ಯಾವುದು ಚರಿತ್ರೆ – 3

ಭಾಗ-2 ನ್ನು ಓದಲು ಇಲ್ಲಿ ಕ್ಲಿಕ್ಕಿಸಿ
ಮ್ಯಾಕ್ಸ್ ಮುಲ್ಲರ್ ನೂರಕ್ಕೆ ನೂರು ಭಾಗ ಕ್ರೈಸ್ತರು. ಕ್ರೈಸ್ತಮತ ಗ್ರಂಥಗಳಲ್ಲಿ ಬರೆದಿರುವುದೇ ಪರಮಸತ್ಯ ಎಂದು ನಂಬುತ್ತಿದ್ದವನು. ಬೈಬಲ್ ಪ್ರಕಾರ ಪ್ರಪಂಚದ ಸೃಷ್ಟಿ ಕ್ರಿ.ಪೂ.4004ನೇ ಸಂವತ್ಸರದ ಅಕ್ಟೋಬರ್ 23 ರಂದು ಬೆಳಿಗ್ಗೆ 9.00 ಗಂಟೆಗೆ ಆಯಿತು. ಅಲ್ಲಿಂದ ಲೆಕ್ಕ ಹಾಕಿದರೆ ಜಲಪ್ರಳಯ ಕ್ರಿ.ಪೂ ೨೪೪೮ರಲ್ಲಿ ನಡೆದಿರಬೇಕು. ಜಲಪ್ರಳಯ ಅಂತ್ಯಗೊಂಡು ಭೂಮಿ ಒಣಗಿ ಗಟ್ಟಿಯಾಗಿ ಆರ್ಯರು ದಂಡಯಾತ್ರೆಗೆ ಉದ್ಯುಕ್ತರಾಗಲು ಸುಮಾರು ಒಂದು ಸಾವಿರ ಹಿಡಿಯಿತೆಂದುಕೊಂಡರೆ ಕ್ರಿ.ಪೂ.೧೪೦೦ (1400)ರ ಸುಮಾರಿಗೆ ಬಂದು ಮುಟ್ಟುತ್ತೇವೆ, ದಂಡಯಾತ್ರೆ ಮಾಡಿ ಬಳಲಿ ಬೆಂಡಾದ ಆರ್ಯರು ದೇಶದಲ್ಲಿ ಸೆಟ್ಲ್ ಆಗಿ ವೇದ ರಚನೆಗೆ ತಾಳೆಗರಿ ಹಾಗು ಅದರ ಮೇಲೆ ಕೊರೆಯಲು ಉಕ್ಕಿನ ಲೇಖನಿಯನ್ನು ಕಲೆಹಾಕಲು ಎರಡು ಶತಮಾನಗಳನ್ನು ಬಿಟ್ಟುಬಿಟ್ಟರೆ ಕ್ರಿ.ಪೂ. ೧೨೦೦(1200)ಕ್ಕೆ ತಲುಪುತ್ತೇವೆ. ಇಂತಹಾ ಹುಚ್ಚು ಲೆಕ್ಕಗಳ ಮುಖಾಂತರವೇ ಮುಲ್ಲರ್ ಮಹಾಶಯರು ಕ್ರಿ.ಪೂ 15ಶತಾಬ್ದಿಯಲ್ಲಿ ಆರ್ಯನ್ನರು ಭಾರತಕ್ಕೆ ಬಂದರೆಂದೂ,ಕ್ರಿ.ಪೂ 1200 ಸುಮಾರಿನಲ್ಲಿ ಋಗ್ವೇದವನ್ನು ಬರೆದರೆಂದು ಅಪ್ಪಣೆ ಕೊಡಿಸಿದರು.
ಇದು ಬರಿಯ ಕಲ್ಪನೆ ಅಥವಾ ಲೇಖಕರು ಬರೆದ ಸುಳ್ಳುಕಥೆ ಅಂದುಕೊಳ್ಳಬೇಡಿ…ಮ್ಯಾಕ್ಸ್ ಮುಲ್ಲರನ ಆಪ್ತಮಿತ್ರನೂ, ಮುಲ್ಲರನ ಆಲೋಚನಾ ವಿಧಾನವನ್ನು ಚೆನ್ನಾಗಿ ಅರಿತಿದ್ದವನೂ ಆದ ” ಥಿಯೋಡರ್ ಗೋಲ್ಡ್ ಸ್ಟಕರ್” ಬಹಿರಂಗವಾಗಿ ಹೇಳಿರುವ ಸತ್ಯ ಮಾತು.

-ಗ್ರಂಥ ಕೃಪೆ: ಯಾವುದು ಚರಿತ್ರೆ.

Advertisements

ನಿಮ್ಮ ಅನಿಸಿಕೆ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: