ಪಾರ್ಕಿನ್ಸನ್ಸ್ ಎಂಬ ಹೆಮ್ಮಾರಿಗೆ ಪರಿಹಾರ ಮಾತ್ರ ಇನ್ನೂ ಸಿಕ್ಕಿಲ್ಲ

ವೈಜ್ಞಾನಿಕವಾಗಿ ಗಣಕಯಂತ್ರಗಳಂತಹ ಅದ್ಭುತಗಳನ್ನು ಸೃಜಿಸಿದ ಮನುಷ್ಯ ತನ್ನ ಕೆಲಸಕಾರ್ಯಗಳಿಗಾಗಿ ಸ್ವನಿಯಂತ್ರಿತ ಯಂತ್ರೋಪಕರಣಗಳನ್ನೂ ಸೃಷ್ಟಿಸಿದ, ಓಡಾಟಕ್ಕಾಗಿ ಭೂ-ಜಲ-ವಾಯುಸಾರಿಗೆ ವಾಹನಗಳನ್ನೂ ತಯಾರಿಸಿಕೊಂಡ. ವೈರಿಗಳನ್ನು ಬಗ್ಗುಬಡಿಯಲು ಪರಮಾಣು ಸಂತುಲಿತ ನಿರೋಧಕಗಳನ್ನೂ ವಿನಾಶಕಗಳನ್ನೂ ಮೇಲಾಗಿ ಸೊಳ್ಳೆಯ ಆಕಾರದ ರೋಬೋಟಿಕ್ ಬೇಹುಗಾರಿಕಾ ಯಂತ್ರಗಳನ್ನೂ ಹುಟ್ಟಿಸಿದ. ಆದರೆ ಮಾನವನಿಗೇ ಬಂದೆರಗುವ ಕೆಲವು ಕಾಯಿಲೆಗಳಿಗೆ ವೈದ್ಯರಾಸಾಯನಿಕದಲ್ಲಿ ಪರಿಹಾರ ಕಾಣುವಲ್ಲಿ ಇನ್ನೂ ಯಶಸ್ಸು ಪಡೆದಿಲ್ಲ! ಜೀವರಾಸಾಯನಿಕಗಳಲ್ಲಿ ಕೌತುಕಮಯ ಸಂಗತಿಗಳು ಜೀನ್ಸ್ ರೂಪದಲ್ಲಿ ಅಡಗಿರುತ್ತವೆ ಎಂಬುದನ್ನೂ ಗ್ರಹಿಸಿದ ವಿಜ್ಞಾನಿಗಳಿಗೆ ಯಾವ ಜೀನ್ಸ್ ಎಲ್ಲಿ ಹೇಗೆ ಅನುವಂಶೀಯವಾಗಿ ವರ್ಗಾವಣೆಗೊಳ್ಳುತ್ತದೆ ಎಂಬುದನ್ನು ಕಾಣಲು ಇನ್ನೂ ಸಾಧ್ಯವಾಗಿಲ್ಲ. ವಂಶದಲ್ಲೇ ಇಲ್ಲದ ಅಪರೂಪದ ಕಾಯಿಲೆಗಳು ಅನಿರೀಕ್ಷಿತವಾಗಿ ಅಮರಿಕೊಂಡು ವ್ಯಕ್ತಿಯ ಜೀವನವನ್ನೇ ಹಾಳುಗೆಡವಿ ನಂತರ ಆತನ ವಂಶದಲ್ಲಿ ಅನುವಂಶೀಯವಾಗಿ ಉಳಿದುಬಿಡುವ ಘಟನೆಗಳೂ ಕಾಣಸಿಗುತ್ತವೆ; ಕಾರಣಗಳು ಮಾತ್ರ ನಿಖರವಾಗಿ ತಿಳಿದುಬರುವುದಿಲ್ಲ. ಗಾದೆಯೊಂದು ಹೀಗಿದೆ: ’ಯಾವಹುತ್ತದಲ್ಲಿ ಯಾವ ಹಾವಿರುತ್ತದೋ ಬಲ್ಲವರಾರು?’ ನಿಜ, ಅದು ಯಾರಿಗೂ ಮೊದಲೇ ಗೊತ್ತಾಗುವ ವಿಷಯವಲ್ಲ. ಅದೇ ಗಾದೆ ಹೀಗೂ ಬಳಕೆಯಾಗಬಹುದು: ಕಾಯಿಲೆಯೇ ಇಲ್ಲದ ಹುಡುಗಿ/ಹುಡುಗ ಎಂದು ಒಪ್ಪಿ ಮದುವೆಯಾದ ಕೆಲವೇ ವರ್ಷಗಳಲ್ಲಿ ಯಾವುದೋ ಕಾಯಿಲೆ ಕಾಣಿಸಿಕೊಳ್ಳಬಹುದು, ಜೀವಹರಣಗೈಯ್ಯಲೂ ಬಹುದು. ರೋಗಗ್ರಸ್ತ ಎಂದು ತಿರಸ್ಕರಿಸಲ್ಪಟ್ಟ ವ್ಯಕ್ತಿಗೆ ಬದುಕುಕೊಟ್ಟ ನಂತರ ರೋಗನಿವಾರಣೆಯಾಗಿ ದೀರ್ಘಕಾಲ ಬದುಕಲೂ ಬಹುದು! ಒಟ್ಟಾರೆ ಮಾನವ ಬದುಕಿನಲ್ಲಿ ಪ್ರತಿಯೊಂದೂ ನಮ್ಮ ನಿಯಂತ್ರಣದಲ್ಲೇ ಇದೆ ಎಂದುಕೊಳ್ಳುವುದು ತಪ್ಪು ಎಂಬುದಕ್ಕೆ ಆಧುನಿಕ ಸಮಾಜದಲ್ಲಿ ನಾವು ಕಾಣುತ್ತಿರುವ ಪಾರ್ಕಿನ್ಸನ್ಸ್ ಕಾಯಿಲೆ ಸಾಕ್ಷಿಯಾಗಿ ನಿಲ್ಲುತ್ತದೆ. ಮುಂದೆ ಓದಲು ವಿ.ಆರ್.ಭಟ್ ರವರ ಬ್ಲಾಗ್ ಗೆ ಬೇಟಿ ಕೊಡಿ

Advertisements

ನಿಮ್ಮ ಅನಿಸಿಕೆ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: