ಈಗ ಚಿತ್ರದಲ್ಲಿ ಸಂಪೂರ್ಣ ಬೆತ್ತಲಾದ ಕಿಚ್ಚ ಸುದೀಪ್

ಕನ್ನಡ ನಟ ಕಿಚ್ಚ ಸುದೀಪ್ ಬೆತ್ತಲೆ ಫೋಸ್ ನೀಡಿದ್ದಾರೆ. ಯಾರೇನೂ ಗಾಬರಿಪಡುವ ಅಗತ್ಯವಿಲ್ಲ. ಭಾರೀ ಹವಾ ಕ್ರಿಯೆಟ್ ಮಾಡಿ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿರುವ ರಾಜಮೌಳಿ ನಿರ್ದೇಶನದ ತೆಲುಗು ‘ಈಗ’ ಚಿತ್ರದಲ್ಲಿ ನಮ್ಮ ಕಿಚ್ಚ ಸುದೀಪ್ ಬೆತ್ತಲೆಯಾಗಿದ್ದಾರೆ. ಈಗ’ ಚಿತ್ರದಲ್ಲಿ ಅಗತ್ಯವಿದ್ದ ಒಂದು ಸನ್ನಿವೇಶಕ್ಕೆ ಪಾತ್ರಧಾರಿ ಸುದೀಪ್ ನಿರ್ದೇಶಕರು ಹೇಳಿದಂತೆ ಬೆತ್ತಲಾಗಿದ್ದಾರೆ.

ಈಗಾಗಲೇ ಚಿತ್ರ ನೋಡಿದವರಿಗೆ ಇದು ಯಾಕೆಂದು ಗೊತ್ತಿದೆ. ನೋಡದಿರುವವರಿಗೆ ಚಿತ್ರ ನೋಡಿದ ಕ್ಷಣ ಸುದೀಪ್ ಬೆತ್ತಲೆಯಾದ ಮರ್ಮ ಗೊತ್ತಾಗಲಿದೆ. ಆದರೆ ಚಿತ್ರ ನೋಡದವರಿಗೆ ಈಗಲೇ ಗೊತ್ತಾಗಬೇಕಿದ್ದರೆ ಮುಂದೆ ಓದಿ… ‘ಸುದೀಪ್ ಸ್ಟೀಮ್ ಬಾತ್ ಯಂತ್ರದೊಳಗೆ ಕುಳಿತಿರುವಾಗ ನೊಣ (ಈಗ)ದ ಕಾಟ ಶುರುವಾಗಿರುತ್ತದೆ. ಪಾತ್ರಧಾರಿ ಸುದೀಪ್ ಅವರಿಗೆ ಅಲ್ಲಿ ಭಾರೀ ಪೀಕಲಾಟ ಪ್ರಾರಂಭವಾಗಿರುತ್ತದೆ.

ಹೇಗೋ ಕಷ್ಟಪಟ್ಟು ಯಂತ್ರದೊಳಗಿಂದ ಹೊರ ಬಂದ ನಂತರ ತಮಗೆ ಕಾಟ ಕೊಡುತ್ತಿರುವ ನೊಣದಿಂದ ತಪ್ಪಿಸಿಕೊಳ್ಳುವ ಯತ್ನದಲ್ಲಿದ್ದ ಸುದೀಪ್ ತಮ್ಮ ಟವೆಲ್ ಬಿಚ್ಚುತ್ತಾರೆ. ಆಗ ಬೇರೆ ಇನ್ನೇನಾಗಲು ಸಾಧ್ಯ? ಸುದೀಪ್ ಬೆತ್ತಲಾಗುವ ದೃಶ್ಯವಿದೆ. ವಾಸ್ತವದಲ್ಲಿ ಸುದೀಪ್ ಬೆತ್ತಲಾಗಿರುವುದಿಲ್ಲ. ಆದರೆ ಪ್ರೇಕ್ಷಕರು ಹಾಗೆ ಭಾವಿಸುವಂತೆ ಚಿತ್ರದಲ್ಲಿ ಸನ್ನಿವೇಶವನ್ನು ಸೃಷ್ಟಿಸಲಾಗಿದೆ’.

ಇದು ಈಗ ಚಿತ್ರದಲ್ಲಿ ಸುದೀಪ್ ಬೆತ್ತಲಾದ ಪರಿ. “ರಾಜಮೌಳಿ ಚಿತ್ರದಲ್ಲಿ ಸನ್ನಿವೇಶಗಳ ಸೃಷ್ಟಿ, ಕಥೆ, ಚಿತ್ರಕಥೆ ಹಾಗೂ ನಿರೂಪಣೆ ಅದೆಷ್ಟು ಬಿಗಿಯಾಗಿದೆ ಎಂದರೆ ಯಾವೊಂದು ಸನ್ನಿವೇಶವೂ ಅನಗತ್ಯ ಎನಿಸುವುದಿಲ್ಲ. ಅಗತ್ಯವಿದ್ದ ಯಾವ ಸನ್ನಿವೇಶವೂ ಮಿಸ್ ಆಗಿಲ್ಲ, ಅನಗತ್ಯವಾಗಿ ಯಾವ ಸನ್ನಿವೇಶವೂ ಸೇರಿಕೊಂಡಿಲ್ಲ” ಎಂಬುದು ಚಿತ್ರ ನೋಡಿದವರ ಸ್ಪಷ್ಟ ಅಭಿಪ್ರಾಯ.

ಇಷ್ಟನ್ನು ಹೇಳಿದ ಮೇಲೆ ಸುದೀಪ್ ಈಗ ಚಿತ್ರದಲ್ಲಿ ಬೆತ್ತಲಾದ ಬಗ್ಗೆ ಯಾರೂ ಆಕ್ಷೇಪಣೆ ವ್ಯಕ್ತಪಡಿಸಲಾಗದು. ನಿರ್ದೇಶಕ ರಾಜಮೌಳಿಯವರಿಗೆ ಚಿತ್ರಕ್ಕೆ ಕಲಾವಿದರಿಂದ ಏನು ಮಾಡಿಸಬೇಕೆಂಬು ಗೊತ್ತು. ಹಾಗೇ ಆ ಚಿತ್ರದ ಕಲಾವಿದರಾದ ಸುದೀಪ್ಸಮಂತಾ, ನಾಣಿ ಹಾಗೂ ಮಿಕ್ಕವರಿಗೆ ಚಿತ್ರದಲ್ಲಿರುವ ಪಾತ್ರಕ್ಕೆ ತಾವು ನ್ಯಾಯ ಒದಗಿಸಬೇಕೆಂಬುದೂ ಗೊತ್ತು. ಹೀಗಾಗಿ ಈ ಬೆತ್ತಲೆ ಪ್ರಕರಣ ಯಾವುದೇ ವಿವಾದಕ್ಕೆ ಕಾರಣವಾಗಿಲ್ಲ.

ಸತತವಾಗಿ 9 ಸೂಪರ್ ಹಿಟ್ ಚಿತ್ರಗಳನ್ನು ಕೊಟ್ಟ ನಿರ್ದೇಶಕ ರಾಜಮೌಳಿಯವರ ಹತ್ತನೆ ತೆಲುಗು ಚಿತ್ರ ‘ಈಗ’ ಇದೀಗ ಹಳೆಯ ಎಲ್ಲಾ ದಾಖಲೆಗಳನ್ನೂ ಮುರಿದು ನಾಗಾಲೋಟದಲ್ಲಿ ಮುನ್ನುಗ್ಗುತ್ತಿರುವುದು ಗೊತ್ತೇ ಇದೆ. ಇಂತಹ ಪ್ರತಿಭಾನ್ವಿನ ನಿರ್ದೇಶಕರು ಕರ್ನಾಟಕದವರು ಎಂಬುದು ಬಹಳಷ್ಟು ಜನರಿಗೆ ಗೊತ್ತಿಲ್ಲ.

ಎಸ್ ಎಸ್ ರಾಜಮೌಳಿಯವರು ಹುಟ್ಟಿ, ಬೆಳೆದದ್ದೆಲ್ಲಾ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ‘ಅಮರೇಶ್ವರ ಕ್ಯಾಂಪ್’ ಎಂಬ ಊರಿನಲ್ಲಿ. ನಂತರ ಅವರ ಫ್ಯಾಮಿಲಿ ಕರ್ನಾಟಕದಿಂದ ಆಂಧ್ರಪ್ರದೇಶಕ್ಕೆ ತಮ್ಮ ವಾಸಸ್ಥಳವನ್ನು ಬದಲಾಯಿಸಿದ್ದಾರೆ. ಹೀಗಾಗಿ ಆಂಧ್ರದ ನಂಟು ರಾಜಮೌಳಿಯವರಿಗಿದೆ. ತೆಲುಗು ಭಾಷೆ ಮಾತನಾಡುತ್ತಾರೆ.

ತೆಲುಗು ಖ್ಯಾತ ನಿರ್ದೇಶಕ ಕೆ ರಾಘವೇಂದ್ರ ರಾವ್ ಅವರ ಮಾರ್ಗದರ್ಶನದಲ್ಲಿ ಟಿವಿ ಧಾರಾವಾಹಿಗಳ ನಿರ್ದೇಶನದ ಮೂಲಕ ರಾಜಮೌಳಿಯವರು ತಮ್ಮ ನಿರ್ದೇಶನದ ವೃತ್ತಿ ಪ್ರಾರಂಭಿಸಿದವರು. ನಂತರ 2001 ರಲ್ಲಿ ‘ಸ್ಟೂಡೆಂಟ್ ನಂ 1’ ತೆಲುಗು ಚಿತ್ರದ ಮೂಲಕ ಸಿನಿಮಾ ನಿರ್ದೇಶಕ ಎನಿಸಿಕೊಂಡವರು. ನಂತರ 9 ಸೂಪರ್ ಹಿಟ್ ಚಿತ್ರಗಳನ್ನು ನಿರ್ದೇಶಿಸಿ ಸೆಂಟ್ ಪರ್ಸೆಂಟ್ ಸಕ್ಸಸ್ ಕೊಡುವ ನಿರ್ದೇಶಕ ಎನಿಸಿಕೊಂಡವರು.

ಇಂಥ ರಾಜಮೌಳಿಯವರು ಮೊದಲು ನೋಡಿದ ಚಿತ್ರ ಉಪೇಂದ್ರ ನಿರ್ದೇಶನ ಹಾಗೂ ಶಿವರಾಜ್ ಕುಮಾರ್ ನಾಯಕತ್ವದ ‘ಓಂ’. ಕನ್ನಡದ ಸೂಪರ್ ಸ್ಟಾರ್ ಉಪೇಂದ್ರರ ವಿಶಿಷ್ಟ ನಿರೂಪಣೆಯಿಂದ ಭಾರೀ ಗಮನ ಸೆಳೆದು ದೊಡ್ಡ ಮಟ್ಟಿಗಿನ ಯಶಸ್ಸು ದಾಖಲಿಸಿದ ಈ ಚಿತ್ರವೇ ರಾಜಮೌಳಿಯವರು ನೋಡಿದ ಮೊಟ್ಟಮೊದಲ ಕನ್ನಡ ಸಿನಿಮಾವಂತೆ. ಹೀಗೆಂದು ಸ್ವತಃ ರಾಜಮೌಳಿಯವರೇ ಹೇಳಿದ್ದಾರೆ.

ಈಗಿನ ತಮ್ಮ ‘ಈಗ’ ಚಿತ್ರದ ಭಾರೀ ಯಶಸ್ಸಿನ ಬಗ್ಗೆ ಮಾತನಾಡುತ್ತಾ, ಬಾಲ್ಯದ ದಿನಗಳನ್ನು ನೆನಪು ಮಾಡಿಕೊಳ್ಳುವ ಸಂದರ್ಭದಲ್ಲಿ “ರಾಯಚೂರಿನಲ್ಲಿ ಹುಟ್ಟಿ ಬೆಳೆದ ನನಗೆ ಕನ್ನಡ ಸಿನಿಮಾಗಳನ್ನು ನೋಡಬೇಕೆಂದರೂ ಸಾಧ್ಯವಾಗುತ್ತಿರಲಿಲ್ಲ’ ಕಾರಣ, ನಾನಿದ್ದ ವೇಳೆಯಲ್ಲಿ ರಾಯಚೂರಿನ ನಮ್ಮೂರಿನಲ್ಲಿ ಚಿತ್ರಮಂದಿರಗಳೇ ಇರಲಿಲ್ಲ. ಹೀಗಾಗಿ 1995 ರಲ್ಲಿ ಉಪೇಂದ್ರ ನಿರ್ದೇಶನದ ‘ಓಂ’ ಚಿತ್ರವನ್ನು ನೋಡಿದ್ದೇ ಮೊದಲು. ನನಗೆ ಓಂ ಚಿತ್ರದ ನಿರೂಪಣೆ ತುಂಬಾ ಇಷ್ಟವಾಗಿತ್ತು” ಎಂದಿದ್ದಾರೆ.

ಉಪೇಂದ್ರ ನಿರ್ದೇಶನದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಪ್ರೇಮಾ ಜೋಡಿಯ ಈ ಚಿತ್ರ ಭಾರೀ ದಾಖಲೆಯನ್ನೇ ನಿರ್ಮಿಸಿದೆ. ಈಗಲೂ ಆಗಾಗ ಹೊಸ ಪ್ರಿಂಟ್ ಪಡೆದುಕೊಂಡು ಸಾಕಷ್ಟು ಚಿತ್ರಮಂದಿರಗಳಲ್ಲಿ ಆಗಾಗ ಪ್ರತ್ಯಕ್ಷವಾಗುತ್ತಾ ಥಿಯೇಟರ್ ಮಾಲೀಕರ ಅನ್ನಕ್ಕೆ ಆಧಾರವಾಗುತ್ತಿದೆ ಓಂ ಚಿತ್ರ. ಓಂ ಬಿಡುಗಡೆಯಾದಾಗ ರಾಜಮೌಳಿ ನಿರ್ದೇಶಕರಾಗಿರಲಿಲ್ಲ. ಆಂಧ್ರದಲ್ಲಿ ವಾಸಿಸುತ್ತಾ ಬಣ್ಣದ ಲೋಕಕ್ಕೆ ಧುಮುಕಿದ್ದರಷ್ಟೇ.

ಕೃಪೆ:
Oneindia Kannada

Advertisements

ನಿಮ್ಮ ಅನಿಸಿಕೆ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: