ಸುಳ್ಳು ಹೇಳುವರು ನೀಡುವ 14 ಸುಳಿವು

ಕೆಲವರು ಎಷ್ಟು ಚೆನ್ನಾಗಿ ಸುಳ್ಳು ಹೇಳುತ್ತಾರೆ ಅಂದರೆ ಅವರು ಹೇಳುತ್ತಿರುವುದು ಸುಳ್ಳು ಎಂದು ಗೊತ್ತಾಗುವುದೇ ಇಲ್ಲ. ಅವರು ಹೇಳಿದ ಸುಳ್ಳನ್ನೇ ನಿಜವೆಂದು ನಂಬಿ ನಂತರ ನಾವು ಮೋಸವಾದಾಗ ಅವರು ಹೇಳಿದ್ದು ಸುಳ್ಳು ಎಂದು ಗೊತ್ತಾಗುವುದು. ಒಬ್ಬ ವ್ಯಕ್ತಿ ಸುಳ್ಳು ಹೇಳುವುದರಲ್ಲಿ ಎಷ್ಟೇ ನಿಪುಣ ಆಗಿದ್ದರೂ ಅವರ ವರ್ತನೆಗಳಿಂದ ಅವನು/ಅವಳು ಸುಳ್ಳು ಹೇಳುತ್ತಿದ್ದರೆ ಕಂಡು ಹಿಡಿಯಬಹುದು.

ಸುಳ್ಳು ಹೇಳುವ ವ್ಯಕ್ತಿಯಲ್ಲಿ ಈ ಕೆಳಗಿನ ಲಕ್ಷಣಗಳು ಕಂಡು ಬರುತ್ತದೆ. ಇವುಗಳ ಆಧಾರದ ಮೇಲೆ ಒಬ್ಬ ವ್ಯಕ್ತಿ ಸುಳ್ಳು ಹೇಳುತ್ತಿದ್ದಾನೆಯೇ ಎಂದು ಕಂಡು ಹಿಡಿಯಬಹುದು.

1. ಕಣ್ಣಲ್ಲಿ ಕಣ್ಣಿಟ್ಟು ನೋಡಲು ಹಿಂಜರಿಯುವುದು: ಒಬ್ಬ ವ್ಯಕ್ತಿ ನಮ್ಮ ಹತ್ತಿರ ಸುಳ್ಳು ಹೇಳುತ್ತಿದ್ದರೆ ಅವರಿಗೆ ನಮ್ಮ ಕಣ್ಣನ್ನು ದಿಟ್ಟಿಸಿ ನೋಡಲು ಸಾಧ್ಯವಾಗುವುದಿಲ್ಲ. ಬೇರೆ ಕಡೆ ನೋಡಿ ಮಾತನಾಡುತ್ತಾರೆ, ನೀವು ಅವರ ಕಣ್ಣುಗಳನ್ನು ನೋಡಿದ ತಕ್ಷಣ ಅವರು ನಮ್ಮ ಕಣ್ಣನ್ನು ದಿಟ್ಟಿಸದೆ ನೆಲ ನೋಡುವುದು ಅಥವಾ ಬೇರೆ ಕಡೆ ನೋಡುವುದು ಮಾಡುತ್ತಾರೆ.

2. ನಮ್ಮ ಕಣ್ಣನ್ನೇ ನೋಡುತ್ತಾ ಮಾತನಾಡುವುದು: ಮಾಮೂಲಿಯಾಗಿ ಮಾತನಾಡುವಾಗ ಕಣ್ಣುಗಳನ್ನು ದಿಟ್ಟಿಸುತ್ತೇವೆ. ಹಾಗಂತ ಕಣ್ಣನ್ನೇ ನೋಡಿ ಮಾತನಾಡುತ್ತಿದ್ದರೆ ನಮಗೆ ಒಂಥರಾ ಕಿರಿಕಿರಿಯಾಗುತ್ತದೆ, ನಮ್ಮ ಜೊತೆ ಮಾತನಾಡುತ್ತಿರುವವರು ಆ ರೀತಿ ಮಾಡಿದಾಗ ಸಹಜವಾಗಿ ನಾವು ಮುಜುಗರಕ್ಕೆ ಒಳಗಾಗುತ್ತೇವೆ, ಸುಳ್ಳು ಹೇಳುವವರು ತಮ್ಮ ಸುಳ್ಳನ್ನು ನಂಬಿಸಲು ಈ ವಿಧಾನವನ್ನು ಅನುಸರಿಸುತ್ತಾರೆ.

3. ಮೇಲೆ ಮತ್ತು ಕೆಳಗೆ ನೋಡಿ ಮಾತನಾಡುವುದು: ನಮ್ಮ ಎದುರು ನಿಂತು ವ್ಯಕ್ತಿ ನಮ್ಮ ನ್ನು ನೋಡದೆ ಒಮ್ಮೆ ಮೇಲಕ್ಕೆ ಮತ್ತೊಮ್ಮೆ ಕೆಳಕ್ಕೆ ನೋಡಿ ಮಾತನಾಡುತ್ತಿದ್ದಾರೆ ಅಂದರೆ ಸುಳ್ಳು ಹೇಳುತ್ತಿದ್ದಾರೆ ಎಂದು ಅರ್ಥ. ಅವರಿಗೆ ನಮ್ಮ ದೃಷ್ಟಿಯನ್ನು ಎದುರಿಸಲು ಸಾಧ್ಯವಾಗದೇ ಆ ರೀತಿ ಮಾಡುತ್ತಿರುತ್ತಾರೆ.

4. ಭಾವ ಭಂಗಿಗಳು: ಒಬ್ಬ ವ್ಯಕ್ತಿ ನಮ್ಮ ಹತ್ತಿರ ಸುಳ್ಳು ಹೇಳುತ್ತಿದ್ದಾರೆ ಅನ್ನುವುದನ್ನು ಅವರ ಭಾವ ಭಂಗಿಯಲ್ಲಿ ಗುರುತಿಸಬಹುದು. ನಮಗೆ ತುಂಬಾ ಆಪ್ತರಾದವರು ನಮ್ಮ ಹತ್ತಿರ ಸುಳ್ಳು ಹೇಳುತ್ತಿದ್ದಾರೆ ಅನ್ನುವುದು ಅವರ ವರ್ತನೆಯನ್ನು ಸ್ವಲ್ಪ ಗಮನಿಸಿದರೆ ಸಾಕು ಗೊತ್ತಾಗಿ ಬಿಡುತ್ತದೆ.

5. ರೋಬೊ ರೀತಿಯ ವರ್ತನೆ: ಈ ರೀತಿಯ ವರ್ತನೆಯನ್ನು ನಮಗೆ ತುಂಬಾ ಆಪ್ತರಾದವರಲ್ಲಿ ಕಾಣಬಹುದು. ಏನೋ ಕಾರಣದಿಂದ ಅವರು ಸತ್ಯವನ್ನು ಮರೆಮಾಚುತ್ತಿದ್ದಾರೆ ಅಂದರೆ ಒಂಥರಾ ರೋಬೊ ರೀತಿ ನಡೆಯುವುದು, ಮಾತನಾಡುವುದು ಮಾಡುತ್ತಾರೆ. ಬಾಯಿ ಬಿಟ್ಟರೆ ಸತ್ಯ ಎಲ್ಲಿ ಹೇಳಿ ಬಿಡುವೆನೊ ಎಂದು ಕೈ ಸನ್ನೆಯಿಂದ ಏನೂ ಇಲ್ಲ ಅಂತಾರೆ, ಆ ಸನ್ನೆ ಮಾಮೂಲಿ ರೀತಿ ಇರುವುದಿಲ್ಲ, ಆ ರೀತಿ ಮಾಡಿದಾಗ ಅವರು ಸುಳ್ಳು ಹೇಳುತ್ತಿದ್ದಾರೆ ಎಂದು ಸುಲಭದಲ್ಲಿ ಗುರುತಿಸಬಹುದು.

6. ಅವರ ಬಗ್ಗೆ ತುಂಬಾ ಹೇಳಿಕೊಳ್ಳುವುದು: ಯಾವುದಾದರೂ ಒಬ್ಬ ಹೊಸ ವ್ಯಕ್ತಿ ಪರಿಚಯವಾಗಿ ಅವರು ಅವರ ಬಗ್ಗೆ ತುಂಬಾ ಹೇಳಿಕೊಳ್ಳುತ್ತಿದ್ದಾರೆ ಅಂದರೆ ಆ ವ್ಯಕ್ತಿ ಸುಳ್ಳು ಹೇಳುತ್ತಿದ್ದಾರೆ ಎಂದು ಸುಲಭವಾಗಿ ಗುರುತಿಸಬಹುದು.ಯಾವುದೇ ವ್ಯಕ್ತಿ ತನ್ನ ಬಗ್ಗೆ ವಿಪರೀತವಾಗಿ ಕೊಚ್ಚಿಕೊಳ್ಳುವುದಿಲ್ಲ. ಆದ್ದರಿಂದ ಬೊಗಳೆ ಮಾತನಾಡುವವರನ್ನು ನಂಬಬೇಡಿ.

7. ಅವರ ಕೈಗಳು ಎಲ್ಲಿರುತ್ತದೆ?: ಅಪರಿಚಿತ ವ್ಯಕ್ತಿ ಜೊತೆ ಮಾತನಾಡುವಾಗ ಅವರ ಕೈಗಳನ್ನು ಮುಖ್ಯವಾಗಿ ಗಮನಿಸಿ.
ಕೈಗಳನ್ನು ಹಿಸುಕುವುದು, ಮಾತನಾಡುವಾಗ ಬಾಯಿಗೆ ಕೈ ಅಡ್ಡವಾಗಿ ಇಟ್ಟು ಮಾತನಾಡುವುದು, ನಿಮ್ಮ ಮಾತು ಕೇಳಿಸಿಕೊಳ್ಳುವಾಗ ಅವರು ಅವರ ಕೈಗಳನ್ನು ಹಿಸುಕುವುದು, ಆಗಾಗ ಕಣ್ಣುಗಳನ್ನು ಉಜ್ಜುವುದು, ಕೈಗಳಿಂದ ಆಗಾಗ ಅವರ ಕಿವಿಗಳನ್ನು ಮುಟ್ಟುವುದು ಮಾಡುತ್ತಿದ್ದರೆ ಅರು ಸುಳ್ಳು ಹೇಳುತ್ತಿದ್ದಾರೆ ಎಂದು ಗ್ರಹಿಸಬಹುದು.

8. ಭುಜ: ನಮ್ಮ ಎದುರು ಇರುವ ವ್ಯಕ್ತಿ ಸುಳ್ಳು ಹೇಳುತ್ತಿದ್ದಾರೆಯೇ ಅನ್ನುವುದನ್ನು ಅವರ ಭುಜ ನೋಡಿ ಗುರುತಿಸಬಹುದು. ಒಂದು ಭುಜ ಸ್ವಲ್ಪ ಮೇಲಕ್ಕೆ ಎತ್ತಿದ ರೀತಿ ಅವರ ದೇಹದ ಭಂಗಿ ಇದ್ದರೆ ಅವರು ಹೇಳುತ್ತಿರುವುದು ಸುಳ್ಳು.

9. ಕಾಲು ಮತ್ತು ಕೈಗಳನ್ನು ಸೊಟ್ಟಗೆ ಮಾಡಿ ನಿಲ್ಲುವುದು: ನೇರವಾಗಿ ನಿಲ್ಲದೆ ಕೈ ಮತ್ತು ಕಾಲುಗಳನ್ನು ಸೊಟ್ಟಗೆ ಮಾಡಿ ನಿಂತು ಮಾತನಾಡುತ್ತಿದ್ದರೆ ನಿಮ್ಮ ಎದುರಿಗಿನ ವ್ಯಕ್ತಿ ಸುಳ್ಳು ಹೇಳುತ್ತಿದ್ದಾರೆ ಎಂದು ಗ್ರಹಿಸಬಹುದು. ಸುಳ್ಳು ಹೇಳುವವರಿಗೆ ನೇರವಾಗಿ ನಿಂತು ಆತ್ಮವಿಶ್ವಾಸದಿಂದ ಮಾತನಾಡಲು ಸಾಧ್ಯವಾಗುವುದಿಲ್ಲ.

10. ತಲೆ ಅತ್ತ-ಇತ್ತ ಆಡಿಸುವುದು: ಕೆಲವೊಂದು ಸಂದರ್ಭದಲ್ಲಿ ನಮಗೆ ಇಷ್ಟವಾಗದಂತಹ ಪರಿಸ್ಥತಿಯಲ್ಲಿ ಇದ್ದರೆ ಅಸಮಧಾನದಿಂದ ತಲೆಯನ್ನು ಅತ್ತ-ಇತ್ತ ಆಡಿಸುತ್ತೇವೆ. ಆದರೆ ನಮ್ಮ ಜೊತೆ ಮಾತನಾಡುವವರು ಅವರ ತಲೆಯನ್ನು ನಮ್ಮ ತಲೆಯ ಹತ್ತಿರ ತಂದು ಗುಟ್ಟು ಹೇಳುವ ರೀತಿ ಮಾತನಾಡುತ್ತಿದ್ದಾರೆ ಅಂದರೆ ಸುಳ್ಳು ಹೇಳಿ ನಮ್ಮಿಂದ ಮಾಹಿತಿಯನ್ನು ಸಂಗ್ರಹಿಸುತ್ತಿದ್ದಾರೆ ಎಂದು ಅರ್ಥ.

11. ತೊದಲುವ ಮಾತು: ಕೆಲವೊಮ್ಮೆ ಭಯದಿಂದ ಮಾತನಾಡುವಾಗ ತೊದಲುತ್ತಾರೆ. ಆದರೆ ಸುಳ್ಳು ಹೇಳುವವರ ಹತ್ತಿರ ಅವರು ಹೇಳುತ್ತಿರುವ ವಿಷಯದ ಬಗ್ಗೆ ಹೆಚ್ಚಿನ ಮಾಹಿತಿ ಕೇಳಿದರೆ ತೊದಲುತ್ತಾರೆ. ಇದರಿಂದ ಆ ವ್ಯಕ್ತಿ ಸುಳ್ಳು ಹೇಳುತ್ತಿದ್ದಾರೆ ಎಂದು ಸುಲಭವಾಗಿ ಗುರುತಿಸಬಹುದು.

14. ಸ್ವರದಲ್ಲಿ ಬದಲಾವಣೆ: ನಮಗೆ ಗೊತ್ತಿರುವ ವ್ಯಕ್ತಿಯಾಗಿದ್ದರೆ ಅವರ ಸ್ವರದಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಗೊತ್ತಾಗುತ್ತದೆ. ಅವರು ನಮ್ಮಿಂದ ಏನಾದರೂ ವಿಷಯವನ್ನು ಹೇಳದೆ ಬಚ್ಚಿಟ್ಟರೆ ಅವರ ಸ್ವರದಲ್ಲಿ ಉಂಟಾಗುವ ವ್ಯತ್ಯಾಸದಿಂದ ಗುರುತಿಸಬಹುದು. ತುಂಬಾ ದೊಡ್ಡದಾಗಿ ನಿಟ್ಟುಸಿರು ಬಿಡುವುದು ಇವೆಲ್ಲಾ ಅವರು ನಿಮ್ಮಿಂದ ಏನೋ ಬಚ್ಚಿಡುತ್ತಿದ್ದಾರೆ ಎಂದು ಸೂಚಿಸುತ್ತದೆ.

ಈ ಮೇಲಿನ ಲಕ್ಷಣಗಳಿಂದ ಅವರು ಸುಳ್ಳು ಹೇಳುತ್ತಿದ್ದಾರೆ ಎಂದು ಗೊತ್ತಾದ ಮೇಲೆ ಅದನ್ನು ಖಚಿತ ಪಡಿಸಿಕೊಳ್ಳಲು ಅವರು ಮಾತನಾಡುತ್ತಿರುವ ವಿಷಯದ ಬಗ್ಗೆ ಕೆಲ ಪ್ರಶ್ನೆಗಳನ್ನು ಕೇಳಿ. ಇದರಿಂದ ಅವರು ಸುಳ್ಳು ಹೇಳುತ್ತಿದ್ದಾರೆಯೇ, ಇಲ್ಲವೇ? ಅಂತ ನಿಮಗೆ ಖಚಿತವಾಗುವುದು.
– ನಮ್ಮ ಕರ್ನಾಟಕ

Advertisements

ನಿಮ್ಮ ಅನಿಸಿಕೆ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: