ಹಸಿದವರಿಗೆ ಅನ್ನ ನೀಡುವ ಹೊಟೇಲ್, ರವಿ ಕೋಲಾರ್

ಹಸಿದವರಿಗೆ ಅನ್ನ ನೀಡುತ್ತಿರುವ ಹೊಟೇಲ್, ಕೆ ರವಿಕುಮಾರ್ ಕೋಲಾರ್

ಅಲ್ಲೆಲ್ಲಾ ಭಯಂಕರ ಬರಗಾಲ. ಕುಡಿಯೋಕೆ ನೀರು ಇರಲಿಲ್ಲ. ತಿನ್ನೋಕೆ ಅಗುಳು ಅನ್ನಾನೂ ಸಿಗಲಿಲ್ಲ.ನಾನು ದೂರದ ರಾಯಚೂರಿಂದ ಟ್ರೈನ್ ನಲ್ಲಿ ಹಣ ಇಲ್ದೆ ಬೆಂಗಳೂರಿಗೆ ಬಂದು ತುಳಸಿ ಪಾರ್ಕ್ ನಲ್ಲಿ ಸುಸ್ತಾಗಿ ಮಲಗಿದೆ…..ಮಧ್ಯರಾತ್ರಿ ಯಾರೋ ಬಂದು ಏದ್ದೇಳೋ…..ಬೋ…ಮಗನೆ ಎಂದ ಭಯ ದಿಂದ ಎದ್ದೆ …ಎದ್ದೆಳಲು ನನ್ನ ದೇಹದಲ್ಲಿ ಶಕ್ತಿ ಇಲ್ಲ ..ಅದರೂ ಎದ್ದೆ.ನಿನಗೆ ಕೆಲಸ ಕೊಡುಸು ವೆ ಮಾಡುವೆಯಾ ಎಂದ ..ನನಗೆ ಹಸಿವು ಕೆಲಸ ಬೇಕಿತ್ತು ಆ ಏಜೆಂಟ್ ನನಗೆ ದೇವಾರಾಗಿ ಕಾಣಿಸಿದ ಕಾಮತ್ ಹೋಟಲ್ ನಲ್ಲಿ ಕೆಲಸ ಕೊಡಿಸಿದಾ…  ಹೇಗೋ ಕಷ್ಟಪಟ್ಟು  ಹೋಟಲ್ ನಲ್ಲಿ ಕೇವಲ ಉಂಬಳಕ್ಕಾಗಿ ಮಾಣಿ ಕೆಲಸಕ್ಕೆ ಸೇರಿಕೊಂಡೆ..ಮುಂದೆ ಎಲ್ಲೂ ಹೋಗಲಾಗದೆ, ಇದೇ  ಹೋಟಲ್ ನಲ್ಲಿ ಒಂದು ವರ್ಷ ಕೆಲಸ ಮಾಡಿದೆ.ನಂತರ ನಾನು ನನ್ನ ಕಾಲಿನ ಮೇಲೆ ನಿಲ್ಲಬೇಕು ಅಂತ ಅನ್ನಿಸಿತು…..ಅದರ ಮುಂದುವರೆದ ಭಾಗವೇ ಈ ಅಮರ್ ಹೋಟಲ್ ಪಕ್ಕದಲ್ಲಿರುವ ತಳ್ಳೋಗಾಡಿ ಹೋಟಲ್ ಸ್ವಾಮಿ….ಬದುಕು ನನ್ನ ಪಾಲಿಗೆ ಸರ್ವಸ್ವ…ಸ್ವಾಮಿ ಎಂದ..

ಹೊಟೇಲ್‌ಗಳಲ್ಲಿ ಹಲವು ಬಗೆ. ತ್ರಿತಾರಾ ಹೊಟೇಲ್‌ಗಳು, ಪಂಚತಾರಾ ಹೊಟೇಲ್‌ಗಳು, ಬೋರ್ಡಿಂಗ್ ಮತ್ತು ಲಾಡ್ಜಿಂಗ್ ಸೌಲಭ್ಯವುಳ್ಳ ವೈಭವದ (ಲಕ್ಷುರಿ) ಹೊಟೇಲ್‌ಗಳು ಇತ್ಯಾದಿ. ಇಂಥ ಹೊಟೇಲ್‌ಗಳನ್ನು ಪ್ರವೇಶಿಸುತ್ತಿದ್ದಂತೆಯೇ ಎದುರಾಗುವುದು ಕಛೇರಿ ಅಥವಾ ಹೊಟೇಲ್‌ನ ಚಟುವಟಿಕೆಗಳ ಕೇಂದ್ರ ಭಾಗ. ಹೊಟೇಲ್‌ನಲ್ಲಿ ತಂಗಲು ಬುಕಿಂಗ್ ಮಾಡುವುದು, ಸಾಮಾನ್ಯ ಮಾಹಿತಿ ಪಡೆಯುವುದು ಅಲ್ಲಿಯೇ.

ಒಳಗೆ ಬರುವ ಅತಿಥಿಗಳು ಮತ್ತು ಹೊರಗೆ ಹೋಗುವವರು ಎಲ್ಲರ ತಪಾಸಣೆ, ಅವಶ್ಯ ಮಾಹಿತಿಯನ್ನು ಅತಿಥಿಗಳಿಗೆ ಒದಗಿಸುವುದು ಮೊದಲಾದ ಕೆಲಸಗಳು ಅಲ್ಲಿಯೇ ಜರಗುತ್ತವೆ. ಅಡಿಗೆ ಮನೆ ಹೊಟೇಲ್‌ನ ಜನಪ್ರಿಯ ಶಾಖೆ. ಆಹಾರ-ಪಾನೀಯಗಳ ತಯಾರಿಕೆ, ಬಗೆ ಬಗೆಯ ರುಚಿಕಟ್ಟಾದ ತಿಂಡಿ, ತಿನಿಸು ವಗೈರೆಗಳ ತಯಾರಿಕೆ, ಊಟದ ಕೋಣೆ, ರೆಸ್ಟೋರೆಂಟ್ ಬಾರ್ ಇತ್ಯಾದಿಗಳ ವ್ಯವಸ್ಥೆ ಈ ವಿಭಾಗದ್ದಾಗಿರುತ್ತದೆ.

ಹೊಟೇಲ್‌ನ ಚಟುವಟಿಕೆಗಳು ಬಿಡುವಿಲ್ಲದೆ ಸಾಗುವಂತವು. ಬಂದ ಅತಿಥಿಗಳನ್ನು ಅಂದರೆ ತಂಗುವವರನ್ನು ಮತ್ತು ಆಹಾರ ಸ್ವೀಕರಿಸುವವರನ್ನು ನಗೆ ಮೊಗದಿಂದ ಸ್ವಾಗತಿಸುವವರ ಒಂದು ತಂಡವೇ ತರಬೇತಿ ಪಡೆದು ಸಿದ್ಧವಿರಬೇಕಾಗುತ್ತದೆ. ಇವೆಲ್ಲದರಿಂದಾಗಿ ಹೊಟೇಲ್ ಒಂದು ಭಾರೀ ಉದ್ಯಮ.

ಭಾರತದಲ್ಲಿ ಅದ್ದೂರಿ ಹೊಟೇಲ್‌ಗಳ ಸರಣಿಗಳೇ ಇವೆ. ಓಬೆರಾಯ್, ತಾಜ್ ಮತ್ತು ವೆಲಕಂ ಗ್ರೂಪ್ ಹೊಟೇಲ್‌ಗಳು ವಿಖ್ಯಾತ. ಭವ್ಯ, ಸುಸಜ್ಜಿತ ಹೊಟೇಲ್‌ಗಳು ಅರಮನೆಯಷ್ಟೇ ಭವ್ಯ. ಆಳುಕಾಳು, ವಸತಿ, ಉಪಚಾರ ಮನೋರಂಜನೆ ಎಲ್ಲ ಸಮೃದ್ಧಿ. ಹೊಟೇಲ್‌ಗಳಲ್ಲಿ ಪಾರ್ಟಿ ಹಾಲ್, ರಿಸಿಪ್ಷನ್ ಹಾಲ್, ಅಸೆಂಬ್ಲಿ ಹಾಲ್, ಕಮ್ಯುನಿಟಿ ಹಾಲ್ ಇಂತವುಗಳು ಇದ್ದು ಸಭೆ- ಸಮಾರಂಭಗಳು ನಡೆಸಲು ಅವಕಾಶ.

ಹೊಟೇಲ್ ಉದ್ಯಮದಲ್ಲಿ ತೊಡಗಿಸಿಕೊಂಡವರು ಸ್ನೇಹಪರರು, ಸಹಕಾರ ತೋರುವವರು, ಜವಾಬ್ದಾರಿ ಯುತರು, ಎಲ್ಲ ಹಿನ್ನೆಲೆಗಳ ಜನರಲ್ಲಿ ಆಸಕ್ತಿ ತೋರುವವರು. ವಿಧಾನಾತ್ಮಕ ವಾಗಿ ಸಮೀಪಿಸುವವರು, ಉತ್ತಮ ಆಡಳಿತ ಸಾಮರ್ಥ್ಯ ಉಳ್ಳವರು, ಆತ್ಮವಿಶ್ವಾಸ ಉಳ್ಳವರು, ಜನರನ್ನು ಮೆಚ್ಚಿಸಬಲ್ಲವರು, ದೃಢಕಾಯರೂ ಆಗಿರಬೇಕು. ಈಚಿನ ಮೂರು ದಶಕಗಳ (1970-2000) ಅವಧಿಯಲ್ಲಿ ಹೊಟೇಲ್ ನಿರ್ವಹಣೆ ಕುರಿತಂತೆ ಡಿಪ್ಲೊಮಾ-ಡಿಗ್ರಿಗಳನ್ನು ಕೊಡುವ ಪರಿಪಾಠ ಬೆಳೆದು ಬಂದಿದೆ. ಹೊಟೇಲ್ ಮ್ಯಾನೇಜ್‌ಮೆಂಟ್ ಕೋರ್ಸ್‌ಗಳು ಸಾಮಾನ್ಯವಾಗಿ ಮೂರು ವರ್ಷ ಅವಧಿಯದಿರುತ್ತವೆ. ಪ್ರವಾಸೋದ್ಯಮ ಇಲಾಖೆಗೂ, ಹೋಟೆಲ್ ನಿರ್ವಹಣೆಗೂ ಸಂಬಂಧ ವಿದೆ. ಪ್ರವಾಸಿಗಳಿಗೆ ಉತ್ತಮ ಹೊಟೇಲ್‌ಗಳು ತಂಗಲಾಗಲಿ, ಊಟೋಪಚಾರಕ್ಕಾಗಲಿ ಅಗತ್ಯವಿರುತ್ತದೆ.

ಹೊಟೇಲ್ ಮ್ಯಾನೇಜ್‌ಮೆಂಟ್ ಕೋರ್ಸ್‌ನ ಪಾಠಪಟ್ಟಿ ಹೇಗಿರಬಹುದೆಂದು ಯಾರಿಗಾದರೂ ತುಸು ಆಶ್ಚರ್ಯ-ಕುತೂಹಲ ಇರುತ್ತದೆ. ಪಾಠಪಟ್ಟಿಯಲ್ಲಿ ಅಡಕವಾಗುವ ವಿಷಯಗಳು ವಿಭಿನ್ನ. ಉದ್ಯಮದ ಆಡಳಿತ ಮತ್ತು ವ್ಯವಸ್ಥೆ, ವಿದೇಶಿ ಭಾಷೆಯ ಅರಿವು, ಸಿಬ್ಬಂದಿ ಮತ್ತು ಸಾಂಸ್ಥಿಕ ವರ್ತನೆ, ಅರ್ಥಶಾಸ್ತ್ರ, ನಿರ್ವಹಣಾ ತತ್ವಗಳು, ಅನ್ವಯಿಕ ವಿಜ್ಞಾನ (ವಿದ್ಯುಚ್ಛಕ್ತಿ,, ಧ್ವನಿ, ವಾಯು ನಿಯಂತ್ರಣ ಮೊದಲಾದವು) ಕಛೇರಿ ಕೆಲಸಗಳು, ಸಂಬಂಧಿತ ಕಾನೂನು, ಪ್ರವಾಸೋದ್ಯಮ ಮತ್ತು ಹೊಟೇಲ್ ಬ್ಯುಸಿನೆಸ್‌ನ ಸಾಮಾನ್ಯ ಅಂಶಗಳು. ಆಹಾರ-ಪಾನೀಯ ಸೇವೆ, ಸಿಬ್ಬಂದಿ ನಿರ್ವಹಣೆ, ಗೃಹ ನಿರ್ವಹಣೆ, ಅಡಿಗೆ ವೈವಿಧ್ಯತೆ, ಭಾರತೀಯ, ಖಂಡಾಂತರ, ಚೈನೀಸ್, ಫ್ರೆಂಚ್, ಮೆಕ್ಸಿಕನ್, ಜಪಾನೀಸ್, ಮತ್ತಿತರ ಪಾಕಪದ್ಧತಿಗಳು, ಸಸ್ಯಾಹಾರ ಹಾಗೂ ಮಾಂಸಾಹಾರ ವಿಧಗಳು, ಲೆಕ್ಕಪತ್ರ ದಾಖಲೆ, ಮಾರಾಟ, ಕಂಪ್ಯೂಟರ್ ಪ್ರಯೋಜನಗಳು ಮತ್ತು ಹೊಟೇಲ್ ಎಂಜಿನಿಯ ರಿಂಗ್ ಇವು ಈ ವಿಷಯ.

ಅತಿಥಿ ಸತ್ಕಾರ ಹೊಟೇಲ್ ಉದ್ಯಮದ ಕೇಂದ್ರ ಬಿಂದು. ಪ್ರವಾಸೋದ್ಯಮ ಇಲಾಖೆ ಇದಕ್ಕಾಗಿ ತರಬೇತಿ ನೀಡಲು ನ್ಯಾಷನಲ್ ಕೌನ್ಸಿಲ್ ಫಾರ್ ಹೊಟೇಲ್ ಮ್ಯಾನೇಜ್‌ಮೆಂಟ್ ಅಂಡ್ ಕೇಟರಿಂಗ್ ಟೆಕ್ನಾಲಜಿ ಎಂಬ ಸಂಸ್ಥೆಯನ್ನು ಹುಟ್ಟುಹಾಕಿದೆ. ಇದು ಮೂರು ವರ್ಷಗಳ ಹೊಟೇಲ್ ಮ್ಯಾನೇಜ್‌ಮೆಂಟ್‌ನಲ್ಲಿನ ಡಿಪ್ಲೊಮಾವನ್ನು, ದೇಶದ ಹದಿನೇಳು ಪ್ರಮುಖ ನಗರಗಳಲ್ಲಿ ಸರಕಾರದಿಂದ ಪ್ರಾಯೋಜಿತವಾದ ಹೊಟೇಲ್ ಮ್ಯಾನೇಜ್‌ಮೆಂಟ್ ಕೇಟರಿಂಗ್ ತಂತ್ರಜ್ಞಾನ ಮತ್ತು ಅನ್ವಯಿಕ ಪೌಷ್ಟಿಕತೆ ಸಂಸ್ಥೆಗಳಲ್ಲಿ ಕೂಡ ಮಾಡುತ್ತಿದೆ.

ಕರ್ನಾಟಕದ ಉಡುಪಿ ಜಿಲ್ಲೆಯ ಮಣಿಪಾಲ್‌ನಲ್ಲಿ ಹೊಟೇಲ್ ಆಡಳಿತದ ವೆಲ್‌ಕಂ ಗ್ರೂಪ್ ಗ್ರಾಜುಯೇಟ್ ಸ್ಕೂಲ್ ಇದೆ. ನವದೆಹಲಿಯ ದಿ ಓಬೆರಾಯ್ ಸ್ಕೂಲ್ ಆಫ್ ಹೊಟೇಲ್ ಮ್ಯಾನೇಜ್‌ಮೆಂಟ್ ಪದವಿ ನೀಡುತ್ತಿದೆ. ಭಾರತದಲ್ಲಿ ಕೆಲವೇ ಶೈಕ್ಷಣಿಕ ಸಂಸ್ಥೆಗಳು ಸ್ನಾತಕೋತ್ತರ ಪದವಿಯನ್ನು ನೀಡುತ್ತಿವೆ. ಮಂಗಳೂರಿನಲ್ಲೂ ಹೊಟೇಲ್ ಮ್ಯಾನೇಜ್‌ಮೆಂಟ್ ಇನ್‌ಸ್ಟಿಟ್ಯೂಟ್ ಇದೆ. ಮಂಗಳೂರಿನ ಸರೋಶ್ ಇನ್‌ಸ್ಟಿಟ್ಯೂಟ್ ಆಫ್ ಹೊಟೇಲ್ ಆಡ್ಮಿನಿಸ್ಟ್ರೇಷನ್ ತಜ್ಞ ಮತ್ತು ಅನುಭವಿ ಸಿಬ್ಬಂದಿಗಳನ್ನೂ ಕೂಡಾ ಹೊಂದಿದೆ.

ಇದು ವೈಭವೋಪೇತ ಪೆಂಟಗಾನ್ ಹೊಟೇಲ್‌ನ ಸಹಭಾಗಿತ್ವವನ್ನು ಕೂಡಾ ಹೊಂದಿದೆ. ಇಲ್ಲಿ ಕಲಿತವರು ಕೇವಲ ಆತಿಥ್ಯ ವಿಭಾಗದಲ್ಲಿ ಮಾತ್ರವಲ್ಲ, ಬ್ಯಾಂಕ್‌ಗಳು, ವಿಮಾನಯಾನ, ಕ್ರೂಸ್ ಲೈನರ್‌ಗಳು, ಮನೋರಂಜನಾ ಕೇಂದ್ರಗಳು, ಈವೆಂಟ್ ಮ್ಯಾನೇಜ್‌ಮೆಂಟ್ ಮತ್ತಿತರ ಕ್ಷೇತ್ರಗಳಲ್ಲೂ ನೆಲೆಯನ್ನು ಕಂಡುಕೊಂಡಿದ್ದಾರೆ. ಈ ಎಲ್ಲ ಸಂಸ್ಥೆಗಳು ಹೊಟೇಲ್ ಮ್ಯಾನೇಜ್‌ಮೆಂಟ್ ಕೋರ್ಸ್‌ಗಳು ಥಿಯರಿ ಮತ್ತು ಪ್ರಾಕ್ಟಿಕಲ್‌ನಲ್ಲಿ ತರಬೇತಿ ನೀಡುತ್ತವೆ. ಒಂದು ಹೋಟೆಲ್ ನಡೆಸುವ ಕುರಿತು ತರಬೇತಿ ಲಾಭಕರ.

ಬಾಲ ಕಾರ್ಮಿಕ ಸಮಸ್ಯೆ ನಿವಾರಿಸಲು ಏನು ಮಾಡಲಾಗಿದೆ?
ಬಾಲ ಕಾರ್ಮಿಕ ಸಮಸ್ಯೆಯನ್ನು ನಿವಾರಿಸಲು, ರಾಷ್ಟ್ರೀಯ ಬಾಲ ಕಾರ್ಮಿಕ ಯೋಜನೆಯ ಕಾರ್ಯಕ್ರಮದ ಅಡಿಯಲ್ಲಿ ೭೬  ಬಾಲ ಕಾರ್ಮಿಕ  ಯೋಜನೆಗಳನ್ನು ಮಂಜೂರು ಮಾಡಲಾಗಿದೆ.  ಅದು  ೧೫೦,೦೦೦ ಮಕ್ಕಳಿಗೆ  ಉಪಯುಕ್ತವಾಗುತ್ತಿದೆ.   ಈಗಾಗಲೇ ೧೦೫,೦೦೦ ಮಕ್ಕಳು ವಿಶೇಷ ಶಾಲೆಗಳಲ್ಲಿ ದಾಖಲಾಗಿದ್ದಾರೆ. ಕಾರ್ಮಿಕ ಸಚಿವಾಲಯವು ಯೋಜನಾ ಆಯೋಗವನ್ನು ರಾಷ್ಟ್ರೀಯ  ಬಾಲ ಕಾರ್ಮಿಕ  ಯೋಜನೆಯ (NCLP) ಕೆಳಗೆ  ಈಗಿರುವ ೨೫೦ ಜಿಲ್ಲೆಯ ಜೊತೆಗೆ ಇನ್ನೂ ೬೦೦ ಜಿಲ್ಲೆಗಳಲ್ಲಿ ಕಾರ್ಯಗತ  ಮಾಡಲು ೧,೫೦೦ಕೋಟಿ ರೂಪಾಯಿಗಳ ಬೇಡಿಕೆ ಸಲ್ಲಿಸಿದೆ. ಮಕ್ಕಳು(೯-೧೪ ವರ್ಷ ವಯೋಮಾನದವರು)   ೫೭ ಅಪಾಯಕಾರಿ ಕೈಗಾರಿಕೆಗಳಲ್ಲಿ, ಡಾಬಾಗಳಲ್ಲಿ, ಮನೆಗಳಲ್ಲಿ   ಕೆಲಸ ಮಾಡುವವರು  ಈ ಯೋಜನೆ ಲಾಭವನ್ನು ಪಡೆಯಬಹುದಾಗಿದೆ.

ಬಾಲ ಕಾರ್ಮಿಕರು

 ಬಾಲ ಕಾರ್ಮಿಕ ಪದ್ಧತಿಯು ದೇಶದ ಮುಂದಿನ ದೊಡ್ಡ ಸವಾಲಾಗಿ ಮುಂದುವರೆದಿದೆ. ಸರ್ಕಾರವೂ ಈ ಸಮಸ್ಯೆಯನ್ನು ಎದುರಿಸಲು ಅನೇಕ  ಕ್ರಮಗಳನ್ನು  ತೆಗೆದು ಕೊಂಡಿದೆ. ಆದ್ದಾಗ್ಯೂ ಈ ಸಮಸ್ಯೆಯ ಪ್ರಮಾಣ ಮತ್ತು ವ್ಯಾಪ್ತಿಯನ್ನು ಪರಿಗಣಿಸಿದರೆ ಇದು ಮೂಲಭೂತವಾಗಿ ಆರ್ಥಿಕ ಮತ್ತು ಸಾಮಾಜಿಕ ಸಮಸ್ಯೆ ಎನಿಸುವುದು. ಇದು ಬಡತನ, ಅನಕ್ಷರತೆಗಳೊಂದಿಗೆ ಗಾಢವಾದ ಸಂಬಂಧ ಹೊಂದಿದೆ. ಈ ಸಮಸ್ಯೆಯನ್ನು ಪರಿಹರಿಸಲು ಸಮಾಜದ ಎಲ್ಲ ವರ್ಗದ ಜನರ ಗಂಭೀರ ಪ್ರಯತ್ನ ಅಗತ್ಯ. ಬಾಲಕಾರ್ಮಿಕ ವಿಷಯವನ್ನು ಅಧ್ಯಯನ ಮಾಡಿ, ಅದರ ನಿವಾರಣೆಗೆ ತೆಗೆದುಕೊಳ್ಳ ಬೇಕಾದ ಕ್ರಮಗಳನ್ನು ಸೂಚಿಸಲು ಸರಕಾರವು ೧೯೭೯ ರಷ್ಟು ಹಿಂದೆಯೇ ಗುರುಪಾದಸ್ವಾಮಿ ಸಮಿತಿಯನ್ನು ರಚಿಸಿತು.  ಸಮಿತಿಯು ಸಮಸ್ಯೆಯನ್ನು ಸವಿವರವಾಗಿ ಪರಿಶೀಲಿಸಿ, ಕೆಲವು ದೂರಗಾಮಿ ಶಿಫಾರ್ಸುಗಳನ್ನು ಮಾಡಿತು. ಬಡತನ ಇರುವವರೆಗೂ  ಬಾಲ ಕಾರ್ಮಿಕ ಸಮಸ್ಯೆಯನ್ನು ಸಂಪೂರ್ಣವಾಗಿ ನಿವಾರಿಸುವುದು ಕಷ್ಟ. ಅದನ್ನು ಕಾಯಿದೆಯ ಮೂಲಕ ನಿಷೇಧಿಸುವ ಯಾವುದೆ ಪ್ರಯತ್ನವೂ ಕಾರ್ಯಸಾಧುವಲ್ಲ. ಈ ಸನ್ನಿವೇಶದಲ್ಲಿ ಉಳಿದಿರುವ ಏಕೈಕ ಪರ್ಯಾಯ ಮಾರ್ಗವೆಂದರೆ ಅಪಾಯಕಾರಿ ರಂಗಗಳಲ್ಲಿ ಬಾಲಕಾರ್ಮಿಕರ ಬಳಕೆಯ ನಿಷೇಡಿಸುವುದು , ಎಂದು  ಸಮಿತಿಯು ಭಾವಿಸಿತು. ಇತರೆರಂಗಗಳಲ್ಲಿ ಕೆಲಸಮಾಡುವ ಜಾಗದಲ್ಲಿನ ವಾತಾವರಣದ ಸುಧಾರಣೆ ಮತ್ತು  ಪರಿಸ್ಥಿತಿಯ ನಿಯಂತ್ರಣವನ್ನು  ಮಾಡಬಹುದು ಎಂದು ತಿಳಿಸಿತು. ಸಮಿತಿಯು ಬಾಲ ಕಾರ್ಮಿಕರ  ಸಮಸ್ಯೆಗಳನ್ನು ಪರಿಹರಿಸಲು ಬಹುಮುಖಿ ನೀತಿಯ ಅನುಸರಣೆಯನ್ನು  ಶಿಫಾರ್ಸು ಮಾಡಿತು.

ಗುರುಪಾದಸ್ವಾಮಿ ಸಮಿತಿಯ ಶಿಫಾರಸ್ಸಿನ ಆಧಾರದ ಮೇಲೆ ಬಾಲ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯಿದೆಯನ್ನು ೧೯೮೬ Profile Pictureರಲ್ಲಿ ಜಾರಿಗೆ ತಂದಿತು. ಈ ಕಾಯಿದೆಯು ಕೆಲವು ನಿರ್ದಿಷ್ಟ ನಮೂದಿತ ವೃತ್ತಿಗಳಲ್ಲಿ  ಮತ್ತು ಕಾರ್ಯವಿಧಾನದಲ್ಲಿ ಮಕ್ಕಳು  ಕೆಲಸ ಮಾಡುವುದನ್ನು ನಿಷೇಧಿಸಿತು. ಇತರ ಕಡೆ ಕೆಲಸ ಮಾಡುವಲ್ಲಿನ ವಾತಾವರಣವನ್ನು ನಿಯಂತ್ರಿಸಲಾಯಿತು. ಅಪಾಯಕಾರಿ ವೃತ್ತಿಗಳು ಮತ್ತು ಕಾರ್ಯ ವಿಧಾನಗಳ ಪಟ್ಟಿಯನ್ನು  ಕಾಯ್ದೆಯಡಿಯಲ್ಲಿ ರಚಿಸಲಾಗಿರುವ ಬಾಲಕಾರ್ಮಿಕ ತಾಂತ್ರಿಕ ಸಲಹಾ ಸಮಿತಿಯ ಶಿಫಾರಸ್ಸುಗಳಂತೆ ಅಗಿಂದಾಗ  ವಿಸ್ತರಿಸಲಾಗುವುದು. ಮೇಲೆ  ತಿಳಿಸಿದ ವಿಧಾನದ ಮೇರೆಗೆ, ಬಾಲಕಾರ್ಮಿಕ ರಾಷ್ಟ್ರೀಯ ನೀತಿಯನ್ನು ೧೯೮೭ ರಲ್ಲಿ ರೂಪಿಸಲಾಯಿತು. ಈ ನೀತಿಯು ಕ್ರಮವಾಗಿ, ಸರದಿಯ ಮೇರೆಗೆ ಮೊದಲು ಅಪಾಯಕಾರಿ ವೃತ್ತಿ  ಮತ್ತು ಕಾರ್ಯ ವಿಧಾನದಲ್ಲಿ ತೊಡಗಿರುವ ಮಕ್ಕಳ ಪುನರ್ವಸತಿಗೆ ಆದ್ಯತೆ ನೀಡಲಾಯಿತು   ಹಾಗೂ  ಬಾಲ ಕಾರ್ಮಿಕರ ಜನಗಣತಿಗೆ ಆದ್ಯತೆ ಕೊಡಲಾಯಿತು.

ಕೆ. ರವಿ ಕುಮಾರ್  ಕೋಲಾರ್

Advertisements

ನಿಮ್ಮ ಅನಿಸಿಕೆ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: