ನಮ್ಮ ಸಂಸ್ಕೃತಿ

ಭಾರತ ಇಡಿಯ ಜಗತ್ತಿಗೆ ಸಂಸ್ಕೃತಿಯನ್ನು ಕೊಟ್ಟ ದೇಶ, ಅದೆಷ್ಟೋ ಹಳೆಯ ಸಂಸ್ಕೃತಿಗಳು ನಾಶವಾಗಿ ಹೋಗಿವೆ, ರೋಮ್ ಆಗಿರಬಹುದು, ಈಜಿಪ್ಟ್ ಆಗಿರಬಹುದು ಎಲ್ಲೂ ಅವರ ಮುಲ ಸಂಸ್ಕೃತಿ ಉಳಿದಿಲ್ಲ . ಭಾರತದ ಮೇಲೆ ಅದೆಷ್ಟೋ ದಾಳಿಗಳು ಆದವು ಆದರೂ ಅವರಿಗೆಲ್ಲಾ ನಮ್ಮ ಸಂಸ್ಕೃತಿಯನ್ನು ನಾಶ ಮಾಡಲು ಆಗಲಿಲ್ಲ … ಯಾಕೆ ನನ್ನ ಪ್ರಕಾರ ಇದು ಸಾಧ್ಯವಾಗಿದ್ದು ಅಂದಿನ ಭಾರತೀಯರು ತಮ್ಮ ಆಚಾರ ವಿಚಾರಗಳಿಗೆ ಕೊಡುತ್ತಿದ್ದ ಗೌರವದಿಂದಾಗಿ…ಕಾಲಕಾಲಕ್ಕೆ ತಕ್ಕಂತೆ ಆಚರಣೆಗಳು… ಹಿರಿಯರು ಮಾಡಿಕೊಂಡು ಬರುತ್ತಿದ್ದ ಸಂಪ್ರದಾಯಗಳ ಅನುಕರಣೆ ಕೆಲವೊಮ್ಮೆ ಅಂಧಾನುಕರಣೆ ಮಾಡುತ್ತಿದ್ದರೂ ಅದರಿಂದ ಲಾಭವನ್ನೇ ಪಡೆಯುತ್ತಿದ್ದರು…ಪ್ರಾಣವನ್ನು ಕೊಡುತ್ತೇವೆ ಆದರೆ ನಮ್ಮತನವನ್ನು ಕಳಕೊಳ್ಳುವುದಿಲ್ಲ ಅನ್ನುವ ಅಚಲ ವಿಶ್ವಾಸ…ಅದರಂತೇ ಮಾಡಿದರೂ ಕೂಡ.. ಇಂತಹಾ ಭಾರತೀಯರಿಂದಾಗಿ ಇಲ್ಲಿಯವರೆಗೆ ನಮ್ಮ ಸಂಸ್ಕೃತಿ ಉಳಿದಿದೆ ಅನ್ನಬಹುದು. ಆದರೆ ಸದ್ಯದ ಭಾರತೀಯರನ್ನು ನೋಡಿದರೆ ನಮ್ಮ ಸಂಸ್ಕೃತಿ ಉಳಿದೀತಾ ಅನ್ನೊ ದೊಡ್ದ ಪ್ರಷ್ನೆ ಕಾಡುತ್ತೆ…ಇಲ್ಲ ಅನ್ನೋ ಉತ್ತರವೇ ಗೋಚರಿಸಿದಂತಾಗುತ್ತದೆ ಯಾಕೆ ಅಂತಾಂದ್ರೆ ಮೊದಲಿನವರು ನಮ್ಮ ಸಂಸ್ಕೃತಿಯ ಅಂಧಾನುಕರಣೆ ಯಾವ ರೀತಿ ಮಾಡುತ್ತಿದ್ದರೋ ಅಂತಾದ್ದೇ ಅಂಧಾನುಕರಣೆ ಪಾಶ್ಚಿಮಾತ್ಯ ಸಂಸ್ಕೃತಿಯ ಅಂಧಾನುಕರಣೆ ಮಾಡತೊಡಗಿದ್ದಾರೆ, ನಮ್ಮ ಉಡುಗೆ ಇರಲಿ ತೊಡುಗೆ ಇರಲಿ ಅಡುಗೆ ಎಲ್ಲವೂ ವಿದೇಶಿಯರಂತೆ… ಹೀಗೆ ಮುಂದುವರಿದಲ್ಲಿ ನಮ್ಮ ಸಂಸ್ಕೃತಿ ನಾಶವಾಗಲು ಹೆಚ್ಚು ಸಮಯ ಬೇಕಾಗಲಿಕ್ಕಿಲ್ಲ.. ಯಾವ ಆಸೆಯನ್ನು ಅಂದಿನ ದಾಳಿಕೋರರಿಗೆ ಪೂರೈಸಲು ಆಗಲಿಲ್ಲವೋ ಅದನ್ನು ನಾನು ನಮ್ಮ ಕೈಯಾರೆ ಮಾಡುತ್ತಿದ್ದೇವೆ ಅಲ್ವಾ…ಇಂದಿನ ಪುಟ್ಟ ಮಕ್ಕಳಿಗೆ ದೀಪದ ಮಹತ್ವ ಗೊತ್ತಿಲ್ಲ ಎಲ್ಲಿಯಾದರೂ ದೀಪ ಕಂಡರೆ ತಮ್ಮ ಬರ್ತ್ ಡೇ ನೆನಪಾಗುತ್ತೆ ಹಾಗೆ ಹೋಗಿ ಫೂ ಅಂತ ನಂದಿಸಿಬಿಡುತ್ತಾರೆ ಯಾಕೆ ಹೀಗೆ ಬಹುಶ ನಗರಗಳಲ್ಲಿ ಗಂಡ ಹೆಂಡಿರಿಬ್ಬರೂ ದುಡಿಯಲು ಹೋಗುತ್ತಾರೆ ಬರುವಾಗ ಕತ್ತಲಾಗಿರುತ್ತದೆ ಮನೆಯಲ್ಲಿ ಸಂಜೆ ಹೊತ್ತಿಗೆ ದೀಪ ಉರಿಸುವ ಕ್ರಮ ಇಲ್ಲ ಉರಿಸೋದು ಮಕ್ಕಳ ಬರ್ತ್ ಡೇ ಯಲ್ಲಿ ಮಾತ್ರ … ಹಾಗಾಗಿ ಮಗುವಿಗೆ ದೀಪ ಕಂಡ ಕೂಡಲೇ ಆರಿಸುವ ಮನಸ್ಸಾಗುತ್ತದೆ… ಇದರಲ್ಲಿ ಮಗುವಿನ ತಪ್ಪೇನು ಇಲ್ಲ ನಾವು ಕಲಿಸಿದ್ದನ್ನು ಅದು ಕಲಿಯುತ್ತದೆ…ಆ ಮಗುವಿಗೆ ಗೊತ್ತಾಗದೇ ಹೊದಲ್ಲಿ ಮುಂದಿನ ಪೀಳಿಗೆಗೆ ಈ ಸಂಸ್ಕೃತಿ ಮುಂದುವರಿಯೋದಾದರೂ ಹೇಗೆ..?

ಇಲ್ಲಿ ಪ್ರಮುಖ ಪಾತ್ರ ವಹಿಸಿಕೊಳ್ಳುವುದು ಹೆಣ್ಣು ನಿಜಕ್ಕೂ ನಮ್ಮ ಸಂಸ್ಕೃತಿ ಉಳಿಯಬೇಕಾದರೆ ಹೆಣ್ನು ಮನಸ್ಸು ಮಾಡಬೇಕು.. ಅವಳು ಮನೆಯಲ್ಲಿ ಮಗುವಿಗೆ ಹೇಳಿಕೊಟ್ಟಾಗ ಮಾತ್ರ ಇದು ಸಾಧ್ಯ , ಈ ವಿಷಯ ಕುರಿತು ಪುಟಗಟ್ಟಲೆ ಬರೆಯಬಹುದು.. ಆದರೂ ಇವತ್ತು ಇಷ್ಟು ಬರೆಯೋದಕ್ಕೆ ಕಾರಣ ಇವತ್ತು ಶ್ರಾವಣ ಶುಕ್ರವಾರ ಹೆಣ್ಣಿನ ಪಾಲಿಗೆ ಬಹಳಾನೆ ಪವಿತ್ರ ದಿನ ಮತ್ತೈದೆಯರಿಗಂತೂ ಇನ್ನೂ ವಿಶೇಷ… ತನ್ನ ಗಂಡನ ಶ್ರೇಯಸ್ಸಿಗಾಗಿ ಆ ಜಗನ್ಮಾತೆಯನ್ನು ತುಳಸಿಯನ್ನೂ ಆರಾಧಿಸುತ್ತಾಳೆ… ಆದರೆ ಇತ್ತೀಚಿಗೆ ಇದು ಬರಿ ಹಳ್ಳಿಗಷ್ಟೇ ಸೀಮಿತವಾಗುತ್ತಿದೆ ಅನ್ನಿಸಿತು ಅದಕ್ಕಾಗಿ ಬರೆದಿದ್ದು. ಭಾರತದ ಪ್ರತಿಯೊಬ್ಬ ಹೆಣ್ಣು ನಮ್ಮ ಸಂಸ್ಕೃತಿಯ ರಕ್ಷಣೆಗಾಗಿ ಈ ಶುಭದಿನದಂದು ಪಣತೊಡುವಂತಾಗಲಿ ಎಂದು ಜಗನ್ಮಾತೆಯಲ್ಲಿ ಬೇಡಿ ಕೊಳ್ಳುತ್ತೇನೆ

-ಗುರುಪ್ರಸಾದ್ ಆಚಾರ್ಯ

Advertisements

ನಿಮ್ಮ ಅನಿಸಿಕೆ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: