ಅನುಗಾಲವೂ ನೋಡುತ್ತಿದ್ದೇನೆ

ಒಂದು ದಿನವೂ ವ್ಯತ್ಯಾಸವಾಗಿಲ್ಲ
ಅದೇ ಕೊಳಕು ವಸ್ತ್ರ
ಭಾವನಾರಹಿತ ಮುಖ
ನಿರಾಶೆಯ ಕಾಲ್ನಡಿಗೆ
ಸಮಯಾವಕಾಶವಿಲ್ಲದ ಪ್ರಜ್ಞೆ

ನಗರೀಕರಣದ ಭರಾಟೆಯಲಿ
ಇಂತಹ ಏಟೋಂದು ಜೀವಗಳು ಅನಾಥವಾದವೋ
ಅನಾಥನೆಂದರೆ ನಾನಾರು?
ನಾಗರೀಕ ಸಮಾಜದ ಏಳಿಗೆಯೆಂಬ
ಹುಸಿ ಬೆಳವಣಿಗೆಗಾಗಿ ನನ್ನದೆಲ್ಲವನ್ನೂ ಕಿಲುಬುಕಾಸಿನ
ಪರಿಹಾರವೆಂಬ ಎಂಜಲಿಗೆ ಬಿಟ್ಟುಕೊಟ್ಟವನೆಂದೋ ?

ತಪ್ಪಿಲ್ಲ ಆವ್ವಯ್ಯನ ಪ್ರತಿದಿನದ ಹಾಜರಿಗೆ
ನಿಲ್ಲುತ್ತಾನೆ ; ನೋವಿನಿಂದ ಅವಲೋಕಿಸುತ್ತಾನೆ
ನಿಟ್ಟುಸಿರಿಡುತ್ತಾನೆ ; ಅಂದು ನನ್ನದಾಗಿತ್ತು ಈ ಪರಿಸರ
ದೃಷ್ಟಿಸುತ್ತಾನೆ ; ಇಂದು ದರಿದ್ರನಂತೆ ದೈನೇಶಿ ಭಾವ
ನೆನಪಿಸಿಕೊಳ್ಳುತ್ತಾನೆ ; ಮುಖದಲ್ಲಿ ಮಿಂಚು
ಸಂಭ್ರಮಿಸುತ್ತಾನೆ ; ಅಂದಿನ ಸಂಭ್ರಮವ ತುಂಬಿಕೊಂಡು

ಹೇಗಲೇರಿಸಿಕೊಂಡ ಮೂಟೆಯಲ್ಲಿದೆ ಎಲ್ಲವೂ!
ತಾಜಾತನದಿಂದೊಡಗೂಡಿದ ಪ್ರಾಚೀನತೆಯ ಗುಂಗು
ಮರಳುವುದೇ ಇತಿಹಾಸ ; ಸಾಬೀತಾಗಿದೆ ಹಲವಾರು ಸಂದರ್ಭದಲ್ಲಿ
ಬೇಡ ! ಇತಿಹಾಸ ಮರಳಬಾರದು ; ಅರಿಯರು ಇಂದಿನವರು
ನನ್ನೊಂದಿಗೆ ಮಣ್ಣಾಗಲಿ ವೈಭವದ ನೆನಪುಗಳು

ತಾಜಾ ತರಕಾರಿ ತಾಯಮ್ಮ ತವರೂರಿನ ವೈಭವ ನಿಂಗೊತ್ತಾ!
ತರಾವರಿ ವೈಭವದಲ್ಲಿರಬೇಕಾಗಿದ್ದ ರಾಜಕುಮಾರಿ ನಿನೇನಾಗಿದ್ದಿಯೆಂದು ನಿಂಗೊತ್ತಾ!
ತಾಜಾ ತರಕಾರಿಯ ದೈನಂಧಿನದಲ್ಲಿಯೇ ಮುಗಿಯುತ್ತಿದೆ ದಿನಚರಿ
ಇಂದೆಕೋ ಗಿರಾಕಿಗಳಿಲ್ಲದೇ ಪ್ರಾಚೀನ ಅನಾಥನ್ನ ದಿಟ್ಟಿಸುತ್ತೀರುವಿ
ನೆನಪಿನ ಪ್ರಾಚೀನ ಮೂಟೆ ಬಿಚ್ಚಿದರೆ ನಿನ್ನ ಪೂರ್ವಾಪರ ಬಟಾಬಯಲು!

ಅರೇರೆ ! ದಿನದಂತಿಲ್ಲವಯ್ಯಾ ಇಂದಿನ ದಿನ
ಗೌಜು ಗದ್ದಲಗಳ ಗಡಿಬಿಡಿಯಿಲ್ಲ
ನಾ ನಡೆದದ್ದೇ ದಾರಿ ; ದಾರಿ ಯಾವುದಯ್ಯಾ ಎಂದು ಕೇಳಲಾರೆ
ವೈಕುಂಟವೆಂಬುದು ನೆರೆಮನೆಯಷ್ಟೇ ; ಹೆದರಿಕೆಯೇಕೆ?
ಕಾಲವೆಂಬ ಚಕ್ಕಡಿಗೆ ಕ್ಷಣ ಮಾತ್ರದ ನಿಲುಗಡೆಯೆಂಬ ಕಲ್ಪನೆ
ನನಗೆ ನಾನಾಗಬೇಕೆಂಬ ದುರಾಶೆಯಿಲ್ಲ ; ದೇವ ನಿರ್ಮಿತ ದೇಹ
ವಯಸ್ಸಾದರೇನಂತೆ ; ಜಗಕೆ ಮುಪ್ಪಿಲ್ಲ
ಕೂಸುಗಳು ನಾವು ; ನಿತ್ಯ ನೂತನ
ಶಕ್ತಿ ಇರುವತನಕ ನಡೆ ;
ನಿಂತಾಗ ನಿಲುಗಡೆ ನಂತರ ಮೇಲ್ಗಡೆ ; ಇದೇ ಜನ್ಮ ಕಡೆ
ನಾನೇಕೆ ಅನಾಥ ; ಮನ ಮಂದಿರದ ನಿಜ ವೈಭವದ ಮನುಜ!
– ಹಿಪ್ಪರಗಿ ಸಿದ್ದರಾಮ್

Advertisements

ನಿಮ್ಮ ಅನಿಸಿಕೆ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: