ಗುಟ್ಟು

ಬ್ರಹ್ಮಾಂಡಕ್ಕೆ ತೆರೆದಿಟ್ಟ ಎದೆ
ಈ ಭೂಮಿ
ಇಲ್ಲಿ ಗುಟ್ಟುಗಳಿಲ್ಲ;
ಇರಬಾರದಲ್ಲ?!

ಕತ್ತಲ ಮೂಲೆಯನ್ನೆಲ್ಲ
ತಡಕಾಡಿಬಿಡಬೇಕು
ಮುಗುಮ್ಮಾಗಿ ಕೂತ
ಗುಟ್ಟುಗಳೆಲ್ಲ ಒದ್ದಾಡಬೇಕು

ಗುಟ್ಟೊಂದು ಜೀವಂತವಾಗಿ
ಸೆರೆಸಿಕ್ಕುವುದೇ ಇಲ್ಲ
ಕೆದಕಿದಂತೆ ಕಂದಕವಾಗಿ
ಬಾಯ್ತೆರೆಯುತ್ತದೆ
ಹೆಣವೊಂದು ಧುತ್ತೆಂದು
ಅದರೆದೆಯ ಮೇಲೆ
ನಾವಿರುತ್ತೇವೆ ಸೂತಕವಂಟಿಸಿಕೊಂಡು

ಭಯಾನಕ ರಂಗೋಲಿಗಿಟ್ಟ
ಚುಕ್ಕಿಗಳ ಸಾಲು
ನೇಣುಹಾಕಿ ಸತ್ತ
ಗುಟ್ಟುಗಳ ಸಮಾಧಿ.
ಹೆಗಲು ಮುಟ್ಟಬೇಡಿ;
ಎಲ್ಲರೂ ಹೆಣ ಹೊತ್ತವರೆ

ಸ್ಮಶಾನಕ್ಕೆ
ಬೆನ್ನುಹಾಕಿ ಬಂದ ದಿನ
ನಿಮ್ಮೊಳಗೂ
ಒಂದು ಗುಟ್ಟು ಮಿಸುಕಾಡುತ್ತದೆ
ಆತ್ಮಕ್ಕೆ ಸಾವಿಲ್ಲವಲ್ಲ;
ಹುಡುಕಾಡುತ್ತದೆ!

-ವಿಜಯ ಕುಮಾರ್ ಕುಂಭಾಶಿ

Advertisements

ನಿಮ್ಮ ಅನಿಸಿಕೆ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: