ಕಲ್ಪನಾ ಚಾವ್ಲಾ

ಕಲ್ಪನಾ ಚಾವ್ಲಾ ಅವರು ಜನಿಸಿದ ದಿನ 1961ರ ಜುಲೈ 1. ಹರಿಯಾಣಾದ ಕರ್ನಾಲ್ ಪಟ್ಟಣದಲ್ಲಿ ಜನಿಸಿದ ಕಲ್ಪನಾ ಚಾವ್ಲಾ ಪಂಜಾಬ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪದವಿ ಪಡೆದು ಅಮೆರಿಕದಲ್ಲಿ ಎರಡು ಸ್ನಾತಕೋತ್ತರ ಪದವಿ ಮತ್ತು ಪಿ ಎಚ್ ಡಿ ಪದವಿಗಳನ್ನು ಪಡೆದರು. ಮುಂದೆ ಕಲ್ಪನಾ ಚಾವ್ಲಾ ನಾಸಾ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಮಹತ್ವದ ಕಾರ್ಯಸಾಧಕಿಯಾದರು. ಅಮೆರಿಕದ ಪ್ರಜೆ ಜಾನ್ ಪಿಯರೆ ಹ್ಯಾರಿಸನ್ ಅವರನ್ನು ವರಿಸಿದರು.

ಮೊದಲು ನಾಸಾದ ಸಂಶೋಧನಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಕಲ್ಪನಾ ಚಾವ್ಲಾ 1995ರಲ್ಲಿ ನಾಸಾದ ಬಾಹ್ಯಾಕಾಶ ಸಂಶೋಧನಾ ಕೆಂದ್ರಕ್ಕೆ ಬಂದು ಬಹುಬೇಗ ತಮ್ಮ ಸಾಮರ್ಥ್ಯಕ್ಕೆ ಹೆಸರಾದರು. 1996ರಲ್ಲಿ ಮೊದಲ ಬಾಹ್ಯಾಕಾಶ ಯಾನಕ್ಕೆ ಆಯ್ಕೆಯಾದ ಕಲ್ಪನಾ ಅವರು ಕ್ರಮಿಸಿದ ಯಾನ 10,4 ಮಿಲಿಯನ್ ಕಿಲೋ ಮೀಟರುಗಳಷ್ಟು ವ್ಯಾಪ್ತಿಯದು. ಅವರು ಬಾಹ್ಯಾಕಾಶ ಸಂಶೋಧನೆಗೆ ಸಂಬಂಧಿಸಿದಂತೆ ಬಹಳಷ್ಟು ಯೋಜನೆಗಳ ಪಾತ್ರಧಾರಿಯೂ ಆದರು.

2003ರ ಫೆಬ್ರವರಿ 1ರಂದು ಕೊಲಂಬಿಯಾ ಆಕಾಶನೌಕೆ ತನ್ನ ಗಗನಯಾತ್ರೆ ಮುಗಿಸಿ ಭೂಮಿಗೆ ಮರಳುವಾಗ ತಾಂತ್ರಿಕ ದೋಷದಿಂದಾಗಿ ಅದರಲ್ಲಿದ್ದ ಏಳೂ ಜನ ಗಗನಯಾತ್ರಿಗಳೂ ತಮ್ಮ ಜೀವವನ್ನು ಕಳೆದುಕೊಂಡರು. ಅದರಲ್ಲಿ ಭಾರತದ ಅಪ್ರತಿಮ ಪ್ರತಿಭಾನ್ವಿತೆಯಾದ ಕಲ್ಪನಾ ಚಾವ್ಲಾ ಕೂಡಾ ಒಬ್ಬರಾಗಿದ್ದರು.

ಕಲ್ಪನಾ ಚಾವ್ಲಾ ಅವರ ಗೌರವಾರ್ಥ ಅನೇಕ ಬಾಹ್ಯಾಕಾಶ ಯೋಜನೆ, ಉಪಗ್ರಹ, ರಸ್ತೆ, ವಿಶ್ವವಿದ್ಯಾಲಯ ಮುಂತಾದೆಡೆಗಳಲ್ಲಿ ಅವರ ಹೆಸರನ್ನು ಅವಿಸ್ಮರಣೀಯವಾಗಿಸುವ ಕೆಲಸವನ್ನು ಭಾರತ ಮತ್ತು ಅಮೆರಿಕೆಗಳೆರಡೂ ಮಾಡಿವೆ. ಒಂದು ವೈಜ್ಞಾನಿಕ ಸಾಧಕ ಜೀವ ಇವೆಲ್ಲಕ್ಕೂ ಮಿಗಿಲಾದುದು. ಅಮೂಲ್ಯವಾದುದು. ಅದು ತನ್ನ ಮಹತ್ವದ ಬೆಳವಣಿಗೆಯ ಪರ್ವ ಕಾಲದಲ್ಲೇ ಮುರುಟಿಹೋಯಿತು ಎಂಬುದು ಮರೆಯಲಾಗದ ಘಟನೆಯಾಗಿ ಇತಿಹಾಸದಲ್ಲಿ ಉಳಿದುಹೋಗಿದೆ.

ಕಲ್ಪನಾ ಚಾವ್ಲಾ ಎಂಬ ಆ ಮಹಾನ್ ಸಾಧಕ ಚೇತನಕ್ಕೆ ನಮ್ಮ ಪ್ರಣಾಮಗಳು.
ಕೃಪೆ: ಕನ್ನಡ ಸಂಪದ
ಸಂಗ್ರಹ: ರವಿಕುಮಾರ್ ಆರಾದ್ಯ

Advertisements

2 responses

  1. kalpana chawla is brave and courageous and never feared to go to space and the first indian woman to go to space

ನಿಮ್ಮ ಅನಿಸಿಕೆ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: