ಚಮಚಾವತಾರ-ಹಿರಣ್ಣಯ್ಯ

ಹಿರಣ್ಣಯ್ಯನವರ ಚಮಚಾವತಾರ ನಾಟಕದ ಆಡಿಯೋದಿಂದ ಬರಹಕ್ಕೆ ಭಟ್ಟಿ ಇಳಿಸಿರೋದು….

ಚಿನ್ನ: ಹೇ ಏಳೋಲೋ ಏನು ದಿನಾ ಹಂಗ್ ಬೀಡಿ ಸೇದ್ತಾ ಕೂತಿದೀಯಾ? ಅಲ್ಲ ಕಣೋ ದೇವರ ಪ್ರಾರ್ಥನೆ ಕರೀತಾ ಇರೋದು ಕೇಳತಾ ಇಲ್ವೇನೋ ನಿಂಗೆ

ಹಿ: ಅಷ್ಟೇ ಅಷ್ಟೇ ದಿನಾ ಮೂರು ಸಲ ದೇವರ ಪ್ರಾರ್ಥನೆ ಕರಿಯೋದು ನಮಗೆ ಕೇಳುತ್ತೇ ವಿನಃ ನಮ್ಮ ಪ್ರಾರ್ಥನೆ ಆ ದೇವರಿಗೆ ಕೇಳ್ತಾದೇನೋ.. ಹೇಳು ಮತ್ತೆ

ಚಿನ್ನ: ಏ ಕೇಳೊಲ್ಲ ಅಂತ ಅದೆಂಗೆಲಾ ಹೇಳ್ತೀಯಾ.. ಅಲ್ಲಾ ಕಣೋ ಕೇಳಬಹುದು ಅಲ್ವಾ

ಹಿ:ಅಯ್ಯೋ ದರ್ಬೇಶಿ ನನ್ಮಗನೇ, ಎಲ್ಲಾರ ಪ್ರಾರ್ಧನೇನೂ ಕೇಳೋಕೆ ಪುರುಸೊತ್ತು ಇದಿಯೇನೋ ದೇವರಿಗೆ.. ಅದೂ ಅಲ್ಲದೇ ನಮ್ಮ ಪ್ರಾರ್ಥನೆ ಒಳಗೆ ಇರೋದಾದರೂ ಏನು… ಏನೂ ಅನ್ಕೊಂಡೆ.. ಅದು ಕೊಡು ಇದು ಕೊಡು ಅದು ಬ್ಯಾಡಾ ಇದು ಬ್ಯಾಡಾ, ನಾವು ಈ ಕಡೆಯಿಂದ ಎತ್ಕೊಂಡು ಬರ್ತೀವಿ ನೀನು ಆ ಕಡೆ ಬಾಚ್ಕೊಂಡು ಬಾ..

ಚಿನ್ನ:ಲೇ ಥೂ ಸುಮ್ಕಿರೋ ಲೋ.. ಹಂಗೆ ನಾವ್ಯಾವತ್ತಾದರೂ ಕೇಳ್ತೀವೇನೋ ನಾವು

ಚಿನ್ನ:ಮತ್ತಿನ್ನೇನು

ಚಿನ್ನ: ಏನು

ಚಿನ್ನ: “ನಾವು ಮಾಡಿದ ಪಾಪವೆಲ್ಲಾ ಹೋಗಲಾಡಿಸೋ ಬೇಗನೆ” ಅಂದ್ರೆ ಏನರ್ಥಾ? ನಾವು ಪಾಪ ಮಾಡ್ಕಂಡು ಬರ್ತೀವಿ, ನೀನು ತೆಕ್ಕೆಂಡು ಬಾ ಅಂತಾ ತಾನೆ

ಚಿನ್ನ: ಅಲ್ಲಾ ತೀರಾ ಹಂಗರ್ತೀವಿ ನಿಜಾ.. ಆದರೆ ತೀರಾ ನೀನಂದಂಗೇ….

ಹಿ: ಇನ್ನೇನು ಅವರು ಅದನ್ನೇ ಒಸು ಮುಚ್ಚಿ ಹೇಳ್ತಾವ್ರೆ, ನಾನದನ್ನೇ ಒಸಿ ಬಿಚ್ಚಿ ಹೇಳ್ತಾ ಇದೀನಿ ಅಷ್ಟೆ ತಾನೆ..
ಅಲ್ಲೋಲೋ ಚಿನ್ನ.. ಇಂಗೆ ಕಣ್ಮುಚ್ಕೊಂಡು ಕೈ ಮುಕ್ಕೊಂಡು ಕೇಳ್ಬಿಟ್ರೆ ತಗೋ ಅಂತ ತಕ್ಕೊಡೋಕೆ ಅವನೇನು ತರಗುಪೇಟೆ ತಗಡು ವ್ಯಾಪಾರೀನಾ, ಇಲ್ಲ ಮಾಮೂಲು ಪೇಟೆ ಮಾರ್ವಾಡಿನಾ..?

ಹಾ…. ನಮ್ಮ ತೆವಲಿಗೆ ನಾವು ಹೊಡ್ಕೋತಾ ಇರೋದು, ಅವನ ಪಾಡಿಗೆ ಅವನು ಕಲ್ಲು ಹಾಕ್ಕೋತಾ ಇರೋದು ಅಷ್ಟೇ..

ಚಿನ್ನ: ಅದಕ್ಕೇ ಆಯ್ತು ತಗಳಪ್ಪಾ ಇವಾಗ.. ಈ ಜೈಲ್ ನಾಗೆ ಇರೋಗಂಟ ನಾವು ಅವರು ಹೇಳ್ದಾಗೆ ಕೇಳ್ಳೇ ಬೇಕಾ… ನಮಗೆ ಇಷ್ಟಾ ಐತೋ ಇಲ್ವೋ..

ಹಿ: ಹೂಂ.. ಅದೂ ನಿಜಾ ಅನ್ನೂ, ಕಷ್ಟ ಅಂದು ಕುಂತ ತಕ್ಷಣ ನಿಮ್ಮಿಷ್ಟ ಅಂತ ಕೈಬಿಡೋಕೆ ಅವರೇನು ನಮ್ಮ ಮಾವಂದಿರಾ? ಖಾಕಿ ಬಟ್ಟೆ ಖದೀಮರು.. ನಡಿಯಪ್ಪಾ ಹೋಗೋಣಾ ನಡೀ…

ಚಿನ್ನ:ನಡೀ ನಮ್ಮ ಕೆಲಸ ನಾವು ಮಾಡಿಕೊಂಡು ಬರ್ತಿರೋದೆಯಾ.. ನಡಿ…

****************
ಚಿನ್ನ:ಇವತ್ತೇನಯ್ಯಾ ಸ್ಪೆಸಲ್ಲೂ.. ಅಲ್ಲ ಕಣೋ, ವಾರ್ತೆ ಆದಮೇಲೆ ಭಾಸಣ ಮಾಡಿದ್ರು, ತಿನ್ನಕ್ಕೆ ಕೊಬ್ಬರಿ ಮಿಠಾಯಿ ಬೇರೆ ಹಂಚಿದ್ರು,

ಹಿ: ಹೊಡ್ಕೋ ನಿಂಗೆ…., ಲೇ ಇವತ್ತು ಜನವರಿ 26ನೇ ತಾರೀಖು ಕಣ್ಲಾ…ಅಂದ್ರೆ ನಮ್ಮ ದೇಸದ ಗಣರಾಜ್ಯದ ದಿನ ಕಣ್ಲಾ ಇವತ್ತೂ….

ಚಿನ್ನ: ಹೋ… ಅಂಗಂದ್ರೆ ನಮ್ಮ ದೇಸ್ದು ಗಣರಾಧನೆ ಅನ್ನಪ್ಪಾ…

ಹಿ:ಮ್.. ನಿನ್ನ ಮಕ್ಕೆ.. ಹೂ… ಒಂಥರಾ ಗಣರಾದನೆ ಅಂತಲೇ ಹೇಳಬಹುದು ಕಣೋ ನೀನೇಳ್ದಂಗೆ…

ಚಿನ್ನ:ಅದೇನೂ ಭಾರಿ ಅನುಮಾನದಲ್ಲಿ ಹೇಳ್ತೀಯಲ್ಲಾ.. ಒಂಥರಾನೇ ಅಂತೀಯಲ್ಲಾ

ಹಿ: ಅಂದರೆ ನಾನೇಳಿದ್ದಕ್ಕೂ ನೀನೇಳಿದ್ದಕ್ಕೂ ಅರ್ಥ ಬೇರೆ ಬೇರೆ, ಆದರೆ ಈಗ ದೇಸದಲ್ಲಿ ನಡೀತಿರೋದು ನೋಡ್ತಾ ಇದ್ದರೆ ಯಾಕೋ ನೀನೇಳ್ತಿರೋದೆ ಸರಿ ಅಂತ ಅನ್ಸುತ್ತೆ ಕಣಪ್ಪಾ..

ಚಿನ್ನ: ಏ.. ಅದೇನೋ ನಂಗೂ ಅರ್ಥವಾಗೋ ಹಂಗೆ ಬಿಡಿಸಿ ಹೇಳೋ ಮಾರಾಯಾ..

ಹಿ:ಈಗಾ ನೋಡಪ್ಪಾ… ಗಣರಾಜ್ಯೋತ್ಸವ ಅಂದ್ರೆ ನಮ್ಮ ದೇಸ ಸ್ವತಂತ್ರವಾದ್ದು ಆಮೇಲೆ ಸಂವಿಧಾನಾ ಎಲ್ಲಾ ತಕೊಂಬಂದಿದ್ದೂ.. ಅದಕ್ಕೆ ಎಲ್ಡು ದಿನ ಐತೇ… ಇವಾಗಾ ದೇಸ ಸ್ವತಂತ್ರ ಆಗಿದ್ದು ಯಾವಾಗ ಹೇಳು ಮತ್ತೆ..

ಚಿನ್ನ:ಏ ತೀರಾ ಅದು ಗೊತ್ತಿಲ್ವಾ ನಂಗೆ… ಗಾಂಧೀಜಿ ಸತ್ತ ಮೇಲೆ ಅಲ್ವೇನಲಾ ನಮಗೆ ಸ್ವತಂತ್ರ ಬಂದಿದ್ದೂ… ಯಾಕಂದ್ರೆ ಅವರು ಸ್ವತಂತ್ರಕ್ಕೋಸ್ಕರ ಹೋರಾಡಿ ಹೋರಾಡಿ ಸತ್ತದ್ದು ಅಂತ ಎಲ್ಲರೂ ಹೇಳಕಿಲ್ವಾ…

ಹಿ: ಲೋ ಕಿರಾತಕ ನನ್ಮಗನೇ… ಅವರು ಸ್ವತಂತ್ರಕ್ಕೋಸ್ಕರ ಹೋರಾಡಿದ್ದು ಸರಿ.. ಆದರೆ ಪಾಪ ಅವರು ಸ್ವತಂತ್ರವಾಗಿ ಎಲ್ಲಲಾ ಸತ್ರು, ಅವರಿಗೆ ಆ ಸ್ವತಂತ್ರ ತಾನೇ ಯಾರಲಾ ಕೊಟ್ರು, ನಮಗೆ ಸ್ವತಂತ್ರ ಬಂದೇಟಿಗೆ ನಾವು ಮೊದಲು ಮಾಡಿದ್ದು ಪಾಪ ಆ ಪುಣ್ಯಾತ್ಮನ್ನ ಕೊಂದಿದ್ದು ಕಣ್ಲಾ..

ನಮ್ಮ ಮಹಾತ್ಮಾ ಗಾಂಧೀಜಿ ಇದ್ದರಲ್ಲಾ… ಶಾನೇ ಬುದ್ದಿವಂತರು, ಅವರಿಗೆ ಈ ಕುಲಗೆಟ್ಟ ಕಾಂಗ್ರೆಸ್ ಭವಿಷ್ಯ ಎಲ್ಲಾ ಚೆನ್ನಾಗಿ ಗೊತ್ತಿತ್ತು ಕಣ್ಲಾ…

ಚಿನ್ನ: ಹೆಂಗಂತೀಯ ನೀನು

ಹಿ:ಅನ್ನೋದೇನು ಬಂತು ಕಣ್ಣಿಗೆ ಕಾಣೋದೇ ಅಲ್ವೇನೋ, ಅವರು ತಿಂದು ಬದುಕಿದ್ದೇ ಸಾಕ್ಷಿ, ಅವರು ಸಾಯೋವರ್ಗೂ ಕಡ್ಲೇಕಾಯೇ ತಿಂತಾಯಿದ್ರು, ಮೇಕೇ ಹಾಲೇ ಕುಡೀತಿದ್ರೂ ಅಲ್ವಾ.. ಯಾಕೇಳು

ಚಿನ್ನ: ಯಾಕಿರಬಹುದು ಅಂತೀಯಾ ಹಂಗದೂ

ಹಿ:ಆ ಅಲ್ಲೇ ಇರೋದು ಬಡ್ಡಿ ಮಗಂದು ದೊಡ್ಡೋರ ಗುಣ

ಚಿನ್ನ: ಈ ಕಡ್ಲೇ ಕಾಯಿ ಗುಣ ಏನೇಳು, ಮೊದ್ಲು ಸಿಪ್ಪೆ ಎರಡಾಯ್ತದೆ, ಆಮೇಲೆ ಒಳಗಿನ ಬೀಜ ಇನ್ನೆರಡಾಯ್ತದೆ, ಕೊನೆಗೆ ಉಳಿಯೋದೇನಪ್ಪಾ.. ಆ ಕೊನೇಲಿರೋ ಕೆಟ್ಟ ಬುಕುಣಿ, ಬುಕುಣಿ ಚೂರು..

ಚಿನ್ನ: ಊ ಊ ಗೊತ್ತೇಳು

ಹಿ: ಹಂಗೇ ಈ ಕಾಂಗ್ರೆಸ್ನೋರೂ ಮುಂದೆ ಇಂಗಾಗ್ತಾರೆ, ಪಾರ್ಟಿ ಇಂಗಾಗುತ್ತೇ ಅಂತ ಅವರಿಗೆ ಗೊತ್ತಿತ್ತು.. ಎಲ್ಡಾಯ್ತದೆ ಅಂತ..

ಚಿನ್ನ: ಯಾವಾಗ… ಯಾವ್ಯಾವುದು ಅದು

ಹಿ:ನೋಡಪ್ಪಾ ಮೊದಲು ಆಯ್ತಲ್ಲಪ್ಪ ಸಿಪ್ಪೆ ಎರಡು, ಹಂಗೆ ಸಿಂಡಿಕೇಟು, ಇಂಡಿಕೇಟು… ಅಂದರೆ ಲಂಗದ ಕಾಂಗ್ರೆಸ್ಸು, ಲಿಂಗದ ಕಾಂಗ್ರೆಸ್ಸು

ಚಿನ್ನ: ಹಂಗಂದ್ರೆ

ಹಿ: ಅದೇ ಕಣೋ… ಮಾತಾಜೀ ಇಂದಿರಮ್ಮನ ಲಂಗದ ಕಾಂಗ್ರೆಸ್ಸು, ಪಿತಾಜಿ ನಿಜಲಿಂಗಪ್ಪನರದು ಲಿಂಗದ ಕಾಂಗ್ರೆಸ್ಸು

ಚಿನ್ನ: ಸರೀ ಕಣಪ್ಪಾ, ಸಿಪ್ಪೇದಾಯ್ತು, ಆಮೇಲೆ ಬೀಜದ್ದು ಅಂದ್ಯಲ್ಲಾ ಅದೇನದೂ

ಹಿ:ಅದೇ ಕಣೋ ತಿರಗಾ ಇನ್ನೆರಡು ಹೋಳಾಗಲಿಲ್ವಾ ಕಾಂಗ್ರೆಸ್ಸು,

ಚಿನ್ನ: ಯಾವುದದೂ

ಹಿ: ಚಡ್ಡಿ ಕಾಂಗ್ರೆಸ್ಸು, ಲಾಡಿ ಕಾಂಗ್ರೆಸ್ಸೂ…

ಚಿನ್ನ:ಅಲ್ಲಾ ಕಣಲಾ ಈ ಚಡ್ಡಿ, ಲಾಡಿ ಯಾರ್ಯಾರದು ಅಂತೀಯಪ್ಪ ನೀನು

ಮುಂದುವರೆಯುವುದು….
-ಮಂಜುನಾಥರೆಡ್ಡಿ

Advertisements

ನಿಮ್ಮ ಅನಿಸಿಕೆ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: