ಭಗವಾನ್ ವೇದವ್ಯಾಸರು

ಭಗವಾನ್ ವೇದವ್ಯಾಸರು ಸಾಕ್ಷಾತ್ ನಾರಯಣನ ಅವತಾರವಾಗಿದ್ದರು. ವ್ಯಾಸರ ತಂದೆ ಪರಾಶರ ಋಷಿ. ತಾಯಿ ಸತ್ಯವತಿ. ಇವರುಹುಟ್ಟುತ್ತಲೇ ತಂದೆ ತಾಯಿಯರಲ್ಲಿ ತಪಸ್ಸಿಗಾಗಿ ಕಾಡಿಗೆ ಹೋಗಲು ಅಪ್ಪಣೆ ಕೇಳಿದರು. ತಾಯಿ ಸತ್ಯವತಿ ತಡೆಯಲು ಪ್ರಯತ್ನಿಸಿದಾಗ ” ಅಮ್ಮಾ ನೀನು ಸ್ಮರಿಸಿದಾಗ ಬರುವೆ ” ಎಂದು ಹೇಳಿ ಕಾಡಿಗೆ ಹೋದರು.

ಯಮುನೆಯ ದ್ವೀಪದಲ್ಲಿ ಹುಟ್ಟಿದ್ದರಿಂದ ವ್ಯಾಸರಿಗೆ ಕೃಷ್ಣದ್ವೈಪಾಯನರೆಂದೂ, ಬದರೀವನದಲ್ಲಿ ತಪಸ್ಸು ಮಾಡಿದ್ದರಿಂದ ಬಾದರಾಯಣ ವ್ಯಾಸರೆಂದು ಹೆಸರಾಯಿತು.ಇವರಿಗೆ ಸಮಸ್ತ ವೇದಗಳ, ಪುರಾಣಗಳ ಮತ್ತು ಮರಮಾತ್ಮ ತತ್ವಗಳ ಜ್ನಾನವ್ಯ್ ತಾನಾಗಿಯೇ ಪ್ರಾಪ್ತವಾಗಿತ್ತು. ಮನುಷ್ಯರ ಆಯಸ್ಸು ಕ್ಷೀಣಿಸುವುದು ಎಂದು ತಿಳಿದು ವೇದವನ್ನು ವಿಭಾಗ ಮಾಡಿದರು, ಇದರಿಂದಾಗಿ ಇವರು ವೇದವ್ಯಾಸರಾದರು.ಪುರಾಣವು ಲುಪ್ತವಾಗುವುದನ್ನು ನೋಡಿ ಹದಿನೆಂಟು ಪುರಾಣವನ್ನು ರಚಿಸಿದರು. ಇವರಿಂದ ರಚಿತವಾದ ಮಹಾಭಾರತವನ್ನು ಪಂಚಮ ವೇದ ಎನ್ನುತ್ತಾರೆ.ಶ್ರೀ ಮಧ್ಬಾಗವತದ ರೂಪದಲ್ಲಿ ಭಕ್ತಿಯ ಸಾರ ಸರ್ವಸ್ವವನ್ನು ಇವರು ಎಲ್ಲ ಜನರಿಗೆ ಸುಲಭವಾಗಿಸಿದರು ಮತ್ತು ಬ್ರಹ್ಮಸೂತ್ರದ ರೂಪದಲ್ಲಿ ತತ್ವಜ್ನಾನದ ಅನುಪಮ ಗ್ರಂಥ ರತ್ನ ಕರುಣಿಸಿದರು.

ಒಮ್ಮೆ ಇವರು ಧೃತರಾಷ್ಟ್ರ ಮತ್ತು ಗಾಂಧಾರಿಯನ್ನು ನೋಡಲು ಹೋಗಿದ್ದರಂತೆ. ಆಗ ಅಲ್ಲಿಗೆ ಯುಧಿಷ್ಠಿರನೂ ಬಂದಿದ್ದನಂತೆ. ಧೃತರಾಷ್ಟ್ರನು ಪುತ್ರ ಶೋಕದಿಂದ ವ್ಯಾಕುಲನಾಗಿದ್ದನಂತೆ ಅವನು ವ್ಯಾಸರಲ್ಲಿ ಸತ್ತು ಹೋಗಿದ್ದ ತನ್ನ ಮಕ್ಕಳೂ ಮತ್ತು ಸ್ವಜನರನ್ನು ನೋಡಬೇಕೆಂಬ ಬಯಕೆಯನ್ನು ತೋಡಿಕೊಂಡನಂತೆ… ಆಗ ವ್ಯಾಸರು ಗಂಗಾ ನದಿಯನ್ನು ಪ್ರವೇಶಿಸಿ ಸತ್ತು ಹೋದವರನ್ನೆಲ್ಲಾ ಕರಕೊಂಡುಬಂದರಂತೆ ಅವರೆಲ್ಲ ಹಿಂದಿನ ವೇಶ ಭೂಷಣಗಳನ್ನೇ ಧರಿಸಿದ್ದರೂ ಈರ್ಷಾ-ದ್ವೇಷ ಶೂನ್ಯರಾಗಿ ದಿವ್ಯದೇಹಧಾರಿಗಳಾಗಿದ್ದರಂತೆ.ಅವರೆಲ್ಲರನ್ನೂ ಮುಂದಿನ ಮುಂಜಾವದವರೆಗೆ ಇಲ್ಲೇ ಇರಿಸಿಕೊಂಡಿದ್ದರಂತೆ . ಅಂತಹ ತಪಸ್ವಿಗಳು ವ್ಯಾಸರು.

ವ್ಯಾಸರು ಚಿರಂಜೀವಿಗಳು ಈಗಲೂ ಭೂಲೋಕದಲ್ಲಿ ಇದ್ದಾರೆ ಅನ್ನುತ್ತಾರೆ.ಭಗವಾನ್ ಆದಿಶಂಕರಾಚಾರ್ಯರಿಗೆ, ಮಂಡನ ಮಿಶ್ರರಿಗೆ,
ಶ್ರೀ ಮಧ್ವಾಚಾರ್ಯರಿಗೆ ಇವರ ದರ್ಶನವಾಗಿತ್ತಂತೆ. ಇಡಿಯ ಮನುಕುಲಕ್ಕೆ ಅವರು ಗುರುವಿದ್ದಂತೆ, ಇಂದು ವ್ಯಾಸಪೂರ್ಣಿಮೆ ಅಥವಾ ಗುರುಪೂರ್ಣಿಮೆ ವ್ಯಾಸರನ್ನು ಪೂಜಿಸಿಯೇ ಯತಿಗಳು ತಮ್ಮ ಚಾತುರ್ಮಾಸ ಆಚರಣೆ ಪ್ರಾರಂಭ ಮಾಡೋದು… ಬನ್ನಿ ಭಾರತದ ಈ ಮಹರ್ಷಿಯನ್ನು ಮನಸಾರೆ ನೆನೆಯೋಣ..

ಮಾಹಿತಿಯ ಮುಲ: “ಪ್ರಮುಖ ಋಷಿ ಮುನಿಗಳು” ಗೀತಾ ಪ್ರೆಸ್, ಗೋರಖ್ ಪುರ
-ಗುರುಪ್ರಸಾದ್ ಆಚಾರ್ಯ

Advertisements

ನಿಮ್ಮ ಅನಿಸಿಕೆ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: