ಹಾಗೆಯೇ ನಗೂವೂ ಬಂತು

ಇಂದು ಕನ್ನಡ ದೃಶ್ಯ ಮಾಧ್ಯಮದ “ಸಮಯ” ವಾಹಿನಿಗೆ 3ನೇ ವರ್ಷದ ಸಂಭ್ರಮಾಚರಣೆ.
ಇದೇ ಮೂರು ವರ್ಷಗಳ ಹಿಂದೆ
ಶ್ರೀ ಸತೀಶ್ ಜಾರಕಿಹೊಳಿರವರು 24 ಘಂಟೆ ಸುದ್ದಿ ವಾಹಿನಿಯನ್ನು ಪ್ರಾರಂಭ ಮಾಡುವ ವಿಚಾರದಲ್ಲಿ ಕನ್ನಡದ ವಾರಪತ್ರಿಕೆಗಳಲ್ಲಿ ಸತೀಶ್ ಶುಗರ್ ಲಿ. ಹೆಸರಿನಲ್ಲಿ ಜಾಹೀರಾತು ನೀಡಿದ್ದರು. 24 ಘಂಟೆಯ ಸುದ್ಧಿ ವಾಹಿನಿಗೆ “ಸೂಕ್ತ ಹೆಸರು ಹಾಗೂ ಲೋಗೋ ” ವನ್ನು ಸೂಚಿಸಲು ಕೇಳಿಕೊಂಡಿದ್ದರು. ಸೂಕ್ತ ಹೆಸರು ಸೂಚಿಸಿದವರಿಗೆ 50 ಸಾವಿರ ರೂ. ಸೂಕ್ತ ಲೋಗೋ ಕಳುಹಿಸಿದವರಿಗೆ 50 ಸಾವಿರ ರೂ ಗಳನ್ನು ಬಹುಮಾನವಾಗಿ ನೀಡುವುದಾಗಿ ಹೇಳಿದ್ದರು.

ಆಗ ನಾನು ಸಹ “ಸುದ್ಧಿ ಸಮಯ” ಮತ್ತು “ಸಮಯ 24×7” ಹೆಸರನ್ನು ಸೂಚಿಸಿ ಒಂದು ಲೋಗೋವನ್ನು ಸಹ ತಯಾರು ಮಾಡಿ ಅವರು ಸೂಚಿಸಿದ್ದ ವಿಳಾಸಕ್ಕೆ ಕಳುಹಿಸಿದ್ದೆ. ವಾಹಿನಿಯೂ ಪ್ರಾರಂಭವಾಯಿತು. ನಾನು ಸೂಚಿಸಿದ್ದ “ಸಮಯ 24×7” ನ್ನೇ ಬಳಸಿಕೊಂಡಿದ್ದರು. ಲೋಗೋದಲ್ಲಿ ನ ಕಲರ್ ನಲ್ಲಿ ಸ್ವಲ್ಪ ಬದಲಾವಣೆ ಇತ್ತು. ಹೆಸರು ಸರಿ ಇತ್ತಲ್ಲ. ಅದಕ್ಕೆ ಬಹುಮಾನ ಕೊಡಬಹುದಿತ್ತಲ್ಲವೇ. ಹತ್ತಾರು ಬಾರಿ ಪತ್ರಗಳನ್ನು ಬರೆದರೂ ಉತ್ತರ ಬರಲಿಲ್ಲ. ಫೋನ್ ಮಾಡಿದರೆ ಹಾರಿಕೆಯ ಉತ್ತರ. ಒಂದು ವರ್ಷ ಕಳೆದ ಮೇಲೆ ಹೆಸರನ್ನು “ಸಮಯ” ಅಂತ ಬದಲಾಯಿಸಿ, ಮಾಲೀಕರು ಮುರುಗೇಶ್ ನಿರಾಣಿಯವರು ಬಂದಿದ್ದಾರೆ.

ಟಿ. ವಿ. ನೋಡ್ತಾ ಇದ್ದೆ. 3ನೇ ವರ್ಷದ ಸಂಭ್ರಮಾಚರಣೆ ಮಾಡಿಕೊಳ್ಳುತ್ತಿದ್ದರು.
ಹೀಗೇ ಹಳೆಯದು ನೆನಪಾಯಿತು.
ಹಾಗೆಯೇ ನಗೂವೂ ಬಂತು

Raju Vinay Davanagere

Advertisements

ನಿಮ್ಮ ಅನಿಸಿಕೆ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: