ನಿರ್ಲಕ್ಷಿಸುವುದು

ಸದಾ ಚಲನಶೀಲವಾಗಿದ್ದರೂ ನಮಗೆ ಗೋಚರಿಸದೇ ತನ್ನದೇ ವೇಗದಲ್ಲಿ ಚಲಿಸುತ್ತಿರುವ ಈ ಪ್ರಕೃತಿ ಸೋಜಿಗದ ಸಂಗತಿಗಳ ಸರಮಾಲೆಯನ್ನೇ ಹೊಂದಿದೆ. ಒಂದು ವಿಷಯ ಬೆಂಬತ್ತಿದರೆ ಗೋಚರಿಸುವ ಹಲವಾರು ಸಂಗತಿಗಳ ನಡುವೆ ನಾವು ಬೆಂಬತ್ತ್ತಿರುವ ಮೂಲ ವಿಷಯವೇ ಮರೆತು ಹೋಗುತ್ತದೆ. ಅಂತಹ ವಿಸ್ಮಯಕಾರಿ ಸಂಗತಿಗಳ ಸಂತೆಯಾಗಿರುವ ಈ ಪ್ರಕೃತಿಯ ಕೂಸುಗಳಾದ ಮಾನವರು, ದೇವ ನೀಡಿದ ಬುದ್ಧಿಶಕ್ತಿಯನ್ನು ಸದೂಪಯೋಗ ಪಡಿಸಿಕೊಳ್ಳುವುದನ್ನು ಮರೆತು ದುರೂಪಯೋಗದಲ್ಲಿಯೇ ಸಮಯ ವ್ಯಯ ಮಾಡುತ್ತಿರುವುದು ; ಇದರಿಂದ ನೊಂದುಕೊಂಡ ಪರಿಸರ ಆಗಾಗ ಅತಿವೃಷ್ಟಿ-ಅನಾವೃಷ್ಟಿ, ಭೂಕಂಪದಂತಹ ಹಲವಾರು ಸಂಗತಿಗಳೊಂದಿಗೆ ಮುನಿಸಿಕೊಳ್ಳುತ್ತಿದ್ದರೂ ಈ ಮಾನವ ಇಂದಿಗೂ ಎಚ್ಚೆತ್ತುಕೊಳ್ಳುತ್ತಿಲ್ಲವೆಂಬುದೇ ಕಳವಳದ ಸಂಗತಿ. ಪ್ರಕೃತಿಯ ಭಾಗವಾಗಿರುವ ಸಮುದ್ರಕ್ಕೆ ಕೈಗಾರಿಕೆಗಳ ಕಲ್ಮಷವೇ ಹರಿದು ಬರುತ್ತಿದ್ದರೂ ಕಡಿಮೆ ಗಮನ ನೀಡುವುದು ಅಥವಾ ಗಮನಿಸಿದಂತಹ ಕೃತಕ ಪ್ರಸಂಗಗಳ ಸೃಷ್ಟಿ. ಪ್ರಕೃತಿಯಲ್ಲಿ ಸತ್ತ ಜೀವಿಯ ದೇಹವು ಕೆಲವೇ ಕ್ಷಣಗಳಲ್ಲಿ ಏಕಾಣು ಅಥವಾ ಬ್ಯಾಕ್ಟೀರಿಯಾದಂತಹ ಜೀವಿಗಳಿಗೆ ಆಹಾರವಾಗಿ ಇನ್ನಿಲ್ಲದಂತೆ ಮಾಡುವ ಶಕ್ತಿ ಈ ಪ್ರಕೃತಿಗಿದೆ. ಅದರಂತೆ ಸಾಗರದಲ್ಲಿಯ ಸರ್ವ ಜೀವಿಗಳಲ್ಲಿಯೇ ದೈತ್ಯಾಕಾರವಾದ ದೇಹ ರಚನೆಯನ್ನು ಹೊಂದಿರುವ ತಿಮಿಂಗಲವೊಂದು ಸತ್ತರೆ ಅದೇ ಸಾಗರವು ಕ್ಷಣ ಮಾತ್ರವೂ ಸಹಿಸಿಕೊಳ್ಳದೇ ನೀರಿನಿಂದ ಹೊರಹಾಕಿ ದಡಕ್ಕೇಸೆಯುತ್ತದೆ. ಅದರಂತೆ ಪ್ರಕೃತಿಯ ಕೂಸುಗಳಾದ ನಾವುಗಳು ಸಹ ನಮ್ಮಲ್ಲಿರುವ ನಿರೂಪಯೋಗಿ ದುರ್ಗುಣಗಳನ್ನು ಹೊರಹಾಕಿದರೆ ಎಲ್ಲ ರೀತಿಯಿಂದಲೂ ಕ್ಷೇಮವಲ್ಲವೇ? ಉಗುರು ಉದ್ದವಾಗಿ ಬೆಳೆದು ಕೈ-ಕಾಲುಗಳಿಂದ ಮಾಡಬಹುದಾದ ಕೆಲಸ-ಕಾರ್ಯಗಳಿಗೆ ಅಡ್ಡಿಯಾಗಬಾರದೆಂದು ಆಗಾಗ ಉಗುರುಗಳನ್ನು ಕತ್ತರಿಸಿಕೊಳ್ಳುತ್ತೇವೆ. ಅದರಂತೆ ನಮ್ಮ ದೈನಂದಿನ ಜೀವನಕ್ಕೆ ಮುಳ್ಳಾಗಿರುವ ವ್ಯಕ್ತಿ-ವ್ಯಕ್ತಿತ್ವಗಳನ್ನು ಕತ್ತರಿಸಲಾಗದಿದ್ದರೂ ನಿರ್ಲಕ್ಷಿಸುವುದು ಸುಲಭೋಪಾಯದ ಮತ್ತು ಜಾಣತನದ ಲಕ್ಷಣವಾಗಿದೆ.

– ಹಿಪ್ಪರಗಿ ಸಿದ್ದರಾಮ್

Advertisements

ನಿಮ್ಮ ಅನಿಸಿಕೆ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: