ಬದುಕಿನಾ ಓಟದಲಿ

ಬದುಕಿನಾ ಓಟದಲಿ
ಗೆಲುವಿನಾ ನಿರೀಕ್ಷೆಯಲಿ
ಮುಗಿಯದ ಸ್ಫರ್ಧೆಗಾಗಿ
ಸಹ ಸ್ಫರ್ಧಿಯಾರೆಂದೇ
ಅರಿಯದೆ ಓಡುತಿರುವೆವು..

ಕತ್ತಲಲೂ ಬೆಳಕಲ್ಲೂ,
ನಿಶ್ಚಿತ-ಅನಿಶ್ಚಿತತೆಯ ಗುರಿಯಾಗಿಸಿ
ಪ್ರತಿ ಕಷ್ಟ ಸುಖಗಳಲ್ಲೂ
ಹೊಸ ಅರ್ಥವ ಹುಡುಕುತ್ತಾ
ನಿಶಬ್ದದಲಿ ಚೇತನವನ್ನರಸುತ್ತಾ
ಓಡುತ್ತಿರುವೆವು..

ಅರಿವು ಕಲ್ಪನೆಗಳ ವಿಪರ್ಯಾಸ,
ತೀರದ ಬಯಕೆ, ಕಾಡುವ ಕನಸುಗಳ
ಬೆನ್ನೇರಿ ಗುರಿ ತಲುಪಲು
ಹರಸಾಹಸ ಮಾಡುತ್ತಾ
ಕಾಲನ ಜೋಳಿಗೆಯಲಿ
ಅಳಿದುಳಿದ ಜೀವನವ
ಅಂತ್ಯವಾಗಿಸ ಹೊರಟಿಹಿವು…
-ಭಾಗೀರಥಿ ಚಂದ್ರಶೇಖರ್

Advertisements

ನಿಮ್ಮ ಅನಿಸಿಕೆ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: