ಮೊಲೆ ನೋವು

ಹಳ್ಳಿಗಳ ಮುಗ್ದ ಹೆಣ್ಣು ಗಳಿಗೆ ( ಹದಿಹರೆಯದ ಯುವತಿಯರಿ ಗೆ ) ಸಿದ್ದಪಡಿಸಿದ ಬರಹ ಮೊಲೆ ನೋವು…..
……ಕೆ ರವಿಕುಮಾರ್ ಕೋಲಾರ್

ಯಾವುದಾದರೊಂದು ಮೊಲೆಯಲ್ಲಿ ನೋವು ಬಂದಾಗ ಅನೇಕ ಕಾಯಿಲೆಗಳು ವೈದ್ಯರ ಮನಃ ಪಟಲದಲ್ಲಿ ಸುಳಿಯುತ್ತವೆ. ಕ್ಯಾನ್ಸರ್ ಇದ್ದರೆ ಸಂಬಂಧಿಸಿದ ಮೊಲೆಯಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಸಾಮಾನ್ಯವಾಗಿ ಸ್ತ್ರೀಯರು ಸ್ನಾನ ಮಾಡುವಾಗ, ಮೈಯುಜ್ಜಿ ಕೊಳ್ಳುವಾಗ ಮೊಲೆಯಲ್ಲಿನ ಗಂಟು ಅವರ ಕೈಗೆ ತಗಲುತ್ತದೆ. ತಿಳಿವಳಿಕೆಯುಳ್ಳ ಸ್ತ್ರೀಯರು ಕೂಡಲೇ ವೈದ್ಯರಲ್ಲಿಗೆ ಹೋಗಿ ಪರೀಕ್ಷೆ ಮಾಡಿಸಿಕೊಳ್ಳುತ್ತಾರೆ. ಆಗ ಅದು ಹರಡುವುದಕ್ಕಿಂತ ಮುಂಚೆಯೇ ಶಸ್ತ್ರಚಿಕಿತ್ಸೆ ನಡೆಸುವುದರಿಂದ ಕ್ಯಾನ್ಸರನ್ನು ಸಂಪೂರ್ಣವಾಗಿ ತಡೆಗಟ್ಟಬಹುದು. ಹಾಗೆಂದ ಮಾತ್ರಕ್ಕೆ ಇನ್ನೊಂದು ಮೊಲೆಯಲ್ಲಿ ಕ್ಯಾನ್ಸರ್‌ಬರುವುದಿಲ್ಲವೆಂದು ಹೇಳಲು ಸಾಧ್ಯವಾಗುವುದಿಲ್ಲ. ಆ ಗಂಟಿನಿಂದ ನೋವು ಬರುವವರೆಗೂ ಕಾದರೆ ಆ ವೇಳೆಗೆ ಕ್ಯಾನ್ಸರ್ ಹರಡುವ ಸ್ಥಿತಿಯಲ್ಲಿರುತ್ತದೆ.

ಸ್ತ್ರೀಯರು ಗರ್ಭಧರಿಸಿದಾಗ ಎರಡು ಸ್ತನಗಳಲ್ಲೂ ನೋವು ಕಾಣಿಸಿಕೊಳ್ಳುತ್ತದೆ. ಆಗ ಸ್ತನಗಳು ಸ್ವಲ್ಪ ಬಿಗಿದುಕೊಂಡಿರುತ್ತವೆ. ಆ ಸಂದರ್ಭದಲ್ಲಿ ಮೊಲೆ ತೊಟ್ಟು ಕಪ್ಪು ಕಂದಿನ ಬಣ್ಣಕ್ಕೆ ತಿರುಗಿರುತ್ತದೆ. ಗರ್ಭಧರಿಸಿದ ಸೂಚನೆಗಳು ಕಾಣಬರುತ್ತದೆ.

ಮುಟ್ಟಾದಾಗಲೂ ಕೆಲವರಿಗೆ ಎರಡು ಸ್ತನಗಳಲ್ಲೂ ನೋವು ಕಾಣಿಸಿಕೊಳ್ಳುತ್ತದೆ. ತಿಂಗಳಿನ ಮಧ್ಯದಲ್ಲಿ ಕೆಲವರಿಗೆ ಮುಟ್ಟು ಬಂದರೆ, ಕೆಲವರಿಗೆ ತಿಂಗಳಿನ ಅಂತ್ಯದಲ್ಲಿ ಬರುತ್ತದೆ. ಮೊದಲ ಬಾರಿ ಮುಟ್ಟಾದಾಗ ಕೆಲವರಿಗೆ ಬಂದರೆ, ಇನ್ನು ಕೆಲವರಿಗೆ ಪ್ರತಿತಿಂಗಳೂ ಬರುತ್ತದೆ.

ಕೆಲವರು ಬಿಗಿಯಾದ ಒಳ ಉಡುಪುಗಳನ್ನು ಹಾಕಿಕೊಳ್ಳುವುದರಿಂದ ಅದರಲ್ಲೂ ಮೇಳಿನ ಅಂಚು ಏಕಪ್ರಕಾರವಾಗಿ ಎದೆಯನ್ನು ಚುಚ್ಚುತ್ತಿದ್ದರೆ, ಉದ್ದೀಪನಗೊಳಿಸಿದರೆ ನೋವು ಬರುತ್ತದೆ. ಯಾವುದಾದರೂ ವಾಸಿಯಾದ ಹಳೆಯ ಗಾಯವಿದ್ದರೆ ನೋವು ಮರುಕಳಿಸುತ್ತದೆ. ತಮ್ಮ ವಂಶದಲ್ಲಿ ಇಲ್ಲವೇ ಸ್ನೇಹಿತರಲ್ಲಿ ಯಾರಾದರೂ ಮೊಲೆಯ ಕ್ಯಾನ್ಸರಿಗೆ ಬಲಿಯಾಗಿದ್ದರೆ ತಮಗಿರುವ ಮೊಲೆ ನೋವಿಗೆ ಕಾರಣಕ್ಯಾನ್ಸರ್ ಇರಬೇಕೆಂದು ಕೆಲವರು ಭಯಗ್ರಸ್ಥರಾಗುತ್ತಾರೆ. ಇವರ ಭ್ರಮೆಗೆ ಯಾವ ಆಧಾರವು ಇರುವುದಿಲ್ಲ. ಇಂತಹವರನ್ನು ಪರೀಕ್ಷಿಸಿದಾಗ ಯಾವ ವಿಧವಾದ ತೀವ್ರ ಕಾಯಿಲೆಗಳು ಇರುವುದಿಲ್ಲ. ಇವರ ಮನಸ್ಸಿನಲ್ಲಿ ಅಂಕುರಿಸಿರುವ ಭಯದಿಂದ ಇವರಿಗಿರಬಹುದಾದ ಚಿಕ್ಕ ನೋವೇ ನೂರುಪಾಲು ಹೆಚ್ಚಾದಂತೆ ಕಾಣುತ್ತದೆ. ಇಂತಹವರು ಚಿತ್ತಕ್ಷೋಭೆಗೆ ಸಾಮಾನ್ಯವಾಗಿ ಬಲಿಯಾಗುತ್ತಾರೆ. ಇಂತಹ ನೋವು ನರಗಳ ಉರಿಯೂತದಲ್ಲಿ ರೋಗಿಗಳು ಅತಿ ಸುಲಭ ಸಂವೇಗಿಗಳಾದಾಗಲೂ ಕಾಣಿಸುತ್ತದೆ. ಗರ್ಭಿಣಿಯರಾದಾಗ ಮತ್ತು ಮಗುಜನಿಸಿದ ನಂತರ ಮೊಲೆಗಳು ಗಾತ್ರದಲ್ಲಿ ದೊಡ್ಡದಾಗುತ್ತವೆ. ಆಗ ಅವು ನೋಯುತ್ತಿರುತ್ತವೆ. ಚರ್ಮ ಬಿಳಿಯದಾಗಿದ್ದರೆ ಮೊಲೆಗಳಲ್ಲಿ ಹರಿಯುವ ಅಭಿಧಮನಿಗಳು ನೀಲಿಯಾಗಿ ಕಾಣುತ್ತವೆ. ಮೊಲೆಗಳು ದೃಢವಾಗಿರುತ್ತವೆ. ಹಿಚುಕಿದಾಗ ಹಾಲು ಬರುತ್ತದೆ.

ಹೆಣ್ಣು ಮಕ್ಕಳು ಪ್ರಾಯಕ್ಕೆ ಬರುವ ವೇಳೆಗೆ ಎರಡೂ ಸ್ತನಗಳಲ್ಲೂ ನೋವು ಕಾಣಿಸಿಕೊಳ್ಳಬಹುದು. ಈ ನೋವು ಶಾಶ್ವತವಾಗಿರುವುದಿಲ್ಲ. ದೇಹದಲ್ಲಿ ಅಂತಸ್ರಾವ ವಸ್ತುಗಳು (ಹಾರ್ಮೋನುಗಳು) ಒಂದು ಮಟ್ಟಕ್ಕೆ ಬಂದನಂತರ ನೋವು ಹೊರಟು ಹೋಗುತ್ತವೆ. ಹೆರಿಗೆಯಾದ ನಂತರ ತಾಯಿಯ ಎರಡು ಸ್ತನಗಳಲ್ಲೂ ಹಾಲು ಬರುತ್ತದೆ. ಹೀಗೆ ಬಂದ ಹಾಲನ್ನು ಮಗು ಹೀರಿದಾಗ ಇಲ್ಲವೇ ಉತ್ಪತ್ತಿಯಾದ ಹಾಲನ್ನು ಬೇರೆ ವಿಧಗಳಿಂದ ಹೊರ ತೆಗೆಯುವಾಗ ಎದೆ ಬಿಗಿದುಕೊಂಡು ನೋವು ಬರುತ್ತದೆ. ಹಾಲನ್ನು ತೆಗೆದರೆ ನೋವು ಕಡಿಮೆಯಾಗುತ್ತದೆ. ಕೆಲವರಿಗೆ ತೊಟ್ಟುಗಳು ಸೀಳಿಕೊಂಡಿರುತ್ತವೆ. ಅಂತಹವರಿಗೆ ನೋವು ಸೀಳಿದ ಕಡೆಗೆ ಬರುತ್ತದೆ. ಕೆಲವರಿಗೆ ಈ ರೀತಿಯ ಬಿರುಕು ಒಂದೇ ಕಡೆ ಬಂದರೆ ಉಳಿದವರಿಗೆ ಎರಡು ಕಡೆಗೂ ಬರುತ್ತದೆ. ಇಂತಹ ಸಂದರ್ಭಗಳಲ್ಲಿ ಮಗುವಿಗೆ ಹಾಲುಣಿಸುವುದರಿಂದ ನೋವು ಹೆಚ್ಚಾಗುವುದರಿಂದ ತಾಯಂದಿರು ಮಕ್ಕಳಿಗೆ ಹಾಲನ್ನೇ ಕೊಡುವುದಿಲ್ಲ. ಆಗ ಸ್ತನಗಳಲ್ಲಿ ಹಾಲು ಉಳಿದುಕೊಂಡು ಕೇವಲ ಮೊಲೆ ತೊಟ್ಟಿಗೆ ಸೀಮಿತವಾಗಿದ್ದ ನೋವು ಸ್ತನಗಳನ್ನು ಸಂಪೂರ್ಣವಾಗಿ ಆವರಿಸಿಕೊಳ್ಳುತ್ತದೆ. ಜ್ವರವೂ ಬರುತ್ತದೆ. ಮೊಲೆತೊಟ್ಟುಗಳ ಉರಿಯೂತವಾದಾಗ ಮೊಲೆಗಳ ನೋವು ಕಾಣಿಸಿಕೊಳ್ಳುತ್ತದೆ. ಉರಿಯೂತದಿಂದ ಪ್ರಾರಂಭವಾದದ್ದು, ಸರಿಯಾದ ಚಿಕಿತ್ಸೆ ದೊರೆಯದೆ ಹೋದರೆ ಸ್ತನಗಳಲ್ಲಿ ಅನೇಕ ಕುರುಗಳಾಗಿ ಒಡೆದು ರಕ್ತ ಕೀವುಗಳು ಒಡೆದ ಭಾಗದಿಂದ ಸೋರುತ್ತದೆ. ನೋವು ತುಂಬಾ ಇರುತ್ತದೆ. ಸಾಮಾನ್ಯವಾಗಿ ಈ ತೊಂದರೆಯನ್ನು ಹೆರಿಗೆಯಾದ ನಂತರ ಕಾಣುತ್ತೇವೆ. ತೀವ್ರತೆಯಲ್ಲಿ ಕಡಿಮೆ ಇರುವ ಕುರುಗಳು ಕನ್ಯೆಯರಿಂದ ಹಿಡಿದು ಮುದುಕಿಯವರೆಗೂ ಕಾಣಬಹುದು. ಹೆರಿಗೆಯಾದ ನಂತರ ರಕ್ತದಲ್ಲಿ ಚಲಿಸುವ ಹಾಲು ಉತ್ಪತ್ತಿಯಾಗುತ್ತದೆ. ಹಾಗೆ ಉತ್ಪತ್ತಿಯಾದ ಹಾಲು ಹೊರಗೆ ಹೋದಾಗ, ಮೊಲೆಯಲ್ಲಿ ಉಳಿದ ಹಾಲಿಗೆ ಬಹುಬೇಗ ಸೋಂಕು ತಗುಲಿ ಮೊದಲು ಉರಿಯೂತದಿಂದ ಪ್ರಾರಂಭವಾಗಿ ಕೊನೆಗೆ ಕುರುವಾಗುತ್ತದೆ. ಈ ತೊಂದರೆಗೊಳಗಾದ ಅನೇಕ ತಾಯಂದಿರಿಗೆ ಮೊಲೆಗಳೇ ಅಳಿಸಿಹೋಗಿವೆ.

ಮೊಲೆಗಳಿಗೆ ಆಘಾತವಾದಾಗ, ಹೊರಗಡೆಯಿಂದ ಯಾರಾದರೂ ಬಲವಾಗಿ ಹೊಡೆದಾಗ ರಕ್ತ ಕಟ್ಟಿ ನೋವು ಆಗುತ್ತದೆ. ಹೊಡೆತ ಬಿದ್ದ ಭಾಗ ಊದಿಕೊಂಡು ಗಟ್ಟಿಯಾಗುತ್ತದೆ. ಒಂದೆರಡು ವಾರಗಳಲ್ಲಿ ನೋವು ಮತ್ತು ಊತ ಕಡಿಮೆಯಾಗಿ ಮೊಲೆಗಳು ಮೊದಲ ಸ್ಥಿತಿಗೆ ಬರುತ್ತವೆ.

ಸ್ತನಗಳಲ್ಲಿ ಕೋಶಗಳುಂಟಾದಾಗ, ಗೆಡ್ಡೆಗಳುಂಟಾದಾಗ, ನೋವು ಕಾಣಿಸಿಕೊಳ್ಳುತ್ತದೆ. ಕೆಲವರು ಒಳ ಉಡುಪನ್ನು ಬಿಗಿಯಾಗಿ ಕಟ್ಟಿಕೊಂಡು ಅದರಲ್ಲಿ ಪೆನ್ನನ್ನು ಸಿಕ್ಕಿಸಿಕೊಂಡಿರುತ್ತಾರೆ. ಅವರಿಗೆ ಆ ಪೆನ್ನು ತಗುಲುತ್ತಿರುವ ಭಾಗದಲ್ಲಿ ನೋವು ಕಾಣಿಸಿಕೊಳ್ಳಬಹುದು.
Profile Pictureಸ್ತನಗಳಲ್ಲಿ, ಹಾಲಿನ ನಾಳಗಳಲ್ಲಿ ಏನಾದರೂ ಅಡಚಣೆಯುಂಟಾದರೆ, ಅಡಚಣೆಯುಂಟಾದ ನಾಳದ ಹಿಂಬದಿಯಲ್ಲಿರುವ ನಾಳ ಊದಿಕೊಂಡು ಹಾಲು ಸೇರಿಕೊಂಡು ಹಾಲಿನ ಕೋಶವಾಗುತ್ತದೆ. ಆಗಲೂ ನೋವು ಕಾಣಿಸಿಕೊಳ್ಳುತ್ತದೆ. ಈ ಕೋಶಕ್ಕೆ ಸೋಂಕು ತಗುಲಿದರೆ ಕುರುವಾಗಿ ಮಾರ್ಪಡಬಹದು. ಈ ತರಹದ ತೊಂದರೆ ತಾಯಿಯ ಸ್ತನಗಳಲ್ಲಿ ಹಾಲು ಉತ್ಪತ್ತಿಯಾಗುವ ಕಾಲದಲ್ಲಿ ಮಾತ್ರ ಉಂಟಾಗುತ್ತದೆ. ಮೊಲೆತೊಟ್ಟುಗಳಲ್ಲಿ ಕ್ಯಾನ್ಸರ್ ಆದಾಗ, ಮೊಲೆಯಲ್ಲಿ ಕ್ಯಾನ್ಸರ್ ಬೆಳೆದಾಗ, ನಾರು ಗಡ್ಡೆಗಳಾದಾಗ, ನಿರುಪಯುಕ್ತ ಗ್ರಂಥಿಗಳು ಮಿತಿಮೀರಿ ಬೆಳೆದಾಗ, ಕ್ಷಯ ರೋಗ ತಗುಲಿದಾಗ ನೋವು ಕಾಣಿಸಬಹುದು.

ಹೆಚ್ಚಿನ ಒದಿಗಾಗಿಪುಸ್ತಕ: ವೈದ್ಯಸಾಹಿತ್ಯ ಸಮೃದ್ಧ ಆರೋಗ್ಯ-೧
ಲೇಖಕರು: ಡಾ. ಎ.ನಾರಾಯಣಪ್ಪ
ಪ್ರಕಾಶಕರು: ಕನ್ನಡ ವೈದ್ಯಸಾಹಿತ್ಯ ಪರಿಷತ್ತು ಬೆಂಗಳೂರು

Advertisements

ನಿಮ್ಮ ಅನಿಸಿಕೆ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: