ಲಾಲ್ ಬಹಾದುರ್ ಶಾಸ್ತ್ರೀ- ಕೆ ರವಿಕುಮಾರ್ ಕೋಲಾರ್

ಲಾಲ್ ಬಹಾದುರ್ ಮೊಘಲ್‌ಸಾರಾಯ್‌ನಲ್ಲಿ ಜನಿಸಿದ್ದು. ೧೯೨೧ರಲ್ಲಿ ಮಹಾತ್ಮ ಗಾಂಧಿಯವರ ಅಸಹಕಾರ ಚಳುವಳಿಯಲ್ಲಿ ಭಾಗವಹಿಸಲು ಇವರು ತಮ್ಮ ಓದನ್ನು ಅರ್ಧದಲ್ಲೇ ಬಿಟ್ಟರು. ೧೯೨೬ರಲ್ಲಿ ಇವರಿಗೆ ಶಾಸ್ತ್ರಿ ಎಂಬ ಬಿರುದು ಕಾಶಿ ವಿದ್ಯಾ ಪೀಠದಿಂದ ಕೊಡಲ್ಪಟ್ಟಿತು. ಒಟ್ಟು ೯ ವರ್ಷಗಳ ಕಾಲ ಸ್ವಾತಂತ್ರ್ಯಕ್ಕಾಗಿ ಕಾರಾಗೃಹವಾಸ ಅನುಭವಿಸಿದ ಇವರು ಸತ್ಯಾಗ್ರಹ ಚಳುವಳಿ ಪ್ರಾರಂಭವಾದ ನಂತರ ೧೯೪೬ ರವರೆಗೂ ಜೈಲು ಶಿಕ್ಷೆ ಅನುಭವಿಸಿದರು,ಸ್ವಾತಂತ್ರ ದೊರಕಿದ ಬಳಿಕ ಇವರು ಗೋವಿ೦ದ ವಲ್ಲಭ ಪ೦ತ್ ಅವರ ಸರಕಾರದಲ್ಲಿ ಪೋಲಿಸ್ ಖಾತೆಯನ್ನು ವಹಿಸಿಕೊಂಡಿದ್ದರು. ೧೯೫೧ರಲ್ಲಿ ಇವರು ಲೋಕ ಸಭೆಗೆ ಜನರಲ್ ಸೆಕ್ರೆಟರಿ ಆಗಿ ಆಯ್ಕೆಯಾದರು. ಇದರ ಪರ್ಯಾಯ ಇವರು ರೈಲ್ವೆ ಖಾತೆಯನ್ನು ವಹಿಸಿಕೊಂಡಿದ್ದೂ ಉಂಟು. ಅರಿಯಳೂರು ಬಳಿ ಆದ ರೈಲ್ವೆ ದುರಂತದ ತರುವಾಯ ಇವರು ತಮ್ಮ ರಾಜೀನಾಮೆ ನೀಡಿದರು. ಮತ್ತೊಮ್ಮೆ ಇವರು ಕ್ಯಾಬಿನೆಟ್‌ಗೆ ಮರಳಿದರು, ಮೊದಲು ಸಾರಿಗೆ ಮಂತ್ರಿಯಾಗಿ, ಬಳಿಕ ೧೯೬೧ರಲ್ಲಿ ಗೃಹ ಮಂತ್ರಿಯಾಗಿ.

ಮೇ ೨೭, ೧೯೬೪ರಂದು ಜವಾಹರ್‌ಲಾಲ್ ನೆಹರು ತಮ್ಮ ಕಾರ್ಯಕಾಲದಲ್ಲಿ ಸಾವನ್ನಪ್ಪಿದರು. ಸ್ವಲ್ಪಮಟ್ಟಿಗೆ ಖಾಲಿ ಖಾಲಿಯಾದ ರಾಜಕೀಯ ರಂಗವನ್ನು ಬಿಟ್ಟು ಅಗಲಿದ್ದರು. ಕಾಂಗ್ರೆಸ್‌ನ ಕೆಲವು ಪ್ರಮುಖ ಹಸ್ತಿಗಳಿಗೆ ತಮಗೆ ಬೇಕಾದ ಬೆಂಬಲ ಸಿಗದ ಕಾರಣ ತುಂಬಾ ಸರಳ ಅಧಿಕಾರ ದಾಹಿಯೇ ಅಲ್ಲದ ಶಾಸ್ತ್ರಿಗಳಿಗೆ ಪ್ರಧಾನಿಯಾಗಲು ಅವಕಾಶ ಸಿಕ್ಕಿತು. ಇವರು ಅದೇ ವರ್ಷ ಜೂನ್ ೯ ರಂದು ಭಾರತದ ಪ್ರಧಾನಿಯಾದರು.ಆಗಿನ ಪ್ರಮುಖ ಸಮಸ್ಯೆ ಪಾಕಿಸ್ತಾನವಾಗಿತ್ತು. ಕಚ್ ಬಳಿ ನಡೆದ ಯುದ್ಧ ಯುಎನ್ ಮಧ್ಯಸ್ಥಿಕೆಯಿಂದ ನಿಂತು ಜಮ್ಮು-ಕಾಶ್ಮೀರದಲ್ಲಿ ಮತ್ತೊಮ್ಮೆ ಪ್ರಾರಂಭವಾಯಿತು. ಎರಡನೇ ಭಾರತ-ಪಾಕ್ ಯುದ್ಧ ಪ್ರಾರಂಭವಾಗಿ ಭಾರತದ ಪಡೆ ಲಾಹೋರ್ ತಲುಪುತ್ತಲೇ ಶಾಂತಿ ಒಪ್ಪಂದ ಮಾಡಿಕೊಳ್ಳಲಾಯಿತು.

ಜನವರಿ ೧೯೬೬ರಲ್ಲಿ ಶಾಸ್ತ್ರಿ ಮತ್ತು ಮಹಮ್ಮದ್ ಆಯೂಬ್ ಖಾನ್ ಅಲೆಕ್ಸೈ ನಿಕೊಲಯೆವಿಚ್ ಕೊಸಿಜಿನ್ ಅವರಿಂದ ಆಯೋಜಿಸಲಾದ ಟಾಷ್ಕೆಂಟ್‌ನಲ್ಲಿ ನಡೆದ ಮಾತುಕತೆಯಲ್ಲಿ ಭಾಗವಹಿಸಿದರು. ಶಾಸ್ತ್ರಿಗಳು ಭಾರತದೊಂದಿಗೆ ಜನವರಿ ೧೦ ರಂದು ಒಂದು ಒಪ್ಪಂದಕ್ಕೆ ಸಹಿ ಹಾಕಿದರು, ಅದೇ ಟಾಶ್ಕೆಂಟ್ ಡಿಕ್ಲೆರೇಶನ್. ಆದರೆ, ಮರುದಿನವೇ ಅವರು ಹೃದಯಾಘಾತದಿಂದ ಸಾವನ್ನಪ್ಪಿದರು. ಇವರು ಕಾರ್ಯಕಾಲದಲ್ಲಿ ದೇಶದಾಚೆ ಸಾವನ್ನಪ್ಪಿದ ಏಕೈಕ ಭಾರತದ ಪ್ರದಾನ ಮಂತ್ರಿ ಹಾಗು ಈ ತರಹದ ಅಂತಕ್ಕೆ ತುತ್ತಾದ ಇತಿಹಾಸದ ಬಹುಶಃ ಕೆಲವೇ ಕೆಲವು ಸರಕಾರದ ಮುಖ್ಯಸ್ಥರಲ್ಲಿ ಒಬ್ಬರು.ಭಾರತ ಕಂಡ ಪ್ರಧಾನಿಯಾದ ಅತ್ಯಂತ ಪ್ರಾಮಾಣಿಕ ಜೀವಿ. ಇವರ ಪ್ರಾಮಾಣಿಕತೆಗೆ ಹಲವರು ತಲೆದೂಗಿದ್ದುಂಟು. ಹಾಗೆಯೇ ಇವರ ಸ್ವಾಭಿಮಾನ್, ದೇಶಾಭಿಮಾನ ಕೂಡ ತಲೆದೂಗುವಂತದ್ದು.ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಹಲವಾರು ನಾಯಕರು ಸೆರೆಮನೆ ವಾಸವನ್ನನುಭವಿಸಿ ಹಲವು ಕಹಿ ಅನುಭವಗಳಿಗೆ ಒಳಗಾಗಿದ್ದರು. ಲಾಲ್ ಬಹಾದುರ್ ಶಾಸ್ತ್ರಿಯವರು ಸೆರೆಮನೆ ವಾಸದಲ್ಲಿದ್ದಾಗ ಅವರ ಮಗಳು ಗಂಭೀರವಾದ ಅನಾರೋಗ್ಯಕ್ಕೆ ತುತ್ತಾದಳು, ಆಗ ಶಾಸ್ತ್ರೀಜಿ ತಮಗೆ 8 ದಿನಗಳ ವರೆಗೆ ಮನೆಗೆ ಹೋಗಲು ಕೋರಿದರು. ಜೈಲಿನ ಅಧಿಕಾರಿಗಳು ಮುಚ್ಚಳಿಕೆ ಬರೆದುಕೊಡಲು ಕೋರಿದರು. ಇದು ಶಾಸ್ತ್ರೀಜಿಯವರ ಸ್ವಾಭಿಮಾನಕ್ಕೆ ಒಗ್ಗದ ಸಂಗತಿಯಾಗಿತ್ತು. ತಮ್ಮ ಪ್ರಾಮಾಣಿಕತೆಯ ಮೇಲೆ ನಂಬಿಕೆ ಇರಿಸಿ ಕಳುಹಿಸಿವುದಾದಲ್ಲಿ ಮಾತ್ರ ಹೋಗುತ್ತೇವೆ, ಮುಚ್ಚಳಿಕೆ ಬರೆದು ಕೊಡಲಾಗುವುದಿಲ್ಲ ಎಂದರು, ಜೈಲಿನ ಅಧಿಕಾರಿಗಳಿಗೆ ಅವರ ಪ್ರಾಮಾಣಿಕತೆ ತಿಳಿದ ಸಂಗತಿಯೇ ಆಗಿದ್ದರಿಂದ ಅವರನ್ನು ಬಿಡುಗಡೆಗೊಳಿಸಿದರು. ಶಾಸ್ತ್ರೀಜಿ ಮನೆಗೆ ಬಂದಾಗ ದುರದೃಷ್ಟವಶಾತ್ ಮಗಳು ಮರಣ ಹೊಂದಿದ್ದಳು. ಅವಳ ಅಂತ್ಯಕ್ರಿಯೆ ಮುಗಿಸಿ ಅವಧಿಗೆ ಮುನ್ನವೇ ಜೈಲಿಗೆ ಬಂದರು.

ಇನ್ನೊಮ್ಮೆ ಅವರ ಮಗನಿಗೆ ಇನ್ ಫ್ಲೂಯೆಮ್ಜಾ ಕಾಯಿಲೆ ಬಂದಿತ್ತು. ಆಗಲೂ ಶಾಸ್ತ್ರೀಜಿ ಜೈಲಿನ ಅನುಮತಿ ಪಡೆದು ಬಂದರು. ಮಗನ ಯೋಗಕ್ಷೇಮ ವಿಚಾರಿಸಿ ಪುನಃ ಜೈಲಿಗೆ ಹೊರಡಲು ಸಿದ್ಧರಾದರು, ಮನೆಯವರೆಲ್ಲ ಹೇಗೂ ಬಂದಿದ್ದೀರಿ ಇನ್ನೊಂದೆರಡು ದಿನಗಳು ಮನೆಯಲ್ಲಿರಿ ಎಂದರೂ ಕೇಳದೇ ಕೂಡಲೇ ಹಿಂದಿರುಗಿದರು, ಸ್ವಾತಂತ್ರ್ಯಾ ನಂತರ ಗೃಹ ಮಂತ್ರಿಯಾಗಿದ್ದಾಗಲೂ ಶಾಸ್ತ್ರೀಜಿ ಸ್ವಂತ ಮನೆ ಹೊಂದಿರಲಿಲ್ಲ. ರೈಲ್ವೆ ಮಂತ್ರಿಯಾಗಿದ್ದಾಗ ರೈಲು ಅಪಘಾತದ ನೈತಿಕ ಹೊಣೆ ಹೊತ್ತು, ತಾವೇ ನೇರವಾಗಿ ಕಾರಣರಲ್ಲವಾದರೂ, ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

– ಕೆ ರವಿಕುಮಾರ್ ಕೋಲಾರ್ 

Advertisements

ನಿಮ್ಮ ಅನಿಸಿಕೆ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: