ನನ್ನ ಹಳೆಯ ಡೈರಿಯ ಪುಟಗಳಿಂದ

ನಿನ್ನೆ ಸಂಜೆ ಎಷ್ಟೋ ವರ್ಷಗಳ ಹಿಂದೆ ಓದಿದ್ದ ಒಂದು ಪುಟ್ಟ ಝೆನ್ ಕತೆ ನೆನಪಿಗೆ ಬಂತು. ಒಬ್ಬ ರಾಜ ಟೀ ಕುಡಿಯುತ್ತಾ ಇರುವಾಗ ಕೈ ತಪ್ಪಿ ಗ್ಲಾಸ್ ಅವನ ಕೈಯಿಂದ ಬೀಳುತ್ತದೆ. ಅಯ್ಯಯ್ಯೋ ಗ್ಲಾಸ್ ಒಡೆದು ಹೋಗುತ್ತಲ್ಲಾ ಎಂದು ಎಷ್ಟೊಂದು ಭಯದಿಂದ ಬೀಳುತ್ತಿರುವ ಗ್ಲಾಸ್ ಅನ್ನು ಹಿಡಿಯುತ್ತಾನೆ. ಒಂದರೆಕ್ಷಣ ಅವನಿಗೆ ನಾಚಿಕೆಯಾಗುತ್ತದೆ. ಇಷ್ಟೆಲ್ಲಾ ಸಾಮ್ರಾಜ್ಯವನ್ನು ಗೆದ್ದಿದ್ದರೂ ಈ ಪುಟ್ಟ ಗ್ಲಾಸ್ ಗಾಗಿ ನಾನು ಇಷ್ಟು ಭಯಪಟ್ಟೆನಾ ಅಂತ ಯೋಚಿಸಿ ತನ್ನಲ್ಲೇ ನಕ್ಕು ಆ ಗ್ಲಾಸನ್ನು ಎಸೆದುಬಿಡುತ್ತಾನೆ.

ಈ ಕತೆ ನೆನಪಿಗೆ ಬಂದ ಮೇಲೆ ಇಷ್ಟು ವರ್ಷಗಳ ತುಂಬು ಜೀವನವನ್ನು ನಡೆಸಿದ ಮೇಲೂ ಕೆಲವು ಸಲ ಯಾರನ್ನೋ, ಏನನ್ನೋ, ಯಾವ ಸಂಬಂಧವನ್ನೋ ಕಳೆದುಕೊಳ್ಳುತ್ತೇವಾ ಅನ್ನೋ ಭಯದಿಂದಲೇ ನಾವು ಬದುಕು ಸಾಗಿಸುತ್ತೇವಾ? ಅನ್ನಿಸಿತು. ಅಂತಹ ಕಳೆದುಕೊಳ್ಳುತ್ತೇನೆ ಅನ್ನೋ ಭಯದಲ್ಲೇ ಆ ಸಂಬಂಧವನ್ನು, ವ್ಯಕ್ತಿಯನ್ನು ಅಥವಾ ವಸ್ತುವನ್ನು ಉಳಿಸಿಕೊಳ್ಳಲು ನಾವು ಏನೆಲ್ಲಾ ತಿಪ್ಪರಲಾಗ ಹಾಕಿ ನಮ್ಮ ನೆಮ್ಮದಿಯನ್ನು, ನಮ್ಮ ನಗುವನ್ನು ಹಾಳು ಮಾಡಿಕೊಳ್ಳುತ್ತಿದ್ದೇವಾ ಅನ್ನಿಸಿತು.

ನಿಜ ನಮಗೆಲ್ಲಾ ಗೊತ್ತಿರುವ ಹಾಗೆ ಬದುಕು ದೊಡ್ಡದು. ಬದುಕಿನಲ್ಲಿ ಏನೆಲ್ಲಾ ಬರುತ್ತೆ ಹೋಗುತ್ತೆ. ಈ ಬಂದು ಹೋಗುವ ಗಳಿಗೆಗಳನ್ನು ಆರಾಮಾಗಿ ಅನುಭವಿಸಬೇಕು. ಒಂದು ಪಶ್ಚತ್ತಾಪವಿಲ್ಲದ, ಪಾಪಪ್ರಜ್ಞೆಯಿಲ್ಲದ, ಭಯವಿಲ್ಲದ ಅಧ್ಬುತವಾದ ಬದುಕೊಂದನು ಬದುಕಿ ತೋರಿಸಬೇಕು. ಒಂದು ಕ್ಷಣ ಗೊತ್ತಿದ್ದೋ ಗೊತ್ತಿಲ್ಲದೇನೋ ಏನೆಲ್ಲಾ ಮಾಡಿಬಿಡುತ್ತೇವೆ. ಏನೆಲ್ಲಾ ಮಾತನಾಡಿಬಿಡುತ್ತೇವೆ. ಏನೇನೋ ಭಾವನೆಗಳನ್ನು ಯಾವುದ್ಯಾವುದೋ ರೂಪಗಳಲ್ಲಿ ಹೊರ ಹೊಮ್ಮಿಸಿಬಿಡುತ್ತೇವೆ. ಆ ಎಲ್ಲಾ ಕ್ಷಣಗಳಲ್ಲಿ ಈ ಪಾಪಪ್ರಜ್ಞೆ, ಪಶ್ಷತ್ತಾಪ ಅನ್ನೋದು ಯಾವತ್ತಿಗೂ ನಮ್ಮಲ್ಲಿ ಸುಳಿಯಬಾರದು. ಸುಳಿದರೂ ಜಸ್ಟ್ ನೆಗ್ಲೆಟ್ ಮಾಡಬೇಕು.

ಯಾಕೆಂದರೆ ಬದುಕಿನಲ್ಲಿ ಎಲ್ಲರಿಗೂ ತಿಳಿದಂತೆ ಯಾರೂ perfect ಅಲ್ಲ. ಬದುಕು ಬಂದಂತೆ ಸ್ವೀಕರಿಸೋಣ. ಚಂಚಲವಾದ ಮನಸ್ಸಿನ ಜೊತೆ ಬದುಕೋದು ಒಂದು ಕಲೆ. ತುಂಬಾ ಬೇಸರವಾದಾಗ ಆ ಬೇಸರವನ್ನು ಅಧ್ಬುತವಾಗಿ ಅನುಭವಿಸೋದನ್ನು ಕಲಿಯೋಣ. ಬದುಕೇ ಸುಂದರವಾಗು. ಸಿಹಿ ಸಿಹಿ ದಿನಗಳನ್ನು, ಕ್ಷಣಗಳನ್ನು ಹೊತ್ತು ಬಾ..

– ನಟರಾಜು ಸೀಗೇಕೋಟೆ ಮರಿಯಪ್ಪ

Advertisements

ನಿಮ್ಮ ಅನಿಸಿಕೆ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: