆ ಗಮನವಿಟ್ಟು ಕೇಳಿ ಅವುಗಳಲ್ಲಿ ಕೆಲವು ಮಗುವಿನ ಬುದ್ದಿಶಕ್ತಿಗೆ ಪ್ರೌತ್ಸಾಹ ನೀಡುವ ಸಂಗತಿಗಳಿರಬಹುದು ಆಗ ನಿಮ್ಮ ಪ್ರೌತ್ಸಾಹದಾಯಕ ನುಡಿಗಳಿಂದ ಅವರನ್ನು ಹುರಿದುಂಬಿಸಿ ಮಗುವಿನ ಸೃಜನಶೀಲತೆಗೆ ಅವಕಾಶ ಕೊಡಿ.

*ಮಕ್ಕಳು ಶಾಲೆಯಿಂದ ಬಂದ ತಕ್ಷಣ ಆಟವಾಡಲು ಹೋಗುತ್ತೇನೆಂದರೆ ಅವಕಾಶ ಕೊಡಿ ಅದು ಮಗುವಿನ ಮನೋಲ್ಲಾಸಕ್ಕೆ ಪೂರಕ.ಆಟವಾಡಿ ಬಂದ ನಂತರ ಆ ದಿನ ಶಾಲೆಯಲ್ಲಿ ಏನು ಹೇಳಿದರು ಆ ದಿನದ ಮನೆಗೆಲಸವೇನು,? ಎಂದು ಕೇಳುವ ಮೂಲಕ ಅಂದಿನ ಮನೆಗೆಲಸ ಮಾಡುವಲ್ಲಿ ನಿಮ್ಮ ಸಹಕಾರ ನೀಡಿ ಆದರೆ ಅದನ್ನು ನೀವೇ ಮಾಡಿಕೊಡಲು ಹೋಗಬೇಡಿ.

*ಮಕ್ಕಳಿಗೆ ಶಾಲೆಯಲ್ಲಿ ಹೇಳಿದ ಮನೆಗೆಲಸ ಹೊರೆಯಾಗುಂತಿದ್ದಲ್ಲಿ ನಿಮ್ಮ ಮಗುವಿನ ಬುದ್ದಿಮಟ್ಟ ಹಾಗೂ ಶಾರೀರಿಕ ಬೆಳವಣಿಗೆಗೆ ಅನುಗುಣವಾಗಿ ನಿಮ್ಮ ಮಗು ಎಷ್ಟು ಮಾಡಲು ಸಾದ್ಯ ಎಂಬುದನ್ನು ನಿರ್ಧಿಷ್ಟಪಡಿಸಿಕೊಳ್ಳಿ ಅವರ ತರರಗತೆ ಶಿಕ್ಷಕರನ್ನು ಕಂಡು ನಿಮ್ಮ ಮಗುವಿನ ಸಮಸ್ಯೆ ಬಗ್ಗೆ ಚರ್ಚಿಸಿ ಸೂಕ್ತ ಕಾರ್ಯ ಕೈಗೊಳ್ಳುವ ಮೂಲಕ ಮಕ್ಕಳ ಬೌದ್ದಿಕ ವಿಕಾಸಕ್ಕೆ ನೆರವಾಗಿರಿ.

*ಮಕ್ಕಳು ಶಾಲೆಗೆ ಹೋಗಲು ಹಠ ಮಾಡುತ್ತಿದ್ದರೆ ಆ ಮಗುವಿಗೆ ಬಂದಿರಬಹುದಾದ ಸಮಸ್ಯೆಗಳು ಏನು ಎಂಬುದನ್ನು ಮಗುವಿನೊಂದಿಗೆ ಹೈದಯಸ್ಪರ್ಶಿಯಾಗಿ ಮಾತನಾಡುವ ಮೂಲಕ ಕಂಡುಕೊಳ್ಳಿ ಜೊತೆಗೆ ಅದನ್ನು ಪರಿಹರಿಸಲು ಪ್ರಯತ್ನಪಡಿ ಮಗು ನಗುನಗುತ್ತಾ ಶಾಲೆಗೆ ಹೋಗುವಂತೆ ಪ್ರೌತ್ಸಾಹಿಸಿ.

-ಕೆ ರವಿಕುಮಾರ್ ಕೋಲಾರ್

Advertisements

ನಿಮ್ಮ ಅನಿಸಿಕೆ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: