ಕಿರಣ್ ಬೇಡಿ

ಕಿರಣ್ ಬೇಡಿ (9 June 1949) 

ಭಾರತದಲ್ಲಿ ಪೋಲೀಸ್ ಸೇವೆ ಸೇರಿದ ಮೊದಲ ಭಾರತೀಯ ಮಹಿಳೆ ಕಿರಣ್ ಬೇಡಿ (born 9 June 1949).ಪಂಜಾಬ್‌ನ ಅಮೃತಸರದಲ್ಲಿ ೧೯೪೯ ಜೂನ್ ೯ರಂದು ಜನಿಸಿದರು.ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ, ಕಾನೂನು ಹಾಗೂ ಡಾಕ್ಟರೇಟ್ ಪದವಿ ಪಡೆದ ನಂತರ ರಾಜ್ಯಶಾಸ್ತ್ರದ ಉಪನ್ಯಾಸಕರಾಗಿ ವೃತ್ತಿ ಆರಂಭಿಸಿದರು.ಆದರೆ ಮನದಾಳದ ಆಸೆಯ ಕರೆಗೆ ಓಗೊಟ್ಟು ಮುಂದೆ ಪೊಲೀಸ್ ಅಧಿಕಾರಿಯಾದರು.ಇವರು ಪೊಲೀಸ್ ವೃತ್ತಿಯಲ್ಲಿ ಎದುರಿಸಿರುವ ಸವಾಲುಗಳಂತೆ ,ಗಳಿಸಿರುವ ಯಶಸ್ಸು ಹಾಗೂ ಜನಪ್ರಿಯತೆ ಕೂಡಾ ಅಪಾರ.ಗಣ್ಯವ್ಯಕ್ತಿಗಳ ಭದ್ರತೆ, ಸಂಚಾರ ಸಮಸ್ಯೆಗಳ ನಿವಾರಣೆ,ಮಾದಕವಸ್ತು ಚಟುವಟಿಕೆಗಳ ನಿಯಂತ್ರಣ – ಇವರ ಆಸಕ್ತಿಯ ಕೇಂದ್ರಗಳು.ಇವರ ಅಧಿಕಾರದ ಅವಧಿಯಲ್ಲಿ ತಿಹಾರ್ ಜೈಲಿನಲ್ಲಿ ಇವರು ಕೈಗೊಂಡ ಸುಧಾರಣೆಗಳು ಮಹತ್ವದ್ದೆನಿಸಿವೆ.ವಿಶ್ವಸಂಸ್ಥೆ ಯ ಶಾಂತಿಪಾಲನಾ ವಿಭಾಗದ ಸಲಹೆಗಾರರಾಗಿ ಕೆಲಸ ನಿರ್ವಹಿಸಿದ್ದಾರೆ.ಅಲ್ಲಿ ಇವರ ಸೇವೆಗೆ ಮೆಚ್ಚುಗೆಯಾಗಿ ವಿಶ್ವಸಂಸ್ಥೆ ಪದಕ ನೀಡಿ ಗೌರವಿಸಿದೆ.ಇವರ ಸೇವೆಗೆ ಮೆಚ್ಚುಗೆಯಾಗಿ ಇವರಿಗೆ ರಾಮನ್ ಮ್ಯಾಗ್ಸೇಸೆ ಪುರಸ್ಕಾರ ಸಂದಿದೆ.

‘ಸುರಕ್ಷಿತ ಭಾರತ ‘ವೆಬ್ ಜಾಲದೊಳಗೆ ಕಿರಣ್ ಬೇಡಿ…..
ಸ್ವಯಂ ನಿವೃತ್ತಿ ಪಡೆದರೂ , ಜಡವಾಗಿರದೆ ಚಟುವಟಿಕೆಯಲ್ಲಿ ತೊಡಗಿಕೊಂಡಿರುವ ಮಾಜಿ ಐಪಿಎಸ್ ಅಧಿಕಾರಿ ಕಿರಣ್ ಬೇಡಿಯವರು ಪೊಲೀಸ್ ಇಲಾಖೆಯ ಸುಧಾರಣೆಗಾಗಿ ಅಭಿಯಾನವನ್ನು ಪ್ರಾರಂಭಿಸಿದ್ದಾರೆ.

ತಮ್ಮ ಸಹೃದಯ ಮಿತ್ರರ ಜತೆ ಸೇರಿ ‘ಇಂಡಿಯಾ ವಿಷನ್ ಫೌಂಡೇಶನ್’ ಎಂಬಹೆಸರಿನಡಿ ಸುರಕ್ಷಿತ ಭಾರತ ಎಂಬ ಅಭಿಯಾನವನ್ನು ಕಿರಣ್ ಬೇಡಿ ಆರಂಭ ಮಾಡಿದ್ದಾರೆ.ಈ ಅಭಿಯಾನದ ಪ್ರಚಾರಕ್ಕಾಗಿ ಹಾಗೂ ನಾಗರೀಕರಿಗೆ ಸಹಾಯವಾಗಲೆಂದು ವೆಬ್ ಸೈಟ್ ಅನ್ನು ತಯಾರಿಸಿದ್ದಾರೆ. ಪೊಲೀಸ್ ಠಾಣೆಯಲ್ಲಿ ನಿಮಗೆ ಯಾವುದೇ ಸಹಾಯ ಸಿಗದಿದ್ದ ಪಕ್ಷದಲ್ಲಿ ನೀವು www.saferindia.com ತಾಣಕ್ಕೆ ಭೇಟಿಕೊಟ್ಟು ನಿಮ್ಮ ದೂರನ್ನು ಸಲ್ಲಿಸಿದರೆ ಸಾಕು. ನಿಮ್ಮ ದೂರನ್ನು ಸಂಬಂಧಪಟ್ಟ ಠಾಣೆಗೆ, ಆ ರಾಜ್ಯದ ಪೊಲೀಸ್ ಕೇಂದ್ರ ಕಚೇರಿಗೆ ತಲುಪಿಸುವ ವ್ಯವಸ್ಥೆಯನ್ನು ಮಾಡಲಾಗಿದೆ.ದೂರಿನ ಒಂದು ನಕಲು ಪ್ರತಿಯನ್ನು ದೂರು ನೀಡಿದವರಿಗೂ ನೀಡುವುದರಿಂದ ಮುಂದೆ ಮಾಹಿತಿ ಹಕ್ಕು ಕಾಯಿದೆ ಮೂಲಕ ನೆರವು ಕೋರಲು ಸಹಾಯಕವಾಗಲಿದೆ ಎಂದು ಸುದ್ದಿಗಾರರಿಗೆ ಕಿರಣ್ ಬೇಡಿ ಸ್ಪಷ್ಟಪಡಿಸಿದರು.

ಪೊಲೀಸ್ ಠಾಣೆಯಲ್ಲಿ ನೆರವು ದೊರೆಯದಿದ್ದರೆ ಮಾತ್ರ ವೆಬ್ ಸೈಟ್ ನಲ್ಲಿ ದೂರು ಸಲ್ಲಿಸಲು ಅವಕಾಶವಿರುತ್ತದೆ. ಆದರೆ ಠಾಣೆಗೆ ಹೋಗದೆ ವೆಬ್ ಸೈಟ್ ನಲ್ಲಿ ದೂರು ನೀಡಿದರೆ ಅದನ್ನು ಪುರಸ್ಕರಿಸುವುದಿಲ್ಲ ಹಾಗೂ ಯಾವುದೇ ರೀತಿಯ ಶಿಫಾರಿಸ್ಸಿಗೆ ಇಲ್ಲಿ ಆಸ್ಪದವಿಲ್ಲ ಎಂದು ಕಿರಣ್ ಬೇಡಿ ಹೇಳಿದರು.

ದೂರು ದಾಖಲಾತಿಯಲ್ಲಿ ಇಳಿಕೆ:
ದೇಶದ ಮೊದಲ ಐಪಿಎಸ್ ಅಧಿಕಾರಿ ಹಾಗೂ ಮ್ಯಾಗಸೆಸ್ಸೆ ಪ್ರಶಸ್ತಿ ವಿಜೇತೆ ಕಿರಣ್ ಬೇಡಿಯವರ ಅಭಿಯಾನಕ್ಕೆ ಹೆಗಲು ಕೊಟ್ಟು ನಿಂತಿರುವ ಮಾಜಿ ಐಪಿಎಸ್ ಅಧಿಕಾರಿ ಅರವಿಂದ್ ಶರ್ಮ ಅವರ ಪ್ರಕಾರ ದೆಹಲಿಯಲ್ಲಿನ ಕಳೆದ ವರ್ಷದಅಂಕಿ ಅಂಶಗಳ ಪ್ರಕಾರ ಕೇಂದ್ರ ನಿಯಂತ್ರಣ ಕಚೇರಿಗೆ ಸುಮಾರು 11,55,247 ಕರೆಗಳು ಬಂದವು ಆದರೆ ಅವುಗಳಲ್ಲಿ ದಾಖಲಾದ ದೂರಿನ ಸಂಖ್ಯೆ 55,000 ಮಾತ್ರ.ಜನ ಸಾಮಾನ್ಯರು ಹಾಗೂ ಪೊಲೀಸ್ ಇಲಾಖೆಯೊಡನೆ ಬಾಂಧವ್ಯ ಬೆಸುಗೆಯಾಗಿ ಈ ವೆಬ್ ಸೈಟ್ ಕೆಲಸ ಮಾಡಲಿದೆ ಎಂದರು.

ಈ ಅಭಿಯಾನದಲ್ಲಿ ಕೇವಲ ಮಾಜಿ ಪೊಲೀಸ್ ಆಧಿಕಾರಿಗಳಲ್ಲದೆ, ವಕೀಲರು, ಕಾನೂನು ವಿದ್ಯಾರ್ಥಿಗಳು ಸೇರಿದ್ದಾರೆ. ಇದಲ್ಲದೆ ಕಾನೂನು ಕಾಲೇಜುಗಳು, ಎನ್ ಜಿಓಗಳು, ಮಾಧ್ಯಮದವರು, ನಾಗರೀಕ ಸೇವಾ ಸಂಘಗಳು ಭಾಗವಹಿಸಬಹುದು. ಇದರಿಂದ ಅನಕ್ಷರಸ್ಥ ನಾಗರೀಕರಿಗೆ ಇ- ಮಾಧ್ಯಮದ ಬಳಕೆಯ ಪ್ರಯೋಜನವನ್ನು ಹಾಗೂ ದೂರು ದಾಖಲಾತಿಯ ಬಗ್ಗೆ ತಿಳಿ ಹೇಳಲು ಸಾಧ್ಯವಾಗುತ್ತದೆ. ಮ್ಯಾಗಸ್ಸೆಸೆ ಪ್ರಶಸ್ತಿಯಿಂದ ಬಂದ ಹಣವನ್ನು ಮಹಿಳಾ ಅಭಿವೃದ್ದ್ಧಿ, ಖೈದಿಗಳ ಸುಧಾರಣೆ ಹಾಗೂ ಪೊಲೀಸ್ ಇಲಾಖೆ ಸುಧಾರಣೆಗೆ ವಿನಿಯೋಗಿಸುವುದಾಗಿ ಹೇಳಿದ್ದೆ. ಈಗ ಅದು ನನಸಾಗುತ್ತಿದೆ ಎಂದು ಕಿರಣ್ ಬೇಡಿ ಹೇಳಿದರು.

http://www.saferindia.com/ ತಾಣಕ್ಕೆ ತಂತ್ರಜ್ಞಾನದ ನೆರವನ್ನು ನೀಡುತ್ತಿರುವುದು ನಮಗೆ ಹೆಮ್ಮೆಯ ವಿಚಾರ ಎಂದು ಮೊಬೈಲ್ ಮಂತ್ರ ಸಂಸ್ಥೆಯ ಸಿಇಓ ನವೀನ್ ವರ್ಷೇಯ ಹೇಳಿದರು.
 – ರವಿ ಕುಮಾರ್ ಆರಾಧ್ಯ

Advertisements

ನಿಮ್ಮ ಅನಿಸಿಕೆ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: