ನೆರಳು ಬೆಳಕುಗಳ ಮಾಂತ್ರಿಕ ಇನ್ನಿಲ್ಲ

ಪ್ರತಿಭಾನ್ವಿತ ನಟ ಹಾಗೂ ರಂಗಕರ್ಮಿ ಏಣಗಿ ನಟರಾಜ್

ಶನಿವಾರ (ಜೂ.9) ಹುಬ್ಬಳ್ಳಿಯಲ್ಲಿ ನಿಧನರಾಗಿದ್ದಾರೆ. ಇತ್ತೀಚೆಗೆ ಅನಾರೋಗ್ಯಕ್ಕೆ ತುತ್ತಾಗಿದ್ದ ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಖ್ಯಾತ ನಟ, ರಂಗಕರ್ಮಿ ಹಾಗೂ ಬರಹಗಾರ ಏಣಗಿ ಬಾಳಪ್ಪ ಅವರ ಪುತ್ರರಾಗಿದ್ದರು.
ಕೆಲಕಾಲದಿಂದ ಅಸ್ವಸ್ಥರಾಗಿದ್ದ ನಟರಾಜ್ ಅವರು ಹುಬ್ಬಳಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಹಿರಿಯ ರಂಗಕರ್ಮಿ ಏಣಗಿ ಬಾಳಪ್ಪ ಅವರ ಪುತ್ರರಾದ ಅವರು ‘ಅಭಿ’, ಮತ್ತೆ ಮುಂಗಾರು, ಅವ್ವ ಸೇರಿದಂತೆ ಅನೇಕ ಚಲನಚಿತ್ರಗಳಲ್ಲಿ ಅಭಿನಯಿಸಿದ್ದ ನಟರಾಜ್ ಅವರು ಇತ್ತೀಚೆಗಷ್ಟೇ ಧಾರವಾಡದ ರಂಗಾಯಣದ ಜವಾಬ್ದಾರಿಯನ್ನು ಹೊತ್ತಿದ್ದರು. ಅದನ್ನೊಂದು ಪ್ರಗತಿಪರ ಸಂಘಟನೆಯಾಗಿ ರೂಪಿಸುವ ನಿಟ್ಟಿನಲ್ಲಿ ಅನೇಕ ಕಾರ್ಯಕ್ರಮಗಳನ್ನು ಕೂಡ ಹಮ್ಮಿಕೊಂಡಿದ್ದರು.

ಏಣಗಿ ನಟರಾಜ್ ಎಂದರೆ ವಿಭಿನ್ನ ಅಭಿನಯಕ್ಕೆ ಇನ್ನೊಂದು ಹೆಸರು. ಹುಬ್ಬಳ್ಳಿ-ಧಾರವಾಡದ ಭಾಷೆಯಲ್ಲಿ ಪ್ರಸಾರವಾದ ಬಹುತೇಕ ಕಿರುತೆರೆ ಧಾರಾವಾಹಿಗಳಲ್ಲಿ ನಟರಾಜ್ ಅವರಿದ್ದರೇನೇ ಸೊಗಸು. ವಾಡೆಯ ಯಜಮಾನನಾಗಿ ಅವರು ತಮ್ಮ ಅಭಿನಯದಲ್ಲಿ ತೋರುತ್ತಿದ್ದ ಗತ್ತು-ಗೈರತ್ತು ಜನಮಾನಸದಲ್ಲಿ ಯಾವತ್ತೂ ಹಸಿರಾಗಿರುವಂತಾದ್ದು. “ಮೂಡಲ ಮನೆ” ಧಾರಾವಾಹಿಯಲ್ಲಿ ಅವರ ವಾಡೆ ಯಜಮಾನನ ಪಾತ್ರ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಅವರದೇ ನಿರ್ದೇಶನದಲ್ಲಿ ಪ್ರಸಾರವಾಗುತ್ತಿದ್ದ ಧಾರಾವಾಹಿಯಲ್ಲೂ ಅವರದೇ ಛಾಪಿತ್ತು.

ನೀನಾಸಂ ರಂಗ ತರಬೇತಿ ಶಾಲೆಯಲ್ಲಿ ತರಬೇತಿ ಪಡೆದಿದ್ದ ಏಣಗಿ ನಟರಾಜ್ ಅವರಿಗೆ ಅಭಿಯನವೆಂದರೆ ಚಿಟಿಕೆ ಹೊಡೆದಷ್ಟು ಸರಾಗವಾಗಿತ್ತು. ಬಳಿಕ ನೀನಾಸಂ ತಿರುಗಾಟದಲ್ಲಿಯೇ ಅನೇಕ ನಾಟಕಗಳಲ್ಲಿ ನಟಿಸಿದ್ದ ಏಣಗಿ ಅಭಿನಯದಲ್ಲಿ ತಾವೊಬ್ಬ ‘ಗಟ್ಟಿ ಕಾಳು’ ಎಂಬುದನ್ನು ಸಾಬೀತು ಪಡಿಸಿದ್ದರು.

ಹಿರಿಯ ರಂಗಕರ್ಮಿ ಪ್ರಸನ್ನ ಮತ್ತು ಜಂಬೆ ನಿರ್ದೇಶನದ ಹಲವಾರು ನಾಟಕಗಳಲ್ಲಿ ಅವರು ಅಭಿನಯಿಸಿದ್ದರು. ಬಿರುದಂತೆಂಬರ ಗಂಡ, ತದ್ರೂಪಿ, ನಾ ತುಕಾರಾಂ ಅಲ್ಲ, ಸಾಂಬಶಿವ ಪ್ರಹಸನ ಮೊದಲಾದ ನಾಟಕಗಳನ್ನು ಉದಾಹರಣೆಯಾಗಿ ನೀಡಬಹುದು. ಖಡಕ್ ಮಾತಿನ ಆದರೆ ಅಷ್ಟೇ ಸೂಕ್ಷ್ಮ ಮನಸ್ಸಿನ ಆತ್ಮೀಯ ನಟನನ್ನು ಕನ್ನಡ ರಂಗಭೂಮಿ ಮಾತ್ರವಲ್ಲ ಚಿತ್ರರಂಗವೂ ಕಳಕೊಂಡಿದೆ.
 -ಕೆ. ರವಿ ಕುಮಾರ್ ಕೋಲಾರ್

Advertisements

One response

  1. It is so sad news all Kanndigarege….

ನಿಮ್ಮ ಅನಿಸಿಕೆ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: