ಅಗಸ್ಟ್ ಹದಿನೈದರ ಸ್ವಾತ್ರಂತೋತ್ಸವ

ಹಾಂ ! ಬರುವುದು ಸರಕಾರಿ ಸುತ್ತೋಲೆಗಳ ಆದೇಶ
ಎಚ್ಚೆತ್ತುಕೊಂಡು ಆಚರಿಸಬೇಕಂತೆ ಸರಕಾರಿ ವೆಚ್ಚದಲಿ
ಸಕಲರು ಭಾಗಿಯಾಗಿ ಸಹಕರಿಸಬೇಕಂತೆ
ಸ್ವಾತಂತ್ರೋತ್ಸವವೆಂಬ ಸಂಭ್ರಮವ!

ನಿಜ ! ಸ್ವಾತಂತ್ರೋತ್ಸವೆಂಬುದು ಪವಿತ್ರವಾದುದು
ಆಜನ್ಮ ಸಿದ್ಧ ಹಕ್ಕು ತನ್ನದೆಂದು ಎದಯೊಡ್ಡಿ ಕೇಳಿ ಕಸಿದುಕೊಂಡ ವೀರತ್ವದ ಸಂಪಾದನೆ
ಸವಿನೆನಪಿನ ಉತ್ಸವವಾಗದೇ ಆಡಳಿತಾರೂಡರ ವೈಭವೀಕರಣದ ವಿಕೃತಿ
ಜಾತಿ-ಮತ-ಪಕ್ಷ-ಪಂಗಡಗಳಿಗೆ ಸೀಮಿತವಾದ ಗಾಂಧಿ-ನೆಹರು-ಅಂಬೇಡಕರರು

ಹೌದು ! ಸ್ವಾತಂತ್ರೋತ್ಸವವೆಂಬುದು ಕಾಟಾಚಾರದ
ಅಧಿಕಾರಿಗಳ ಬೇಜವಾಬ್ದಾರಿಯ ಜಾತ್ರೆ !
ಪ್ರಜ್ಞೆಯೆಂಬುದಿಲ್ಲ ರಾಷ್ಟ್ರದ್ವಜಾರೋಹಣ ನೀತಿ-ನಿಯಮಗಳು
ರಾಷ್ಟ್ರಗೀತೆಯಲ್ಲಿಯೂ ಅಪಸ್ವರವೇ ? ತಾಯಿ ಭಾರತಿ ಕ್ಷಮಿಸೆನ್ನನು !

ಛೇ! ಧರ್ಮಾಂಧರು, ದುರುಳರು, ಭೂಗಳ್ಳರು ಆಡಳಿತಾರೂಢರು
ನಿನ್ನೊಡಲ ಬಗೆದು ಮಾರಿ ಜೇಬು ತುಂಬಿಸಿಕೊಂಡರು ; ಪಾಪಿಗಳು
ನಿನ್ನ ಘನತೆಗೆ ಮಸಿ ಬಳೆದ ಕುತಂತ್ರಿಗಳು ; ಕ್ಷಮಿಸಿದಿ
ಅರಿಯಲಿಲ್ಲ ತಾಯ ಮಮತೆ ; ಚಾಂಡಾಲರು

ಪಾಪ ! ನಿಜವ ನುಡಿಯಲು ಹೆದರುವ ನಾಯಕರು
ದುಷ್ಟಕೂಟದ ಆಡಳಿತ ಸವಾರಿ ; ದುರ್ಭಳಕೆ
ನೈತಿಕತೆ ಕಳೆದುಕೊಂಡ ಪಾಪಕೂಪದ ಮೆದುಳುಗಳು
ಅಪಹಾಸ್ಯವಾದ ಮೌಲ್ಯಗಳು ; ನೀತಿ-ನಿಯಮಗಳು

ಮೌನದಿಂ ಮುಗ್ದ ಮುಖವಾಡದ ಪ್ರಜೆಗಳು
ಅವಶೇಷಗಳೆಂಬ ಹಿರಿತಲೆಗಳು ಅಪಸ್ವರ ಎತ್ತುತ್ತಲೆ ಇವೆ
ಕೆಂಪು ಜನರೇ ಲಾಯಕ್ಕು ; ನಮ್ಮವರು ನಾಲಾಯಕ್ಕು
ಸಿಪಾಯಿ, ಸೇವಕ ಸಂಸ್ಕೃತಿಯ ಶೇಷಗಳು!

ಸಂಪಾದಿಸಿದ ಸ್ವಾತಂತ್ರ ಮಹತ್ವ ಗೊತ್ತಿದ್ದರೂ ಉಡಾಫೆ ಪ್ರವೃತ್ತಿ
ಉಢಾಪೆಯನ್ನು ಉಡಾಯಿಸುವ ಶಕ್ತಿ ಈ ಮಣ್ಣಿಗಿದೆ ಎಂಬುದನರಿತರೆ ಉಳಿಯುವಿ
ಸತ್ಯ-ನ್ಯಾಯ-ನೀತಿ-ಧರ್ಮವೆಂಬ ಪದಗಳು ಶಕ್ತಿ ಕಳೆದುಕೊಂಡಿಲ್ಲವೆಂಬುದು ಮರೆಯದಿರು
ಮರೆತೆಯಾದರೆ ಮರೆಯಾಗುವಿ ಪುಣ್ಯಭೂಮಿಯಿಂದ ಶಾಶ್ವತವಾಗಿ

ತಾಯ ಋಣ, ನೆಲದ ಋಣ ತೀರಿಸಲಾಗದು ಏಳೇಳು ಜನ್ಮಕೂ!
ತಾಯ ಕರುಳಿಗೆ ಬೆಲೆಕಟ್ಟಲಾಗದು ; ಮಮತೆಗೆ ಸರಿಸಾಟಿಯಿಲ್ಲ
ತಾಯ ನೆಲದ ಸ್ವಾತಂತ್ರ ಸಂಭ್ರಮವ ಆಚರಿಸೋಣ ; ಮನದುಂಬಿ
ತಾಯ ಖುಷಿಯೇ ಎಮಗೆ ರಕ್ಷಾಕವಚ ; ಸಕಲಚರಾಚರಗಳಿಗೂ !

ಜೈಹಿಂದ್….ಜೈಹಿಂದ್…ಜೈಹಿಂದ್
-ಹಿಪ್ಪರಗಿ ಸಿದ್ದರಾಮ್

Advertisements

ನಿಮ್ಮ ಅನಿಸಿಕೆ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: