ಚಿತ್ರ ನೋಡಿ ಕವನ ಬರೆಯಿರಿ – 19


ಇದು ಬಾಲ್ಯದ ನೆಚ್ಚಿನ ಆಟ
ಸುಂದರ ಸೂರ್ಯಾಸ್ತದ ನೋಟ
ಬಾಲಕನ ಹುಡುಗಾಟ
ಛಾಯಾಗ್ರಾಹಕನ ಕೈಚಳಕ

ಕತ್ತಲು ಬೆಳಕಿನ
ಕಣ್ಣಾಮುಚ್ಚಾಲೆ
ಕವನ ಬರೆಯಲು
ಸ್ಪೂರ್ತಿಯ ಸೆಲೆ
-ಶಿಶಿರ್ ಹೆಗಡೆ

*****************
ದಿನವು ಹುಟ್ಟಿ ಬಂದು
ಬದುಕಿನೊಂದು
ಕದಿವ
ಕಳ್ಳ ಸೂರ್ಯ
ಇಂದು ಸಿಕ್ಕಿ ಬಿಟ್ಟ
ಬಿಟ್ಟರವನ ಮತ್ತೆ ಸಿಕ್ಕ
ಎಂದು
ಅವನ
ಪುಟ್ಟ ಕಟ್ಟಿಬಿಟ್ಟ
-ಸುನಿತಾ ಮಂಜುನಾಥ್

*******************
ಬಾಲ್ಯವು ಸವಿದ ಸುಂದರ ನೆನಪು
ಮುಗ್ಧತೆ ಮನಸು ಹೆಣೆದ ಕನಸು
ಬಾನಾಡಿಗಳು ಮಲಗೋ ಸಮಯ
ರವಿಯು ಕಾನನದ ತಪ್ಪಲಲಿ ಬೆರೆತಿಹನು
ಮುದ್ದು ಮಗುವು ಸೆರೆಹಿಡಿದಿರಲು ದಿನಕರನ
ಕಸಿಯ ಬಯಸಿತು ಮಗದೊಂದು ಕಂದ
ಮರವು ತಟಸ್ಥಗೊಂಡಿತು
ಮುದ್ದು ಜೀವದ , ಹಟದ ಮಾತು ಕೇಳಿ
ಓಡುತಿದೆ ಜೀವನ ಆ ಚಕ್ರದಂತೆ
-ಮಾಲಿನಿ ಭಟ್

**********************
ಸ೦ಜೆಯ ಸೂರ್ಯ ಮುಳುಗುವ ಹೊತ್ತು,
ಕತ್ತಲು ಕವಿಯುತಿದೆ ಎಲ್ಲೆಲ್ಲು,
ಹೆಜ್ಜೆ ಹಾಕುತ್ತಿರುವೆ ನಿಮ್ಮೆಡೆಗೆ ಗೆಳೆಯರೆ,
ಸಾಗುತಿರಲಿ ಈ ಹಾದಿ ಹೀಗೆ, ನಿಮ್ಮ ಪ್ರೀತಿಯ ಸ್ನೆಹವ ಹೊತ್ತು!!!!!
-ಅನ್ನಪೂರ್ಣ ನಾಯ್ಡು

**********************
ನಾ ಹೇಳಿಲ್ಲವೇ ನಾನೆಷ್ಟು ಬಲಶಾಲಿ ಎಂಬುದನ್ನ
ಹಿಡಿದಿರುವೆ ಚಕ್ರದಲಿ ಸೂರ್ಯನನ್ನ
ತಪ್ಪಿಸಿಕೊಳ್ಳುವಾಗ ಗಾಯದ ರಕ್ತ ತುಂಬಿತಾಕಾಶವನ್ನ
ನಾವಿನ್ನು ಹೋಗೋಣ, ಅಣ್ಣಾ ಬಿಟ್ಟುಬಿಡು ಪಾಪ ಅವನನ್ನ
ತಡವಾದರೆ ಬಂದಾಳು ಕತ್ತಲೆಯ ಗುಮ್ಮ
ಜೊತೆಯಲ್ಲೇ ಕೋಲು ಹಿಡಿದು ಬಂದಾಳು ನಮ್ಮಮ್ಮ
-ಮಮತಾ ಕೀಲಾರ್

***********************
ಹಗಲೆಲ್ಲಾ ಉರಿದು
ತ೦ಪಾದ ಮೇಲೆ ಬಿದ್ದಿಯಾ ನನ್ನ ಬುಟ್ಟಿಗೆ,
ನಾಳೆ ಬೆಳಗ್ಗೆ ಹ್ಯಾಗಪ್ಪ ನಿನ್ನ ತ೦ಗೊ೦ಡೊಗಿ
ಪೂರ್ವಕ್ಕೆ ನೇತು ಹಾಕೊದು
– ಕೃಷ್ಣಮೂರ್ತಿ

*********************
ಬಾಲ್ಯವೇ ನೀನೆಷ್ಟು ಬೇಗ ಸೂರ್ಯಾಸ್ತದಂತೆ ಸರಿದು ಹೋದೆ
ನಿನ್ನ ನಾನರಿಯುವ ಮುನ್ನ
ಆಡುವಿಕೆಯ ಹುಡುಗಾಟ ಮುಗಿಯುವ ಮುನ್ನ
ಟೈರಿನಾಟದ ಸಂಗಾತಿಯೊಂದಿಗೆ
ಮರಗಿಡಗಳಲಿ ಕೋತಿಯಾಟದಲಿ
ಜೂಟಾಟಗಳ ಒಡಾಟಗಳ ರಸ್ತೆಯಲಿ
ಸೂರ್ಯೋದಯದಿಂದ ಶುರುವಾಗುತ್ತಿದ್ದ ಆಟೋಟಗಳ ಸಂಭ್ರಮದಲ್ಲಿ
ಸೂರ್ಯಾಸ್ತವಾದುದೇ ತಿಳಿಯದೇ ಕಳಿಯಿತೇ ಭಾಲ್ಯ!
ಮತ್ತೆಂದೂ ಸಿಗದಂತೆ ದೂರವಾದೆಯಾ ಓ ಬಾಲ್ಯವೇ
ಭಾಗ್ಯವಂತರಿಗೆ ಮಾತ್ರ ಬಂಗಾರದ ಭಾಲ್ಯವಂತೆ
ಹಾಗಾದರೆ ನಾನು ಯಾರು ? ನಿರ್ಭಾಗ್ಯನೇ ?
-ಹಿಪ್ಪರಗಿ ಸಿದ್ದರಾಮ್

*******************
http://www.facebook.com/photo.php?fbid=1975766690222&set=o.195906690495079&type=3&theater

Advertisements

One response

ನಿಮ್ಮ ಅನಿಸಿಕೆ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: