ಮೋದಿಗೆ ಮಸಿ ಬಳಿಯಲು ಕಾಂಗ್ರೆಸ್ ನ ಹಿಡಿದ ಹೀನ ಹಾದಿ

ಇವತ್ತು ರಾಹುಲ್ ಗಾಂಧಿ ಮತ್ತು ಪ್ರಧಾನಿ ಗಾದಿ ನಡುವೆ ಯಾರಾದರೂ ಕಂಟಕವಾಗಿ ನಿಂತಿದ್ದರೆ ಅದು ನರೇಂದ್ರ ಮೋದಿಯವರು!! ಇಷ್ಟಕ್ಕೂ ಯಾರ ವಿರುದ್ಧವಾದರೂ ಕಾಂಗ್ರೆಸ್ ಈ ಪರಿ ದಾಳಿ ಮಾಡಿದ್ದನ್ನು ಇತಿಹಾಸದಲ್ಲಿ ಕಂಡಿದ್ದೀರಾ? ಮುಸಲ್ಮಾನರ ಹತ್ಯೆ ಬಗ್ಗೆ ಕಾಂಗ್ರೆಸ್್ಗೆ ಕನಿಕರವಿರುವುದರಿಂದ ಹಾಗೆ ಮಾಡುತ್ತಿದೆ ಎಂದು ಹೇಳುವುದಕ್ಕೂ ಸಾಧ್ಯವಿಲ್ಲ. 1969ರಲ್ಲಿ ಕಾಂಗ್ರೆಸ್ ಮುಖ್ಯಮಂತ್ರಿ ಹಿತೇಂದ್ರ ದೇಸಾಯಿ ಆಡಳಿತದಲ್ಲಿ ನಡೆದ ಹಿಂದೂ-ಮುಸ್ಲಿಂ ಕೋಮುಗಲಭೆಯಲ್ಲಿ 2 ಸಾವಿರ ಜನ ಹತ್ಯೆಯಾಗಿದ್ದರು! ಕಾಂಗ್ರೆಸ್ ಆಡಳಿತದಲ್ಲಿ ಸರಣಿ ಕೋಮುಗಲಭೆಗಳು ನಡೆದಿವೆ. ಜತೆಗೆ ಗುಜರಾತಿ ಮುಸ್ಲಿಮರ ಉದ್ಧಟತನವೂ ಕಡಿಮೆಯೇನಿಲ್ಲ. 1969ರಲ್ಲಿ ಜೆರುಸಲೇಂನಲ್ಲಿರುವ ಅಲ್ ಅಕ್ಷಾ ಮಸೀದಿಯನ್ನು ಕೆಡವಲಾಗಿದೆ ಎಂಬ ಹುಸಿ ವದಂತಿ ಹಬ್ಬಿದಾಗ ಜಗನ್ನಾಥ ದೇವಾಲಯದಲ್ಲಿ ಭಜಿಸುತ್ತಿದ್ದ ಹಿಂದೂಗಳ ಮೇಲೆ ಆಕ್ರಮಣ ಮಾಡುವ ಮೂಲಕ ಗಲಭೆ ಆರಂಭಿಸಿದ್ದೇ ಮುಸ್ಲಿಮರು. ಅದು ಕಾಂಗ್ರೆಸ್್ಗೂ ಗೊತ್ತು. ಈ ದೇಶ ಕಂಡ ಯಾವುದೇ ಕೋಮು ದಳ್ಳುರಿಯನ್ನು ತೆಗೆದುಕೊಂಡರೂ ಪ್ರಚೋದನೆ ಮುಸ್ಲಿಮರಿಂದಲೇ ಆಗಿರುತ್ತದೆ. ಐವತ್ತು ವರ್ಷ ದೇಶವಾಳಿರುವ ಕಾಂಗ್ರೆಸ್್ಗೆ ಅದು ತಿಳಿಯದ ವಿಚಾರವೇನು? ಆದರೂ ಕಾಂಗ್ರೆಸ್ ಮುಸ್ಲಿಂ ಕಾರ್ಡ್ ಅನ್ನು ಏಕೆ ಬಳಸಿಕೊಳ್ಳುತ್ತಿದೆಯೆಂದರೆ ಮೋದಿಯವರನ್ನು ಡಿಸ್್ಕ್ರೆಡಿಟ್ ಮಾಡಲು, ತನ್ನ ಅಧಿಕಾರ ಲಾಲಸೆಯನ್ನು ತೀರಿಸಿಕೊಳ್ಳಲು ಅದಕ್ಕೆ ಬೇರೆ ಮಾರ್ಗಗಳಿಲ್ಲ. ಆದರೆ ಇಂತಹ ರಾಜಕಾರಣ ದೇಶವನ್ನು ಎಲ್ಲಿಗೆ ಕೊಂಡೊಯ್ದೀತು?

ಅದಿರಲಿ, ಕಾಂಗ್ರೆಸ್ ಎಷ್ಟೇ ಪ್ರಯತ್ನಿಸಿದರೂ ಮೋದಿಯವರಲ್ಲಿ ಒಂದೇ ಒಂದು ದೌರ್ಬಲ್ಯವನ್ನು ಹುಡುಕಲು ಏಕೆ ಸಾಧ್ಯವಾಗಿಲ್ಲ, ಗೊತ್ತೆ?

ಸಾಮಾನ್ಯವಾಗಿ ಎಲ್ಲ ಯಶಸ್ವಿ ರಾಜಕಾರಣಿಗಳ ಹಿಂದೆ ಒಂದು ಚಾಣಾಕ್ಷ ಮಿದುಳು ಅಥವಾ ಒಳ್ಳೆಯ ಸಲಹೆಗಾರರು ಇರುತ್ತಾರೆ. ಮಹಾರಾಜ ಚಂದ್ರಗುಪ್ತನ ಹಿಂದೆ ಚಾಣಕ್ಯ, ಹಕ್ಕ-ಬುಕ್ಕರ ಹಿಂದೆ ಯತಿಶ್ರೇಷ್ಠ ವಿದ್ಯಾರಣ್ಯರು, ಶಿವಾಜಿ ಹಿಂದೆ ಸಮರ್ಥ ರಾಮದಾಸರು, ವಿವೇಕಾನಂದರ ಹಿಂದೆ ರಾಮಕೃಷ್ಣ ಪರಮಹಂಸರು, ನೆಹರು ಹಿಂದೆ ಗಾಂಧಿ (!) ಇದ್ದಂತೆ. ಈಗಿನ ರಾಜಕಾರಣಿಗಳನ್ನು ತೆಗೆದುಕೊಂಡರೂ ಮಾಯಾವತಿ ಹಿಂದೆ ಸತೀಶ್ಚಂದ್ರ ಮಿಶ್ರಾ, ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಹಿಂದೆ ಪ್ಯಾರಿಮೋಹನ್ ಮಹಾಪಾತ್ರ ಇದ್ದಾರೆ. ಮುಲಾಯಂ ಸಿಂಗ್ ಹಿಂದೆ ಜ್ಞಾನೇಶ್ವರ್ ಮಿಶ್ರಾ, ತದನಂತರ ಅಮರ್್ಸಿಂಗ್ ಇದ್ದರು. ಎನ್.ಟಿ. ರಾಮ್್ರಾವ್ ಹಾಗೂ ಚಂದ್ರಬಾಬು ನಾಯ್ಡು ಹಿಂದೆ ರಾಮೋಜಿರಾವ್ ತಲೆ ಕೆಲಸ ಮಾಡುತ್ತಿದ್ದರೆ, ಕರುಣಾನಿಧಿ ಕೂಡ ಎಸ್. ಗುಹನ್ ಹಾಗೂ ಪ್ರೊ. ನಾಗನಾಥನ್ ಅವರನ್ನು ನೆಚ್ಚಿಕೊಂಡಿದ್ದರು. ಲಾಲು ಪ್ರಸಾದ್ ಯಾದವ್ ಉಚ್ಛ್ರಾಯ ಸ್ಥಿತಿಯಲ್ಲಿದ್ದಾಗ ಅವರ ಬೆನ್ನಹಿಂದೆ ಇದ್ದವರು ಹಾಗೂ ನಿಷ್ಠೆ ಬದಲಿಸಿ ನಿತೀಶ್ ಕುಮಾರ್ ಹಿಂದೆ ಈಗ ಇರುವುದು ಶಿವಾನಂದ್ ತಿವಾರಿ. ಜಯಲಲಿತಾ ಹಿಂದೆ ಚೋ. ರಾಮಸ್ವಾಮಿ, ಅಟಲ್ ಬಿಹಾರಿ ವಾಜಪೇಯಿಯವರ ಹಿಂದೆ ಬ್ರಜೇಶ್ ಮಿಶ್ರಾ, ಅಷ್ಟೇಕೆ, ಕರ್ನಾಟಕದ ದೇವೇಗೌಡರ ಹಿಂದಿರುವುದೂ ವೈಎಸ್್ವಿ ದತ್ತ. ಈ ನಾಯಕರುಗಳು ತಮ್ಮ ಚಾಣಕ್ಯರನ್ನು ಕೇಳದೇ ಯಾವುದೇ ನಿರ್ಧಾರ ತೆಗೆದುಕೊಳ್ಳುವುದಿಲ್ಲ, ಅವರ ಒಂದೊಂದು ನಡೆಯ ಹಿಂದೆಯೂ ಈ ಚಾಣಕ್ಯರ ತಲೆ ಕೆಲಸ ಮಾಡಿರುತ್ತದೆ.

ಹಾಗಾದರೆ ನರೇಂದ್ರ ಮೋದಿಯವರ ಹಿಂದಿರುವ ಚಾಣಕ್ಯ ಯಾರು?

ಈ ಪ್ರಶ್ನೆಯ ಬೆನ್ನುಹತ್ತಿ ಹುಡುಕಿದರೆ ಯಾವುದೇ ಉತ್ತರ ಸಿಗುವುದಿಲ್ಲ.King and his Wise Counsel ಎರಡೂ ಅವರೇ!! ಈ ಕಾಂಗ್ರೆಸಿಗರು ತಮ್ಮ ಎದುರಾಳಿಗಳ ಹಿಂದಿರುವ ಚಾಣಕ್ಯರನ್ನೇ ಬುಟ್ಟಿಗೆ ಹಾಕಿಕೊಂಡು ದೌರ್ಬಲ್ಯವನ್ನು ಹುಡುಕಿ ದಾಳಿ ಮಾಡುತ್ತಾರೆ. ಅಂತಹ ಅಣ್ಣಾ ಹಜಾರೆಯವರಲ್ಲೂ ದೌರ್ಬಲ್ಯ ಹುಡುಕಿದರು, ಅವರ ತಂಡದ ಸದಸ್ಯರಾದ ಅರವಿಂದ್ ಕೇಜ್ರಿವಾಲ್, ಕಿರಣ್ ಬೇಡಿ ಯಾವುದೋ ಕಾಲದಲ್ಲಿ ಎಸಗಿದ್ದ ತಪ್ಪನ್ನು ಹುಡುಕಿ ತಂದು ಚಾರಿತ್ರ್ಯವಧೆ ಮಾಡಿದರು. ಶಾಂತಿ ಹಾಗೂ ಪ್ರಶಾಂತ್ ಭೂಷಣರ ಸಿ.ಡಿ.ಯನ್ನೇ ಬಿಡುಗಡೆಗೊಳಿಸಿದರು. ಅಣ್ಣಾ ತಂಡದೊಳಗೆ ತಮ್ಮ ವ್ಯಕ್ತಿಗಳನ್ನೂ ನುಸುಳಿಸಿ ವಿಷಯ ತಿಳಿದುಕೊಳ್ಳಲು ಪ್ರಯತ್ನಿಸಿದರು. ಹಾಗಂತ ಮೋದಿಯವರಲ್ಲಿ ತಪ್ಪು ಹುಡುಕಲು ಕಾಂಗ್ರೆಸ್್ಗೆ ಕಳೆದ 11 ವರ್ಷಗಳಲ್ಲಿ ಸಾಧ್ಯವಾಗಿಲ್ಲ, ಏಕೆಂದರೆ ಮೋದಿ ತಪ್ಪೇ ಮಾಡಿಲ್ಲ. ಅವರ ಸಂಬಂಧಿಕರೇನಾದರೂ ಇತ್ತೀಚೆಗೆ ಆಸ್ತಿ-ಪಾಸ್ತಿ ಮಾಡಿದ್ದಾರೆಯೇ ಎಂಬುದನ್ನೂ ಕಾಂಗ್ರೆಸ್ ಕಾರ್ಯತಂತ್ರ ರೂಪಕರು ತಡಕಾಡಿದ್ದಾರೆ. ಅದರಲ್ಲೂ ಏನೂ ಸಿಕ್ಕಿಲ್ಲ. ಮೋದಿಯವರಲ್ಲಿ ಸ್ವಂತ ಹಿತಾಸಕ್ತಿಗಳೇ ಇಲ್ಲ. ಗುಜರಾತ್್ನ ಹಿತಾಸಕ್ತಿಯನ್ನು ಕಾಪಾಡುವುದೇ ಅವರ ಸ್ವಂತ ಹಿತಾಸಕ್ತಿಯಾಗಿದೆ. ಅಂತಹ ವ್ಯಕ್ತಿ ಈ ದೇಶದ ಪ್ರಧಾನಿಯಾದರೆ ನಾವು ಎಂತಹ ಉನ್ನತಮಟ್ಟಕ್ಕೆ ತಲುಪಬಹುದು ಯೋಚಿಸಿ?…………..
ಕೃಪೆ: ಪ್ರತಾಪ ಸಿಂಹ

Advertisements

ನಿಮ್ಮ ಅನಿಸಿಕೆ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: