ರಾಮ್ ಪ್ರಸಾದ್ ಬಿಸ್ಮಿಲ್

ನಮ್ಮಲ್ಲೀಗ ಯಾರಾದರೂ ಸ್ವಾತಂತ್ರ್ಯ ಹೋರಾಟಗಾರರ ಪಟ್ಟಿ ಮಾಡಿ ಅಂತ ಹೇಳಿದಲ್ಲಿ… ಆ ಪಟ್ಟಿಯ ಸಂಖ್ಯೆ ಹತ್ತು ಹನ್ನೆರಡು ದಾಟಲಿಕ್ಕಿಲ್ಲ…ಅವರ ತ್ಯಾಗ ಬಲಿದಾನ ಇವೆಲ್ಲವನ್ನೂ ಮರೆತು ಬಿಟ್ಟಿದ್ದೇವೆ…ಹೀಗೆ ಈ ಪಟ್ಟಿಯಲ್ಲಿ ತಮ್ಮ ಹೆಸರನ್ನು ಗುರುತಿಸಿದೆಕೊಳ್ಳುವಂತ ವ್ಯಕ್ತಿಗಳಲ್ಲಿ ” ರಾಮ್ ಪ್ರಸಾದ್ ಬಿಸ್ಮಿಲ್” ಒಬ್ಬರು… ಚಂದ್ರ ಶೇಖರ್ ಆಜಾದ್ ಅವರೇ ಕ್ರಾಂತಿಕಾರಿಗಳ ಗುರು ಅನ್ನುವ ನನ್ನ ಕಲ್ಪನೆಯನ್ನು ಹೋಗಲಾಡಿಸಿದ್ದು ಅಜಾದರ ಜೀವನ ಚರಿತ್ರೆ “ಅಜೇಯ” ಇವತ್ತು ಓದುತ್ತಾ ಇದ್ದಾಗ ಬಿಸ್ಮಿಲ್ ಅವರ ಬಲಿದಾನದ ಕಥೆಯನ್ನು ಓದಿದೆ…ಆಜಾದರಿಗೆ ಗುರು ಆಗಿದ್ದವರು ಈ ರಾಮಪ್ರಸಾದ್ ಬಿಸ್ಮಿಲ್…ಬಹುಶ ಶಿಷ್ಯನಿಗೆ ಸಿಕ್ಕಷ್ಟು ಪ್ರಚಾರ ಈ ಕ್ರಾಂತಿಕಾರಿ ಗುರುವಿಗೆ ಸಿಗಲಿಲ್ಲ..ಕಾಕೋರಿ ದರೋಡೆ ಪ್ರಕರಣದಲ್ಲಿ ಬಂಧಿತರಾಗಿ ದೇಶಕ್ಕಾಗಿ ಪ್ರಾಣ ತೆತ್ತರು… ಆ ಬಲಿದಾನದ ದಿನದ ಸನ್ನಿವೇಶ ಮನ ಕಲಕುವಂತಿತ್ತು…ಬಿಸ್ಮಿಲ್ಲರನ್ನು ಅವರ ತಾಯಿ ನೋಡಲು ಬಂದಾಗ ಬಿಸ್ಮಿಲ್ಲರು ಗಳಗಳನೆ ಅತ್ತರಂತೆ… ಇದನ್ನು ಕಂಡ ಅವರ ತಾಯಿಗೆ ಬೇಸರವಾಗಿ ” ಸಾವಿಗೆ ಇಷ್ಟೊಂದು ಅಂಜುವವನಾಗಿದ್ದರೆ ಈ ಮಾರ್ಗವನ್ನೇಕೆ ಆರಿಸಿದಿ” ಎಂದಾಗ ಬಿಸ್ಮಿಲ್ಲರು ಹೇಳುತ್ತಾರೆ ” ಇವು ಸಾವಿನ ಬೆದರಿಕೆಯಿಂದ ತೊಟ್ಟಿಕ್ಕಿದ ಹನಿಗಳಲ್ಲಮ್ಮ.. ಒಬ್ಬ ಮಾತೃಭಕ್ತ ಪುತ್ರ ತನ್ನ ತಾಯಿಯ ದರ್ಶನವನ್ನು ಕಟ್ಟಕಡೆಯ ಸಲ ಪಡೆಯುವಾಗ ಅವನ ಪರಿಶುದ್ಧ ಪ್ರೀತಿಯ ಪ್ರತೀಕವಾದ ಕೊನೆಯ ಅಶ್ರುಬಿಂದುಗಳು”… ಅಬ್ಬಾ ಎಂಥಾ ತಾಯಿ … ಎಂಥಾ ಮಗ ಅಲ್ವಾ…ನೇಣುಗಂಬಕ್ಕೆ ಕರಕೊಂಡು ಹೋಗುವ ಮುನ್ನ ಬಿಸ್ಮಿಲ್ಲರಿಗೆ ಒಂದು ಲೋಟ ಹಾಲು ಕೊಟ್ಟರಂತೆ ಅದನ್ನು ತಿರಸ್ಕರಿಸಿ ಅವರು ನುಡಿಯುತ್ತಾರೆ…”ಹೂಂ ಈಗ ನನಗೇಕೆ ಈ ಹಾಲು? ಇನ್ನು ಕೆಲವೇ ಗಂಟೆಗಳಲ್ಲಿ ನನ್ನ ಮಾತೃದೇವಿಯ ಎದೆಹಾಲನ್ನೇ ಕುಡಿಯಹೊರಟಿರುವೆ…”ಎಂಥಾ ದೇಶಭಕ್ತಿ ಅಲ್ವಾ…ನೇಣಿಗೆ ಕೊರಳನ್ನು ಒಡ್ಡುವಾಗ ಅವರ ಮನದಲ್ಲಿ ಈ ರೀತಿಯ ಸಾಲುಗಳು ಬಂದುವಂತೆ…

” ಮಾಲಿಕ್ ತೇರಾ ರಜ ರಹೇ ಔರ್ ತೂಹೀ ತೂ ರಹೇ
ಬಾಕೀ ನ ಮೈ ರಹೂಂ ನ ಮೇರಿ ಆರಜೂ ರಹೇ
ಜಬ್ ಕಿ ತನ್ ಮೇ ಜಾನ್, ರಗೋ ಮೇ ಲಕ್ಷ್ಯ ರಹೇ
ತೇರಾ ಹೋ ಜಿಕ್ರ್ ಯಾ ತೇರಿ ಆರಜೂ ರಹೇ ”
ತಮ್ಮ ಸೆರೆವಾಸದಲ್ಲಿ ಅವರು ಬರೆದ ದೇಶಭಕ್ತಿ ಗೀತೆ ಹೀಗಿದೆ…
ಯದಿ ದೇಶಹಿತ್ ಮರ್ನಾ ಪಡೆ
ಮುಝುಕೋ ಸಹಸ್ರೋಂ ಬಾರ್ ಭೀ
ತೋ ಭೀ ನ ಮೈ ಇಸ್ ಕಷ್ಟಕೋ
ನಿಜ ಧ್ಯಾನ್ ಮೇ ಲಾವೂ ಕಭೀ
ಹೇ ಈಶ್, ಭಾರತವರ್ಷ ಮೇ
ಶತ್ ಬಾರ್ ಮೇರಾ ಜನ್ಮ ಹೋ
ಕಾರಣ್ ಸದಾ ಹೀ ಮೃತ್ಯು ಕಾ
ದೇಶೋಪಕಾರಕ್ ಕರ್ಮ ಹೋ
ಮರ್ ತೇ ಬಿಸ್ಮಿಲ್, ರೋಶನ್, ಲಾಹಿರಿ
ಅಶ್ಫಾಕ್ ಅತ್ಯಾಚಾರ್ ಸೇ
ಹೋಂಗೇ ಪೈದಾ ಸೈಕಡೋ
ಉನಕೇ ರುಧಿರ್ ಧಾರ್ ಸೇ
ಉನಕೇ ಪ್ರಬಲ್ ಉದ್ಯೋಗ್ ಸೇ
ಉದ್ಧಾರ್ ಹೋಗಾ ದೇಶ್ ಕಾ
ತಬ್ ನಾಶ್ ಹೋಗಾ ಸರ್ವದಾ
ದುಂಖ್ ಶೋಕ್ ಕೆ ಲವಲೇಶ್ ಕಾ..

ಇಂತಹಾ ಅಪ್ರತಿಮ ದೇಶಭಕ್ತ ಸ್ವಾತಂತ್ರ್ಯ ಸೇನಾನಿಯನ್ನು ಮರೆತು ಬಿಡುತ್ತಿದ್ದೇವಲ್ಲಾ… ನಾವು ಎಂತಾ ದೇಶದ್ರೋಹಿಗಳಲ್ವಾ…
-ಗುರುಪ್ರಸಾದ್ ಆಚಾರ್ಯ

Advertisements

ನಿಮ್ಮ ಅನಿಸಿಕೆ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: