ಸೃಷ್ಟಿ ನೆಲೆ-ನೀತಿ

ಮಸೆದು ಕತ್ತಿಯ,
ಬದುಕ ಹೊಸೆದು
ಹಾಕುವ ಹುನ್ನಾರದಲಿ
ಅಣಿಯಾಗಿದೆ ಕೈಯ್ಯೊಂದು
ಬಲಿಯ ರುಂಡ ಮುಂಡ
ಚೆಂಡಾಡಲು….ಗಹಗಹಿಸುತ….ಇಣುಕಿದೆ ಅಟ್ಟಹಾಸ
ಸ್ವಾರ್ಥದ ಸಾಧನೆಗೆ
ಪರಮಾರ್ಥದ ಲೇಪನ…..
ಉಳಿವಿಗಾಗಿ ಬಲಿಯ ಹುಡುಕು
ಅದುವೇ ಪ್ರಾಣಿ-ಧರ್ಮವು.
ಬಲಿಯ ಕೊಟ್ಟು ನಲಿವ ಹುಡುಕು
ಅದುವೇ ಮನುಜ-ಮರ್ಮವು…

ನಮ್ಮ ಬದುಕಿಗೊಂದು ರೀತಿ
ಅವರ ಜೀವಕೊಂದು ನೀತಿ
ಮುಗ್ಧ ಜೀವಕಿಲ್ಲ ಬೆಲೆಯು
ನಿನ್ನ ಸೃಷ್ಟಿ ನೆಲೆಯಲಿ…….
-ಕಮಲಾ ನಾರಾಯಣ

Advertisements

ನಿಮ್ಮ ಅನಿಸಿಕೆ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: