ದಡಮುಟ್ಟಿಸುವವರ ನೋವುಗಳು – ರವಿಕುಮಾರ್ ಕೋಲಾರ್


ಉದ್ಯಾನವನ ನಗರ ಖ್ಯಾತಿಯ ಬೆಂಗಳೂರಿನಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ 36 ಘಟಕಗಳನ್ನು ಹೊಂದಿದ್ದು, ಸುಮಾರು 5000 ಬಸ್ ಗಳು ೩೫ ಸಾವಿರಕ್ಕೂ ಹೆಚ್ಚು ಚಾಲಕ, ನಿರ್ವಾಹಕರು ಉತ್ತಮ ಗುಣಮಟ್ಟದ ಸೇವೆಯನ್ನು ಸಂಸ್ಥೆಗಾಗಿ ಒದಗಿಸಿತ್ತಿದ್ದೇವೆ ಹಾಗೂ ಪ್ರಯಾಣಿಕರಿಗೂ ಉತ್ತಮ ಗುಣಮಟ್ಟದ ಸೇವೆಯನ್ನು ಒದಗಿಸಿತ್ತಿದ್ದೇವೆ. ಆದರೆ ಸಂಸ್ಥೆಯ ಅಭಿವೃದ್ಧಿಗಾಗಿ ಗಾಣದ ಎತ್ತಿನಂತೆ ದುಡಿಯುತ್ತಿರುವ ಚಾಲಕ ನಿರ್ವಾಹಕರಾದ ನಮ್ಮ ಪರಿಸ್ಥಿತಿ ಅಂತೂ ತುಂಬಾ ಶೋಚನೀಯವಾಗಿದೆ. ಕೆ.ಎಸ್.ಆರ್.ಟಿ.ಸಿ. ಅಥವಾ ಬಿ.ಎಂ.ಟಿ.ಸಿ.ಗೆ ಚಾಲಕ ಅಥವಾ ನಿರ್ವಾಹಕರಾಗಿ ಕೆಲಸಕ್ಕೆ ಸೇರಿದರೆ ಪ್ರೋಬೇಷನರಿ ಎಂಬ ಹೆಸರಿನಲ್ಲಿ ಕೇವಲ 2500/- ರೂ.ಗಳಿಗೆ 2 ವರ್ಷ ದುಡಿಸಿಕೊಳ್ಳುವುದು ಅದೂ ಯಾವುದೇ ರಜೆ ಇಲ್ಲದಿದ್ದರೆ. ಇಲ್ಲಿ ತಿಂಗಳಿಗೆ 4 ವಾರದ ರಜೆ ಮತ್ತು 1 ಸಿ.ಎಲ್. ರಜೆ ಬಿಟ್ಟರೆ ಯಾವುದೇ ಸರ್ಕಾರಿ ರಜೆಗಳಿಗೆ ಇಲ್ಲಿ ಅನುಮತಿ ಇರುವುದಿಲ್ಲ. ಅಲ್ಲಿಯ ವರೆವಿಗೂ ಗಾಣದ ಎತ್ತಿನಂತೆ ದುಡಿಯುತ್ತಿರಬೇಕಾಗುತ್ತದೆ ಮತ್ತು ಯಾವುದೇ ಅಪಘಾತ ಬೇರೆ ರಿಮಾರ್ಕ್ಸ್ ಇಲ್ಲದಿದ್ದರೆ. ಯಾವುದಾದರೂ ರಿಮಾರ್ಕ್ಸ್ ಇದ್ದಲ್ಲಿ ನಮ್ಮ ಪ್ರೋಬೇಷನರಿ ಅವಧಿಯನ್ನು ಮುಂದಕ್ಕೆ ಹಾಕುತ್ತಾರೆ.

ರಾಜ್ಯದ ದೂರದ ಜಿಲ್ಲೆಗಳಿಂದ ಬಂದು ಅತ್ಯಂತ ದುಬಾರಿ ಎನಿಸಿರುವ ಬೆಂಗಳೂರಿನಲ್ಲಿ 2500/-/- ರೂ.ಗಳಿಗೆ ಹೇಗೆ ಜೀವನ ಸಾಗಿಸುವುದು ಎನ್ನುವುದು ನಮ್ಮೆಲ್ಲರ ಪ್ರಶ್ನೆ. ಹೀಗೆ ಇಲ್ಲಿಂದ ಆರಂಭವಾಗುವ ನಮ್ಮ ಸಮಸ್ಯೆ ಪರ್ಮನೆಂಟ್ ಆದ ಮೇಲೆ ಅಥವಾ ಸರ್ವೀಸ್ ಆದಂತೆ ನಮ್ಮ ಸಮಸ್ಯೆಗಳು ಉಗ್ರ ರೂಪದಲ್ಲಿ ವಿವಿಧ ರೀತಿಯಲ್ಲಿ ಕಾಣಿಸಿಕೊಳ್ಳುತ್ತವೆ. ಘಟಕಗಳಲ್ಲಿರುವ ಬಸ್ ಗಳಲ್ಲಿ ಸುಮಾರು 100ಕ್ಕೆ ಶೇ,80 ಬಸ್ ಗಳಿಗೆ ಹಾರನ್ ಇರುವುದಿಲ್ಲ. ಬ್ರೇಕ್ ಸಮಸ್ಯೆ, ಏರ್ ಲೀಕ್ ಆಗುವುದು ಇಂಥಹ ಬಸ್ ಗಳನ್ನು ಕೊಟ್ಟು 8 ರಿಂದ 10 ಸಿಂಗಲ್ ಮಾಡಬೇಕು ಟಾರ್ಗೇಟ್ ಗಿಂತ ಹೆಚ್ಚು ಆದಾಯ ತರಬೇಕು ಎನ್ನುವುದು ಇಲ್ಲದಿದ್ದಲ್ಲಿ ಕಡಿಮೆ ಆದಾಯ ತಂದಿದ್ದು, ಸಂಸ್ಥೆಯ ನಷ್ಟ ಉಂಟಾಗಿದೆ ಎಂದು ಹೇಳಿ ಮೆಮೋ ನೀಡಿ ವೇತನದಲ್ಲಿ ಕಟ್ ಮಾಡುವುದು, ಬೆಂಗಳೂರು ನಗರದಲ್ಲಿ ಶೇ 100ಕ್ಕೆ ೮೫ ರಷ್ಟು ಪ್ರಯಾಣಿಕರು (ವಿಧ್ಯಾರ್ಥಿಗಳನ್ನು ಸೇರಿಸಿ) ಪಾಸ್ ಹೊಂದಿರುತ್ತಾರೆ ಇದರಲ್ಲಿ ಟಾರ್ಗೇಟ್ ಗಿಂತ ಹೆಚ್ಚು ಆದಾಯವನ್ನು ಹೇಗೆ ತರುವುದು..? ಹಾಗೂ ಕೆ.ಎಂ.ಪಿ.ಎಲ್ (ಕಿಲೋಮೀಟರ್ ಪರ್ ಲೀಟರ್) ಕೇಳುವುದು ೧೦ ವರ್ಷಗಳ ಹಿಂದೆ ತರುತ್ತಿದ್ದ ಕೆ ಎಂ ಪಿ ಎಲ್ ಹಾಗೂ ಇಷ್ಟೆ ಸಿಂಗಲ್ ಮಾಡಬೇಕೆನ್ನುವ ನಿಯಮವನ್ನು ಈಗ ಕೇಳಿದರೆ ಹೇಗೆ..? 10ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ವಾಹನಗಳು ಎಷ್ಟು ಇದ್ದವು. ಜನಸಂಖ್ಯೆ ಎಷ್ಟಿತ್ತು..? ಸಿಗ್ನಲ್ ಗಳು ಎಷ್ಟಿದ್ದವು ಎನ್ನುವುದು ಪ್ರಶ್ನೆ. 2ಕಿ.ಮೀ. ಗೆ 3-4 ಸಿಗ್ನಲ್ ಗಳು 4-5 ಕಡೆ ಹಂಪ್ಸ್ ವಾಹನದಟ್ಟಣೆ ಜನಜಂಗುಳಿಯಲ್ಲಿ ಪರ್ ಫೆಕ್ಟ್ ಇಲ್ಲದ ಬಸ್ ಗಳಿಂದ 8 ರಿಂದ 10 ಸಿಂಗಲ್ ಗಳನ್ನು ಹೇಗೆ ಮಾಡುವುದು. ಕೆ.ಎಂ.ಪಿ.ಎಲ್. ತರಲು ಹೇಗೆ ಸಾಧ್ಯ..? ಇಷ್ಟು ಸಾಲದೆಂಬಂತೆ ಜತೆಗೆ ಪ್ರಯಾಣಿಕರ ಕಿರುಕುಳ ಬೇರೆ. ಪ್ರಯಾಣಿಕರು ನಿರ್ವಾಹಕರಿಗೆ ಸರಿಯಾದ ಚಿಲ್ಲರೆ ಕೊಟ್ಟು ಸಹಕರಿಸುವುದಿಲ್ಲ. ಚಿಲ್ಲರೆ ಕೊಡಿ ಎಂದು ಕೇಳಿದರೆ ಇಲ್ಲಾರೀ ಎನ್ನುತ್ತಾರೆ. ಇಷ್ಟಾದರೆ ಖುಷಿ ಪಡಬಹುದು. ಅವರ ಮನಸ್ಸಿಗೆ ಬಂದಂತೆ ಬೈಯುವುದು ಹೊಡೆಯಲು ಮುಂದಾಗುವುದು ಮತ್ತೆ ಕೆಲವು ಪ್ರಯಾಣಿಕರು ಮೊಬೈಲ್ ನಲ್ಲಿ ಮಾತನಾಡಿಕೊಂಡೇ ಬಸ್ ಹತ್ತುವುದು, ಮೊಬೈಲ್ ನಲ್ಲಿ ಮಾತನಾಡಿಕೊಂಡೇ ಬಸ್ ಇಳಿಯುವುದು. ಡೋರ್ ಹಾಕಲು ಬಿಡದೆ ಡೋರ್ ನಲ್ಲಿ ಮೊಬೈಲ್ ನಲ್ಲಿ ಮಾತನಾಡಿಕೊಂಡು ನಿಂತುಕೊಳ್ಳುವುದು. ಕೇಳಿದರೆ ಬಾಯಿಗೆ ಬಂದಂತೆ ಬೈಯುವುದು ಹೊಡೆಯುವುದು ಕೆಲವು ಪ್ರಯಾಣಿಕರು ಸಿಗ್ನಲ್ ಗಳಲ್ಲಿ ಬಾಗಿಲು ತೆಗೆಯಿರಿ ಎಂದು ಜಗಳ ಮಾಡುತ್ತಾರೆ. ತೆಗೆಯದಿದ್ದರೆ ಹೊಡೆಯಲು ಬರುತ್ತಾರೆ. ತೆಗೆದರೆ ಸಾರಥಿಯವರು ಯಾವುದೇ ಕಾರಣವನ್ನು ಕೇಳದೆ ಮೆಮೋ ಕೊಡುತ್ತಾರೆ. ಮತ್ತೆ ಡ್ಯೂಟಿ ಮುಗಿದ ನಂತರ ಓ.ಟಿ. (ಓವರ್ ಟೈಮ್), ಓ.ಟಿ.ಯ ನಂತರ ಡ್ಯೂಟಿ, 8 ಗಂಟೆ ಡ್ಯೂಟಿ, 8 ಗಂಟೆ ಓ.ಟಿ. ಕೊಡುವುದು 8ಗಂಟೆ ಓಟಿಯಲ್ಲಿ 4ಗಂಟೆಯದು ಮಾತ್ರ ಸಂಬಳ ಮಾಡುತ್ತಾರೆ.

ಕೇವಲ 5-6 ಗಂಟೆ ಪ್ರಯಾಣ ಮಾಡಿದರೆ ಮೈ-ಕೈ ನೋವು, ತಲೆನೋವು ಮತ್ತು ಮಾನಸಿಕ ಒತ್ತಡ ಸುರುವಾಗುವುದು ಸಹಜ. ಇಂತಹ ಸಂದರ್ಭದಲ್ಲಿ 3 ರಿಂದ 4  ದಿನ ಬಿಡದೆ ಡ್ಯೂಟಿ, ಓ.ಟಿ.ಯನ್ನು ಹೇಗೆ ಮಾಡುವುದು. ಘಟಕದಲ್ಲಿ ಸ್ನಾನಕ್ಕೆ ಮತ್ತು ಶೌಚಾಲಯದ ಸೌಲಭ್ಯ ಕೂಡ ಸರಿ ಇರುವುದಿಲ್ಲ ಮತ್ತು ಶುಚಿಯಾಗಿರುವುದಿಲ್ಲ. ಸರಿಯಾಗಿ ನೀರಿನ ಸೌಲಭ್ಯಕೂಡ ಇರುವುದಿಲ್ಲ ಇನ್ನು ಟಿ.ಐ., ಎ.ಟಿ.ಐ, ಎ.ಟಿ.ಎಸ್, ಗಳಿಂದ ಲಂಚದ ಕಿರುಕುಳ ರಜಾ ಬೇಕೆಂದರೆ ಇನ್ ಕ್ರಿಮೆಂಟ್ ಕೊಡಬೇಕಾದರೆ ಇಂಥಹದೇ ರೂಟ್ ಬೇಕು ಎಂದು ಕೇಳಿದರೆ ಲಂಚ ಕೊಡಬೇಕು. ಇನ್ನು ಕರ್ತವ್ಯ ನಿರ್ವಹಿಸುವಾಗ ಮಾರ್ಗ ಮಧ್ಯದಲ್ಲಿ ತನಿಖಾಧಿಕಾರಿಗಳು ಸಂಸ್ಥೆಯು ಅವರಿಗೆ ನಿಗಧಿಪಡಿಸಿರುವ ಗುರಿ ತಲುಪಲು ಹಾಗೂ ಅಂಕಿ-ಅಂಶವನ್ನು ಸಂಸ್ಥೆಗೆ ತೋರಿಸಲು ಮತ್ತು ಪ್ರಕರಣದ ತೀವ್ರತೆಯನ್ನು ಹೆಚ್ಚಿಸಲು ಇಲ್ಲಸಲ್ಲದ ಆಪಾದನೆಯನ್ನು ಮಾಡುತ್ತಾರೆ. ಅವರನ್ನು ಹೆದುರುಹಾಕಿಕೊಂಡರೆ ಮತ್ತೊಮ್ಮೆ ಪ್ರಕರಣವನ್ನು ಕೆಂಪು ಗುರುತಿನ (ರೆಡ್ ಮಾರ್ಕ್) ಪ್ರಕರಣವನ್ನಾಗಿ ಬಿಂಬಿಸಿ ಕೆಲಸದಿಂದ ತೆಗೆದುಹಾಕುವಂತೆ ಮಾಡುತ್ತಾರೆ. ಯಾವುದೇ ತಪ್ಪು ತನಿಖಾಧಿಕಾರಿಯವರಿಗೆ ಸಿಗದಿದ್ದಾಗ ಸಿ.ಸಿ. (ಕ್ಯಾಸ್ ಚೆಕ್) ಇಲ್ಲಿ ಎಷ್ಟು ಟಿಕೆಟ್ ಸೇಲ್ ಆಗಿರುತ್ತದೋ ಅಷ್ಟೆ ಹಣವಿರಬೇಕು. ವಯಕ್ತಿಕ ಹಣವಿದ್ದರೆ ಅದು 100 ರೂ.ಗೆ ಮೀರಿರಬಾರದು ಆ ಹಣವನ್ನು ಎ.ಟಿ.ಎಸ್. ರವರಿಗೆ ಇದು ನನ್ನ ವಯಕ್ತಿಕ ಹಣವೆಂದು ಮಾರ್ಗಪತ್ರದಲ್ಲಿ ಬರೆಸಿ ಸಹಿಹಾಕಿಸಿಕೊಂಡು ಹೋಗಬೇಕು. ತನಿಖಾಧಿಕಾರಿಯವರಿಗೆ  ಸಿ.ಸಿ. ಮಾಡಿದಾಗ ಹೆಚ್ಚು ಹಣ ಕಂಡುಬಂದಲ್ಲಿ ನೀವು ಪ್ರಯಾಣಿಕರಿಗೆ ಟಿಕೆಟ್ ನೀಡದೆ ಹಣವನ್ನು ಕದ್ದಿರುತ್ತೀರಿ ಎಂದು ಮತ್ತು ಕಡಿಮೆ ಬಂದರೆ ಸಂಸ್ಥೆಯ ಹಣವನ್ನು ದುರುಪಯೋಗಕ್ಕೆ ಬಳಸಿಕೊಂಡಿರುತ್ತೀರಿ ಎಂದು ಆಪಾದನ ಪತ್ರವನ್ನು ನೀಡುತ್ತಾರೆ. ಇದರಿಂದ ಕೆಲಸದಿಂದ ತೆಗೆಯುವುದಕ್ಕೆ ದಾರಿಯಾಗುತ್ತದೆ. ಯಾರೋ ಪ್ರಯಾಣಿಕರಿಗೆ ಸರಿಯಾದ ಚಿಲ್ಲರೆ ಇಲ್ಲದಿದ್ದರಿಂದ ಟಿಕೆಟ್ ಹಿಂದೆ ಬರೆದುಕೊಂಟ್ಟಿದ್ದೆ ಆತ ಮರೆತು ಹೋರಿರಬೇಕು ಎಂದು ಹೇಳಿದರೂ ತನಿಖಾಧಿಕಾರಿಯವರು ಕೇಳುವುದಿಲ್ಲ. ಏಕೆಂದರೆ ಸಂಸ್ಥೆಯು ಅವರಿಗೆ ನಿಗಧಿಪಡಿಸಿರುವ ಗುರಿ ತಲುಪಲು ಹಾಗೂ ಅಂಕಿ-ಅಂಶವನ್ನು ಸಂಸ್ಥೆಗೆ ತೋರಿಸಲು ಮತ್ತು ಪ್ರಕರಣದ ತೀವ್ರತೆಯನ್ನು ಹೆಚ್ಚಿಸಲು ಇಲ್ಲಸಲ್ಲದ ಆಪಾದನೆಯನ್ನು ಮಾಡುತ್ತಾರೆ. ಹಣವನ್ನು ಸರಿಯಾಗಿ ಲೆಕ್ಕ ಮಾಡಿಕೊಂಡು ಇಟ್ಟುಕೊಂಡಿದ್ದರೂ ಸಿ.ಸಿ. ಮಾಡುವ ಸಮಯದಲ್ಲಿ ನಮಗೆ ಅರಿವಿಲ್ಲದಂತೆ ಅವರ ಹಣವನ್ನೇ ಸೇರಿಸಿ ಹೆಚ್ಚು ಹಣವಿದೆ ಎಂದು ಆಪಾದನಾ ಪತ್ರವನ್ನು ನೀಡುತ್ತಾರೆ. ಇನ್ನು ಚಾಲಕರಾಗಲೀ ಅಥವಾ ನಿರ್ವಾಹಕರಾಲಿ ಸತ್ತು ಹೋದರೆ ಅವರ ಕುಟುಂಬದವರಿಗೆ ಕೆಲಸ ಕೊಡಬೇಕಾದರೆ ೨-೩ ವರ್ಷ ಅಲೆಯಬೇಕು. ಬೇರೆ ಎಲ್ಲಾ ಇಲಾಖೆಗಳಿಗೆ ಹೋಲಿಸಿದರೆ ಅಂದರೆ ಬೆಸ್ಕಾಂ, ವಾಟರ್ ಸಪ್ಲೈ ಹಾಗೂ ಸರಕಾರಿ ಸ್ವಾಮ್ಯದಲ್ಲಿರುವ ಯಾವುದೇ ನಿಯಮಗಳಿಗೆ ಹೋಲಿಸಿದರೆ ಕೆ.ಎಸ್.ಆರ್.ಟಿ.ಸಿ. ಬಿ.ಎಂ.ಟಿ.ಸಿ. ಯಲ್ಲಿ ಕೊಡುತ್ತಿರುವ ಸಂಬಳ ಕಡಿಮೆ. 30-35 ವರ್ಷ ನಿಷ್ಟೆಯಿಂದ ಸೇವೆ ಸಲ್ಲಿಸಿದ ಚಾಲಕರಿಗೆ ನಿವೃತ್ತಿಯ ನಂತರ ಅವರ ಸೇವಾವಧಿಯಲ್ಲಿ ನಡೆದಿರುವ ಸಣ್ಣ-ಪುಟ್ಟ ಅಪಘಾತ ಇವುಗಳಿಗೆ ಕಟ್ ಮಾಡಿಕೊಂಡು ಬರಿಗೈನಲ್ಲಿ ಕಳುಹಿಸುತ್ತಾರೆ. ನಿವೃತ್ತಿಯ ನಂತರ ಬಸ್ ಗಳಲ್ಲಿ ಉಚಿತ ಪ್ರಯಾಣ ಮಾಡಲು ಅವಕಾಶ ಇರುವುದಿಲ್ಲ. ಟಿಕೆಟ್ ಪಡೆದೇ ಪ್ರಯಾಣ ಮಾಡಬೇಕು. ಇಷ್ಟೊಂದು ಒತ್ತಡಗಳ ನಡುವೆಯೂ ಸಂಸ್ಥೆಯ ಅಭಿವೃದ್ಧಿಗಾಗಿ ದುಡಿಯುತ್ತಿರುವ ಚಾಲಕ-ನಿರ್ವಾಹಕರಿಗೆ ಮಾನ್ಯ ಸಾರಿಗೆ ಸಚಿವರು ನಮ್ಮ ಶ್ರಮದ ದುಡಿಮೆಗೆ ತಕ್ಕ ವೇತನವನ್ನು ನೀಡಲು ಹಾಗೂ ವಿವಿಧ ರೀತಿಯಲ್ಲಿ ನಡೆಯುತ್ತಿರುವ ಕಿರುಕುಳದ ಬಗ್ಗೆ ಗಂಭೀರವಾಗಿ ಪರಿಗಣಿಸಿ ಅಗತ್ಯ ಕ್ರಮ ಕೈಗೊಳ್ಳುವವರೆವಿಗೂ ಹಾಗೂ ಈ ಸಂಸ್ಥೆಗೆ ಸೇರಿದೆ ನನ್ನ ಜೀವನಕ್ಕೆ ದಾರಿಯಾಯಿತು ಎಂದು ಬರಬೇಡಿ. ನಾನು ಕೆ.ಎಸ್.ಆರ್.ಟಿ.ಸಿ. ಅಥವಾ ಬಿ.ಎಂ.ಟಿ.ಸಿ.ಯ ನೌಕರ ಎಂದು ಹೇಳಿಕೊಳ್ಳುವ ಬದಲು ನಾನೊಬ್ಬ ನಿರುದ್ಯೋಗಿ ಎಂದು ಹೆಮ್ಮೆಯಿಂದ ಹೇಳಿಕೊಳ್ಳಿ. ಎಂಬುವುದುರವಿ ಕುಮಾರ, ಚಾಲಕ ಮತ್ತು ನಿರ್ವಾಹಕ, ಬಿ.ಸಂ.೧೦೦೫೯, ಬಿಡದಿ, ಘಟಕ ೩೬ ರವರ ಎದೆಯಾಳದ ಮಾತು

ಬಿ.ಎಂ.ಟಿ.ಸಿ. ಚಾಲಕ-ನಿರ್ವಾಹಕರು ಎದುರಿಸುತ್ತಿರುವ ಸಮಸ್ಯೆಗಳು:

  • ಕರ್ತವ್ಯನಿರತ ಚಾಲಕ-ನಿರ್ವಾಹಕರಿಗೆ ಕ್ಷುಲ್ಲಕ ಕಾರಣಕ್ಕೆಸಾರ್ವಜನಿಕರಿಂದ ನಿರಂತರವಾಗಿ ಪ್ರತಿದಿನ ನಡೆಯುತ್ತಿರುವ ಹಲ್ಲೆ           ಪ್ರಕರಣಗಳು
  • ಬ್ರೇಕ್ ಸರಿಇಲ್ಲದ, ಬ್ಯಾಟರಿ ಸರಿಯಿಲ್ಲದ ಬಸ್ ಗಳನ್ನು ಕೊಟ್ಟು ಹತ್ತಾರು ಸಿಗ್ನಲ್, ಹತ್ತಾರು ಹಂಪ್, ವಾಹನ ದಟ್ಟಣೆಯ ನಡುವೆಯು ಇಷ್ಟೆ ಸಿಂಗಲ್ ಮಾಡಬೇಕು, ಕೆ.ಎಂ.ಪಿ.ಎಲ್ ತರಬೇಕು ಎನ್ನುವ ಒತ್ತಡ.
  • ಟಿ.ಐ., ಎ.ಟಿ.ಐ, ಎ.ಟಿ.ಎಸ್, ಗಳಿಂದ ಲಂಚದ ಕಿರುಕುಳ
  • ವಿನಾಕಾರಣ ಮೆಮೋ ನೀಡುವ ಸಾರಥಿ
  • ಕಡಿಮೆ ಸಂಬಳದಿಂದ ಮಕ್ಕಳಿಗೆ ಒಳ್ಳೆಯ ವಿಧ್ಯಾಭ್ಯಾಸ ಕೊಡಿಸಲಾಗದ ಸ್ಥಿತಿ.
  • ಓ.ಟಿ. ಮಾಡಲೇಬೇಕೆಂಬ ಒತ್ತಡ.

ಪ್ರಯಾಣಿಕರ ಗಮನಕ್ಕೆ

  • ಟಿಕೆಟ್ ಹಿಂದೆ ಬಾಕಿ ಹಣ ಬರೆದು ಕೊಟ್ಟು ಮುಂದೆ ಹೋಗಿ ನಿಂತುಕೊಳ್ಳುತ್ತಾರೆ. ಆ ಹಣವನ್ನು ಮರೆತು ಹಾಗೆ ಹೋಗಲಿ ಆ ಹಣ ಅವರಿಗೆ ಉಳಿಯಲಿ ಎಂದು ನೀವು ಭಾವಿಸದರೆ ಅದು ತಪ್ಪು. ಕೆಲವರು ಹೀಗೆ ದೂಷಿಸಿರುವುದು ಪತ್ರಿಕೆಯಲ್ಲಿ ಓದಿದ್ದೇನೆ.
  • ಪ್ರಯಾಣಿಕರೇ ನಿಮಗೆ ತಿಳಿದಿರುವಂತೆ ಸಂಸ್ಥೆಯು 2 ಕಿ.ಮೀ. ಒಂದು ಹಂತ 1 ಹಂತಕ್ಕೆ 4-೦೦ ರೂ. ಹಾಗೆ 2ನೇ ಹಂತಕ್ಕೆ 7 ರೂ. 3ನೇ ಹಂತಕ್ಕೆ 9 ರೂ. 4ನೇ ಹಂತಕ್ಕೆ 11 ರೂ. ಎಂದು ನಿಗಧಿಪಡಿಸಿದೆ.
  • ನೀವು ಗಮನಿಸಬೇಕಾದ ಅಂಶವೇನೆಂದರೆ ಬಸ್ ನಲ್ಲಿರುವ ಅಷ್ಟು ಪ್ರಯಾಣಿಕರಿಗೂ ಟಿಕೆಟ್ ನೀಡಿ, ಸರಿಯಾದ ಚಿಲ್ಲರೆ ಕೊಟ್ಟು ಮೊದಲನೇ ಹಂತ ಬರುವಷ್ಟರಲ್ಲಿ ಮಾರ್ಗ ಪತ್ರದಲ್ಲಿ ನಮೂದಿಸಲು ಹೇಗೆ ಸಾಧ್ಯ..? ಅದರಲ್ಲೂ ಕೆಲವು ಪ್ರಯಾಣಿಕರು ಮೊಬೈಲ್ ನಲ್ಲಿ ಮಾತನಾಡಿಕೊಂಡು ಟಿಕೆಟ್ ಪಡೆಯದೆ ಇರ್ರಿ ತಗತೀನಿ ಎಂದು ಬಯ್ಯುವುದು.  ಅಷ್ಟರಲ್ಲಿ ಹಂತ ಬಂದಿರುತ್ತದೆ. ನಮ್ಮ ಬಳಿ ಚಿಲ್ಲರೆ ಇದ್ದರು ಕೊಡುವಷ್ಟು ಕಾಲಾವಕಾಶವಿರುವುದಿಲ್ಲ. ಆದ್ದರಿಂದ ನಾವು ಟಿಕೆಟ್ ಹಿಂದೆ ಬಾಕಿ ಹಣ ಬರೆದು ಕೊಡುತ್ತೇವೆಯೆ ಹೊರತು ಬೇರೆ ಯಾವುದೇ ಉದ್ದೇಶವಿಲ್ಲ.

ಬೆಂಗಳೂರು ಮಹಾಸಾರಿಗೆ ಸಂಸ್ಥೆಯ್ಲಲ್ಲಿ ಎರಡು ವರ್ಷಗಳ ಕಾಲ “ಕೆಲಸದ ಮೇಲೆ ತರಬೇತಿ”ಯಲ್ಲಿ ಕೆಳಕಂಡ ಷರತ್ತು ಮತ್ತು ನಿಬಂದನೆಗಳಿಗೆ ಒಲಪಟ್ಟು ನಿಯೋಜನೆ ಮಾಡುತ್ತದೆ.

ತರಬೇತಿ ಅವಧಿಯು ಎರಡು ವರ್ಷಗಳಾಗಿದ್ದು ಅವಶ್ಯಕತೆಯಿದ್ದಲ್ಲಿ ತರಬೇತಿ ಅವಧಿಯನ್ನು ವಿಸ್ತರಿಸಲಾಗುವುದು.

ತರಬೇತಿಯ ಮೊದಲನೆಯ ವರ್ಷ ಮಾಸಿಕ ರೂ.2500- ಗಳನ್ನು ಹಾಗೂ ಎರಡನೇ ವರ್ಷ ಮಾಸಿಕ ರೂ. 3000/- ಗಳನ್ನು ಭತ್ಯೆಯಾಗಿ ನೀಡಲಾಗುವುದು. ಅಲ್ಲದೇ, ಕರ್ತವ್ಯ ನಿರ್ವಹಿಸಿದ ದಿವಸಗಳಂದು ಅರ್ಹ ಬಾಟಾ ಅಥವಾ ಪ್ರೋತ್ಸಾಹ ಧನಕ್ಕೆ ಅರ್ಹರಾಗಿರುತ್ತೀರಿ.

ಬೆಂಗಳೂರು ಕೇಂದ್ರ ಸ್ಥಾನದಲ್ಲಿ ಕಾರ್ಯನಿರ್ವಹಿಸುವುದರಿಂದ ಹೆಚ್ಚುವರಿಯಾಗಿ ಮಾಸಿಕ ರೂ. 500/- ಪರಿಶ್ರಮ ಭತ್ಯೆಯನ್ನು ನೀಡಲಾಗುವುದು.

ತಿಂಗಳಲ್ಲಿ ಕನಿಷ್ಟ ೨೨ ದಿನಗಳು ವಾಸ್ತವಿಕ ಹಾಜರಾತಿ ಹೊಂದಿದ್ದಲ್ಲಿ ಹಾಜರಿ ಪ್ರೋತ್ಸಾಹ ಧನ ಮೊತ್ತ ರೂ. ೫೦೦/- ಗಳನ್ನು ನೀಡಲಾಗುವುದು.

ಅವಶ್ಯಕತೆಗನುಗುಣವಾಗಿ ವಿಭಜಿತ ಅವಧಿಯಲ್ಲಿ ಕರ್ತವ್ಯ ನಿರ್ವಹಿಸಬೇಕಾಗುತ್ತದೆ.

ಸಂಸ್ಥೆಯ ನೌಕರರ ಭವಿಷ್ಯ ನಿಧಿ: ನಿಯಮಗಳು ಅನ್ವಯಿಸುವುದರಿಂದ ತರಬೇತಿ ಅವಧಿಯಲ್ಲಿ ನೀವು ಪಡೆಯುವ ಮಾಸಿಕ ಭತ್ಯೆಯಲ್ಲಿ ನಿಯಮಾನುಸಾರ ಅರ್ಹ ಭವಿಷ್ಯನಿಧಿ ಮೊಬಲಗನ್ನು ಕಡಿತಗೊಳಿಸಲಾಗುವುದು ಮತ್ತು ಸಂಸ್ಥೆಯ ವತಿಯಿಂದ ಸರಿಪ್ರಮಾಣದಲ್ಲಿ ವಂತಿಗೆಯನ್ನು ನೀಡಲಾಗುವುದು.

ತರಬೇತಿಯಲ್ಲಿ ಆಸಕ್ತಿ ತೋರಿಸದಿದ್ದಲ್ಲಿ ತರಬೇತಿಯನ್ನು ತೃಪ್ತಿಕರವಾಗಿ ಪೂರ್ಣಗೊಳಿಸದಿದ್ದಲ್ಲಿ, ತರಬೇತಿ ಅವಧಿಯಲ್ಲಿ ಹಾಜರಾತಿ ಅಸಮರ್ಪಕವಾಗಿದ್ದಲ್ಲಿ ಮತ್ತು ಚಾಲಕ-ಕಂ-ನಿರ್ವಾಹಕ ಹುದ್ದೆಯ ಕೆಲಸ ಕಾರ್ಯಗಳನ್ನು ಜವಾಬ್ದಾರಿಯಿಂದ ನಿರ್ವಹಿಸದೇ ಇದ್ದಲ್ಲಿ ನಿಮ್ಮ ಹೆಸರನ್ನು ಆಯ್ಕೆ ಪಟ್ಟಿಯಿಂದ ತೆಗೆದುಹಾಕಲಾಗುವುದು.

ತರಬೇತಿ ಅವಡಿಯಲ್ಲಿ ಉತ್ತಮ ಹಾಜರಾತಿಯನ್ನು ಹೊಂದಿ ತರಬೇತಿಯನ್ನು ಸಮರ್ಪಕವಾಗಿ ಪೂರ್ಣಗೊಳಿಸಿದಾಗ ಮಾತ್ರ ಸಂಸ್ಥೆಯಲ್ಲಿ ಉದ್ಭವಿಸುವ ಚಾಲಕ-ಕಂ-ನಿರ್ವಾಹಕ ಹುದ್ದೆಯಲ್ಲಿ ನಿಮ್ಮನ್ನು ಖಾಯಂಪೂರ್ವ ಸೇವೆಯಲ್ಲಿ ನಿಯೋಜಿಸಲು ಪರಿಶೀಲಿಸಲಾಗುವುದು.

ತರಬೇತಿ ಅವಧಿಅಲ್ಲಿ ಸಮರ್ಪಕವಾಗಿ ಪೂರ್ಣಗೊಳಿಸಿ ನಿಮ್ಮ ಖಾಯಂಪೂರ್ವ ಪರೀಕ್ಷಣಾರ್ಥಿ ಸೇವೆಯಲ್ಲಿ ತಂದ ಪಕ್ಷದಲ್ಲಿ ಪ್ರಸ್ತುತ ಜಾರಿಯಲ್ಲಿರುವ ಚಾಲಕ-ಕಂ-ನಿರ್ವಾಹಕ ವೇತನ ಶ್ರೇಣಿಯನ್ವಯ ರೂ.5660-90-5840-130-6620-170-7470-220-7900-280-8750-340-9430 ವೇತನ, ಅರ್ಹ ತುಟ್ಟಿಭತ್ಯೆ ಮತ್ತು ಅರ್ಹ ಭತ್ಯೆ ಹಾಗೂ ಸೇವಾ ಸವಲತ್ತುಗಳನ್ನು ಪಡೆಯಲು ಅರ್ಹರಾಗಿರುತ್ತೀರಿ.

ಕೆಲಸದ ಮೇಲೆ ತರಬೇತಿ ನಿಯೋಜನೆಗಾಗಿ ಕಳುಹಿಸಿರುವ ಈ ಆದೇಶವನ್ನು ನೀವು ಸಂಸ್ಥೆಯಲ್ಲಿ ಚಾಲಕ-ಕಂ-ನಿರ್ವಾಹಕ ಹುದ್ದೆಯ ನೇಮಕಾತಿಗೆ ಅಭಯ ಎಂದು ಪರಿಗಣಿಸುವಂತಿಲ್ಲ.

ಖಾಯಂ ಪೂರ್ವ ಪರೀಕ್ಷಣಾರ್ಥಿ ಸೇವೆಯಲ್ಲಿ ನಿಮ್ಮನ್ನು ನಿಯೋಜಿಸಿರುವ ಬಗ್ಗೆ ನಿರ್ಧಿಷ್ಟ ಆದೇಶವನ್ನು ನೇಮಕ ಪ್ರಾಧಿಕಾರವು ಹೊರಡಿಸುವ ವಿನಃ ನಿಮಗೆ ನೇಮಕಾತಿ ಕುರಿತಂತೆ ಯಾವುದೇ ಹಕ್ಕು ಅಥವಾ ಅಭಯ ಉಂಟಾಗುವುದಿಲ್ಲ.

ತರಬೇತಿ ಅವಧಿಯನ್ನು ಸೇವೆಯ ಭಾಗ ಅಥವಾ ಪರೀಕ್ಷಣಾರ್ಥಿ ಸೇವಾವಧಿಯ ಭಾಗ ಎಂದು ಪರಿಗಣಿಸಲಾಗುವುದಿಲ್ಲ.

ಅರ್ಜಿಯಲ್ಲಿ ನಮೂದಿಸಿರುವ ವಿವರಗಳು ಮತ್ತು ಮುಲ ದಾಖಲತಿಗಳ ಪರಿಶೀಲನಾ ಸಂದರ್ಭದಲ್ಲಿ ಹಾಜರು ಪಡಿಸಿದ ದಾಖಲಾತಿಗಳು ಹಾಗೂ ವೀಸಲಾತಿ ಸಲುವಾಗಿ ಸಲ್ಲಿಸಿರುವ ಪ್ರಮಾಣ ಪತ್ರಗಳ ನೈಜತೆಯ ಬಗ್ಗೆ ಪರಿಶೀಲನೆಯನ್ನು ಕಾಯ್ದಿರಿಸಿ ನಿಮ್ಮನ್ನು ಕೆಲಸದ ಮೇಲೆ ತರಬೇತಿಗೆ ನಿಯೋಜಿಸಲಾಗುವುದು.

ತರಬೇತಿ ಅವಧಿಯನ್ನು ಸಮರ್ಪಕವಾಗಿ ಪೂರ್ಣಗೊಳಿಸಿದ ನಂತರ ಖಾಯಂ ಹುದ್ದೆಗೆ ನೇಮಕಗೊಂಡಲ್ಲಿ ಅನಿಯವಮಿತ ವಾರ್ಷಿಕ ಬಡ್ತಿಗೆ ಅರ್ಹತೆ ಹೊಂದಿರುವುದಿಲ್ಲ.

ನೀವು ಸಲ್ಲಿಸಿರುವ ದಾಖಲಾತಿಗಳು ಅಥವಾ ಮೀಸಲಾತಿ ಸಲುವಾಗಿ ಸಲ್ಲಿಸಿರುವ ಪ್ರಮಾಣ ಪತ್ರಗಳು ನಕಲಿ ಎಂದು ಕಂಡು ಬಂದಲ್ಲಿ ನಿಮ್ಮ ಹೆಸರನ್ನು ಯಾವುದೇ ಮುನ್ಸೂಚನೆ ಇಲ್ಲದೆ ಆಯ್ಕೆಪಟ್ಟಿಯಿಂದ ತೆಗೆದು ಹಾಕಲಾಗುವುದು ಮತ್ತು ಕ್ರಮ ಜರುಗಿಸಲಾಗುವುದು.

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ ನೇಮಕಗೊಂಡ ಅಭ್ಯರ್ಥಿಗಳು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಾಗಲೀ, ವಾಯುವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಾಗಲೀ ಅಥವಾ ಈಶಾನ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಾಗಲೀ ವರ್ಗಾವಣೆ ಕೋರಲು ಅರ್ಹರಲ್ಲ.

ಉಪಧಾನ ಪಾವತಿ ಕಾಯಿದೆ ೧೯೭೨ ರನ್ವಯ ಉಪಧಾನ ಪಡೆಯಲು ಅರ್ಹರಿರುತ್ತೀರಿ.

ಕೆಲಸದ ಮೇಲೆ ತರಬೇತಿಗೆ ಹಾಜರಾಗುವ ಅಭ್ಯರ್ಥಿಗಳು ನಿರ್ವಾಹಕರ ಭದ್ರತಾ ಠೇವಣಿ ರೂ.5000/- ಗಳನ್ನು ನಗದು ರೂಪದಲ್ಲಿ ಸಂಸ್ಥೆಯಲ್ಲಿ ಠೇವಣಿ ಇಡಬೇಕಾಗಿದ್ದು, ಸದರಿ ಮೊಬಲಗಿನೊಂದಿಗೆ ಕರ್ತವ್ಯಕ್ಕೆ ಹಾಜರಾಗುವುದು (ಭದ್ರತಾ ಠೇವಣಿ ರೂ. 5000/-ಇಟ್ಟಿರುವುದಕ್ಕೆ ಯಾವುದೇ ರೀತಿಯ ರಸೀದಿಯನ್ನು ನೀವುವುದಿಲ್ಲ)

ಚಾಲಕ-ಕಂ-ನಿರ್ವಾಹಕ ಹುದ್ದೆಗೆ ಹಾಜರಾದ ನಿಮ್ಮನ್ನು ಚಾಲಕ ಅಥವಾ ಚಾಲಕ-ಕಂ-ನಿರ್ವಾಹಕ ಹಾಗೂ ನಿರ್ವಾಹಕ ಹುದ್ದೆಯಲ್ಲಿ ಕೆಲಸವನ್ನು ನಿರ್ವಹಿಸಲು ಅವಶ್ಯಕತೆಗನುಸಾರವಾಗಿ ನಿಯೋಜಿಸಿದಲ್ಲಿ ನಿಯಮಾನುಸಾರ ಅರ್ಹ ವಿಶೇಷ ಭತ್ಯೆಗೆ ಅರ್ಹರಿರುವಿರಿ.

ತರಬೇತಿ ಅವಧಿಯಲ್ಲಿ ನಿರ್ವಾಹಕ ತರಬೇತಿಗೆ ರಾಜೀನಾಮೆ ಸಲ್ಲಿಸಬೇಕಾದಲ್ಲಿ ಒಂದು ತಿಂಗಳ ಸ್ಟ್ಯೆಫಂಡ್ ಹಣವನ್ನು ಸಂಸ್ಥೆಗೆ ಪಾವತಿಸಿದಲ್ಲಿ ಮಾತ್ರ ಅವರ ರಾಜೀನಾಮೆ ಪತ್ರವನ್ನು ಅಂಗೀಕರಿಸುವ ಬಗ್ಗೆ ಸೂಕ್ತ ಕ್ರಮತೆಗೆದುಕೊಳ್ಳಲಾಗುವುದು.

ಮೇಲಿನ ಷರತ್ತು ಮತ್ತು ನಿಬಂಧನೆಗಳು ನಿಮಗೆ ಒಪ್ಪಿಗೆ ಆದಲ್ಲಿ ನೀವು ಈ ಸಂಸ್ಥೆಗೆ ಸೇರಬಹುದು. ಕರ್ತವ್ಯಕ್ಕೆ ಹಾಜರಾದ ದಿನದಿಂದ ಶುರುವಾಗುವುದು ನಿಮಗೆ ಮಾನಸಿಕ ಚಿತ್ರಹಿಂಸೆ

 Profile Picture  -ಕೆ ರವಿಕುಮಾರ್ ಕೋಲಾರ್

Advertisements

ನಿಮ್ಮ ಅನಿಸಿಕೆ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: