ಇಟಲಿ ಇಡ್ಲಿ, ಕಾಂಗ್ರೆಸ್ಸು ಚಟ್ನಿ ನಾನೊಬ್ಬ ಬ್ರಾಹ್ಮಣ ಎಂದ ರಾ-ಹುಳ

ಎಂ.ಎಸ್. ರಾಘವೇಂದ್ರ
ಇಟಲಿ ಅಕ್ಕಯ್ಯ, ಭಾರತೀಯ ಸೊಸೆ, ಎಐಸಿಸಿ ಅಧ್ಯಕ್ಷೆಯಾದ ದಿನದಿಂದಲೇ ಭರಪೂರ ಸಂಕಟಕ್ಕೆ ಸಿಲುಕಿಕೊಂಡಿದ್ದಾಳೆ. ನೆಹರು ಮನೆತನದ ಸೊಸೆಯಾಗಿ ಗುರುತಿಸಿಕೊಂಡಿರೂ ಭಾರತೀಯರು ಮುಕ್ತ ಮನಸ್ಸಿನಿಂದ ಯಾರೂ ಒಪ್ಪುತ್ತಿಲ್ಲಾ, ಒಪ್ಪುವುದೂ ಇಲ್ಲೂ, ಒಪ್ಪಿಕೊಂಡರೂ ಅದು ಕಾಂಗ್ರೆಸ್ಸಿನವರು ಮಾತ್ರ. ಗಂಡೆದೆ ಎಂಬುದು ಕಾಂಗ್ರೆಸ್ಸಿಗರಿಗೆ ಇಲ್ಲವೇ ಎಲ್ಲಾ ಕಾಂಗ್ರೆಸ್ಸಿಗರಂತೂ ಒಂದು ಮುಖವಾಡ  ಬೇಕಿತ್ತು ನೆಹರು ಮನೆತನ ನೋಡಿ ಒದೂ ಉದೋ ಎಂದು ಕಾಲಾಡಿ ಬಿದ್ದು ಗೋಳಾಡಿ ಇಟಲಿ ಅಕ್ಕಯ್ಯನನ್ನು ಕಾಂಗ್ರೆಸ್ಸು ಗಾಡಿ ಮೇಲೆ ಕುಳ್ಳಿರಿಸಿದರು. ಅದಕ್ಕೆ ತಕ್ಕ ಪ್ರತಿಫಲ ದೊರೆತು ಕೇಂದ್ರದಲ್ಲಿ ಅಧಿಕಾರ ಹಿಡಿದು ಪಟ್ಟಾಗಿ ಕೂತರು ಮನ ಮೋಹನ್ ಸಿಂಗ್ ಎಂಬ ರಬ್ಬರ್ ಸ್ಟಾಂಪ್ ಪ್ರಧಾನಿ ಆದರು. ನಂತರ ಭ್ರಷ್ಟಾಚಾರ ತಾಂಡವವಾಡಿ ಕಾಂಗ್ರೆಸ್ಸು ಪಕ್ಷ ತೀವ್ರ ಮುಜುಗರಕ್ಕೊಳಗಾಗಿದೆ ಅದರಲ್ಲೂ ಮಿತ್ರ ಪಕ್ಷಗಳಿಂದ ಹಾನಿ ಆದದ್ದೇ ಹೆಚ್ಚು, ಅನ್ನುವಂತಿಲ್ಲ, ಅನುಭವಿಸುವಂತಿಲ್ಲ. ಕಾಂಗ್ರೆಸ್ಸಿನ ನಾಯಿ ಪಾಡು ಹೇಳತೀರದು. ಇತ್ತೀಚೆಗೆ ನಡೆದ ಪಂಚ ರಾಜ್ಯಗಳ ಚುನಾವಣೆ ರಾಷ್ಟ್ರೀಯ ಚುನಾವಣಾ ದಿಕ್ಸೂಚಿಯಂತೆ ನಡೆದು ಕಾಂಗ್ರೆಸ್ಸು ಬೋರಲು ಮಲಗಿತು.

ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ಸಿನ ಯುವರಾಜ ರಾಹುಲ್ ಗಾಂಧಿ ನಾನೂರಮೂರು ವಿಧಾನ ಸಭಾ ಕ್ಷೇತ್ರದಲ್ಲಿ ಮಿಂಚಿನಿಂತೆ ಸಂಚಾರ ಮಾಡಿ ಮಾಯಾವತಿಯನ್ನು ಅಡ್ಡಡ್ಡ ಮಲಗಿಸಿ ಬಿಡುತ್ತೇನೆ ಎಂದು ಊರೆಲ್ಲಾ ತಿರುಗಾಡಿದ, ಎಲ್ಲೆಂದರಲ್ಲಿ ವೀರಾವೇಶದ ಹೇಳಿಕೆ ನೀಡುತ್ತಾ ಹೋದ ುತ್ತರ ಪ್ರದೇಶದ ಜನ ರಾಹುಲ್ ಗಾಂಧಿಯನ್ನು ಮತ್ತು ಕಾಂಗ್ರೆಸ್ ಪಕ್ಷವನ್ನು ಹೆಡೆಮುರಿ ಕಟ್ಟಿ ನಾಲ್ಕನೇ ಸ್ಥಾನದಲ್ಲಿ ಅದುಮಿ ಬಿಟ್ಟರು. 403 ಸ್ಥಾನದಲ್ಲಿ ದೊರಕಿದ್ದು ಕೇವಲ 37 ಸ್ಥಾನ, ಮಾಯಾವತಿಯ ಆನೆಯ ಮೇಲೆ ಅಂಬಾರಿಯಂತೆ ಕುಳಿತುಕೊಂಡಿದ್ದು ಸಮಾಜವಾದಿ ಪಕ್ಷದ ಸೈಕಲ್. ಹಸ್ತ ಕುಂಡೆ ತೊಳೆಯುವುದಕ್ಕೆ ಮಾತ್ರ ಸೀಮಿತವಾಗಿಹೋಯಿತು.

ರಾಹುಲ್ ಗಾಂಧಿಯ ಪ್ರಧಾನಿ ಪಟ್ಟದ ಕನಸು ಈಗ ನನಸಾಗಿಯೇ ಉಳಿದಿದೆ. ಉತ್ತರ ಖಂಡದಲ್ಲಿ ಬಿ.ಜೆ.ಪಿ ಮತ್ತು ಕಾಂಗ್ರೆಸ್ಸು ಸಮಬಲ ಸಾಧಿಸಿ ಕಾಂಗ್ರೆಸ್ಸು ಏನೋ ಸದ್ಯಕ್ಕೆ ಅಧಿಕಾರ ಹಿಡಿದಿದೆ. ಅಲ್ಲಿ ಸದ್ಯದ ಪರಿಸ್ಥಿತಿ ನೋಡಿದರೆ ಅಧಿಕಾರದಿಂದ ಎಲ್ಲಿ ಕಳಚಿ ಬೀಳುತ್ತದೆ ಎಂಬ ಭಯ ಸೋನಿಯಾ ಗಾಂಧಿಗೆ ಇದೆ. ಪಂಜಾಬ್ ನಲ್ಲಿ ಅಕಾಲಿದಳ ಬಿಜೆಪಿ ಮೈತ್ತಿಕೂಟ ಯಶಸ್ವಿಯಾಗಿ ಮುನ್ನಡೆದಿದೆ. ಇಲ್ಲಿ ಕಾಂಗ್ರೆಸ್ಸು ಪಲ್ಟಿ, ಸೋನಿಯಾ ಗಾಂಧಿ ಹೊಟ್ಟೆಉರಿದು ಹೋದದ್ದೆ ಈ ಕಾರಣಕ್ಕೆ. ಕೇಂದ್ರದಲ್ಲಿ ಸಿಖ್ ರನ್ನು ಭಾರತದ ಪ್ರಧಾನಿ ಮಾಡಿದರೂ ಪಂಜಾಬ್ ಜನ ಕಾಂಗ್ರೆಸ್ ಅನ್ನು ಸಾರಾ ಸಗಟಾಗಿ ತಿರಸ್ಕರಿಸಿದರು. ಮನ್ ಮೋಹನ್ ಸಿಂಗ್ ಮ್ಯಾಜಿಕ್ ಇಲ್ಲಿ ನಡೆಯಲೇ ಇಲ್ಲಾ. ಪ್ರತಿಯೊಂದು ರಾಜ್ಯವೂ ಕಾಂಗ್ರೆಸ್ ವಿರುದ್ದವಾಗುತ್ತಿರುವುದು ಸೋನಿಯಕ್ಕನ ತಲೆ ಬೇನೆಗೆ ಕಾರಣವಾಗಿದೆ.

ಗೋವಾದಲ್ಲಿ ಬಿಜೆಪಿಗೆ ಪ್ರಸ್ ಪಾಯಿಂಟ್ ಆದದ್ದು ಕಾಂಗ್ರೆಸ್ಸಿಗರಿಗೆ ನುಂಗಲಾರದ ತುತ್ತಾಗಿ ಹೋಗಿದೆ. ದಿಗಂಬರ ಕಾಮತ್ ನಂತೆಯೇ ಕಾಂಗ್ರೆಸ್ ದಿಗಂಬರ ಶೈಲಿಯಲ್ಲಿಯೇ ನಿಂತುಬಿಟ್ಟಿದೆ. ಕಾಂಗ್ರೆಸ್ಸಿನ ಕವಡೆ ಮರ್ಯಾದೆ ಉಳಿಸಿದ್ದು ಮಣಿಪುರ ಮಾತ್ರ. ಭರ್ಜರಿ ಬಹುಮತ ಪಡೆದು ಅಧಿಕಾರಕ್ಕೆ ನಿರಾಯಾಸವಾಗಿ ಕುಳ್ಳರಿಸಿದೆ. ಸೋನಿಯಾಕ್ಕರಿಗೆ ಇದೊಂದೆ ತುಸು ನೆಮ್ಮದಿ ತಂದ ವಿಚಾರ, ಪಂಚರಾಜ್ಯಗಳ ಚುನಾವಣೆ ಬಿಜೆಪಿಗೆ ಹೈವೋಲ್ಟೇಜ್ ತಂದಿದೆ. ಕಾಂಗ್ರೆಸ್ಸಿಗೆ ಲೋ ವೋಲ್ಟೇಜ್ ಆಗಿರುವುದನ್ನು ಖಂಡಿತ ಒಪ್ಪತಕ್ಕ ಮಾತೇ. ಕಾಂಗ್ರೆಸ್ಸಿ ಹಿನ್ನಡೆಯಾಗಿರುವುದು ಖಚಿತ. ಪ್ರಾದೇಶಿಕ ಪಕ್ಷಗಳ ಕೈಮೇಲಾಗಿರುವುದರಿಂದ ಸೋನಿಯಾರಿಗೆ ಈಗಾಗಲೇ ಬೆವರಿಳಿಯಲಾರಂಭಿಸಿದೆ. 2014 ರಲ್ಲಿ ನಡೆಯುವ ಸಾರ್ವತ್ರಿಕ ಲೋಕಸಭಾ ಚುನಾವಣೆ ಬಿಜೆಪಿಗೆ ನೂರಕ್ಕೆ ನೂರು ಸಂದೇಹವಿಲ್ಲ.

ರಾಹುಲ್ ಗಾಂಧಿ ಪ್ರಧಾನಿ ಪಟ್ಟದ ಕನಸು ಇನ್ನು ಗಗನ ಕುಸುಮವೇ ಸರಿ. ಪಂಜಾಬ್ ಗೆ ಬಾದಷಹ ಬಾದಲ್, ಮನೋಹರ ಪರಿಕ್ಕಾರ್, ಗೋವಾದ ಮುಖ್ಯಮಂತ್ರಿ ಬಿಜೆಪಿಗೆ ಆನೆಬಲ ತಂದಿರುವುದರ ಜೊತೆಗೆ ಕಾಂಗ್ರೆಸ್ ವಿರುದ್ದ ಹೋರಾಡಲು ಈಗಾಗಲೇ ಬಿಜೆಪಿ ಸರ್ವ ನಾಯಕರು ತೊಡೆ ತಟ್ಟಿ ನಿಂತು ಬಿಟ್ಟಿದ್ದಾರೆ. ಸೋನಿಯಾ ಗಾಂಧಿ ಕೊತ ಕೊತ ಕುದಿಯುತ್ತಿದ್ದಾರೆ. ಕಾಂಗ್ರೆಸ್ ಸೋಲಲು ‘ದಂಡ ಪಿಂಡ’ ನಾಯಕರೇ ಕಾರಣರೆಂದು ಅರಚಾಡಿದ್ದಾರೆ. ಫಲಿತಾಂಶ ಮಾತ್ರ ಶೂನ್ಯ.

ಕಾಂಗ್ರೆಸ್ ನಾಯಕರು ಕಾಂಗ್ರೆಸ್ಸಿಗೆ ವಿನಾಃ  ಜನರಿಗಂತೂ ಅಲ್ಲವೇ  ಅಲ್ಲ. ಆದರೂ ಇವರಿಗೆ ಬುದ್ದಿ ಬಂದಿಲ್ಲಾ ಅಂದರೆ ಬಹುಶಃ ಅವರು ಕಾಂಗ್ರೆಸ್ಸಿಗರೇ ಸರಿ. ಗೊಂದಲದ ಕೂಸು ಈ ಕಾಂಗ್ರೆಸ್ ರಾಷ್ಟ್ರಮಟ್ಟದಲ್ಲಿ ಪ್ರಭಾವಿಯಾಗಿ ಸೋನಿಯಾಗಾಂಧಿ ಬೆಳೆದರೆ ವಿನಾಃ ಪಕ್ಷ ಬೇರು ಮಟ್ಟದಲ್ಲಿ ಕಟ್ಟುವ ಹೆಬ್ಬಯಕೆ ಆಕೆಯಲ್ಲಿ ಇರಲಿಲ್ಲ. ಈಗ ನೋಡಿ ತಮಿಳುನಾಡಿನಲ್ಲಿ ಜಯಲಲಿತಾಳ ಹೂಂಕಾರ, ಪಶ್ಚಿಮಬಂಗಾಳದ ಮಮತಾ ಬ್ಯಾನರ್ಜಿ ಎಬ್ಬಿಸಿದ ಹವಾ, ಬಿಹಾರದ ನಿತೀಶ್ ಕುಮಾರ್  ಅಭಿವೃದ್ದಿ ಕಾರ್ಯದಲ್ಲಿ ಮಿಂಚುತ್ತಿದ್ದಾರೆ. ಮಹಾರಾಷ್ಟ್ರದಲ್ಲಂತೂ ಯಾವ ಸಮಯದಲ್ಲಿ ಯಾರು ಮುಖ್ಯಮಂತ್ರಿಯಾಗುತ್ತಾರೆ ಎಂದು ಹೇಳಲು ಕಷ್ಟ. ಆಂದ್ರಪ್ರದೇಶ ಜಗನ್ ಮೋಹನ್ ರೆಡ್ಡಿ ಕಾಂಗ್ರೆಸ್ಸಿಗೆ ಹಾಕಿರುವ ಉರುಳು ಬಿಡಿಸಿಕೊಳ್ಳು ಇದ್ದಾಡುತ್ತಿದೆ. ತೆಲಂಗಾಣದ ಹೋರಾಟ ದಿನದಿಂದ ದಿನಕ್ಕೆ ಜೋರಾಗುತ್ತಿದೆ. ಕಾಂಗ್ರೆಸ್ಸಿನ ಭದ್ರ ಬುನಾದಿಯೇ ಅಲ್ಲಾಡುತ್ತಿದೆ. ರಾಜಸ್ತಾನದಲ್ಲಿ ಕೇಂದ್ರ ಸಚಿವ ಸಿ.ಪಿ.ಜೋಶಿ, ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಇವರಿಬ್ಬರ ಮುಸುಕಿನ ಗುದ್ದಾಟ ಬೀದಿ ರಂಪವಾಗಿ ಈಗ ಬೀದಿಗೆ ಬಿದ್ದಿದೆ. ಇದರ ಮಧ್ಯೆ ಕರ್ನಾಟಕದಲ್ಲಿ ನಡೆದ ಲೋಕಸಭಾ ಉಪಚುನಾವಣೆ ಉಡುಪಿ, ಚಿಕ್ಕಮಗಳೂರು ಕಾಂಗ್ರೆಸ್ಸು ಗೆದ್ದಿರಬಹುದು. ಇಲ್ಲಿ ನೈತಿಕವಾಗಿ ಗೆದ್ದಿರುವುದು ಜಯಪ್ರಕಾಶ ಹೆಗ್ಡೆಯವರೇ. ಕಾರಣ ತಮ್ಮ ಸರಳತನದಿಂದ ಎಲ್ಲರನ್ನೂ ಸರಿತೂಗಿಸಿಕೊಂಡು ಹೋಗಬಲ್ಲ ವಿನಯವಂತ ರಾಜಕಾರಣಿಯಾಗಿದ್ದರಿಂದ ಕಾಂಗ್ರೆಸ್ಸು ಗೆಲುವಿನ ನಗೆ ಬೀರಿರುವುದು, ಮುಂದೆ ಬೀಗುವಂತಿಲ್ಲ. ಿದರ ಮಧ್ಯೆ ರಾಷ್ಟ್ರೀಯ ಸಭೆಯಲ್ಲಿ ಲೊಚಕ್ಕನೆ ರಾಹುಲ್ ಗಾಂಧಿ ನಾನು ಬ್ರಾಹ್ಮಣ ಎಂಬ ಬಾಂಬ್ ಅನ್ನು ಸಿಡಿಸಿದ್ದಾರೆ ಇದಕ್ಕೆ ಕಾರಣವೇನು ಎಂದು ಹುಡುಕುತ್ತಾ ಹೋದರೆ ಜಾತಿಯ ಕಮಟು ವಾಸನೆ. ಒಂದು ಜಾತಿಯಿಂದ ೆಂದಿಗೂ ತಾನೂ ಉದ್ದಾರವಾಗಲಾರೆ ಎಂಬ ವಿವೇಕ ರಾ-ಹುಳ ಗಾಂಧಿಗೆ ಇಲ್ಲವೇ ಅಥವಾ ಎಲ್ಲರೂ ತಮ್ಮ ಪಕ್ಷವನ್ನು ಸಾರಾಸಗಟಾಗಿ ತಿರಸ್ಕರಿಸಿ ಬಿಡುತ್ತಾರೆ ಎಂಬ ಭಯವೇ? ಈ ಮಟ್ಟಕ್ಕೆ ಬಂದು ನಿಂತಿದೆ. ರಾಷ್ಟ್ರದ ರಾಜಕೀಯ ವ್ಯವಸ್ಥೆ ಕಾಂಗ್ರೆಸ್ಸು ಪಕ್ಷಕ್ಕೆ ಇಂಥ ದುರ್ಗತಿ ಬರಬಾರದಿತ್ತು ಅಲ್ಲವೇ?

ಈ ಹಿಂದೆ ನಡೆದ ಬೃಹತ್ ಮುಂಬೈ ನಗರ ಪಾಲಿಕೆಗಾಗಿ ನಡೆದ ಚುನಾವಣೆಯಲ್ಲಿ ಶಿವಸೇನೆ ಮತ್ತು ಬಿಜೆಪಿ ತನ್ನ ವಶಕ್ಕೆ ಪಡೆದುಕೊಂಡಿದೆ. ದೆಹಲಿಯಲ್ಲಿ ನಡೆದ ಮಹಾನಗರಪಾಲಿಕೆ ಮಹಾಚುನಾವಣೆಯಲ್ಲಿ ಬಿಜೆಪಿ ತನ್ನ ತೆಕ್ಕೆಗೆ ಹಾಕಿಕೊಂಡಿದೆ. ಹ್ಯಾಟ್ರಿಕ್ ಮುಖ್ಯಮಂತ್ರಿ ಶೀಲಾದೀಕ್ಷಿತ್ ರವರಿಗೆ ಮತದಾರ ಮಹಾಪ್ರಭು ಸರಿಯಾದ ಪಾಠವನ್ನು ಕಾಂಗ್ರೆಸ್ಸಿನವರಿಗೆ ಕಲಿಸಿಕೊಟ್ಟಿದ್ದಾರೆ. ನಿಜಕ್ಕೂ ಪಾಠ ಕಲಿಯುವ ಸೈರಣೆ ಕಾಂಗ್ರೆಸ್ಸಿಗರಿಗೆ ಇದೆಯೇ ? ಯೋಚಿಸಲಿ..

– ಕೃಪೆ: ತಾಯಿ ಭಾರತ

Advertisements

ನಿಮ್ಮ ಅನಿಸಿಕೆ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: